ಅಭಿಪ್ರಾಯ / ಸಲಹೆಗಳು

Crime Reported in : CEN Crime PS

ಫಿರ್ಯಾದಿದಾರರಾದ ಅಬ್ದುಲ್ ರಹೀಮ್ ಎಂಬುವವರು ಮುಪ್ಪೇರಿಯಾ ಗ್ರಾಮ, ಸುಳ್ಯದ ವಾಸಿಯಾಗಿದ್ದು, ಪ್ರಸ್ತುತ 5 ವರ್ಷಗಳಿಂದ ಮಂಗಳೂರಿನಲ್ಲಿ ವಾಸಮಾಡಿಕೊಂಡಿರುತ್ತಾರೆ.  ದಿನಾಂಕ 22-06-2016 ರಂದು ಪಿರ್ಯಾದಿದಾರರು ಮಂಗಳೂರಿನಲ್ಲಿರುವ PROVIDENT BUILDERS & DEVELOPERS ಎಂಬ ಸಂಸ್ಥೆಯ ಪಾಲುದಾರರಾದ ಆರೋಪಿ ಜೋನ್ ಸಿಲ್ವೆಸ್ಟರ್ ಸಲ್ದಾನ ಮತ್ತು ಜೀನ್ ರೂಪಾ ಸಲ್ದಾನ ಎಂಬವರೊಂದಿಗೆ PROVIDENT DASHA ಎಂಬ ಹೊಸ ವಸತಿ ಸಮುಚ್ಚಯದ 2ನೇ ಪ್ಲೋರ್ ನಲ್ಲಿರುವ 204 ಪ್ಲಾಟನ್ನು ಖರೀದಿ ಮಾಡುವ ಬಗ್ಗೆ ರೂಪಾಯಿ 33,00,250/- ಲಕ್ಷ ರೂ. ಗೆ  ಕರಾರು ಪತ್ರ  ಮಾಡಿಕೊಂಡು ರೂ.15,28,000/-ಲಕ್ಷ ವನ್ನು ಮುಂಗಡವಾಗಿ ನೀಡಿರುತ್ತಾರೆ.  ನಂತರದಲ್ಲಿ ಹಂತ ಹಂತವಾಗಿ ಒಪ್ಪಂದದಂತೆ  ಹಣವನ್ನು ಫಿರ್ಯಾದಿದಾರರು ಆರೋಪಿಗಳಿಗೆ ಪೂರ್ತಿಯಾಗಿ ನೀಡಿರುತ್ತಾರೆ. ಸದ್ರಿ ಕಟ್ಟಡ ನಿರ್ಮಾಣದ ಜಾಗವು ಆರೋಪಿ 3 ನೇ ಅನಿಲ್ ವೇಗಸ್, ಮತ್ತು 4 ನೇ ಮಾವೀಸ್ ಎಸ್. ಜೆ.ವೇಗಸ್ ರವರಿಗೆ ಸೇರಿರುವುದಾಗಿದೆ. ನಂತರದ ದಿನಗಳಲ್ಲಿ  ಫಿರ್ಯಾದಿದಾರರಿಗೆ ಒಪ್ಪಿಸಬೇಕಾದ ವಸತಿಯನ್ನು ಒಪ್ಪಿಸದೇ, ಆರೋಪಿ 1 ರಿಂದ 4 ನೇ ಆರೋಪಿತರು ಪಿರ್ಯಾದಿದಾರರಿಗೆ ಮೋಸ ಮಾಡಿ ದುರ್ಲಾಭವನ್ನು ಪಡೆಯುವ ಉದ್ದೇಶದಿಂದ ಸದ್ರಿ ವಸತಿ ಸಮುಚ್ಚಯವನ್ನೇ ಪಿರ್ಯಾದಿದಾರರಿಗೆ ಯಾವುದೇ ಮಾಹಿತಿ ನೀಡದೆ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಗೆ 2 ಕೋಟಿ ಗೆ ಅಡಮಾನ ಇರಿಸಿ, ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡಿ ನಷ್ಟವನ್ನುಂಟು ಮಾಡಿರುವುದಾಗಿದೆ. ಈ ಬಗ್ಗೆ ಆರೋಪಿಗಳೊಂದಿಗೆ ಈ ವಿಚಾರವನ್ನು ಕೇಳಿದಾಗ ಆರೋಪಿಗಳು  ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೇವ ಬೆದರಿಕೆ ಹಾಕಿರುವುದಾಗಿದೆ.

2) ಪಿರ್ಯಾದಿದಾರರು ಬೆಂಗಳೂರಿನಲ್ಲಿ IT consultant ಆಗಿ ಕೆಲಸ ಮಾಡಿಕೊಂಡಿದ್ದು ಬೆಂಗಳೂರಿನ ರಿನ ಹೆಚ್.ಡಿ.ಎಫ್.ಸಿ ಬ್ರಾಂಚಿನಲ್ಲಿ ಖಾತೆ ಸಂಖ್ಯೆ ದನ್ನು ಹೊಂದಿರುತ್ತಾರೆ. ಪಿರ್ಯಾದಿದಾರರು  ದಿನಾಂಕ 03-03-2022 ರಂದು ತನ್ನ ವಾಸ್ತವ್ಯದ ಮನೆಯಾದ ಮಂಗಳೂರಿಗೆ ಬಂದಿದ್ದು ದಿನಾಂಕ 04-04-2022 ರಂದು ಸಂಜೆ 6.30 ಗಂಟೆಗೆ ಸನತ ವೈಷ್ಣೋದೇವಿ ಮಂದಿರ ಯಾತ್ರೆಗೆ ಹೋಗುವ ಸಲುವಾಗಿ ಹೆಲಿಕಾಪ್ಟರ್ ಬುಕ್ಕಿಂಗ್ ಬಗ್ಗೆ ಗೂಗಲ್ ನಲ್ಲಿ ಹುಡುಕಾಡಿದ್ದು  ಸದ್ರಿ ಹೆಲಿಕಾಪ್ಟರ್ ಬುಕ್ಕಿಂಗ್ ಬಗ್ಗೆ ಗೂಗಲ್ ನಲ್ಲಿ ನಿತಿನ್ ಎಂಬವರು (ಮೊಬೈಲ್  9903830407)   ಪರಿಚಯವಾಗಿದ್ದು ತಾನು ವೈಷ್ಣೋದೇವಿ ದೇಗುಲದ ಬೋರ್ಡ್ ವತಿಯಿಂದ ಮಾತನಾಡುವುದಾಗಿ ನಂಬಿಸಿ ವೈಷ್ಣೋದೇವಿ ಮಂದಿರದ ಹೆಲಿಕಾಪ್ಟರ್ ಬುಕ್ಕಿಂಗ ಬಗ್ಗ ರೂ.38060/- ಕಳುಹಿಸುವಂತೆ ತಿಳಿಸಿ ತಾನು ರೂ. 38060/- QR CODE SCAN ನ್ನು ಕಳುಹಸಿದ್ದು ಪಿರ್ಯಾದಿದಾರರು ಸದ್ರಿ QR CODE ನ್ನು ಸ್ಕ್ಯಾನ್ ಮಾಡಿ ರೂ. 38060/- ನ್ನು ಪಾವತಿಸಿರುತ್ತಾರೆ. ಪಿರ್ಯಾದಿದಾರರು ಹಣವನ್ನು ಪಾವತಿಸಿದ ನಂತರ ಸದ್ರಿ  ನಿತಿನ್ ಎಂಬ ವ್ಯಕ್ತಿಯು ಪಿರ್ಯಾದಿದಾರರ ಕರೆಯನ್ನು ಸ್ವೀಕರಿಸದೇ ಇದ್ದು ತದನಂತರ ಪಿರ್ಯಾದಿದಾರರು ಖುದ್ದಾಗಿ ವೈಷ್ಣೋದೇವಿ ದೇಗುಲದ ಬೋರ್ಡನ್ನು ಸಂಪರ್ಕಿಸಿದ್ದು ನಿತಿನ್ ಎಂಬ ವ್ಯಕ್ತಿಯು ಸದ್ರಿ ದೇಗುಲದ ಬೋರ್ಡಿಗೆ ಸಂಬಂಧಿಸಿದ ವ್ಯಕ್ತಿಯಾಗಿರುವುದಿಲ್ಲ ಎಂಬುದಾಗಿ ತಿಳಿದು ಬಂದಿರುತ್ತದೆ.ಆದುದರಿಂದ ಗೂಗಲ್ ನಲ್ಲಿ ತನ್ನನ್ನು ತಾನು ವೈಷ್ಣೋದೇವಿ ಮಂದಿರದ ಬೋರ್ಡ್ ನಿಂದ ಮಾತನಾಡುತ್ತಿರುವುದಾಗಿ ಪಿರ್ಯಾದಿದಾರರನ್ನು ನಂಬಿಸಿ  ಪಿರ್ಯಾದಿದಾರರ ಹೆಚ್.ಡಿ.ಎಫ್.ಸಿ ಖಾತೆ ನೇದರಿಂದ ರೂ. 38060/- ನ್ನು ತನ್ನ ಖಾತೆಗೆ ವರ್ಗಾಯಸಿಕೊಂಡು ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. ಎಂಬಿತ್ಯಾದಿ

Traffic South Police Station              

ದಿನಾಂಕ   02-10-2022 ರಂದು ಪಿರ್ಯಾದಿ B SURYANARAYANA  ITALA ದಾರರು  ಕಾರು   ನಂಬರ್   KA-19-MH-7864  ನೇದರಲ್ಲಿ ಅವರ  ಹೆಂಡತಿ ಕಾವೇರಿ ಮತ್ತು  ಮಗಳು  ಅರ್ಚನರವರ ಜೊತೆ   ಪ್ರಯಾಣಿಕರಾಗಿ  ಮತ್ತು ಅವರ  ಮಗನಾದ   ಆದಿತ್ಯ ಎಂಬವರು ಕಾರಿನ ಚಾಲಕರಾಗಿ ಪೋಳಲಿ  ದೇವಸ್ಥಾನಕ್ಕೆ ಹೋಗಿ ನಂತರ ಅಲ್ಲಿಂದ ಅವರ ಮನೆಯ ಕಡೆಗೆ  ರಾಷ್ಟ್ರೀಯ ಹೆದ್ದಾರಿ  169 ರ ರಸ್ತೆಯಲ್ಲಿ  ಕಾರನ್ನು  ಚಲಾಯಿಸಿಕೊಂಡು ಬರುತ್ತಿರುವ ಸಮಯ  ಸುಮಾರು  16:30 ಗಂಟೆಗೆ  ಪರಾರಿ ಕ್ರಾಸ್  ಬಳಿ  ತಲುಪುತ್ತಿದ್ದಂತೆ  ಅವರ  ಕಾರಿನ  ಅಂದರೆ  ವಾಮಂಜೂರು ಕಡೆಯಿಂದ ಆಟೋರಿಕ್ಷಾ ನಂಬರ್   KA-19-AB-3436  ನೇದನ್ನು  ಅದರ   ಚಾಲಕ  ಮೊಹಮ್ಮದ್  ಹರ್ಷಿದ್  ಎಂಬಾತನು  ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ   ಚಲಾಯಿಸಿಕೊಂಡು ಹೋಗಿ  ಪಿರ್ಯಾದಿದಾರರ ಕಾರಿನ ಮುಂಬದಿಗೆ ಆಟೋರಿಕ್ಷದ   ಎಡ ಬದಿಯು ಡಿಕ್ಕಿ ಹೊಡೆದನು . ಈ  ಅಪಘಾತದಿಂದ  ಪಿರ್ಯಾದಿದಾರರ ಎರಡು ಕಾಲಿನ  ಮೊಣಗಂಟಿಗೆ ತರಚಿದ ಗಾಯ ಹಾಗೂ  ಅವರ  ಹೆಂಡತಿಗೆ  ಹಣೆಗೆ  ಗುದ್ದಿದ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರ ಕಾರಿನ  ಮುಂಭಾಗ  ಸಂಪೂರ್ಣ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 04-10-2022 08:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080