ಅಭಿಪ್ರಾಯ / ಸಲಹೆಗಳು

Crime Reported in : Mangalore North PS  

ಪಿರ್ಯಾದಿ VENKATESH ದಾರರು ಮೂಲತ: ಶಿವಮೊಗ್ಗ ಜಿಲ್ಲೆ ಹೊಸನಗರ ದ ವಾಸಿ ಯಾಗಿದ್ದು ಆಯುರ್ವೇದಿಕ್ ಔಷದ ವ್ಯಾಪಾರಕ್ಕಾಗಿ ಸುಮಾರು ಒಂದು ತಿಂಗಳಿಂದ ಪಡುಬಿದ್ರೆ ಗೆ ಬಂದು  ಅಲ್ಲಿಯ ಶೆಡ್ ಅಲ್ಲಿ ವಾಸಮಾಡಿಕೊಂಡಿರುವುದಾಗಿದೆ, ದಿನಾಂಕ 31.10.2022 ರ ಬೆಳಗ್ಗೆ 9.30ಗಂಟೆಗೆ  ಪಿರ್ಯಾದಿದಾರರು ಹಾಗೂ ಅವರ ಬಾವ ರಂಗ ತರಕಾರಿ ಹಾಗೂ ಆಯುರ್ವೇದ ಔಷದಕ್ಕೆ ಬೇಕಾದ ಸಾಮಾನು ಖರೀದಿಸಲು ಮಂಗಳೂರು ಸೆಂಟ್ರಲ್ ಮಾರ್ಕೇಟಿನ ಬಳಿ ಇರುವ ಮಹಾಲಕ್ಷ್ಮಿ ಚಿನ್ನದ ಅಂಗಡಿ ಹತ್ತಿರ ಇರುವ ತರಕಾರಿ ಅಂಗಡಿಯಲ್ಲಿ ತರಕಾರಿ ಖರೀದಿಸುತ್ತಿರುವಾಗ ಪಿರ್ಯಾದಿದಾರರಿಗೆ ಈ ಹಿಂದೆ ಪರಿಚಯ ವಿರುವ ಮಂಜ ಹಾಗೂ ಸುಬ್ರಮಣ್ಯ ನಮ್ಮ ಹತ್ತಿರ ಬಂದು ನಾವಿದ್ದಲ್ಲಿಗೆ ನೀವು ಬರಬಾರದೆಂದು ತಿಳಿಸಿದ್ದರೂ ನೀವು ಇಲ್ಲಿ ಯಾಕೆ ಬಂದಿದ್ದೀರಿ ಎಂದು ಪಿರ್ಯಾದಿದಾರರು ಕೇಳಿದಾಗ   ಮಂಜ ಹಾಗೂ ಸುಬ್ರಮಣಿ ಎಂಬುವರು ಅಲ್ಲೇ ಪಕ್ಕದಲ್ಲಿದ್ದ ಕಬ್ಬಿಣದ ರಾಡಿನಿಂದ ಹಾಗೂ ಕೈಯಿಂದ  ಪಿರ್ಯಾದಿದಾರರಿಗೆ ಏಕಾಏಕಿ ಹೊಡೆದ ಪರಿಣಾಮ ತಲೆಗೆ ರಕ್ತ ಗಾಯ ಹಾಗೂ ಬಲಗೈ ತೋಳಿನ ಬಳಿ ಸೊಂಟಕ್ಕೆ ಗುದ್ದಿದ ಗಾಯ ವಾಗಿರುತ್ತದೆ, ಹಾಗೂ  ಪಿರ್ಯಾದಿದಾರರ ಬಾವ ರಂಗರವರು ತಡೆಯಲು ಬಂದಾಗ ಅವರಿಗೂ ಕೂಡ  ಮಂಜ ಮತ್ತು  ಸುಬ್ರಮಣಿ ರವರು ಹಲ್ಲೆನಡೆಸಿದ್ದು ರಂಗರವರಿಗೆ  ಹಣೆಗೆ ರಕ್ತಗಾಯ, ತೊಡೆಗೆ ಹಾಗೂ ಎಡಕೈ ಮೊಣಗಂಟಿಗೆ ಗುದ್ದಿದ ಗಾಯ ವಾಗಿರುತ್ತದೆ ಪಿರ್ಯಾದಿದಾರರು ಹಾಗೂ ಅವರ ಬಾವ ರಂಗ ರವರು ಅಲ್ಲಿಂದ ತಪ್ಪಿಸಿ ಕೊಂಡು ಆಟೋರಿಕ್ಷಾದಲ್ಲಿ ವೆನ್ ಲಾಕ್ ಆಸ್ಪತ್ರೆ ಗೆ ತೆರಳಿ ಚಿಕಿತ್ಸೆಪಡೆದರುವುದಾಗಿ ಎಂಬಿತ್ಯಾದಿ

           

Traffic North Police Station               

ಪಿರ್ಯಾದಿ ಗಾಯಾಳು ವೆಲೆಂಟೀನ್ ಮಸ್ಕರೇನಸ್ (69) ವರ್ಷ ರವರು ದಿನಾಂಕ:31-10-2022 ರಂದು ಮದ್ಯಾಹ್ನ ಸುಮಾರು 1-00 ಗಂಟೆ ವೇಳೆಗೆ ತನ್ನ ಮನೆಯಾದ ಬಜಪೆ ಪೊರ್ಕೋಡಿಯಿಂದ ಹಂದಿಗಳಿಗೆ ತ್ಯಾಜ್ಯ ಆಹಾರಗಳನ್ನು ತರುವರೇ ಬೈಕಂಪಾಡಿ ದ್ವಾರ ಹೊಟೇಲಿಗೆ ಬಂದು ತ್ಯಾಜ್ಯ ಆಹಾರವನ್ನು ತಾನು ತಂದಿದ್ದ ಪ್ಲಾಸ್ಟಿಕ್ ಡಬ್ಬದಲ್ಲಿ ತುಂಬಿ ದ್ವಾರ ಹೊಟೇಲಿನಿಂದ ಹೊರಗೆ ಬಂದು ರಸ್ತೆಯಲ್ಲಿ ವಾಹನ ದಟ್ಟನೆ ಕಡಿಮೆ ಇರುವುದನ್ನು ಗಮನಿಸಿ ಸಂತೋಷ್ ಹೊಟೇಲ್ ಕಡೆಗೆ ರಸ್ತೆ ದಾಟುತ್ತಿದ್ದ ಸಮಯ ಸುಮಾರು 2-00 ಗಂಟೆಗೆ NH-66 ರಸ್ತೆಯಲ್ಲಿ ಮಂಗಳೂರು ಕಡೆಯಿಂದ GA-07-F-5951  ನೇ ಆಂಬ್ಯುಲೇನ್ಸ್ ವಾಹನವನ್ನು ಅದರ ಚಾಲಕ ಹೆಸರು ಗಣೇಶ್ ಎಂಬಾತನು ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿ ವೆಲೆಂಟೀನ್ ಮಸ್ಕರೇನಸ್ ರವರಿಗೆ ಢಿಕ್ಕಿ ಹೊಡೆದ ಪರಣಾಮ ವೆಲೆಂಟೀನ್ ಮಸ್ಕರೇನಸ್ ರವರು ತ್ಯಾಜ್ಯ ತುಂಬಿದ್ದ ಪ್ಲಾಸ್ಟಿಕ್ ಡಬ್ಬ ಸಮೇತ ಆಂಬ್ಯುಲೇನ್ಸ್  ವಾಹನಕ್ಕೆ ತಾಗಿ ರಸ್ತೆಗೆ ಬಿದ್ದ ಪರಿಣಾಮ ಬಲಕಾಲಿಗೆ ಹಾಗೂ ಬಲಕೈ ಮತ್ತು ತಲೆಯ ಬಲ ಭಾಗದ ಹಿಂಬದಿಗೆ ರಕ್ತಗಾಯವಾಗಿ ಮಂಗಳೂರು ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆಂಬಿತ್ಯಾದಿ.

Mangalore South PS            

 ಪಿರ್ಯಾದಿದಾರರಾದ ಶ್ರೀಮತಿ, ಭಾವನಾ ತಿವಾರಿ [40] ರವರು ಮೂಲತಃ ಉತ್ತರಖಂಡ ರಾಜ್ಯದವರಾಗಿದ್ದು, ಸದ್ರಿರವರ ಹಿರಿಯ ಮಗಳಾದ ಕು. ಹಿಮಾನಿ [25] ಎಂಬುವಳು 2018 ನೇ ಸಾಲಿನಲ್ಲಿ ನನಗೆ ಬಿ.ಎಸ್.ಎಫ್ ನಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಸರಕಾರಿ ಕೆಲಸ ಸಿಕ್ಕಿರುವುದಾಗಿ ಹೇಳಿ ಮುಂಬೈಗೆ ಹೋಗಿದ್ದು, ಕೆಲಸಕ್ಕೆ ಸೇರಿದ ನಂತರ ಆಗಾಗ ಪಿರ್ಯಾದಿಗೆ ಮೊಬೈಲ್ ಕರೆಮಾಡಿ ನಮ್ಮ ಯೋಗಕ್ಷೆಮ ವಿಚಾರಿಸುತ್ತಿದ್ದಳು, ಅಲ್ಲದೇ ಕಳೆದ ಫೆಬ್ರವರಿ-2022 ರಲ್ಲಿ ನನಗೆ ಕರ್ನಾಟಕದ ರಾಜ್ಯದ ಮಂಗಳೂರಿಗೆ ವರ್ಗಾವಣೆಗೊಂಡಿರುವುದಾಗಿ ಪೋನ್ ಮಾಡಿ ಹೇಳಿರುತ್ತಾಳೆ. ಆಕ್ಟೋಬರ್-2022 ನೇ ತಿಂಗಳಿನಲ್ಲಿ ನನಗೆ ಸ್ವಲ್ಪ ಹಣದ ಅವಶ್ಯಕತೆ ಇದೆ ಹಣವನ್ನು ಕಳುಹಿಸಿಕೊಡಿ ಎಂದು ಹಿಮಾನಿಯು ಪೋನ್ ಮುಖಾಂತರ ತಿಳಿಸಿರುತ್ತಾಳೆ. ಅದರಂತೆ ನಾವು ಹಣವನ್ನು ಗೂಗಲ್ ಫೇ ಮುಖಾಂತರ ಅವಳಿಗೆ ಕಳುಹಿಸಿಕೊಟ್ಟಿರುತ್ತೇವೆ. ದಿನಾಂಕ: 26.10.2022 ರಂದು ಮದ್ಯಾಹ್ನ ಸುಮಾರು 12:40 ಗಂಟೆಗೆ ಹಿಮಾನಿಯು ಕೊನೆಯದಾಗಿ ನನಗೆ ಕರೆಮಾಡಿ ನಾನು ಮಂಗಳೂರು ನಗರದ ಕೇಂದ್ರ ರೈಲು ನಿಲ್ದಾಣದ ಹತ್ತಿರ ಇರುವ ಅಮೀತ್ ಮೊಬೈಲ್ ಶಾಫ್ ನ ಹತ್ತಿರ ಇರುವುದಾಗಿ ತಿಳಿಸಿರುತ್ತಾಳೆ, ಅದಾದ ನಂತರ ಅವಳ ಫೋನಿಗೆ ಕರೆಮಾಡಿ ನೋಡಲಾಗಿ ಮೊಬೈಲ್ ಸ್ವೀಚ್ ಆಫ್ ಬರುತ್ತಿದ್ದು, ಕೂಡಲೇ ಸಂಬಂಧಿಕರಲ್ಲಿ, ಮತ್ತು ಸ್ನೇಹಿತರಲ್ಲಿ, ಪರಿಚಯದವರಲ್ಲಿ ಹಿಮಾನಿಯ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆತಿರುವುದಿಲ್ಲ, ಅದುದರಿಂದ ಪಿರ್ಯಾದಿಯು ಮಗಳ ಮನೀಶಾಳ ಜೊತೆಯಲ್ಲಿ ಉತ್ತರಖಂಡ ರಾಜ್ಯದಿಂದ ಹೊರಟು ಮಂಗಳೂರಿಗೆ ಬಂದಿರುವುದಾಗಿದೆ. ಆದುದರಿಂದ ಕಾಣೆಯಾದ ನನ್ನ ಮನೀಶಾಳನ್ನು ಪತ್ತೆಮಾಡಿಕೊಡಬೇಕಾಗಿ ಈ ಮೂಲಕ ವಿನಂತಿ ಎಂಬಿತ್ಯಾಧಿಯಾಗಿರುತ್ತದೆ.

 

2) ಪಿರ್ಯಾದಿದಾರರಾದ ನಟೇಶ್ ಕುಮಾರ್ ರವರು ದಿನಾಂಕ 12-09-2014 ರಂದು ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಸರ್ವೇ ನಂಬರ್ 6P2 (62/8 ಹೊಸ ಸರ್ವೇ ನಂಬರ್ ) ರಲ್ಲಿ 6 ಸೆಂಟ್ಸ್ ಜಾಗವನ್ನು ಒಟ್ಟು 21 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದು, ಸದ್ರಿ ಕ್ರಯ ಚೀಟಿಯ ದಾಖಲೆ ಮಂಗಳೂರು ತಾಲೂಕು ಉಪ ನೋಂದಾವಣಿ ಅಧಿಕಾರಿಗಳ ಕಛೇರಿಯಲ್ಲಿ ದಾಖಲೆ ಸಂಖ್ಯೆ  ರಂತೆ ನೋಂದಾಯಿಸಲ್ಪಟ್ಟಿದೆ. ಜಾಗವನ್ನು ಖರೀದಿ ಮಾಡುವ ಪೂರ್ವದಲ್ಲಿ ಆರೋಪಿಗಳಾದ ಕೆ. ರಾಘವೇಂದ್ರ ಹಾಗೂ ಕೆ. ಶಾಂತ ರವರು ಜಾಗದಲ್ಲಿ ಯಾವುದೇ ರೀತಿಯ ಸಾಲ, ನ್ಯಾಯಾಲಯದ ಅಟ್ಯಾಚ್ ಮೆಂಟ್ ಗಳು ಇರುವುದಿಲ್ಲ ಎಂದು ಪಿರ್ಯಾದಿದಾರರನ್ನು ನಂಬಿಸಿದ್ದು, ಈ ಬಗ್ಗೆ ಆರೋಪಿಗಳು ದಿನಾಂಕ 28-02-2014 ರಂದು ಬರೆದುಕೊಟ್ಟ ಕರಾರು ಪತ್ರದಲ್ಲಿ ನಮೂದಿಸಿರುತ್ತಾರೆ.  ಬಳಿಕ ಪಿರ್ಯಾದಿದಾರರಿಗೆ ನ್ಯಾಯಾಲಯದಿಂದ ಸದರಿ ಜಾಗವನ್ನು ಏಲಂ  ಮಾಡಲಾಗುವುದು ಎಂದು ಕೋರ್ಟು ಅಮೀನ್ ಬಂದು ತಿಳಿಸಿದಾಗ ಸದ್ರಿ ಆಸ್ತಿಗೆ ರವೀಂದ್ರ ಎನ್ನುವರು ರೂಪಾಯಿ 11,55,000/- ಕ್ಕೆ ಅಟ್ಯಾಚ್ ಮೆಂಟ್ ತೆಗೆದುಕೊಂಡಿರುತ್ತಾರೆ ಎಂದು ತಿಳಿದುಬಂದಿದ್ದು. ಪಿರ್ಯಾದಿದಾರರು 2022 ರ ಜುಲೈ ತಿಂಗಳಲ್ಲಿ ಪ್ರಧಾನ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ ಮಂಗಳೂರು ಇಲ್ಲಿ ಓ.ಎಸ್ ನಂಬ್ರ 41/2013 ರಲ್ಲಿ ಪರಿಶೀಲಿಸಿದಾಗ ದಿನಾಂಕ 23-01-2014 ರಂದು ಆರೋಪಿಗಳು ಪಿರ್ಯಾದಿದಾರರಿಗೆ ಮೋಸ ಹಾಗೂ ವಂಚನೆಗೈಯುವ ಉದ್ದೇಶದಿಂದ ರವೀಂದ್ರ ಎಂಬವರೊಂದಿಗೆ ಶಾಮೀಲಾಗಿ ಪ್ರಧಾನ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯದ ಓ.ಎಸ್ ನಂಬ್ರ 41/2013 ರಲ್ಲಿ ಕೆ. ರವೀಂದ್ರ ಎಂಬವರಿಗೆ ರೂ. 11,55,000/- ಕ್ಕೆ ಅಟ್ಯಾಚ್ ಮೆಂಟಿಗೆ ಒಪ್ಪಿಗೆ ನೀಡಿ, ಸದ್ರಿ ಒಪ್ಪಿಗೆ ಪತ್ರದ ಆಧಾರದಲ್ಲಿ  ನ್ಯಾಯಾಲಯ ಅಟ್ಯಾಚ್ ಮೆಂಟ್ ಆದೇಶ ನೀಡಿರುತ್ತಾರೆ.  ಆರೋಪಿಗಳಿಬ್ಬರು ಕೂಡಾ ಸದ್ರಿ ಜಾಗದ ಮೇಲೆ ಈ ಹಿಂದೆಯೇ ಅಟ್ಯಾಚ್ ಮೆಂಟ್ ಆದೇಶ ಇರುವ ಬಗ್ಗೆ ಗೊತ್ತಿದ್ದುಕೊಂಡು ಪಿರ್ಯಾದಿದಾರರಿಗೆ ಮೋಸ ಮತ್ತು ವಂಚನೆಗೈಯುವ ಉದ್ದೇಶದಿಂದ ಸದ್ರಿ ಜಾಗವನ್ನು ಮಾರಿ ದುರ್ಲಾಭಗಳಿಸುವ ಉದ್ದೇಶದಿಂದ ಸದ್ರಿ ಆಸ್ತಿಯ ಮೇಲೆ ಯಾವುದೇ ENCOMBARANCE ಕೋರ್ಟ್ ಅಟ್ಯಾಚ್ ಮೆಂಟ್ ಇರುವುದಿಲ್ಲ ಎಂದು ಸುಳ್ಳಾಗಿ  ಉಪ ನೋಂದಾವಣಿ ಅಧಿಕಾರಿ ಮಂಗಳೂರು ಇಲ್ಲಿ ಫೋರ್ಜರಿ ದಾಖಲೆ ಸೃಷ್ಠಿಸಿ ಕ್ರಯ ಚೀಟಿಯನ್ನು ನೊಂದಾವಣೆ ಮಾಡಿ ಜಾಗವನ್ನು ಪಿರ್ಯಾದಿದಾರರಿಗೆ ಮಾರಾಟ ಮಾಡಿ ರೂ.21,00,000/-ಹಣ ಪಡೆದುಕೊಂಡಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 02-11-2022 05:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080