ಅಭಿಪ್ರಾಯ / ಸಲಹೆಗಳು

Crime Reported in :  CEN Crime PS

ಫಿರ್ಯಾದಿದಾರರಾದ Mr.Antony Dsouza ಎಂಬುವವರು ದಿನಾಂಕ 22-04-2015 ರಂದು ತನ್ನ ಪರಿಚಯದ PROVIDENT BUILDERS & DEVELOPERS ಎಂಬ ಸಂಸ್ಥೆಯ ಪಾಲುದಾರರಾದ ಆರೋಪಿ ಜೋನ್ ಸಿಲ್ವೆಸ್ಟರ್ ಸಲ್ದಾನ ಮತ್ತು ಜೀನ್ ರೂಪಾ ಸಲ್ದಾನ ಎಂಬವರೊಂದಿಗೆ PROVIDENT DASHA ಎಂಬ ಹೊಸ ವಸತಿ ಸಮುಚ್ಚಯದ ಎರಡನೇ ಮಹಡಿಯ 002 ಮನೆಯನ್ನು ಖರೀದಿ ಮಾಡುವ ಬಗ್ಗೆ ರೂಪಾಯಿ 35 ಲಕ್ಷ ರೂ. ಗೆ  ಕರಾರು ಪತ್ರ  ಮಾಡಿಕೊಂಡು ರೂ.10ಲಕ್ಷ ವನ್ನು ಮುಂಗಡವಾಗಿ ನೀಡಿರುತ್ತಾರೆ.  ನಂತರದಲ್ಲಿ ಹಂತ ಹಂತ ವಾಗಿ ಒಪ್ಪಂದದಂತೆ  ಹಣವನ್ನು ಫಿರ್ಯಾದಿದಾರರು ಆರೋಪಿಗಳಿಗೆ ಪೂರ್ತಿಯಾಗಿ ನೀಡಿರುತ್ತಾರೆ. ಸದ್ರಿ ಕಟ್ಟಡ ನಿರ್ಮಾಣದ ಜಾಗವು ಆರೋಪಿ 3 ನೇ ಅನಿಲ್ ವೇಗಸ್, ಮತ್ತು 4 ನೇ ಮಾವೀಸ್ ಎಸ್. ಜೆ.ವೇಗಸ್ ರವರಿಗೆ ಸೇರಿರುವುದಾಗಿದೆ. ನಂತರದ ದಿನಗಳಲ್ಲಿ  ಫಿರ್ಯಾದಿದಾರರಿಗೆ ಒಪ್ಪಿಸಬೇಕಾದ ವಸತಿಯನ್ನು ಒಪ್ಪಿಸದೇ, ಆರೋಪಿ 1 ರಿಂದ 4 ನೇಯವರು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಸದ್ರಿ ವಸತಿಯನ್ನು ಪಿರ್ಯಾದಿದಾರರಿಗೆ ಯಾವುದೇ ಮಾಹಿತಿ ಇಲ್ಲದೇ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಗೆ 2 ಕೋಟಿ ಗೆ ಅಡಮಾನ ಇರಿಸಿ, ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಆರೋಪಿಗಳೊಂದಿಗೆ ಈ ವಿಚಾರವನ್ನು ಕೇಳಿದಾಗ ಆರೋಪಿಗಳು  ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೇವ ಬೆದರಿಕೆ ಮಾಡಿರುವುದಾಗಿದೆ.

Crime Reported in :Panambur PS

ಪಿರ್ಯಾದಿ SANJAY BANSODE ದಾರರು ದಿನಾಂಕ: 01-09-2022 ರಂದು ಬೆಳಗ್ಗೆ 07-30 ಗಂಟೆಗೆ ಕರ್ನಾಟಕ ಸ್ಟೇಟ್ ಬಿವರೆಜ್ ಗೋಡನ್ ನಲ್ಲಿ ಸೆಕ್ಯೂರಿಟಿ ಕೆಲಸಲಕ್ಕೆಂದು ಹೋಗಿ, ಅದೇ ದಿನ ಸಂಜೆ 6-00 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿದ್ದು, ಪಿರ್ಯಾದಿದಾರರು ಹೆಂಡತಿಯ ಮೊಬೈಲ್ ನಂಬ್ರಕ್ಕೆ ಪದೆ ಪದೆ ಕರೆ ಮಾಡಿದಾಗ ಪೋನ್ ಸ್ವೀಚ್ ಆಫ್ ಬರುತ್ತಿದ್ದು, ನೆರೆಕೆರೆಯವರಲ್ಲಿ ಕೇಳಿದಾಗ ಸ್ನೇಹ ಬನ್ಸೋಡೆ ಬೆಳಗ್ಗೆ ಮಗನನ್ನು ಶಾಲೆಗೆ ಬಿಟ್ಟು ನಂತರ ಅವಳು ಒಂದು ಆಟೋರಿಕ್ಷಾದಲ್ಲಿ ಹೋಗಿರುವ ಬಗ್ಗೆ ತಿಳಿಸಿರುತ್ತಾರೆ ,ಪಿರ್ಯಾದಿದಾರರು ಆಟೋರಿಕ್ಷಾ ಚಾಲಕನನ್ನು ಗುರುತಿಸಿ ಕೇಳಿದಾಗ ಪಿರ್ಯಾದಿದಾರರ ಹೆಂಡತಿ ಪಣಂಬೂರು ಜಂಕ್ಷನ್ ತನಕ ಬಂದಿರುವುದಾಗಿ  ತಿಳಿಸಿರುತ್ತಾರೆ.

ಪಿರ್ಯಾದಿದಾರರ ಹೆಂಡತಿ ಸ್ನೇಹ ಬನ್ಸೋಡೆ ಪ್ರಾಯ: 28 ವರ್ಷ ಎಂಬಾಕೆಯು ದಿನಾಂಕ: 01-09-2022 ರಂದು ಬೆಳಿಗ್ಗಿನ ಸುಮಾರು 8.30 ಗಂಟೆಗೆ ಮನೆಬಿಟ್ಟು ಹೋದವಳು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಪಿರ್ಯಾದುದಾರರ ಹೆಂಡತಿ ಸ್ಹೇಹ ಬನ್ಸೋಡೆ ಪ್ರಾಯ:28 ವರ್ಷ ಎಂಬಾಕೆಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ.  ಕಾಣೆಯಾದವರ ವಿವರ:

ಹೆಸರು: ಸ್ನೇಹ ಬನ್ಸೋಡೆ ಪ್ರಾಯ 28 ವರ್ಷ

ಎತ್ತರ: ಸುಮಾರು 5.0 ಅಡಿ

 ಶರೀರ: ದಪ್ಪ ಶರೀರ, ಬಿಳಿ ಮೈ ಬಣ್ಣ,

ಭಾಷೆ: ಮರಾಠಿ, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ

ಉಡುಗೆ: ಮನೆಯಿಂದ ಹೋಗುವಾಗ  ಕೆಂಪು ಬಣ್ಣದ ಟಾಫ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

Crime Reported in Traffic South Police Station

ದಿನಾಂಕ:03-09-2022 ರಂದು ಪಿರ್ಯಾದಿ ASKAR ALI ದಾರರು ಬೆಳಗ್ಗೆ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಗೆ ಹೋಗಲು ಮನೆಯಿಂದ  ಅವರ ಬಾಬ್ತು ಸ್ಕೂಟರ್ ನಂಬ್ರ KA-19-EC-3903 ನೇದನ್ನು ಕಲ್ಲಾಪು ಕಡೆಗೆ ಸವಾರಿಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು 04:20 ಗಂಟೆಗೆ ತೊಕ್ಕೊಟ್ಟು ನಾಗನಕಟ್ಟೆ ಬಳಿ ತಲುಪಿದಾಗ  ಪಿರ್ಯಾದಿದಾರರ ಮುಂದಿನಿಂದ ಲಾರಿ ನಂಬ್ರ KA-01-AK-3834 ನೇದನ್ನು ಅದರ ಚಾಲಕ ಸಜೇಶ್ ಕುಮಾರ್ ಎಂಬಾತನು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಾ.ಹೆ-66 ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಲಾರಿ ಚಾಲಕನ ಮುಂದೆ ರಸ್ತೆಯ ಎಡಬದಿಯ ಅಂಚಿನಿಂದ ರಸ್ತೆ ಮಧ್ಯದ ವಿಭಜಕ ಕಡೆಗೆ ರಸ್ತೆ ದಾಟುತ್ತಿದ್ದ ನಿಯಾಜ್ ಬಾವರವರಿಗೆ ಲಾರಿಯನ್ನು ಡಿಕ್ಕಿಪಡಿಸಿದ ಪರಿಣಾಮ  ನಿಯಾಜ್ ಬಾವ ರವರು ಡಾಮಾರು ರಸ್ತೆಗೆ ಬಿದ್ದು ಎಡಗೈ ಮೊಣಗಂಟಿಗೆ ಮೂಳೆ ಮುರಿತದ ಗಾಯ, ತಲೆಗೆ ಗುದ್ದಿದ ಗಾಯ, ಮೂಗಿನಿಂದ ರಕ್ತ ಬರುತ್ತಿರುವ ಗಾಯ ಹಾಗೂ ಹಣೆಗೆ ಮತ್ತು ತುಟಿಗೆ ತರಚಿದ ರಕ್ತಗಾಯವಾಗಿದ್ದು ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿ ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಈ ಅಪಘಾತ ಪಡಿಸಿದ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿರುವುದಾಗಿದೆ, ಎಂಬಿತ್ಯಾದಿ.

Crime Reported in Bajpe PS

ಪಿರ್ಯಾದಿ Vikas ದಾರರ ಅಣ್ಣಂದಿರಾದ ಅಜಯ್ ಮತ್ತು ವಿಜಯ್ ರವರು ದಿನಾಂಕ 03.09.2022 ರಂದು ಸಮಯ ಬೆಳಗ್ಗೆ 08.45 ಗಂಟೆಗೆ  ಬೈಕ್ ನಂ ಕೆಎ-19-ಇಇ-9178 ನೇ ದರಲ್ಲಿ ಕೆಲಸಕ್ಕೆ ಹೋಗುವ ಸಮಯ ಮಂಗಳೂರು ತಾಲೂಕು ಗುರುಪುರದಲ್ಲಿ ಕೆಎ 19-ಎಎ-8930 ನೇ ಪಿಕಪ್ ಚಾಲಕನಾದ ಜಿನಿತ್ ಕುಮಾರ್  ವೇಗವಾಗಿ ತನ್ನ ಪಿಕಪ್ ವಾಹನವನ್ನು ರಸ್ತೆಯಲ್ಲಿ ಚಲಾಯಿಸಿದ್ದರಿಂದ ಪಿರ್ಯಾದಿದಾರರ ಅಣ್ಣಂದಿರು ಚಲಾಯಿಸುತಿದ್ದ ಕೆಎ-19-ಇಇ-9178 ನೇ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಅಣ್ಣಂದಿರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದರಿಂದ ಪಿರ್ಯಾದಿದಾರರ ಅಣ್ಣ ಅಜಯ್ ರವರ ಎಡಕಾಲಿನ ಮೊಣಾಕಾಲಿನ ಗಂಟಿಗೆ ಗಂಬೀರ ಸ್ವರೋಪದ ಗಾಯವಾಗಿದ್ದು ಹಾಗೂ ವಿಜಯ್ ರವರ ಎರೆಡೂ ಕಾಲಿನ ಪಾದಗಳಿಗೆ ರಕ್ತಗಾಯವಾಗಿರುತ್ತದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 03-09-2022 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080