ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS                                                             

ಫಿರ್ಯಾದಿ Anjali  ಪ್ರಸ್ತುತ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿಯ ಕೊಳಂಬೆ ಎಂಬಲ್ಲಿ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದು, ಮಂಗಳೂರಿನ ಮಿಲನ್ ಪ್ಲಾಸ್ಟ್ವೇರ್ ನಲ್ಲಿ ಬಿಲ್ಲಿಂಗ್/ಅಕೌಂಟ್ಸ್ ನೋಡಿಕೊಳ್ಳತ್ತಿದ್ದು, ತಂದೆ ಮತ್ತು ತಾಯಿಯ ನಡುವೆ ದುಡ್ಡಿನ ವಿಚಾರದಲ್ಲಿ ಮನಸ್ತಾಪವಿದ್ದು ಸುಮಾರು ಆರು ತಿಂಗಳಿನಿಂದ ತಂದೆಯು ಬೆಂಜನಪದವಿನಲ್ಲಿರುವ ಅವರ ತಾಯಿಯ ಮನೆಯಲ್ಲಿ ವಾಸವಾಗಿದ್ದು, ಫಿರ್ಯಾದಿದಾರರ ತಾಯಿಯಾದ ವಾರಿಜರವರು ಈ ಹಿಂದೆ ಕೊಟ್ಟಾರ ಚೌಕಿಯಲ್ಲಿರುವ ಜಾಗ್ವಾರ್ ಶೋರೂಮ್ ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದವರು ದಿನಾಂಕ: 22-12-2022 ರಂದು ಆ ಕೆಲಸವನ್ನು ಬಿಟ್ಟು ಮನೆಯಲ್ಲಿಯೇ ಇದ್ದವರು ದಿನಾಂಕ 29-12-2022 ರಂದು ಬೆಳಿಗ್ಗೆ 07-00 ಗಂಟೆಗೆ ಮಿಲಾಗ್ರೆಸ್ ಹಾಸ್ಟೆಲ್ ನಲ್ಲಿ ಕೆಲಸ ಸಿಕ್ಕಿದೆ, ಅಲ್ಲಿಗೆ ಹೋಗುತ್ತೇನೆಂದು ಪಿರ್ಯಾದಿದಾರರಲ್ಲಿ ಹೇಳಿ ಮನೆಯಿಂದ ಬಸ್ಸಿನಲ್ಲಿ ಹೋದವರಿಗೆ ಪಿರ್ಯಾದಿದಾರರು ಸಂಜೆ ವೇಳೆ ಫೋನು ಮಾಡಿದಾಗ ಸೊಸೈಟಿಯಿಂದ ಲೋನಿನ ವಿಚಾರದಲ್ಲಿ ಫೋನು ಬರುತ್ತಿರುವುದರಿಂದ ಮೊಬೈಲ್ ಸ್ವಿಚ್ ಆಫ್ ಮಾಡುವುದಾಗಿ ಹೇಳಿದವರು ತದನಂತರ ಪೋನಿಗೂ ಸಿಗದೆ, ವಾಪಾಸು ಮನೆಗೂ ಬಾರದೆ ಕಾಣೆಯಾಗಿದ್ದು, ಕಾಣೆಯಾದ ವಾರಿಜರವರನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ.

Crime Reported in : Traffic South PS                      

 ದಿನಾಂಕ; 02-01-2023 ರಂದು  ಪಿರ್ಯಾದಿ PRAVEEN KISHOR DSILVA ಅಣ್ಣನಾದ ಡೇವಿಡ್ ರೋಶನ್ ಡಿ ಸಿಲ್ವ ರವರು ಕ್ಯಾಟರಿಂಗ್ ಕೆಲಸ ಮುಗಿಸಿಕೊಂಡು ಪಿರ್ಯಾದಿದಾರರ ಸ್ಕೂಟರ್ ನಂಬ್ರ KA-19-EP-0803 ನೇದನ್ನು ಮಾರ್ಗನ್ ಗೇಟ್ ಕಡೆಯಿಂದ ಪಡೀಲ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ರಾತ್ರಿ 12:30 ಗಂಟೆಗೆ ನಾಗೂರಿಯ S.A ಡೆಂಟಲ್ ಕ್ಲಿನಿಕ್ ಹತ್ತಿರ ತಲುಪಿದಾಗ ಯಾವುದೋ ಅಪರಿಚಿತ ವಾಹನ ಡೇವಿಡ್ ರೋಶನ್ ಡಿ ಸಿಲ್ವ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿ ನಿಲ್ಲಿಸದೆ ಪರಾರಿಯಾಗಿದ್ದು ಈ ಅಪಘಾತದ ಪರಿಣಾಮ ಡೇವಿಡ್ ರೋಶನ್ ಡಿ ಸಿಲ್ವ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ್ದ ಜನರು ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ.

Crime Reported in : Moodabidre PS    

ದಿನಾಂಕ 01-01-2023 ರಂದು ಪಿರ್ಯಾದಿ ಸುಭಾಶ್ ಶೆಟ್ಟಿ ರವರ ಮಾವ ದಿವಾಕರ ಶೆಟ್ಟಿರವರು ಜೋಡುಕಟ್ಟೆ ಎಂಬಲ್ಲಿ ಸುಕುಮಾರ್ ಎಂಬವರ ಮನೆಗೆ ಹೋಗಿದ್ದವರು ರಾತ್ರಿ 9:00 ಗಂಟೆಗೆ ಅಲ್ಲಿ ಊಟ ಮುಗಿಸಿ ಮರಳಿ ಸಚ್ಚರಿಪೇಟೆ ಕಡೆಗೆ ಬಿ.ಟಿ ರೋಡ್ ಕಡೆಯಿಂದ ಪೊಸ್ರಾಲ್ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಾ ಕಡಂಡಲೆ ಮುಕ್ಕಡಪ್ಪುವಿನಲ್ಲಿರುವ ದ.ಕ.ಜಿಲ್ಲಾ ಪಂಚಾಯತ್ ಶಾಲೆಯ ಬಳಿ 09:15 ಗಂಟೆಗೆ ತಲುಪುತಿದ್ದಂತೆ ಕಾರನ್ನು ಒಮ್ಮೆಲೆ ನಿರ್ಲಕ್ಷತನದಿಂದ ಚಲಾಯಿಸಿ ಕಾರಿನ ಮೇಲೆ ನಿಯಂತ್ರಣ ತಪ್ಪಿ ತಗ್ಗು ಪ್ರದೇಶದಲ್ಲಿದ್ದ ಶಾಲೆಯ ಆವರಣಕ್ಕೆ ಮಗುಚಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು ದಿವಾಕರ ಶೆಟ್ಟಿರವರ ತಲೆಗೆ ಹಾಗು ದೇಹದ ಇತರ ಕಡೆಗಳಿಗೆ ಗಂಭೀರ ರೀತಿಯ ಗಾಯವಾಗಿ ಕಾರಿನೊಳಗೆ ಮೃತ ಪಟ್ಟಿರುವುದಾಗಿರುತ್ತದೆ.

Crime Reported in : Traffic South PS                      

ದಿನಾಂಕ; 02-01-2023 ರಂದು ಪಿರ್ಯಾದಿ ASHWINI  ತಮ್ಮನಾದ ಅಭಿಷೇಕ್ ರವರು ತಮ್ಮ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-ES-9450 ನೇದನ್ನು ಕಾರ್ಮಿಕ ಕಾಲೋನಿಯಿಂದ ಶಕ್ತಿ ನಗರದ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ರಾತ್ರಿ 12.00 ಗಂಟೆಗೆ ಶಕ್ತಿನಗರದ ಚಾಲುಕ್ಯ ಬಾರ್ ನ ಹತ್ತಿರ ತಲುಪಿದಾಗ ಆತನ ಎದುರಿನಿಂದ ಅಂದರೆ ಶಕ್ತಿನಗರದಿಂದ ಬಿರ್ಕನ ಕಟ್ಟೆ ಕಡೆಗೆ ಬರುತ್ತಿದ್ದ ಕಾರು ನಂಬ್ರ MH-02-AK-7816 ನೇದರ ಚಾಲಕ ಅರವಿಂದ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ತಮ್ಮ ಸವಾರಿ ಮಾಡುತ್ತಿದ್ದ  ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಅಭಿಷೇಕ್ ರವರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು  ಅವರ ತಲೆಗೆ ಗಂಭೀರ ಸ್ವರೂಪದ ಗುದ್ದಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಆಟೋ ರಿಕ್ಷಾವೊಂದರಲ್ಲಿ ಎ,ಜೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ.

Crime Reported in : Traffic East PS                                  

ಪಿರ್ಯಾದಿ ಮೊಹಮ್ಮದ ಮುಝಮ್ಮಿಲ್ ರವರು ದಿನಾಂಕ 02-01-2023 ರಂದು ಬೆಳಿಗ್ಗೆ 10.50 ಗಂಟೆಗೆ ಅವರ ಬಾಬ್ತು KA-12-Z-8485 ನೊಂದಣಿ ನಂಬ್ರದ ಕಾರನ್ನು  ಚಲಾಯಿಸಿಕೊಂಡು ತೊಕ್ಕಟ್ಟು ಕಡೆಯಿಂದ ಮಂಗಳೂರು ಫಳ್ನೀರ್ ಕಡೆಗೆ ಹೋಗಲು ಉಜ್ಜೋಡಿ ಮಾರ್ಗವಾಗಿ ಪಂಪ್ ವೆಲ್ ಫ್ಲೈಓವರ್ ಬಳಿಯ ಸರ್ವಿಸ್ ರಸ್ತೆಯಿಂದ ಪಂಪವೆಲ್ ಜಂಕ್ಷನ್ ತಲುಪಿ ಫಳ್ನೀರ್ ಕಡೆಗೆ ಕಾರನ್ನು ತಿರುಗಿಸುತ್ತಿರುವ ವೇಳೆ ತೊಕ್ಕಟ್ಟು ಕಡೆಯಿಂದ KA-19-AC-4984  ನೊಂದಣಿ ನಂಬ್ರದ ಬಸ್ಸನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ಕಾರಿನ ಹಿಂಬದಿಯ ಎಡಬದಿಗೆ ಡಿಕ್ಕಿಪಡಿಸಿದ್ದು, ಡಿಕ್ಕಿಯ ಪರಿಣಾಮ ಕಾರು ನಿಯಂತ್ರಣ ತಪ್ಪಿ ಎಡಕ್ಕೆ ತಿರುಗಿ ವಾಪಾಸ್ ಬಸ್ಸಿನ ಎದುರಿನ ಭಾಗಕ್ಕೆ ಡಿಕ್ಕಿಯಾಗಿದ್ದು, ಸದ್ರಿ ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ. ಸದ್ರಿ ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಅಪಘಾತಕ್ಕೆ ಕಾರಣನಾದ KA-19-AC-4984 ಬಸ್ಸು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

ಇತ್ತೀಚಿನ ನವೀಕರಣ​ : 02-01-2023 07:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080