ಅಭಿಪ್ರಾಯ / ಸಲಹೆಗಳು

Crime Reported in : Moodabidre PS

 ದಿನಾಂಕ: 03-01-2023 ರಂದು ಬೆಳಗ್ಗೆ 09.30 ಗಂಟೆಯ ಸಮಯ ಮೂಡಬಿದ್ರೆ ತಾಲೂಕು ತೋಡಾರು ಗ್ರಾಮದ ಹಿದಾಯತ್ ನಗರ ರಸ್ತೆಯಲ್ಲಿರುವ ಪಿರ್ಯಾದಿ Abdul Hameed ವಾಸ್ತವ್ಯದ ಮನೆಯಲ್ಲಿ ಪಿರ್ಯಾದಿದಾರರ ಮಗಳು ಫಾತಿಮತ್ತ್  ಅಸ್ರೀನ ಎಂಬವಳು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇವಳನ್ನು ಮೊಹಮ್ಮದ್ ಶಹೀಮ್ ಎಂಬಾತನು 3-4 ವರ್ಷಗಳಿಂದ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ತಿಳಿಸಿ ಎರಡು ವರ್ಷ ಕಾಲಾವಕಾಶವನ್ನು ಕೇಳಿದ್ದು, ಈಗ ಮದುವೆಯಾಗುವುದಿಲ್ಲ ನೀನು ಬೇರೆಯವರನ್ನು ಮದುವೆಯಾಗು ಇಲ್ಲದಿದ್ದರೆ ಸಾಯಿ ಎಂದು ಆತನು ಹಾಗೂ ಆತನ ತಾಯಿಯಾದ ಶ್ರೀಮತಿ ಮೈಮೂನರವರು ನಿಂದಿಸಿದ್ದು ಇದೇ ಕಾರಣಕ್ಕಾಗಿ ಪಿರ್ಯಾದಿದಾರರ ಮಗಳು ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿರುತ್ತದೆ ಎಂಬಿತ್ಯಾದಿ.

Crime Reported in : Mangalore East Traffic PS   

ಪಿರ್ಯಾದಿ ACHYUTHA  ಮಗನಾದ ಉಜ್ವಲ್ ರವರು ದಿನಾಂಕ 16-12-2022 ರಂದು ತಾನು ಕೆಲಸ ಮಾಡಿಕೊಂಡಿರುವ ಮಾರೂರ್ ಎಂಟರ್ ಪ್ರೈಸಸ್ ಗೆ ಸಂಬಂಧಿಸಿದ KA-19-HL-4723 ನಂಬ್ರದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸವಾರನಾಗಿ ಕೆಲಸದ ನಿಮಿತ್ತ ಮದ್ಯಾಹ್ನ ಸುಮಾರು 3.00 ಗಂಟೆಗೆ ಪಾಂಡೇಶ್ವರದ ಫಿಜ್ಜಾ ಫೋರಂ ಮಾಲ್ ಎದುರುಗಡೆ ರಸ್ತೆಗೆ ಬಂದು ತಲುಪುತ್ತಿದ್ದಂತೆ KL-77-9895 ನೊಂದಣಿ ನಂಬ್ರದ ಬುಲೆಟ್ ಮೋಟಾರ್ ಸೈಕಲನ್ನು ಅದರ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಗ ಉಜ್ವಲ್ ರವರು ಸವಾರಿ ಮಾಡಿಕೊಂಡಿದ್ದ ಸ್ಕೂಟರಿನ ಹಿಂಬದಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಉಜ್ವಲ್ ರವರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ರಕ್ತಗಾಯಗಳಾಗಿದ್ದು,  ಎಡಭುಜದ ಮೂಳೆಗೆ ಬಿರುಕು ಬಿಟ್ಟಿರುವ ಗಾಯವಾದವರನ್ನು ಆತನು ಕೆಲಸ ಮಾಡುವ ಕಂಪೆನಿಯವರು ಚಿಕಿತ್ಸೆಯ ಬಗ್ಗೆ  ಕೋಡಿಯಲ್ ಬೈಲ್ ನ ಯೆನಫೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಪಿರ್ಯಾದಿದಾರರು ಗಾಯಗಳು ಸಾಮಾನ್ಯ ಸ್ವರೂಪದ್ದೆಂದು ಭಾವಿಸಿ, ಚಿಕಿತ್ಸೆಯ ಬಳಿಕ  ಮನೆಗೆ ಕರೆದುಕೊಂಡು ಹೋಗಿರುತ್ತಾರೆ.  ನಂತರ ಉಜ್ವಲ್ ರವರಿಗೆ ಎಡಭುಜದ ಮೂಳೆ ಬಿರುಕು ಬಿಟ್ಟ ಗಾಯವು ಗುಣಮುಖವಾಗದೇ ಇದ್ದು,  ಪರೀಕ್ಷಿಸಿದ ವೈದ್ಯರು  ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುವುದಾಗಿ ತಿಳಿಸಿದ್ದು, ಚಿಕಿತ್ಸಾ ವೆಚ್ಚವು ಅಧಿಕವಾಗುವ ಸಾದ್ಯತೆ ಇರುವುದರಿಂದ, ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 03-01-2023 08:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080