ಅಭಿಪ್ರಾಯ / ಸಲಹೆಗಳು

Crime Reported in : : Bajpe PS

ಪಿರ್ಯಾದಿ Prabhakar Shettigar ದಾರರ ಅಣ್ದನಾದ ಲೋಕನಾಥ ಶೆಟ್ಟಿಗಾರ್ ಎಂಬುವರು KA19AA2426 ನೇ ಟಿಪ್ಪರ್ ನ ಚಾಲಕ ಮತ್ತು ಮಾಲಕರಾಗಿದ್ದು ದಿನಾಂಕ 05.12.2022 ರಂದು ಬೆಳಗ್ಗೆ 07.30 ಗಂಟೆಗೆ ಲೋಕನಾಥ ಶೆಟ್ಟಿಗಾರ್ ರವರು ತನ್ನ ಟಿಪ್ಪರ್ ನಂ KA19AA2426 ನೇ ದನ್ನು  ಮಂಗಳೂರು ಕಡೆಯಿಂದ ಗುರುಪುರ ಕೈಕಂಬದ ಕಡೆಗೆ ಚಲಾಯಿಸಿಕೊಂಡು ಕೆಲಸಕ್ಕೆ ಹೋಗುತ್ತಿರುವ ಸಮಯ ಮಂಗಳೂರು ತಾಲೂಕು ಮೂಳೂರು ಗ್ರಾಮದ  ಗುರುಪುರ ಬೆಳ್ಳಿಬೆಟ್ಟು ಬಸ್ಸ್ ಸ್ಟಾಪ್ ಬಳಿ ಗುರುಪುರ ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ AP02TE 5494 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗಾರುಕತೆಯಿಂದ  ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಲೋಕಾನಥ ಶೆಟ್ಟಿಗಾರ ರವರು ಚಾಲಾಯಿಸಿಕೊಂಡು ಬರುತಿದ್ದ ಟಿಪ್ಪರ್ ಗೆ ಮುಖಾ-ಮುಖಿ ಡಿಕ್ಕಿ ಹೊಡೆದು ಅಪಘಾತ ನೆಡೆಸಿದ್ದು ಈ ಅಪಘಾತದಿಂದ ಲೋಕನಾಥ್ ಮತ್ತು ಲಾರಿಯ ಚಾಲಕನಿಗೆ ಗಂಬೀರ್ ಸ್ವರೂಪದ ಗಾಯಗಳು ಉಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕತ್ಸೆಯ ಬಗ್ಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಅಣ್ಣ ಲೋಕನಾಥ ಶೆಟ್ಟಿಗಾರ ಮತ್ತು ಲಾರಿಯ ಚಾಲಕ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ

 

Mangalore East PS

ಪಿರ್ಯಾದಿ Austin Pereira ದಾರರ ತಮ್ಮನಾದ ಜೋಯೆಲ್ ಎವ್ಜನ್ ಪಿರೇರಾ ಪ್ರಾಯ 54 ವರ್ಷ ರವರೊಂದಿಗೆ ನಂತೂರು ತಾರೇತೋಟ ಅಣ್ಣನ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಈತನು ಮಾನಸಿಕ ಅಸ್ವಸ್ವತೆಯಿಂದ ಬಳಲುತ್ತಿದ್ದು, ಈತನು ಅವಿವಾಹಿತನಾಗಿರುತ್ತಾನೆ,  ಈತನಿಗೆ ದೇರಳಕಟ್ಟೆಯ ಯೇನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾನೆ. ಪಿರ್ಯಾದಿದಾರರ ತಮ್ಮನಾದ ಜೋಯೆಲ್ ಎವ್ಜನ್ ಪಿರೇರಾ ನು ಈ ಹಿಂದೆ 4-5 ಬಾರಿ ಮನೆಯನ್ನು ಬಿಟ್ಟು ಹೋಗಿ, ಮರಳಿ ಬಂದಿರುತ್ತಾನೆ, ದಿನಾಂಕ: 27-10-2022 ರಂದು ಸಮಯ ಸಂಜೆ 18.30 ಗಂಟೆಗೆ ಜೋಯೆಲ್ ಎವ್ಜನ್ ಪಿರೇರಾ ನು ಮನೆ ಬಿಟ್ಟುಹೋದವನು ಇಲ್ಲಿಯವರೆಗೆ ಬಂದಿರುವುದಿಲ್ಲ, ಈತನ ಬಗ್ಗೆ ಈ ಹಿಂದೆ ಹೋಗಿ ಬರುತ್ತಿದ್ದ ಸ್ಥಳಗಳಿಗೆ ಹಾಗೂ ಸಂಬಂಧಿಕರ ಮನೆಗಳಿಗೆ ಹೋಗಿ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ನನ್ನ ತಮ್ಮನನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ.

    ಕಾಣೆಯಾದ ಜೋಯೆಲ್ ಪಿರೇರಾ ರವರ ಚಹರೆ: ಹೆಸರು: ಜೋಯೆಲ್ ಎವ್ಜನ್ ಪಿರೇರಾ 54 ವರ್ಷ, ಧೃಡಕಾಯ ಶರೀರ, ಗೋದಿ ಮೈ ಬಣ್ಣ, ದುಂಡು ಮುಖ, 6 ಅಡಿ ಎತ್ತರ, ಬಿಳಿ ಗಡ್ಡ, ಅವರ ಬಳಿ ನೀಲಿ ಬ್ಯಾಗ್ ಇರುತ್ತದೆ, ಮಾತನಾಡುವ ಭಾಷೆ: ಕನ್ನಡ, ತುಳು, ಕೊಂಕಣಿ ಮತ್ತು ಹಿಂದಿ ಮಾತನಾಡುತ್ತಾರೆ.

Mangalore East Traffic PS                        

ಪಿರ್ಯಾದಿದಾರರಾದ ಅಶ್ವಿನ್ ಎಸ್  ರವರು ದಿನಾಂಕ 03-12-2022 ರಂದು ಸಂಜೆ  ಸುಮಾರು 4-00 ಗಂಟೆಗೆ HR-46 E-5479 ನಂಬ್ರದ ಕಂಟೈನರ್ ಘನ ವಾಹನವನ್ನು ಅದರ ಚಾಲಕನು ಯೆಯ್ಯಾಡಿ ಕಡೆಯಿಂದ ಪದವಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ, ಕಂಟೈನರ್ ವಾಹನವನ್ನು ಹರಿಪದವು ಕಡೆಗೆ ಹೋಗಲು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹರಿಪದವು ಕಡೆಗೆ ಹೋಗುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಅಂದರೆ ಬಲಗಡೆಯ ರಸ್ತೆಯಲ್ಲಿ ಚಲಾಯಿಸಿದ ಪರಿಣಾಮ ಹರಿಪದವು ರಸ್ತೆಯ ಡಿವೈಡರ್ ನಲ್ಲಿದ್ದ ಅಕ್ಟೋಗನಲ್ ಕಂಬಕ್ಕೆ ಕಂಟೈನರ್ ಲಾರಿಯ ಎಡಗಡೆಯ ಹಿಂಬದಿಯು ಡಿಕ್ಕಿಯಾದ ಕಾರಣ ಅಕ್ಟೋಗನಲ್ ಕಂಬ ಮಗುಚಿ ಕೆಳಗೆ ಬಿದ್ದಿದ್ದು, ಅಕ್ಟೋಗನಲ್ ಕಂಬ ಹಾಗೂ ಅದರಲ್ಲಿ ಅಳವಡಿಸಿದ್ದ 6 ದಾರಿದೀಪಗಳು ಜಖಂಗೊಂಡಿದ್ದು, ಇದರಿಂದಾಗಿ ಮಹಾನಗರ ಪಾಲಿಕೆಗೆ ಸುಮಾರು ರೂ-90,000/- ರಷ್ಟು ನಷ್ಟ ಉಂಟಾಗಿರುತ್ತದೆ ಎಂಬಿತ್ಯಾದಿ.

 

 

 

ಇತ್ತೀಚಿನ ನವೀಕರಣ​ : 05-12-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080