ಅಭಿಪ್ರಾಯ / ಸಲಹೆಗಳು

Crime Reported in :Traffic North Police Station            

ದಿ: 05-09-2022 ರಂದು ಪಿರ್ಯಾದಿ Hamza ದಾರರ ಬಾವ ಮಹಮ್ಮದ್ ಪಿ ಎ ರವರು ಬೆಳಿಗ್ಗೆ 06:30 ಗಂಟೆಗೆ ಕಾವೂರು ಅಂಬಿಕಾ ನಗರದ ಬಳಿ ವಾಕಿಂಗ್ ಮಾಡುತ್ತಿರುವ ಸಮಯ KA-19-HK-6463 ನಂಬರಿನ ಸ್ಕೂಟರಿನ ಸವಾರ ಮಹಮ್ಮದ್ ರಮೀಝ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರಾ ಎಡ ಬದಿಗೆ ಸ್ಕೂಟರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಾವನಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾಂಕ್ರಿಟ್ ರಸ್ತೆಗೆ ಬಿದ್ದು ಅವರ ತಲೆಯ ಬಲಭಾಗದಲ್ಲಿ ರಕ್ತಗಾಯ ಬಲಕೈ ತೋಳಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಮತ್ತು ಬಲಭಾಗದ ಸೊಂಟದ ಬಳಿ ಗುದ್ದಿದ ರೀತಿಯ ಗಾಯವಾಗಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾಧಿ.

Crime Reported in :Mangalore West Traffic PS                         

ಪಿರ್ಯಾದಿ GNANA SHEKARAN ದಾರರು ದಿನಾಂಕ:04-09-2022 ರಂದು ಮನೆಯಲ್ಲಿರುವ ಸಮಯ ಸುಮಾರು 01-00 ಗಂಟೆಗೆ ಪಿರ್ಯಾದಿದಾರರ ಬಾವ ಕಾರ್ತೀಕೇಯನ್ ಎಂಬವರ ಮೊಬೈಲ್ ಫೋನ್ ನಿಂದ ಎ.ಜೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಕರೆ ಮಾಡಿ ಕಾರ್ತಿಕೇಯನ್ ರವರಿಗೆ ಅಪಘಾತವಾಗಿ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ವಿಚಾರವನ್ನು ತಿಳಿಸಿದಂತೆ ಪಿರ್ಯಾದಿದಾರರು ತನ್ನ ಹೆಂಡತಿ ಕೃಷ್ಣವೇಣಿರವರ ಜೊತೆಯಲ್ಲಿ ಎ.ಜೆ ಆಸ್ಪತ್ರೆಗೆ ಬಂದಾಗ ಬಾವನವರು ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದು ಪಿರ್ಯಾದಿದಾರರು ಘಟನೆಯ ಬಗ್ಗೆ ವಿಚಾರಿಸಿದಾಗ KA-19-HF-4894ನೇ ಬೈಕ್ ನಲ್ಲಿ ಮನೆಯಿಂದ ಹೊರಟು ಕೆ.ಎಸ್.ಆರ್.ಟಿ.ಸಿ ಡಿಪ್ಪೋದ ತಿರುವು ರಸ್ತೆಯ ಬಳಿ ತಲುಪಿದಾಗ  ಚಲಾಯಿಸುತ್ತಿದ್ದ ಬೈಕ್ ಹತೋಟಿ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದಿದ್ದು ಆಗ ಸಾರ್ವಜನಿಕರು ಸೇರಿ ಚಿಕಿತ್ಸೆಗೆ ಎ.ಜೆ ಆಸ್ಪತ್ರೆಗೆ ಸೇರಿಸಿದರು ಬೈಕ್ ಅಲ್ಲಿಯೇ ಇದೆ ಎಂದು ತಿಳಿಸಿ ಒಮ್ಮೇಲೆ ಮಾತನ್ನು ನಿಲ್ಲಿಸಿದರು ಕೂಡಲೇ ಪರೀಕ್ಷಿಸಿದ ವೈದ್ಯರು ಮೃತಪಟ್ಟ ಬಗ್ಗೆ ತಿಳಿಸಿದ್ದು ಸಮಯ ಸುಮಾರು 2-53 ರ ವೇಳೆಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ

Crime Reported in :  Mangalore North PS                                  

ಪಿರ್ಯಾದಿದಾರರು ದಿನಾಂಕ 05.09.2022 ರಂದು ಬೆಳಗ್ಗೆ 09:15 ಗಂಟೆಗೆ ಜೈನ್ ಟೆಂಪಲ್ ಹಿಂಬದಿ ಟಿ.ಟಿ ರಸ್ತೆ ಮಂಗಳೂರು  ಮನೆಯಲ್ಲಿರುವ ಸಮಯ ಓರ್ವ ವ್ಯಕ್ತಿಯು ಪಿರ್ಯಾದಿದಾರರ ರೂಮ್ ನ ಒಳಗೆ ಬಂದು 2,000/- ರೂಪಾಯಿಯನ್ನು ತೋರಿಸಿ ಚಿಲ್ಲರೆಯನ್ನು ನೀಡುವಂತೆ ಹೇಳಿದನು. ತದ ನಂತರ ಆತನು ಎನೋ ವಶೀಕರಣ ಮಾಡುವ ರೀತಿ ಪಿರ್ಯಾದಿದಾರರನ್ನು ಮೋಡಿ ಮಾಡಿ ಪಿರ್ಯಾದಿದಾರರಲ್ಲಿ  ನೀವು ಚಿನ್ನವನ್ನು ಎಲ್ಲಿ ಇಡುತ್ತೀರಿ ಎಂದು ಕೇಳಿದಾಗ ಪಿರ್ಯಾದಿದಾರರು ಕಬಾರ್ಟ್ ನಲ್ಲಿ ಇಡುತ್ತೇನೆಂದು ಹೇಳಿ ಕಬಾರ್ಟ್ ನ್ನು ಓಪನ್ ಮಾಡಿ ಅದರಲ್ಲಿದ್ದ ಚಿನ್ನ ಇಟ್ಟಿದ್ದ ಹ್ಯಾಂಡ್ ಬ್ಯಾಗ್ ನ್ನು ಪಿರ್ಯಾದಿದಾರರು ತೋರಿಸಿದ್ದು, ಆತನು ಚಿನ್ನ ಇದ್ದ ಹ್ಯಾಂಡ್ ಬ್ಯಾಗ್ ನ್ನು ನಾನು ನೋಡಿ ಕೊಡುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಅವನಿಗೆ ಆ ಬ್ಯಾಗ್ ನ್ನು ಕೊಟ್ಟಿದ್ದು, ಆ ಬ್ಯಾಗ್ ನ್ನು ಅವನು ಪಿರ್ಯಾದಿದಾರರಿಗೆ ಹಿಂದಿರುಗಿಸದೇ ಚಿನ್ನ ಇದ್ದ ಹ್ಯಾಂಡ್ ಬ್ಯಾಗ್ ನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ.  ಪಿರ್ಯಾದಿದಾರರು ಐದಾರು ನಿಮಿಷದ ನಂತರ ತಮ್ಮ ಗಂಡನವರಿಗೆ ಫೋನ್ ಮಾಡಿ ಈ ಮೇಲಿನ ವಿಷಯವನ್ನು ತಿಳಿಸಿರುತ್ತಾರೆ. ಪಿರ್ಯಾದಿದಾರರ ರೂಮ್ ನೊಳಗೆ ಬಂದ ವ್ಯಕ್ತಿಯು ಮುಖಕ್ಕೆ ಮಾಸ್ಕ್ ಧರಿಸಿದ್ದು ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಪಿರ್ಯಾದಿದಾರರ ಹ್ಯಾಂಡ್ ಬ್ಯಾಗ್ ನಲ್ಲಿ ಒಂದು ಮಂಗಳಸೂತ್ರದ ಸರ ಮತ್ತು ಒಂದು ದೊಡ್ಡ ಉಂಗುರ ಹಾಗೂ 5 ಚಿಕ್ಕ ಉಂಗುರ ಸೇರಿ ಸುಮಾರು 130 ಗ್ರಾಂ ಚಿನ್ನ ಇದ್ದು, ಪಿರ್ಯಾದಿದಾರರಿಗೆ ಮೋಸ ಮಾಡಿ ಚಿನ್ನ ಇಟ್ಟಿರುವ ಹ್ಯಾಂಡ್ ಬ್ಯಾಗ್ ನ್ನು ತೆಗೆದುಕೊಂಡು ಹೋದ ವ್ಯಕ್ತಿಯನ್ನು ಪತ್ತೆ ಮಾಡಿ ಆ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

Crime Reported in :Ullal PS

ಪ್ರದೀಪ್ ಟಿ.ಆರ್ PSI ಉಳ್ಳಾಲ ಠಾಣೆ ದಿನಾಂಕ: 04-09-2022 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 09-45 ಗಂಟೆಗೆ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿ ಬಾಲಣ್ಣ ರವರ ಗ್ಯಾರೇಜ್ ಬಳಿ ಓರ್ವ ಯುವಕನು ಅಕ್ರಮ ಮಾದಕ ವಸ್ತು MDMA ಹರಳನ್ನು ಮಾರಾಟ ಮಾಡಲು ಗಿರಾಕಿಗಳಿಗೆ ಕಾಯುತ್ತಿದ್ದಾನೆ ಎಂಬುದಾಗಿ ಮಾಹಿತಿ ಬಂದಂತೆ ಬೆಳಿಗ್ಗೆ 10-00 ಗಂಟೆಗೆ ಸ್ಥಳಕ್ಕೆ ತಲುಪಿದಾಗ ಅಬ್ದುಲ್ ಸಮದ್, ಪ್ರಾಯ 36 ವರ್ಷ,  ವಾಸ: ಬದ್ರಿಯಾ ಮಸೀದಿಯ ಹಿಂಬದಿ, ಇಮ್ಮುಂಜಿ ರಸ್ತೆ, ಬಂಗ್ಲಗುಡ್ಡೆ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬಾತನು SCISSORS ಹೆಸರಿನ ಖಾಲಿ ಪ್ಯಾಕೇಟ್  ನೊಳಗೆ ಒಂದು ಸಣ್ಣ ಪ್ಲಾಸ್ಟಿಕ್  ಕವರಿನಲ್ಲಿ ಬಿಳಿ ಬಣ್ಣದ ಹರಳಿನಂತಹ MDMA ಹರಳನ್ನು ಗ್ರಾಹಕರಿಗೆ ಮಾರಾಟ ಮಾಡಲು ಕಾಯುತ್ತಿದ್ದವರನ್ನು ವಶಕ್ಕೆ ಪಡೆದು 02.00 ಗ್ರಾಂ  ತೂಕದ 10000/- ರೂ ಮೌಲ್ಯದ MDMA ಮತ್ತು ಆತನಲ್ಲಿದ್ದ ಸ್ಯಾಮ್ ಸಂಗ್ ಗ್ಯಾಲಕ್ಷಿ S-10 ಮೊಬೈಲ್-1, ಅಂದಾಜು ಮೌಲ್ಯ ರೂ 5,000/- ಹಾಗೂ ನಗದು ಹಣ ರೂ.500/- ಇವುಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು  ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 05-09-2022 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080