ಅಭಿಪ್ರಾಯ / ಸಲಹೆಗಳು

Crime Reported in : Mangalore North PS  

ಪಿರ್ಯಾದಿದಾರರು ಮಂಗಳೂರಿನ ಪೂಂಜಾ ಆರ್ಕೇಡ್ ನಲ್ಲಿರುವ ಆಂಧ್ರಾ ಬ್ಯಾಂಕ್ ನ ಮುಖ್ಯ ಪ್ರಬಂಧಕರಾಗಿದ್ದು, 2016 ನೇ ಡಿಸೆಂಬರ್ ನಲ್ಲಿ (ಪ್ರಕರಣದ 1 ನೇ ಆರೋಪಿ) ಶ್ರೀಧರ ಅಡಪ ಮತ್ತು ಹೆರಾಲ್ಡ್ ಅವಿನಾಶ್ ಡಿಸೋಜ(2 ನೇ ಆರೋಪಿ) ಎಂಬವರು ಶ್ರೀ ಮಂಜುನಾಥ ಪ್ರಸಾದ್ ಮುಖ್ಯ ಪ್ರಬಂಧಕರು(4 ನೇ ಆರೋಪಿ) ಆಂಧ್ರ ಬ್ಯಾಂಕ್ ಬಿಜೈ ಶಾಖೆ ಎಂಬವರಿಗೆ ರೂ 45,00,000/- ಗೃಹ ಸಾಲವನ್ನು ಪಡೆಯಲು ಕಿರಣ್ ಕುಮಾರ್ ಅತೋಳಿಗೆ(3 ನೇ ಆರೋಪಿ) ಎಂಬವರ ಮೂಲಕ ಅರ್ಜಿ ಸಲ್ಲಿಸಿರುತ್ತಾರೆ. ದಿನಾಂಕ 21.01.2017 ರಂದು ಬ್ಯಾಂಕ್ ಖಾತೆ ನಂಬ್ರ  ಖಾತೆಗೆ ರೂ 35,00,000/- ವರ್ಗಾವಣೆಗೊಂಡಿರುತ್ತದೆ. ಸಾಲ ಪತ್ರದ ಕರಾರಿನಂತೆ ಮಾಸಿಕ ರೂ 34,051/- ನ್ನು 10.90 ಬಡ್ಡಿದರದಲ್ಲಿ ಪಾವತಿಸಲು ಒಪ್ಪಿಕೊಂಡಿರುತ್ತಾರೆ. ದಿನಾಂಕ 07.05.2018 ರಂದು ಸಾಲದ ಹಣವು Non Performimg Assets ಆಗಿ ಪರಿವರ್ತನೆಗೊಂಡಿರುತ್ತದೆ. ಪಿರ್ಯಾದಿದಾರರು ದಿನಾಂಕ 08.06.2018 ರಂದು ಪ್ರಕರಣದ ಆರೋಪಿತರಿಗೆ ಡಿಮ್ಯಾಂಡ್ ನೋಟಿಸ್ ಜ್ಯಾರಿ ಮಾಡಿದ್ದು, ಆರೋಪಿತರು ಸಾಲ ಮಾರುಪಾವತಿ ಬಗ್ಗೆ ಯಾವುದೇ ಗಮನಹರಿಸಿರುವುದಿಲ್ಲ. ಪಿರ್ಯಾದಿದಾರರು ಈ ಬಗ್ಗೆ ಸಾಲ ಮರುಪಾವತಿ ನ್ಯಾಯ ಮಂಡಳಿ-1 ಬೆಂಗಳೂರು ಇಲ್ಲಿ ರಂತೆ ದೂರು ದಾಖಲಿಸಿದ್ದು, ಪ್ರಸ್ತುತ ಪ್ರಕರಣದ ತೀರ್ಪು ಬರಲು ಬಾಕಿ ಇರುತ್ತದೆ. ದಿನಾಂಕ 02.12.2021 ರಂದು ಪಿರ್ಯಾದಿದಾರರ ಬ್ಯಾಂಕಿನ ಅಧಿಕಾರಿಗಳು ಗೃಹ ಸಾಲ ಪಡೆಯಲು ಸಾಲ ಪತ್ರದಲ್ಲಿ ಸೂಚಿಸಿದ ಜಾಗಕ್ಕೆ ತೆರಳಿ ಪರೀಕ್ಷಿಸಿದಾಗ ಅಲ್ಲಿ ಯಾವುದೇ ಮನೆ ಕಟ್ಟದೇ ಸದ್ರಿ ಜಾಗವು ಖಾಲಿ ಇರುತ್ತದೆ. ಪ್ರಕರಣದ 3 ನೇ ಆರೋಪಿ ಜೊತೆ ಸೇರಿ 1 ಮತ್ತು 2ನೇ ಆರೋಪಿತರು ನಕಲಿ ದಾಖಲೆ ಸೃಷ್ಟಿಸಿ ಅಪರಾಧಿಕ ಒಳಸಂಚು ನಡೆಸಿ 4 ನೇ ಆರೋಪಿತರೊಂದಿಗೆ ಸೇರಿ ಅಸಲು ಹಣ ರೂ 35,00,000/- ಈವರೆಗೂ ಸಾಲ ಮರುಪಾವತಿ ಮಾಡದೇ ಒಟ್ಟು 80,00,000/- ಹಣವನ್ನು ನೀಡದೇ ನಂಬಿಕೆ ದ್ರೋಹ, ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

Mulki PS  

ಪಿರ್ಯಾದಿದಾರರು ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜು ಹಳೆಯಂಗಡಿ ಇಲ್ಲಿನ ಪ್ರಾಂಶುಪಾಲರಾಗಿದ್ದು, ದಿನಾಂಕ 04-11-2022 ರಂದು ಸಂಜೆ 4:15 ಗಂಟೆಗೆ ಎಂದಿನಂತೆ ಕಾಲೇಜಿನ ಕಛೇರಿಯ ಒಳಗಿದ್ದ ಒಟ್ಟು 10 ಗಾದ್ರೇಜ್ ಗಳಲ್ಲಿ 8 ಗಾದ್ರೇಜ್ ನ ಕೀಗಳನ್ನು ಅಲ್ಲಿಯೇ ಮೇಜಿನ ಡ್ರವರ್ ನಲ್ಲಿ ಹಾಕಿ ಉಳಿದ ಮುಖ್ಯ ದಾಖಲೆಗಳಿರುವ 2 ಗಾದ್ರೇಜ್ ಗೆ ಲಾಕ್ ಮಾಡಿ ಕೀಯನ್ನು ತನ್ನಲ್ಲಿ ಇಟ್ಟುಕೊಂಡು ಬಳಿಕ ಕಛೇರಿಯ ಬಾಗಿಲಿಗೆ ಮತ್ತು ಕಬ್ಬಿಣದ ಗ್ರಿಲ್ಸ್ ಗೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ 05-11-2022 ರಂದು ಬೆಳಿಗ್ಗೆ 9:20 ಗಂಟೆಗೆ ಕಾಲೇಜಿಗೆ ಬಂದು ನೋಡಿದಾಗ ಯಾರೋ ಕಳ್ಳರು ಕಾಲೇಜಿನ ಕಛೇರಿಯ ಬಾಗಿಲಿನ ಮತ್ತು ಗ್ರಿಲ್ಸ್ ನ ಬೀಗವನ್ನು ಹೊಡೆದು ಒಳಪ್ರವೇಶಿಸಿ ಕಛೇರಿಯ ಒಳಗಿದ್ದ ಗಾದ್ರೇಜ್ ಗಳನ್ನು ಜಾಲಾಡಿ, ಬೀಗ ಹಾಕಿದ ಗಾದ್ರೇಜ್ ಗಳ ಲಾಕನ್ನು ಯಾವುದೋ ಸಾಧನದಿಂದ ಮುರಿದು ಒಂದು ಗಾದ್ರೇಜ್ ನ ಒಳಗಿದ್ದ ರೂ 15,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಎಂಬಿತ್ಯಾದಿ.

Kankanady Town PS

ಪಿರ್ಯಾದಿ  ಕಂಕನಾಡಿ ನಗರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ರಘು ನಾಯಕ್ ರವರು ದಿನಾಂಕ 04.11.2022 ರಂದು ಸಿಬ್ಬಂದಿಯವರ ಜೊತೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದು, ದಿನಾಂಕ 05.11.2022 ರಂದು ಬೆಳಿಗ್ಗೆ 05:30 ಗಂಟೆಗೆ ಪಡೀಲಿನ ಬಜಾಲ್ ಕ್ರಾಸ್ ಬಳಿ ಇರುವ ಸಮಯ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ವಾಹನವು ಬಿಕರ್ನಕಟ್ಟೆ ಕಡೆಯಿಂದ ಪಡೀಲ್ ಕಡೆಗೆ ಬರುತ್ತಿರುವುದಾಗಿ ಪಿರ್ಯಾದುದಾರರಿಗೆ ಭಾತ್ಮೀದಾರಿಂದ ಬಂದ  ಮಾಹಿತಿಯಂತೆ ಸಮಯ ಸುಮಾರು ಬೆಳಿಗ್ಗೆ 05:45 ಗಂಟೆಗೆ ಪಡೀಲ್ ಕಡೆಯಿಂದ ಟಿಪ್ಪರ್ ಲಾರಿಯೊಂದು ಬರುತ್ತಿರುವುದನ್ನು ಕಂಡು ಟಿಪ್ಪರ್ ಲಾರಿಯ ಚಾಲಕನಿಗೆ ವಾಹನವನ್ನು ನಿಲ್ಲಿಸುವರೇ ಸೂಚನೆ ನೀಡಿದಲ್ಲಿ ಟಿಪ್ಪರ್ ಲಾರಿಯ ಚಾಲಕನು ವಾಹನವನ್ನು ಸ್ವಲ್ಪ ಮುಂದೆ ನಿಲ್ಲಿಸಿ ಚಾಲಕ ಮತ್ತು ಚಾಲಕನ ಸೀಟಿನ ಪಕ್ಕದ ಸೀಟಿನಲ್ಲಿದ್ದ ಇನ್ನೋರ್ವ ವ್ಯಕ್ತಿಯು ಲಾರಿಯಿಂದ ಕೆಳಗಿಳಿದು ಓಡಲು ಪ್ರಯತ್ನಿಸಿದವರನ್ನು ಸಿಬ್ಬಂದಿಯವರ ಮುಖೇನ ಸುತ್ತುವರೆದು ಹಿಡಿದಿದ್ದು, ಲಾರಿ ಚಾಲಕನನ್ನು ವಿಚಾರಿಸಿದಾಗ ತನ್ನ ಹೆಸರು ಶಾಕೀರ್, ಪ್ರಾಯ: 36 ವರ್ಷ,  ವಾಸ: ಬಜಾಲ್, ಜೆಲ್ಲಿಗುಡ್ಡೆ ಅಂಚೆ, ಬಜಾಲ್ ಗ್ರಾಮ, ಮಂಗಳೂರು ಎಂಬುದಾಗಿ ಮತ್ತು ಚಾಲಕ ಸೀಟಿನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ತನ್ನ ಹೆಸರು ರೋಷನ್ ಲೋಬೋ, ಪ್ರಾಯ: 38 ವರ್ಷ,  ವಾಸ: ಶೋಲಮ್ ಹೌಸ್, ಸರಿಪಳ್ಳ, ಅಳಪೆ, ಸರಿಪಳ್ಳ ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿ ತಾನು KA-19-AA-8866ನೇ ನಂಬ್ರದ ಟಿಪ್ಪರ್ ಲಾರಿಯ ಮಾಲಕನಾಗಿದ್ದು, ಉಳಾಯಿಬೆಟ್ಟು ಗ್ರಾಮದ ಉದ್ದಬೆಟ್ಟು ಎಂಬಲ್ಲಿ ಫಲ್ಗುಣಿ ನದಿ ತೀರದ ಮರಳು ಧಕ್ಕೆಯಿಂದ ಮರಳನ್ನು ಟಿಪ್ಪರ್ ವಾಹನದಲ್ಲಿ ತುಂಬಿಸಿಕೊಂಡು ಚಾಲಕ ಶಾಕೀರ್ ರವರೊಂದಿಗೆ ಮಾರಾಟ ಮಾಡಲು ಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ.  ಆದುದರಿಂದ ಸರಕಾರಕ್ಕೆ ಸೇರಿದ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ನದಿ ಕಿನಾರೆಯಿಂದ ಯಾವುದೇ ಪರವಾನಿಗೆಯನ್ನೂ ಪಡೆಯದೆ ಸರಕಾರಕ್ಕೆ ರಾಜಧನವನ್ನು ಪಾವತಿಸದೇ ಅಕ್ರಮವಾಗಿ ಲಾರಿಯಲ್ಲಿ ಮರಳು ತುಂಬಿಸಿ ಸಾಗಾಟವನ್ನು ಮಾಡುತ್ತಿರುವುದರಿಂದ ವಶಕ್ಕೆ ಪಡೆದಿರುವುದಾಗಿದೆ, ಸದ್ರಿ ಟಿಪ್ಪರ್ ಲಾರಿಯ ಮೌಲ್ಯ ಸುಮಾರು ರೂ. 4,00000/- ಹಾಗೂ ಸದ್ರಿ ಲಾರಿಯಲ್ಲಿದ್ದ ಸುಮಾರು ಒಂದುವರೆ ಯುನಿಟ್ ಮರಳಿನ ಅಂದಾಜು ಮೌಲ್ಯ ಸುಮಾರು ರೂ. 5,000/- ಆಗಬಹುದು. ಎಂಬಿತ್ಯಾದಿ.

Traffic South Police Station              

ದಿನಾಂಕ: 05-11-2022 ರಂದು ಪಿರ್ಯಾದಿ MOHAMMOD FARUK ದಾರರ ತಂದೆಯವರಾದ ಇಬ್ರಾಹೀಂ ರವರು ಮನೆಯಿಂದ ಹೊರಟು ಕೊಣಾಜೆ ಯುನಿವರ್ಸಿಟಿ ಲೇಡಿಸ್ ಹಾಸ್ಟೆಲ್ ವರೆಗೂ ನಡೆದುಕೊಂಡು ಹೋಗಿ  ಸಮಯ ಸುಮಾರು ಬೆಳಿಗ್ಗೆ  5-45 ಗಂಟೆಗೆ ಮಹೇಶ್ ಎಂಬ ಹೆಸರಿನ ಬಸ್ಸು ನಂಬ್ರ:KA-19-AC-8807  ನೇದರ ಬಸ್ಸಿನಲ್ಲಿ ಹಿಂಬದಿ ಬಾಗಿಲಲ್ಲಿ ಬಸ್ಸನ್ನು ಹತ್ತುತ್ತಿರುವಾಗ ಬಸ್ಸಿನ ಚಾಲಕ ಸೂಜಿತ್ ಎಂಬುವರು ಬಸ್ಸನ್ನು ಓಮ್ಮೇಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸ್ಸಿನಲ್ಲಿದ್ದ ಇಬ್ರಾಹೀಂ ರವರು ಬಸ್ಸಿನಿಂದ ಕೆಲಕ್ಕೆ ಬಿದ್ದು ಅವರಿಗೆ ಬಲಬದಿ ಹಣೆಗೆ, ಮೂಗಿಗೆ ಬಲಬದಿ ಕೆನ್ನೆಗೆ ತರಚಿದ ರಕ್ತಗಾಯ ಹಾಗೂ ತಲೆಯ ಹಿಂಬದಿಗೆ ಗುದ್ದಿದ ಗಾಯ ಹಾಗೂ ಎರಡು ಮೊಣಕಾಲಿಗೆ ತರಚಿದ ರಕ್ತಗಾಯವಾಗಿದ್ದು  ಕೂಡಲೇ ಚಿಕಿತ್ಸೆ ಬಗ್ಗೆ ಇಬ್ರಾಹೀ ರವರನ್ನು ಪಿರ್ಯಾದಿದಾರರು ಅವರ ಕಾರಿನಲ್ಲಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ. 

Bajpe PS

ಪಿರ್ಯಾದಿ RAVI M ದಾರರು ನವದುರ್ಗಾ ಎಂಬ ಖಾಸಗಿ ಬಸ್ಸಿನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 05.11.2022 ರಂದು ಸುಮಾರು 11.15 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಪೇಟೆಗೆ ಬಂದಿದ್ದು  ಆ ಸಮಯ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ಗೋಲ್ಡಲ್ ಬಸ್ಸಿನ ಚಾಲಕನಾದ ಹರೀಶ್ ಮತ್ತು ಮ್ಯಾನೆಜರ್ ಪ್ರಶಾಂತ್ ರವರು ಬಸ್ಸಿನ ಟೈಮಿಂಗ್ ವಿಚಾರದಲ್ಲಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ‘ಬೇವರ್ಸಿ ಎಂದು ಅವಾಚ್ಯ ಶಬ್ದದಿಂದ ಬೈದು ನಂತರ  ಆರೋಪಿಯಾದ ಹರೀಶ್ ಎಂಬಾತನು ಪಿರ್ಯಾದಿದಾರರಿಗೆ ಕೈಯಿಂದ ಎಡಕೆನ್ನೆಗೆ ,ತಲೆಗೆ ,ಎದೆಗೆ ಕೈಗೆ ಹೊಡೆದಿದ್ದು ಆ ಸಮಯ ಪ್ರಶಾಂತನು ಕೂಡ ಪಿರ್ಯಾದಿದಾರರ ಕಾಲರ್ ಹಿಡಿದು ದೂಡಿ ಹಾಕಿದ್ದು ನಂತರ ಗಾಯಗೊಂಡ ಪಿರ್ಯಾದಿದಾರರನ್ನು ಬಜಪೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 05-11-2022 06:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080