ಅಭಿಪ್ರಾಯ / ಸಲಹೆಗಳು

Crime Reported in : Barke PS

ಪಿರ್ಯಾದಿದಾರರಾದ ಶ್ರೀಮತಿ ಸಣ್ಣಗೋಪಿ (ಪ್ರೀಯಾ) ಎಂಬುವರು ಸುಮಾರು  03 ವರ್ಷಗಳ ಹಿಂದೆ ಮೂಲತ: ಬಾಗಲಕೋಟೆ ನಿವಾಸಿ ಶಿವಕುಮಾರ್ ಪ್ರಾಯ 28 ವರ್ಷ ಎಂಬುವರೊಂದಿಗೆ ಮದುವೆಯಾಗಿ ಮಂಗಳೂರು ನಗರದ ಮುತ್ತಕ್ಕ ಕಂಪೌಂಡ್ ವಿಶಾಲ್ ನರ್ಸಿಂಗ್ ಹೋಮ್ ಹತ್ತಿರ ವಾಸ್ತವ್ಯವಾಗಿದ್ದವರು, ಪಿರ್ಯಾದಿದಾರರ ಗಂಡ ಶಿವಕುಮಾರ್ ಎಂಬುವರು ಅಮಿತ ಸಾವಂತ್ ಎಂಬುವರು ನಡೆಸುತ್ತಿರುವ ಚಪಾತಿ ಮಾರುತ್ತಿರುವ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದವರು ಚಪಾತಿ ಸೇಲ್ಸ್ ಕೆಲಸ ಮುಗಿಸಿ ಸ್ವಿಗ್ಗಿ ಕೆಲಸಕ್ಕೆ ಹೋಗುತ್ತಿದ್ದವರು, ದಿನಾಂಕ: 31-10-2022 ರಂದು ಪಿರ್ಯಾದಿದಾರರೊಂದಿಗೆ ಜಗಳವಾಡಿಕೊಂಡು ದಿನಾಂಕ: 01-11-2022 ರಂದು ಎಂದಿನಂತೆ ಕೆಲಸಕ್ಕೆ ಹೋದವರು ವಾಪಾಸ್ಸು ಮನೆಗೆ ಬಾರದೇ ಅವರ ಸಂಬಂಧಿಕರ ಮನೆಗೆ ಹೋಗದೆ ಮೊಬೈಲ್ ನಂಬ್ರವನ್ನು ಸ್ವೀಚ್ ಆಫ್ ಮಾಡಿಕೊಂಡು ಕಾಣೆಯಾಗಿರುತ್ತಾರೆ. ಕಾಣೆಯಾದ ಪಿರ್ಯಾದಿದಾರರ ಗಂಡ ಶಿವಕುಮಾರ ನಿಗೆ ಹುಡುಕಿ ಕೊಡಬೇಕಾಗಿ ವಿನಂತಿ.

ಕಾಣೆಯಾದವರ ಚಹರೆ ವಿವರ ಈ ಕೆಳಗಿನಂತಿದೆ.

1.ಹೆಸರು: ಶಿವಕುಮಾರ

2.ಪ್ರಾಯ: 28 ವರ್ಷ

3.ಎತ್ತರ: 5.6 ಅಡಿ

4.ಮೈಬಣ್ಣ: ಗೋಧಿ ಮೈಬಣ್ಣ , ಕೋಲು ಮುಖ, ಸಾಧಾರಣ ಶರೀರ, ತಲೆಕೂದಲು ಕಪ್ಪು

5.ಮಾತಾಡುವ ಭಾಷೆ: ಹಿಂದಿ, ತುಳು, ಕನ್ನಡ

6.ಹಚ್ಚೆ ಗುರುತು: ಎಡ ಕೈಯಲ್ಲಿ SP ಎಂದು ಹಚ್ಚೆ ಹಾಕಿಸಿರುತ್ತಾನೆ.

Kankanady Town PS                 

ಪಿರ್ಯಾದಿ  ಕಂಕನಾಡಿ ನಗರ ಪೊಲೀಸ್ ನಿರೀಕ್ಷಕರಾದ ಎಸ್.ಹೆಚ್. ಭಜಂತ್ರಿ ರವರು  ಸಿಬ್ಬಂದಿಯವರ ಜೊತೆ ರೌಂಡ್ಸ್ ಕರ್ತವ್ಯದಲ್ಲಿದ್ದು  ಕಡೇಕಾರು ಬಳಿ ಇರುವ ಸಮಯ ಪಿಕ್ ಅಪ್ ಪಾಹನವೊಂದರಲ್ಲಿ ಆಡಂಕುದ್ರು ನೇತ್ರಾವತಿ ನದಿ ಬಳಿಯಿಂದ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಂತೆ ದಿನಾಂಕ: 02.11.2022 ರಂದು ಬೆಳಿಗ್ಗೆ ಸುಮಾರು 07:45 ಗಂಟೆ ಸಮಯಕ್ಕೆ ಆಡಂಕುದ್ರು ಪಟ್ಲ ಬ್ರಿಡ್ಜ್ ಬಳಿ ತಲುಪುತ್ತಿದ್ದಂತೆ ನೇತ್ರಾವತಿ ನದಿ ಕಿನಾರೆ ಕಡೆಯಿಂದ ಪಿಕ್ ಅಪ್ ವಾಹನವೊಂದು ಬರುತ್ತಿರುವುದನ್ನು ಕಂಡು ವಾಹನವನ್ನು ನಿಲ್ಲಿಸಿದ್ದು ಕೆಳಗಿಳಿದು ಓಡಲು ಪ್ರಯತ್ನಿಸಿದವನನ್ನು ಸಿಬ್ಬಂದಿಯವರ ಮುಖೇನ ಸುತ್ತುವರೆದು ಹಿಡಿದು ವಿಚಾರಿಸಿದಾಗ   ಅಶ್ವಿತ್, ಯಾವುದೇ ಪರವಾನಿಗೆ ಪತ್ರವನ್ನು ಹೊಂದಿರದೇ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು  ಪಿಕ್ ಅಪ್ ವಾಹನದ ಚಾಲಕನು ಯಾವುದೇ ಅಧಿಕೃತ ಪರವಾನಿಗೆಯನ್ನು ಹೊಂದದೇ, ರಾಜ್ಯ ಸರಕಾರಕ್ಕೆ ರಾಜಧನವನ್ನೂ ಪಾವತಿಸದೇ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ಅಕ್ರಮವಾಗಿ ತುಂಬಿಸಿಕೊಂಡು ಮಾರಾಟ ಮಾಡಲು ಕೊಂಡು ಹೋಗುತ್ತಿರುವುದು ದೃಢಪಟ್ಟಿರುವುದ್ದರಿಂದ ಮರಳು ತುಂಬಿದ  KA-19-AC-5286ನೇ ನಂಬ್ರದ ಪಿಕ್ ಅಪ್ ವಾಹನವನ್ನು ಮುಂದಿನ ಕ್ರಮದ ಸ್ವಾಧೀನಪಡಿಸಿಕೊಂಡು ಕ್ರಮ ಜರಗಿಸಿರುವುದಾಗಿದೆ ಎಂಬಿತ್ಯಾದಿ

 

Moodabidre PS

ಪಿರ್ಯಾದು Avinash A ದಾರರು ಅಲಂಗಾರಿನಲ್ಲಿರುವ ಸೆಂಟ್ ಥಾಮಸ್ ಶಾಲೆಯ ಬಸ್ ಗೆ ಡ್ರೈವರ್ ಆಗಿ ದಿನಾಂಕ 02-11-2022 ರಂದು ದರೆಗುಡ್ಡೆ ಕಡೆಗೆ ಹೋಗುವ ಕೆಎ-19-ಎಎ-9426 ನೊಂದಣಿ ಸಂಖ್ಯೆಯ ರೂಟ್ ನಂಬ್ರ 03 ರ ಬಸ್ ನಲ್ಲಿ ಬೆಳಿಗ್ಗೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬಂದು, ನಂತರ ಸಂಜೆ 3.40 ಗಂಟೆಗೆ ಶಾಲೆಯು ಮುಗಿದ ನಂತರ ದರೆಗುಡ್ಡೆ ಕಡೆಗೆ ಹೋಗುವ ಮಕ್ಕಳನ್ನು ಬಸ್ಸಿನಲ್ಲಿ ಕೂರಿಸಿಕೊಂಡು ಹೊರಟು ಅಲಂಗಾರಿನಲ್ಲಿರುವ ಲತಾ ಬಾರ್ ಹತ್ತಿರ ತಲುಪುತ್ತಿದ್ದಂತೆ ಸಮಯ ಸುಮಾರು ಸಂಜೆ 3.50 ಗಂಟೆಗೆ ಪಿರ್ಯಾದುದಾರರ ಎದುರಿನಿಂದ ಅಂದರೆ ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಹೊರಟಿದ್ದ ಕೆಎ-09-ಝಡ್-7481 ನೇ ನಂಬ್ರದ ಕಾರನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ರಸ್ತೆಯ ತೀರ ಬಲಬದಿಗೆ ಕಾರು ತಿರುಗಿ ಬಸ್ಸಿಗೆ ಡಿಕ್ಕಿಪಡಿಸಿದ್ದು ಪಿರ್ಯಾದುದಾರರು ಬಸ್‌ನ ವೇಗವನ್ನು ನಿಯಂತ್ರಿಸಿ ರಸ್ತೆಯ ಎಡಬದಿಗೆ ಚಲಾಯಿಸಿಕೊಂಡು ಬಂದು ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ತಾಗಿಸಿ ನಿಲ್ಲಿಸಿದ್ದು, ವಿದ್ಯುತ್ ಕಂಬವು ಜಖಂ ಆಗಿರುತ್ತದೆ.  ಈ ಅಪಘಾತದ ಪರಿಣಾಮ ಬಸ್‌ನಲ್ಲಿದ್ದ ಶಾಲೆಯ ೫ ಮಕ್ಕಳಿಗೆ ಸಣ್ಣ ಪುಟ್ಟ ತರಚಿದ ಗಾಯಗಳು ಮತ್ತು ಪಿರ್ಯಾದುದಾರರಿಗೆ ಬಲಗಾಲಿನ ಗಂಟಿನ ಬಳಿಯಲ್ಲಿ ಗುದ್ದಿದ ನಮೂನೆಯ ಗಾಯ ಹಾಗೂ ಕಾರಿನಲ್ಲಿದ್ದ ಚಾಲಕರು ಮತ್ತು ಸಹಚಾಲಕರಿಗೂ ಗಾಯದ ನೋವುಗಳಾಗಿರುವುದಾಗಿದೆ ಎಂಬಿತ್ಯಾದಿ.

Surathkal PS

ಪಿರ್ಯಾದಿದಾರರು ಕೊಂಕಣ ರೈಲ್ವೆ ಸುರತ್ಕಲ್ ನ ಸೆಕ್ಷನ್ ಇಂಜಿನಿಯರ್ (P-Way) ಆಗಿ ಸೇವೆ ಸಲ್ಲಿಸುತ್ತಿದ್ದು ದಿನಾಂಕ 02-11-2022 ರಂದು ಕರ್ತವ್ಯದಲ್ಲಿದ್ದ ಸಮಯ ರೈಲ್ವೆ ಟ್ರಾಕ್ ಮೆಂಟೈನರ್ ಆನಂದ ಗೋಂಡಾ ರವರು ತಮ್ಮಲ್ಲಿಗೆ ಬಂದು ವರದಿ ಮಾಡಿ ಕೊಂಕಣ ರೈಲ್ವೆಯ ಬೀಟ್ ನಂ 139, ರೈಲ್ವೆ ಮೈಲುಗಲ್ಲು 734/4 ಕಿ.ಮೀ ನಿಂದ 739/760 ಮದ್ಯೆ ರೈಲು ಹಳಿಗಳ ಜೋಡಣೆ ಬಗ್ಗೆ ಅಳವಡಿಸಲಾದ ಕಬ್ಬಿಣದ ಸುಮಾರು 14 Fish Plated Sets ಗಳನ್ನು ಯಾರೋ ಕಳ್ಳರು ನಿನ್ನೆ ದಿನಾಂಕ 01-11-2022 ರಂದು ರಾತ್ರಿ 10:00 ಗಂಟೆಯಿಂದ ಈ ದಿನ 02-11-2022 ರ ಬೆಳಿಗ್ಗೆ 06:00 ಗಂಟೆ ಮಧ್ಯೆ ಕಳವು ಮಾಡಿಕೊಂಡು ಹೋಗಿರಬಹುದಾಗಿದ್ದು ಕಳವು ಆದ ಸೋತ್ತುಗಳ ಅಂದಾಜು ಮೌಲ್ಯ ಸುಮಾರು 56000/- ರೂಪಾಯಿಗಳು ಆಗಿರುಬಹುದಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 03-11-2022 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080