ಅಭಿಪ್ರಾಯ / ಸಲಹೆಗಳು

Crime Reported in : Mangalore North PS

 ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿರ್ಯಾದಿದಾರರಾದ  ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ ಎಸ್  ರವರು ದಿನಾಂಕ 01.10.2022 ರಂದು ಸಮವಸ್ತ್ರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಸಿಬ್ಬಂದಿ ಹೆಚ್ ಸಿ   ಬಾಲಚಂದ್ರ  ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ದಿನಾಂಕ: 02.10.2022 ರಂದು ಬೆಳಗ್ಗಿನ ಜಾವ ಸುಮಾರು 03-00 ಗಂಟೆಗೆ ಮಂಗಳೂರು ಕುದ್ರೋಳಿ ಅಳಕೆ ಮಾರ್ಕೆಟ್  ಬಳಿಗೆ ತಲುಪುತ್ತಿದ್ದಂತೆ ಅಂಗಡಿ ಬಳಿ ಇದ್ದ ಇಬ್ಬರು ವ್ಯಕ್ತಿಗಳು  ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ಸಂಶಯಾಸ್ಪದವಾಗಿ ಕಂಡು ಬಂದವರನ್ನು  ಕೂಲಂಕುಷವಾಗಿ ವಿಚಾರಿಸಲಾಗಿ  ಪ್ರಮೋದ್ ರಾಜ್  ವಯಸ್ಸು 46 ವಾಸ 7-64-1 ಬಾಬು ರಾವ್ ಕಾಂಪೌಂಡ್ ಜಗದಂಬಿಕ ದೇವಸ್ಥಾನದ ಹತ್ತಿರ ಕೋಡಿಕಲ್ ಅಶೋಕನಗರ ಮಂಗಳೂರು ಎಂದು ಮತ್ತೊಬ್ಬ ಓಂಕಾರ್ ಮೂರ್ತಿ ವಯಸ್ಸು 49  ಖಾಯಂ ವಾಸ ಬಸವೇಶ್ವರ ಬೀದಿ  ತುದಿಪೇಟೆ ತರಿಕೆರೆ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ ಎಂದು ಪ್ರಸ್ತುತ ಕಾಕೆಬೆಟ್ಟು 3ನೇ ಕ್ರಾಸ್ ಶಕ್ತಿನಗರ ಮಂಗಳೂರು ಎಂದು  ನುಡಿದಿರುತ್ತಾರೆ.  ಇವರು ಈ ಅಪರಾತ್ರಿ ಸಮಯದಲ್ಲಿ ಸದ್ರಿ ಸ್ಥಳದಲ್ಲಿ ಕತ್ತಲೆಯಲ್ಲಿ ಅವಿತಿದ್ದು,  ಇವರುಗಳು ಕನ್ನ ಕಳವು ಅಥವಾ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ, ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಸದ್ರಿ ಮಾರ್ಕೆಟಿನ ಬಳಿ ಇರುವ  ಅಂಗಡಿಗಳ  ಬಾಗಿಲ ಬೀಗ ಮುರಿಯಲು ಹೊಂಚು ಹಾಕುತ್ತಿದ್ದಾನೆಂಬ ಬಲವಾದ ಸಂಶಯಬಂದುದರಿಂದ  ಸದ್ರಿ ವ್ಯಕ್ತಿಗಳನ್ನು ಬೆಳಗ್ಗಿನ ಜಾವ 03-15 ಗಂಟೆಗೆ ವಶಕ್ಕೆ ಪಡೆದುಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ

   

Traffic North Police Station               

ದಿನಾಂಕ: 01-10-2022 ರಂದು ಪಿರ್ಯಾದಿ Shivaraja ದಾರರು ಅವರ ಬಾಬ್ತು KA-19-HK-1572 ನಂಬ್ರದ ಮೋಟಾರ್ ಸೈಕಲಿನಲ್ಲಿ ಕಿನ್ನಿಗೋಳಿಗೆ ಬಂದು ಮೂರು ಕಾವೇರಿ ಬಳಿ ಬಾರ್ ಒಂದರಲ್ಲಿ ಬಿಯರ್ ಕುಡಿದು ಮನೆಯ ಕಡೆಗೆ ಅವರ  ಮೋಟಾರ್ ಸೈಕಲಿನಲ್ಲಿ ಹೋಗುತ್ತಾ ರಾತ್ರಿ ಸಮಯ ಸುಮಾರು 11:00 ಗಂಟೆಗೆ ಮೂರು ಕಾವೇರಿ ಕಟೀಲು ದ್ವಾರದಿಂದ ಸ್ವಲ್ಪ ಮುಂದೆ ತಲುಪಿದಾಗ ಅವರ ಹಿಂದಿನಿಂದ ಕಾರೊಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿನ ಬಲಭಾಗದ ಹ್ಯಾಂಡಲಿಗೆ ಡಿಕ್ಕಿ ಪಡಿಸಿ ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಈ ಅಪಘಾತದಿಂದ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಹಣೆಯ ಬಲಬದಿಗೆ ಕತ್ತರಿಸಿದ ರೀತಿಯ ರಕ್ತಗಾಯ, ಬಲ ಕಣ್ಣಿನ ಹುಬ್ಬು, ಬಲ ಕೆನ್ನೆ, ಮೂಗಿನ ಕೆಳಬದಿ, ಬಲ ಗಲ್ಲದ ಬಳಿ ತರಚಿದ ರಕ್ತ ಗಾಯ ಹಾಗೂ ಎರಡೂ ಕಾಲು ಹಾಗೂ ಎರಡೂ ಕೈ ಗಳಲ್ಲಿ ಅಲ್ಲಲ್ಲಿ ತರಚಿದ ರೀತಿಯ ರಕ್ತಗಾಯವಾಗಿದ್ದು ಈ ಬಗ್ಗೆ ಪಿರ್ಯಾದಿದಾರರು ಕಟೀಲು ಸಂಜೀವಿನಿ ಮಣಿಪಾಲ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೋಗಿದ್ದು ಈ ದಿನ ದಿನಾಂಕ: 02-10-2022 ರಂದು ಅವರಿಗಾದ ಗಾಯ ಉಲ್ಬಣಿಸಿದ್ದರಿಂದ ಮಂಗಳೂರು ಅತ್ತಾವರ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿದ್ದು, ಅಪಘಾತಪಡಿಸಿದ ಕಾರು ಯಾವ ಕಂಪನಿಯದ್ದು, ಯಾವ ಬಣ್ಣದ್ದು ಎಂಬುದಾಗಿ ಪಿರ್ಯಾದಿದಾರರಿಗೆ ತಿಳಿದಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

 

Traffic South Police Station                      

 ದಿನಾಂಕ: 02.10.2022 ರಂದು ಪಿರ್ಯಾಧಿ SRIMATHI MANJULA ದಾರರು ಮತ್ತು ಚಾಲಕ ಎ ಹೆಚ್ ಸಿ  ಲೋಕೇಶ್ ಜಿ ರವರು ಉಳ್ಳಾಲ ಬೈಲಿನಲ್ಲಿ ಇಲಾಖಾ ವಾಹನ ಸಂಖ್ಯೆ KA-19-G-0861 ನೇ  ಹೈವೇ ಪೆಟ್ರೋಲ್ 04 ವಾಹನವನ್ನು ತೊಕ್ಕೊಟ್ಟು ಕಡೆಯಿಂದ ಉಳ್ಳಾಲ ಕಡೆಗೆ ಹೋಗುವ ಏಕಮುಖ ರಸ್ತೆಯ ಎಡಬದಿಯಲ್ಲಿ ಹೈವೇಪೆಟ್ರೋಲ್ ವಾಹನವನ್ನು ನಿಲ್ಲಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನು ನಿಲ್ಲಿಸಿ ವಾಹನ ತಪಾಸಣೆ ಮಾಡುತ್ತಿರುವಾಗ ಸಮಯ ಸುಮಾರು ಸಂಜೆ 05-00 ಗಂಟೆಗೆ ಪಿರ್ಯಾಧಿದಾರರು ಹೈವೆ ಪೆಟ್ರೋಲ್ ವಾಹನದ ಮುಂಭಾಗದಲ್ಲಿ ನಿಂತು ಮತ್ತು ಲೋಕೇಶ್ ಜಿ ರವರು ಹೈವೆ ಪೆಟ್ರೋಲ್ ವಾಹನದ ಬಲ ಬದಿಯಲ್ಲಿ ನಿಂತು ತೊಕ್ಕೊಟ್ಟು ಕಡೆಯಿಂದ ಉಳ್ಳಾಲದ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ KA-19-MM-5927 ನೇ ನಂಬ್ರದ ಸ್ವಿಪ್ಟ್ ಕಾರೊಂದನ್ನು ಅದರ ಚಾಲಕ ಸೀಟ್ ಬೆಲ್ಟ್ ಧರಿಸದೆ ಬರುತ್ತಿರುವುದನ್ನು ಕಂಡು ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಸದ್ರಿ ಕಾರಿನ ಚಾಲಕ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಲೊಕೇಶ್ ಜಿ ರವರಿಗೆ ಢಿಕ್ಕಿ ಹೊಡೆದಾಗ ಲೋಕೇಶ್ ಜಿ ರವರು ಡಿಕ್ಕಿ ಹೊಡೆದ ಕಾರಿನ ಬೊನೆಟ್ ಮೇಲೆ ಬಿದ್ದು ಆ ಕಾರಿನ ಬಲ ಬದಿ ರಸ್ತೆಗೆ ಎಸೆಯಲ್ಪಟ್ಟಿದ್ದು. ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು.ಈ ಅಪಘಾತದ ಪರಿಣಾಮ ಲೊಕೇಶ್ ಜಿ ರವರ ತಲೆಯ ಎಡಬದಿಯ ಹಿಂಬದಿಗೆ ತೀವ್ರಸ್ವರೂಪದ ರಕ್ತಗಾಯ ಮತ್ತು ಹಣೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲ. ಕೂಡಲೇ ಪಿರ್ಯಾಧಿದಾರರು ಮತ್ತು ಅಲ್ಲಿಸೇರಿದ ಜನರು ಲೋಕೇಶ್ ಜಿ ರವರನ್ನು ಚಿಕಿತ್ಸೆ ಬಗ್ಗೆ ಹೈವೇಪೆಟ್ರೋಲ್ ವಾಹನದಲ್ಲಿ ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂಟಿಕಾನ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಅಪಘಾತದ ವೇಳೆ ಅಪಘಾತ ಸ್ಥಳದಲ್ಲಿ ಪಿರ್ಯಾಧಿದಾರರಿಗೆ ಇಲಾಖೆಯಿಂದ ನೀಡಿದ ಪ್ರಕರಣ ದಾಖಲಿಸುವ SN: PP35272111002788 IMEI: 867250030823309 SIM: 9606057834 ನಂಬರಿನ ಮಲ್ಟಿ ಫಂಕ್ಷನ್ ಡಿವೈಸ್ ಕಳೆದು ಹೋಗಿರುತ್ತದೆ. ಎಂಬಿತ್ಯಾದಿ.

 

Bajpe PS

ಪಿರ್ಯಾದಿ Harishchandra Poojary ದಾರರ ಮಗನಾದ ಸುನೀಲ್ ಕುಮಾರ್ ಎಂಬುವನು KA 19 AC 0730 ನೇ ಆಟೋರಿಕ್ಷಾದ ಚಾಲಕ/ಮಾಲಕನಾಗಿದ್ದು ದಿನಾಂಕ 29.09.2022 ರಂದು ಸಂಜೆ 5.30 ಗಂಟೆಗೆ ಮಂಗಳೂರು ತಾಲೂಕು ಮಳವೂರು ಗ್ರಾಮದ ಕರಂಬಾರು ಜಂಕ್ಷನ್ ನಿಂದ ಮಂಗಳೂರು ಅಂತಾರಾಷ್ಟ್ರೀಯ ಏರ್ ಪೊರ್ಟ್ ಕಡೆಗೆ ಆಟೋರಿಕ್ಷಾವನ್ನು ಚಾಲಾಯಿಸಿಕೊಂಡು ಹೋಗುತ್ತಿರುವಾಗ ಹೆಗ್ಡೆ ಮಾಸ್ಟರ್ ಮನೆ ಬಳಿ ತಲುಪಿದಾಗ ಏರ್ ಪೊರ್ಟ್ ಕಡೆಯಿಂದ ಬಜಪೆ ಕಡೆಗೆ  KA19 ET 5735 ನೇ ಬೈಕ್ ಸವಾರನಾದ ಪವನ್ ಎಂಬಾತನು ಅತೀ ವೇಗ ಮತ್ತು ಅಜಾಗಾರುಕತೆಯಿಂದ ಬೈಕ್ ಚಲಾಯಿಸಿಕೊಂಡು ತನ್ನ ಮುಂದೆ ಹೋಗುತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ತನ್ನ ಬೈಕ್ ನ್ನು ತೀರಾ ಬಲಕ್ಕೆ ಚಲಾಯಿಸಿ ಪಿರ್ಯಾದಿದಾರರ ಮಗ ಚಲಾಯಿಸುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಗನಿಗೆ ಬಲಕಾಲಿನ ಬೆರಳಿಗೆ ರಕ್ತಗಾಯವಾಗಿದ್ದು ಪಿರ್ಯಾದಿದಾರರ ಮಗನನ್ನು ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

                       

ಇತ್ತೀಚಿನ ನವೀಕರಣ​ : 03-10-2022 06:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080