ಅಭಿಪ್ರಾಯ / ಸಲಹೆಗಳು

Crime Reported in : Panambur PS

ಪಿರ್ಯಾದಿ SEETAMMA ದಾರರು ಬೈಕಂಪಾಡಿಯ ಕೈಗಾರಿಕಾ  ಪ್ರದೇಶದ ಅಡ್ಕಾ  ಹಾಲ್  ನ ಸಮೀಪ ಇರುವ ಹುಸೈನ್ ಎಂಬುವವರ ಗುಜರಿ ಅಂಗಡಿಯಲ್ಲಿ   ಗುಜರಿ ಆಯುವ ಕೆಲಸ  ಮಾಡಿಕೊಂಡಿದ್ದು ಪಿರ್ಯಾದಿಯ ಗಂಡ ಕನಕಪ್ಪ ರಾಮಪ್ಪ ಮಾದರ ಕೂಡ ಬೈಕಂಪಾಡಿಯ ಭ್ರೈಟ್ ಫಾಕ್ಟರಿಯ ಟೈಲ್ಸ್  ಗೋಡಾನ್ ನಲ್ಲಿ  ಲೋಡ್ ಅನ್ ಲೋಡ್  ಕೆಲಸವನ್ನು   ಮಾಡಿಕೊಂಡಿದ್ದು   ಪಿರ್ಯಾದಿ   ಮತ್ತು ಗಂಡ  ಹಾಗೂ ಮಕ್ಕಳು ಕಳೆದ 4 ವರ್ಷಗಳ  ಹಿಂದೆ  ತಮ್ಮ  ಊರಿನಿಂದ   ಮಂಗಳೂರಿಗೆ ಬಂದು   ಕೆಲಸ  ಮಾಡಿಕೊಂಡಿರುತ್ತಾರೆ.  ತನ್ನ   ವಿವಾಹವಾಗಿ ಸುಮಾರು 22 ವರ್ಷ ಕಳೆದಿದ್ದು ಇಬ್ಬರು ಮಕ್ಕಳಿದ್ದು . ತನ್ನ ಗಂಡ ವೀಪರೀತವಾಗಿ ಮದ್ಯಪಾನ ಮಾಡಿ  ಕುಡಿತದ  ಚಟ  ಹೊಂದಿರುವವನಾಗಿದ್ದು . ದಿನಾಂಕ:29-11-2022   ರಂದು ಬೆಳಿಗ್ಗೆ  8-30 ಗಂಟೆಗೆ    ಎಂದಿನಂತೆ  ತಾನು ಕೆಲಸಕ್ಕೆ   ಹೋಗುವ  ಸಮಯ  ಗಂಡ  ಮನೆಯಲ್ಲೇ  ಇದ್ದ  ಕೆಲಸ  ಮುಗಿಸಿ  ಸಂಜೆ  6-00    ಗಂಟೆಗೆ  ಮನೆಗೆ ಬಂದಾಗ  ಮನೆಯಲ್ಲಿದ್ದ  ತನ್ನ ಗಂಡ  ಮನೆಯಲ್ಲಿ ಇಲ್ಲದೇ ಇದ್ದು  ಫೋನ್  ಮಾಡಿದೆ.ರಿಂಗ್ ಆಗುತ್ತಿತ್ತು ಫೋನ್ ತೆಗಿಯಲಿಲ್ಲ . ಹೊರಗಡೆ ಎಲ್ಲೋ ಹೋಗಿರಬಹುದು ನಂತರ   ಬರಬಹುದು  ಎಂದು   ತಾನು ಸುಮ್ಮನಿದ್ದೆನು. ಆದರೆ ತನ್ನ ಗಂಡ   ರಾತ್ರಿ  ಕೂಡ  ಮನೆಗೆ  ಬರಲಿಲ್ಲ.  ದಿನಾಂಕ: 30-11-2022  ರಂದು  ಬೆಳಿಗ್ಗೆ    ತಾನು ಮತ್ತು ಇತರರು ಎಲ್ಲಾ ಕಡೆ  ವಿಚಾರಿಸಿದರೂ . ಗಂಡ ನ  ಸುಳಿವು ಸಿಕ್ಕಿರುವುದಿಲ್ಲ. ಊರಿನಲ್ಲಿ ಸಂಬಂಧಿಕರಿಗೆ ಮತ್ತು  ಮಂಗಳೂರಿಗೆ ಕೆಲಸಕ್ಕೆ ಬಂದಿರುವ ತಮ್ಮ ಮಂದಿಯವರಲ್ಲಿ  ಗಂಡನ ಬಗ್ಗೆ ವಿಚಾರಿಸಿದ್ದು .ಯಾರೂ ಕೂಡ ಗಂಡನ ಬಗ್ಗೆ  ಮಾಹಿತಿದೊರೆತಿರುವುದಿಲ್ಲ.. ತನ್ನ ಗಂಡ   ಕನಕಪ್ಪ ರಾಮಪ್ಪ ಮಾದರ ದಿನಾಂಕ: 29-11-2022 ರಿಂದ  ಮನೆಗೆ  ಬಾರದೇ ಕಾಣೆಯಾಗಿರುತ್ತಾನೆ ಅವರ  ಮೊಬೈಲ್ ನಂಬ್ರ 8792340798 ಆಗಿದೆ. ಮೊಬೈಲ್ ಕೂಡ ಸ್ವಿಚ್ ಆಫ್  ಆಗಿದೆ.ತನ್ನ ಗಂಡನನ್ನು ಪತ್ತೆ  ಮಾಡಿ ಕೊಡಬೇಕಾಗಿ  ಎಂಬಿತ್ಯಾದಿ  ಸಾರಾಂಶವಾಗಿರುತ್ತದೆ.

Mangalore East Traffic PS                                                 

ಪಿರ್ಯಾದಿದಾರರಾದ ಗೌತಮ್ ರವರು ದಿನಾಂಕ 02-12-2022 ರಂದು ಮದ್ಯಾಹ್ನ ಸಮಯ ಸುಮಾರು 2.00 ಗಂಟೆಗೆ KA-19-C-1699  ನೊಂದಣಿ ನಂಬ್ರದ ಗ್ಯಾಸ್ ಸಿಲಿಂಡರ್ ಪಿಕ್ ಅಪ್ ವಾಹನವನ್ನು ಚಲಾಯಿಸಿಕೊಂಡು ಬಂದು ಬಿಕರ್ನಕಟ್ಟೆ ಕೈಕಂಬ  ಪ್ಲೈಓವರ್ ಕಡೆಗೆ ಹೋಗಲು ರಸ್ತೆ ಬದಿ ವಾಹನವನ್ನು ನಿಲ್ಲಿಸಿ ನೋಡುತ್ತಿದ್ದಾಗ ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ಬಂದ ಕಾರು ಚಾಲಕರೊಬ್ಬರು ಅವರ ವಾಹನವನ್ನು ನಿಲ್ಲಿಸಿ ಪಿರ್ಯಾದಿದಾರರ ವಾಹನವನ್ನು ಮುಖ್ಯರಸ್ತೆ ಕಡೆಗೆ ಚಲಾಯಿಸಲು ಅವಕಾಶ ಮಾಡಿಕೊಟ್ಟಂತೆ ಪಿರ್ಯಾದಿದಾರರು ಗ್ಯಾಸ್ ಸಿಲಿಂಡರ್ ಪಿಕ್ ಆಪ್ ವಾಹನವನ್ನು  NH 169 ರಸ್ತೆಯಲ್ಲಿ ಬಲಗಡೆಗೆ ತಿರುಗಿಸಿಕೊಂಡು ಚಲಾಯಿಸುತ್ತಿದ್ದ ವೇಳೆ ಬಿಕರ್ನಕಟ್ಟೆ ಕೈಕಂಬ ಕಡೆಯಿಂದ KA-19-HF-5626 ನೊಂದಣಿ ನಂಬ್ರದ ಸ್ಕೂಟರನ್ನು ಅದರ ಚಾಲಕ ಶೈಲೇಶ್ ಎಂಬಾತನು ಹಿಂಬದಿ ಸವಾರರನ್ನಾಗಿ ಸೋಮನಾಥ ಎಂಬುವರನ್ನು ಕುಳ್ಳಿರಿಸಿಕೊಂಡು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಕಾರಿನ ಹಿಂಬದಿ ಇದ್ದ ಆಟೋರಿಕ್ಷಾವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ವಾಹನದ ಮಧ್ಯ ಭಾಗಕ್ಕೆ ಡಿಕ್ಕಿಹೊಡೆದು, ವಾಹನ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಸ್ಕೂಟರ್ ಸವಾರನಿಗೆ ಹಣೆಯ ಮಧ್ಯಭಾಗಕ್ಕೆ, ಹಣೆಯ ಎಡಭಾಗಕ್ಕೆ ಆಳವಾದ ರಕ್ತಗಾಯ, ಬಲಕೈ ಕಿರು ಬೆರಳಿನಲ್ಲಿ ರಕ್ತಗಾಯವಾದವರನ್ನು ಹಿಂಬದಿ ಸವಾರರಾಗಿದ್ದ ಸೋಮನಾಥ ಎಂಬುವರು ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

2) ದಿನಾಂಕ 01-12-2022 ರಂದು ಸಂಜೆ 5.00 ಗಂಟೆಗೆ ಪ್ರಕರಣದ ಪಿರ್ಯಾದಿದಾರರಾದ ರವಿ ದೇವಾಡಿಗ ರವರು ಸೂಟರ್ ಪೇಟೆ ಕಡೆಯಿಂದ ವೆಲೆನ್ಸಿಯಾ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬರುತ್ತಾ NFORCE INFRASTRUCTURE PVT LTD ಎದುರುಗಡೆಯಿಂದ ರಸ್ತೆಯ ಬಲಗಡೆಗೆ ದಾಟುತ್ತ ರಸ್ತೆಯ ಅಂಚಿಗೆ ಬಂದು ತಲುಪುತ್ತಿದ್ದಂತೆ ವೆಲೆನ್ಸಿಯಾ ಕಡೆಯಿಂದ ಸೂಟರ್ ಪೇಟೆ ಕಡೆಗೆ KA-21-V-8379  ನೊಂದಣಿ ನಂಬ್ರ FZ YAMAHA  ಮೋಟಾರ್ ಸೈಕಲನ್ನು ಅದರ ಚಾಲಕ ಮೊಹಮ್ಮದ್ ಅಫ್ರೀಜ್ ಎಂಬಾತನು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಜಾಗರೂಕತೆಯಿಂದ ಮತ್ತು ಅತೀ ವೇಗವಾಗಿ ರಸ್ತೆಯ ತೀರ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಹೊಡೆದು ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಎಡ ಕೈ ತೋಳಿಗೆ, ಎಡ ಕೈ ಕೋಲು ಕೈಗೆ ಮತ್ತು ಎಡಕಾಲಿನ ಕೋಲು ಕಾಲಿನ ಬಳಿ ಮೂಳೆ ಮುರಿತದ ಗಾಯವಾಗಿ ಬಲ ಕೈ ಮೊಣಗಂಟಿನಲ್ಲಿ ರಕ್ತಗಾಯವಾದವರನ್ನು ಆರೋಪಿ ಚಾಲಕ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಎಂಬಿತ್ಯಾದಿ

 

Bajpe PS

ಪಿರ್ಯಾದಿ Sampath Kumar ದಾರರು ದಿನಾಂಕ 02.12.2022 ರಂದು ರಾತ್ರಿ 9.45 ಗಂಟೆಗೆ ತನ್ನ ಕೆಲಸ ಮುಗಿಸಿ ಊಟ ಮಾಡುವ ಸಲುವಾಗಿ ತನ್ನ ಬಾಬ್ತು KA20EM1982 ನೇ ಬುಲೆಟ್ ಬೈಕಿನಲ್ಲಿ ಮಂಗಳೂರು ತಾಲೂಕು ಕೊಂಡೆಮೂಲ ಗ್ರಾಮದ  ಎಕ್ಕಾರಿನಿಂದ ಕಟೀಲ್ ಕಡೆಗೆ ಹೋಗುವ ಬರೋಡ ಬ್ಯಾಂಕ್ ಸಮೀಪದ  ರಸ್ತೆಯಲ್ಲಿ ಹೋಗುತ್ತಿರುವಾಗ ಹಿಂಬಂದಿಯಿಂದ ಅಂದರೆ  ಎಕ್ಕಾರು ಕಡೆಯಿಂದ ಬಂದ ಬಿಳಿ ಬಣ್ಣದ ನೊಂದಣಿ ಸಂಖ್ಯೆ ಇಲ್ಲದ  ಕಾರಿನ ಚಾಲಕಾನದ ರವಿದಾಸ ಕುಡ್ವ  ಎಂಬುವರು ತನ್ನ ಕಾರನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲಾಯಿಸಿ ಪಿರ್ಯಾದಿದಾರರು ಚಲಾಯಿಸುತಿದ್ದ ಬೈಕಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಅವರನ್ನು ಕೂಡಲೇ ಅವರನ್ನು ಕಟೀಲಿನ ದುರ್ಗಾ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಎರೆಡು ಕಾಲಿನ ತೊಡೆ ಸಂದಿಯಲ್ಲಿ ಮೂಳೆ ಮುರಿತವಾಗಿರುತ್ತದೆ ಎಂದು ತಿಳಿಸಿ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

Mangalore Rural PS             

ಪಿರ್ಯಾಧಿ Aminul Haque Barbhuma ದಾರರು ಮತ್ತು ಮೃತ ಜಾಬೇದ್ ಆಹಮ್ಮದ್  ಎಂಬವರು ದಿನಾಂಕ  28-11-2022 ರಿಂದ ಎನ್.ಟಿ ರಾಜರವರು ವಹಿಸಿಕೊಂಡಿರುವ ಪಚ್ಚನಾಡಿ ಗ್ರಾಮದ ಸಂತೋಷನಗರ ಎಂಬಲ್ಲಿರುವ ವಿನು ಜಿ ನಾಯರ್ ರವರ ಬಾಬ್ತು ಮನೆಯ ಹೊರ ಬದಿಯಿಂದ ಟೆರೆಸ್ ಗೆ ಹಾಗೂ ಟೆರೆಸ್ ನಿಂದ ಮೇಲ್ಗಡೆಯ ಟ್ರಸ್ ರೂಪಿಂಗ್ ಗೆ ಹೋಗುವರೇ ಕಬ್ಬಿಣದ ಸ್ಟೇರ್ ಕೇಸ್(ಮೆಟ್ಟಿಲುಗಳು) ನಿರ್ಮಿಸುವ ಕಾಮಗಾರಿ ಕೆಲಸದ ಬಗ್ಗೆ ಬಂದು ಅಂಗಳದಿಂದ ಟೆರೆಸ್ ಕಬ್ಬಿಣದ ಸ್ಟೇರ್ ಕೇಸ್ ಗಳನ್ನು ನಿರ್ಮಿಸಿದ್ದು ದಿನಾಂಕ 02-12-2022 ರಂದು ಬೆಳಿಗ್ಗೆ 9-00 ಗಂಟೆಗೆ ಎಂದಿನಂತೆ ಕೆಲಸದ ಬಗ್ಗೆ ಬಂದು ಕೆಳಗಡೆ ಮೆಟ್ಟಿಲುಗಳ ಕೆಲಸಗಳನ್ನು ಪೂರೈಸಿದ ಬಳಿಕ ಮದ್ಯಾಹ್ನದ ನಂತರ ರೂಪಿಂಗ್ ನ ಮೆಟ್ಟಿಲುಗಳನ್ನು ನಿರ್ಮಿಸುವಂತೆ ಗುತ್ತಿಗೆದಾರರಾದ ಎನ್.ಟಿ ರಾಜ ರವರು ತಿಳಿಸಿದಾಗ ಜಾಬೇದ್ ಅಹಮ್ಮದ್ ರವರು ಟ್ರಸ್ ರೂಪಿಂಗ್ ಗೆ ಮೆಟ್ಟಿಲುಗಳನ್ನು ಮಾಡುವ ಸಲುವಾಗಿ  ಅಳತೆ ತೆಗೆಯಲು ಟೆರೆಸ್ ನಿಂದ ಟ್ರಸ್ ರೂಪಿಂಗ್ ಗೆ ಹೋಗಲು ಕಬ್ಬಿಣದ ಏಣಿಯನ್ನು ಇರಿಸಿ ರೂಪಿಂಗ್ ನ ಮೇಲ್ಗಡೆ ಹೋಗುವಾಗ ಮದ್ಯಾಹ್ನ 3-00 ಗಂಟೆ ಸುಮಾರಿಗೆ ಆಯ ತಪ್ಪಿ ಸುಮಾರು 12 ಅಡಿ ಕೆಳಗಡೆ ನೆಲಕ್ಕೆ ಬಿದ್ದುದರಿಂದ ನೆಲದಲ್ಲಿದ್ದ ಕಲ್ಲಿಗೆ ಬಡಿದು ತಲೆಗೆ ಹಾಗೂ ಮುಖಕ್ಕೆ ತೀವೃ ಗಾಯವುಂಟಾಗಿದ್ದು ಚಿಕಿತ್ಸೆ ಬಗ್ಗೆ ವೆನ್ಲಾಕ್  ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯಲ್ಲಿ ವೈಧ್ಯರು ಪರೀಕ್ಷಿಸಿ ಆತನನ್ನು ಆಸ್ಪತ್ರೆಗೆ ಕರೆ ತರುವಾಗಲೇ ಮೃತಪಟ್ಟಿದ್ದಾಗಿ ತಿಳಿಸಿರುತ್ತಾರೆ. ರೂಪಿಂಗ್ ನ ಮೆಟ್ಟಿಲುಗಳನ್ನು ನಿರ್ಮಿಸಲು ಆಧಾರಕ್ಕಾಗಿ ಸೇಪ್ಟಿ ಬೆಲ್ಟ್ ಅಥವಾ ಯಾವುದೇ ಸುರಕ್ಷಾ ಸಾಧನಗಳನ್ನು ನೀಡದೇ ಕಟ್ಟಡದ ಮಾಲಿಕರಾದ ವಿನು ಜಿ ನಾಯರ್ ಮತ್ತು ಕಾಂಟ್ರ್ಯಾಕ್ಟರ್ ಎನ್.ಟಿ ರಾಜರವರು ನಿರ್ಲಕ್ಷತನ ತೋರಿದ್ದರಿಂದಲೇ ಈ ಘಟನೆ ಸಂಭವಿಸಿದ್ದಾಗಿರುತ್ತದೆ. ಎಂಬಿತ್ಯಾದಿ 

 

ಇತ್ತೀಚಿನ ನವೀಕರಣ​ : 03-12-2022 07:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080