ಅಭಿಪ್ರಾಯ / ಸಲಹೆಗಳು

Crime Reported in : Mangalore West Traffic PS

ಪಿರ್ಯಾದಿ Aboobakkar ದಿನಾಂಕ 05-01-2023 ರಂದು ಸ್ಟೇಟ್ ಬ್ಯಾಂಕ್ ಬಳಿಯ ಮೀನಿನ ಮಾರ್ಕೆಟ್ ಎದುರು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಬೆಳಿಗ್ಗೆ ಸಮಯ ಸುಮಾರು 07-20 ಗಂಟೆಗೆ ಸ್ಟೇಟ್ ಬ್ಯಾಂಕ್ ಕಡೆಯಿಂದ ರಾವ್ & ರಾವ್ ವೃತ್ತದ ಕಡೆಗೆ  ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ KA-19-AA-2818 ನೇ ಬಸ್ಸನ್ನು ಅದರ ಚಾಲಕ ಅಶ್ರಫ್ ವುಲ್ಲಾ  ನಿರ್ಲಕ್ಷ್ಯತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೀನಿನ ಮಾರ್ಕೆಟ್ ಕಡೆಯಿಂದ ಇಂಟರ್ ಸಿಟಿ ಲಾಡ್ಜ್ ಕಡೆಗೆ ರಸ್ತೆ ದಾಟುತ್ತಿದ್ದ  ಪಾದಚಾರಿ ಬಸವರಾಜ್ ಎಂಬ ವ್ಯಕ್ತಿಗೆ ಡಿಕ್ಕಿಯಾಗಿ ಬಸ್ಸಿನ ಮುಂಭಾಗದ ಬಲ ಬದಿಯ ಚಕ್ರದ ಅಡಿಗೆ  ಸಿಲುಕಿ ಸುಮಾರು 15 ಅಡಿ ದೂರ ಎಳೆದುಕೊಂಡು ಹೋಗಿದ್ದು ಇದರಿಂದ ಬಸವರಾಜ್ ನ  ಎಡ ಕಾಲಿನ  ತೊಡೆಗೆ ಹಾಗೂ ಸೊಂಟಕ್ಕೆ ಗಂಭೀರ ಸ್ವರೂಪದ ಗಾಯಾವಾದ್ದವರನ್ನು ಚಿಕಿತ್ಸೆಗಾಗಿ ಅಪಘಾತ ವೆಸಗಿದ ಬಸ್ಸಿನಲ್ಲಿಯೇ ಪಿರ್ಯಾದಿದಾರರು ಹಾಗೂ ಚಾಲಕ ಮತ್ತು ನಿರ್ವಾಹಕರು ಸೇರಿ ಸರಕಾರಿ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಚಿಕಿತ್ಸೆಯಲ್ಲಿದ್ದ ಗಾಯಾಳು ಬಸವರಾಜ್ ರವರು ಚಿಕಿತ್ಸೆಗೆ ಸ್ಪಂದಿಸದೆ ಈ ದಿನ ಬೆಳಿಗ್ಗೆ 09-00 ಗಂಟೆಗೆ ಮೃತ ಪಟ್ಟಿರುತ್ತಾರೆ ಎಂಬಿತ್ಯಾದಿ.

Crime Reported in :  Traffic North Police Station                                       

ಪಿರ್ಯಾದಿ Vikas L Ullal ಮಾವ ಭಾಸ್ಕರ ಯು ರವರು ದಿನಾಂಕ: 04-01-2023 ರಂದು ಯಾವುದೋ ಕೆಲಸದ ನಿಮಿತ್ತ ಅವರ ಬಾಬ್ತು KA-19-EP-9479 Honda Activa ಸ್ಕೂಟರಿನಲ್ಲಿ ಕುಂಟಿಕಾನದಿಂದ ಕಾವೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಸುಮಾರು ರಾತ್ರಿ 9:30 ಘಂಟೆಗೆ ಕುಂಟಿಕಾನ ಕಾವೂರು ರಸ್ತೆಯ ಮುಲ್ಲಕಾಡು ಎಂಬಲ್ಲಿ ಪಿರ್ಯಾದಿದಾರರ ಮಾವ ಭಾಸ್ಕರ ಯು ರವರು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಭಾಸ್ಕರ ಯು ರವರ ಹಣೆಯ ಮುಂಬಾಗಕ್ಕೆ ಗಂಭೀರ ಸ್ವರೂಪದ ಗಾಯ ಹಾಗೂ ತಲೆಗೆ, ಎದೆಗೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಸ್ವರೂಪದ ಗುದ್ದಿದ ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ದಾಖಲಾಗಿ I.C.U ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗಾಯಾಳು ಭಾಸ್ಕರ ಯು ರವರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಎಂಬಿತ್ಯಾದಿ

Crime Reported in :   Traffic North Police Station         

ಪಿರ್ಯಾದಿ SMT.DINESHWARI ಗಂಡ ಮಹೇಶರವರು ದಿನಾಂಕ 05/01/2023 ರಂದು ತನ್ನ ಬಾಬ್ತು KA-19-ED-2048 ನಂಬ್ರದ ಸ್ಕೂಟರಿನಲ್ಲಿ ಮನೆಯಿಂದ ಮುಲ್ಕಿ ಕಡೆಗೆ ಹೋಗುತ್ತಿದ್ದ ಸಮಯ ಸುಮಾರು 8.30 ಗಂಟೆಗೆ ಕಾರ್ನಾಡು ಬೈಪಾಸ್ ತೆರದ ಡಿವೈಡರ್ ಬಳಿ ತಲುಪುತ್ತಿದ್ದಂತೆ KA-20-EZ-4736 ನಂಬ್ರದ ಸ್ಕೂಟರನ್ನು ಅದರ ಸವಾರ ಅಥರ್ವ ಕುತೆ ಎಂಬಾತನು ಕಾರ್ನಾಡು ಬೈಪಾಸ್ ರಸ್ತೆಯ ಕಡೆಯಿಂದ ಚಿತ್ರಾಪು ಕಡೆಗೆ NH66 ನೇ ತೆರೆದ ಡಿವೈಡರ್ ಬಳಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮುಂದಕ್ಕೆ ನುಗ್ಗಿಸಿ ಪಿರ್ಯಾದಿದಾರರ ಗಂಡ ಮಹೇಶರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಮಹೇಶರವರು ಡಾಮಾರು ರಸ್ತೆಗೆ ಬಿದ್ದು, ಗಾಯಗೊಂಡವರನ್ನು ಅಲ್ಲಿದ್ದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

Crime Reported in :  Moodabidre PS  

ಪಿರ್ಯಾದಿ Amruth P J ಇವರು ಪ್ರಕೃತಿ ಹೌಸ್‌, ಅಶೋಕ್‌ ರಸ್ತೆ ಪೆಳ್ಕುಂಜೆ ಬೆಳವಾಯಿ ಗ್ರಾಮ,ಇಲ್ಲಿರುವ ಮನೆಗೆ ಬೀಗ ಹಾಕಿ ಮಂಗಳೂರಿನಲ್ಲಿರುವ ಅವರ ಮಾವನ ಮನೆಗೆ ಹೋಗಿರುವ ಸಮಯ ದಿನಾಂಕ: 02-01-2023 ರಂದು ರಾತ್ರಿ ಯಾರೋ ಕಳ್ಳರು ಪಿರ್ಯಾದುದಾರರ ಮನೆಯ ಮುಖ್ಯ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಮನೆಯ ಒಳಗಡೆ ಇರುವ 2 ರೂಮುಗಳ ಬಾಗಿಲು ಹಾಗೂ ಸಿಟ್ ಔಟ್ ನ ಬಾಗಿಲುಗಳನ್ನು ಒಡೆದು ಮನೆಯಲ್ಲಿರುವ ಮೂರು ಮರದ ಕಪಾಟು ಹಾಗೂ ಮೂರು ಕಬ್ಬಿಣದ ಕಪಾಟುಗಳನ್ನು ಒಡೆದು ಹಾಕಿ ಅದರಲ್ಲಿರುವ ವಸ್ತುಗಳನ್ನು ಹಾಗೂ ದಾಖಲಾತಿಗಳನ್ನು ಚೆಲ್ಲಾ ಪಿಲ್ಲಿಮಾಡಿ ಕಳ್ಳತನಕ್ಕೆ ಪ್ರಯತ್ನಿಸಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 05-01-2023 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080