ಅಭಿಪ್ರಾಯ / ಸಲಹೆಗಳು

Crime Reported in :  Mangalore East Traffic PS

ಪಿರ್ಯಾದಿದಾರರಾದ ಸಿತಾರಾಮ್ ಶೆಟ್ಟಿ (61) ರವರು ದಿನಾಂಕ: 05/09/2022 ರಂದು ಎಂದಿನಂತೆ ಬಿಕರ್ನಕಟ್ಟೆಯಲ್ಲಿರುವ ರಾತ್ರಿ 11-30 ಗಂಟೆಗೆ ತಮ್ಮ ಮಾನ್ಸೂನ್ ಬಾರ್ & ರೆಸ್ಟೋರಂಟನ್ನು ಬಂದ್ ಮಾಡಿಕೊಂಡು ತಮ್ಮ ಮನೆ ಇರುವ ನಂತೂರು ಕಡೆಗೆ ರಾ.ಹೆ 73 ನೇಯದರಲ್ಲಿ ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ: KA-19-EC-7187 ನೇಯದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ರಾತ್ರಿ ಸುಮಾರು 12-00 ಗಂಟೆಗೆ ನಂತೂರು ಜಂಕ್ಷನ್ ತಲುಪುತ್ತಿದ್ದಂತೆ ಅವರ ಬಲ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ನೊಂದಣಿ ಸಂಖ್ಯೆ: NL-01-K-8897 ನೇ ಕಂಟೇನರ್ ಲಾರಿಯನ್ನು ಅದರ ಚಾಲಕನು ದುಡುಕುತನ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಾ ಪಂಪವೆಲ್ ಕಡೆಗೆ ಹೋಗಲು ಒಮ್ಮೆಲೆ ಎಡಕ್ಕೆ ತಿರುಗಿಸಿದ  ಪರಿಣಾಮ ಸದ್ರಿ ಲಾರಿಯ ಎಡ ಮುಂಭಾಗದ ಚಕ್ರವು ಸ್ಕೂಟರಿಗೆ ಡಿಕ್ಕಿಯಾಗಿ ಪಿರ್ಯಾದಿದಾರರು ಸ್ಕೂಟರ್ ಸಮೇತ ಎಡಕ್ಕೆ ವಾಲಿ ರಸ್ತೆಗೆ ಬಿದ್ದಿದ್ದು ಇದರಿಂದ ಸ್ಕೂಟರ್ ಸವಾರರ ಎಡಕಾಲಿಗೆ ಚರ್ಮ ಹರಿದ ರಕ್ತಗಾಯವಾಗಿದ್ದು ಅಲ್ಲಿದ್ದ ಇತರ ವಾಹನ ಚಾಲಕರು ಗಾಯಾಳುವನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದು ಸದ್ರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಎಡ ಕಾಲಿನ ಆಂಕಲ್ ನಲ್ಲಿ ಮೂಳೆ ಮುರಿತ ಉಂಟಾಗಿರುವುದುದಾಗಿ ತಿಳಿಸಿರುತ್ತಾರೆ. ಆದುದರಿಂದ ಈ ರಸ್ತೆ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ.

   

Crime Reported in :  Mangalore North PS             

ಪಿರ್ಯಾದಿ NAGAVENI ದಾರರು  KA-19-HJ-3836 ನೊಂದಣಿ ನಂಬ್ರದ ನೀಲಿ ಬಣ್ಣದ ಆಕ್ಟೀವಾ ಸ್ಕೂಟರನ್ನು2022 ನೇ ಇಸವಿಯ ಜನವರಿ ತಿಂಗಳಿನಲ್ಲಿ ಖರೀದಿ ಮಾಡಿ ಉಪಯೋಗಿಸುತ್ತಿದ್ದು.  ಪಿರ್ಯಾದಿದಾರರು ಮನೆಯಲ್ಲಿಯೇ ಇರುವುದರಿಂದ ತನ್ನ ಸ್ಕೂಟರನ್ನು ತನ್ನ ಮಾವ ಸುಬ್ರಹ್ಮಣ್ಯ ಹೆಗಡೆಯವರು ಶರವು ದೇವಸ್ಥಾನದ ಹತ್ತಿರ ಇರುವ ತಾರಾ ಕ್ಲಿನಿಕ್ ನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದುದರಿಂದ  ಅವರೇ ಉಪಯೋಗಿಸಿಕೊಂಡು ಕ್ಯಾಂಟೀನಿಗೆ ದಿನಂಪ್ರತಿ ಅದೇ ಪಿರ್ಯಾದಿದಾರರ ಸ್ಕೂಟರಿನಲ್ಲಿ ಬರುತ್ತಿದ್ದರು.ಎಂದಿನಂತೆ ದಿನಾಂಕ: 31-07-2022 ರಂದು ಬೆಳಿಗ್ಗೆ  8.00  ಗಂಟೆ ಸುಮಾರಿಗೆ  ಪಿರ್ಯಾದಿದಾರರ  ಮಾವನವರು ತಾರಾ ಕ್ಲಿನಿಕ್ ಕ್ಯಾಂಟೀನ್ ಎದುರುಗಡೆ ಸ್ಕೂಟರ್ ನಿಲ್ಲಿಸಿ ಕ್ಯಾಂಟೀನಿಗೆ ಹೋಗಿ ವಾಪಾಸ್ಸು ಬೆಳಿಗ್ಗೆ ಸುಮಾರು 8.15 ಗಂಟೆಗೆ ಪಾರ್ಕ್ ಮಾಡಿದ ಸ್ಕೂಟರಿನ ಬಳಿ ಬಂದಾಗ ಸದ್ರಿ ಸ್ಥಳದಲ್ಲಿ ಸ್ಕೂಟರ್ ಕಾಣೆಯಾಗಿದ್ದು ಅಲ್ಲಿರದೇ ಇದ್ದು ನಂತರ ಅವರು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಈ ಬಗ್ಗೆ ಸುಮಾರಿಗೆ  ಪಿರ್ಯಾದಿದಾರರಿಗೆ ತಿಳಿಸಿ ಸುಮಾರಿಗೆ  ಪಿರ್ಯಾದಿದಾರೂ   ಕೂಡ ಇಷ್ಟರವರೆಗೆ ಹುಡುಕಾಡಿದರೂ  ಸ್ಕೂಟರ್ ಸಿಗದೇ ಇದ್ದುದರಿಂದ  KA-19-HJ-3836 ನೊಂದಣಿ ನಂಬ್ರದ ಸ್ಕೂಟರ್ ನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ.ಸದ್ರಿ ಸ್ಕೂಟರಿನಲ್ಲಿ ವಾಹನದ ಮೂಲ ದಾಖಲಾತಿಗಳು ಕೂಡ ಇರುತ್ತದೆ. ಆದ್ದರಿಂದ ತೆಗೆದುಕೊಂಡು ಹೋದ ವ್ಯಕ್ತಿಯನ್ನು ಪತ್ತೆ ಮಾಡಿ ಆ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

       

2)  ಸರಕಾರಿ ಪ್ರೌಡಶಾಲೆ(ಉರ್ದು) ಬಂದರು ಮಂಗಳೂರು ಉತ್ತರ ವಲಯ ದಕ್ಷಿಣಕನ್ನಡ ಇಲ್ಲಿ ಶಾಲೆಯ ಅಡುಗೆಮನೆಯಲ್ಲಿ ದಿನಾಂಕ 03.09.2022 ರ ಸಂಜೆ 16:30 ಗಂಟೆಯಿಂದ 06.09.2022 ರ ಬೆಳಗ್ಗೆ 08:30 ಗಂಟೆಯ ಮದ್ಯೆ ಶಾಲೆಯ ಅಡುಗೆಕೋಣೆಯ ಶಟರ್ ನ್ನು ಬಲತ್ಕಾರವಾಗಿ ಮೇಲಕ್ಕೆ ಎತ್ತಿ ಕೋಣೆಯ ಒಳಗೆ ಪ್ರವೇಶಿಸಿ HP GAS CYLENDER -01,TAP 13 METAL (GEL COMPANY), GAS STOVE (BRASS BURNERS-03 (ಅಂದಾಜು ಮೌಲ್ಯ ಸುಮಾರು 9000 ರೂ) ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಆದ್ದರಿಂದ ಕಳ್ಳತನ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಆ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿಯಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

 

Crime Reported in :  Traffic South Police Station  

ದಿನಾಂಕ  05-09-2022 ರಂದು  ಪಿರ್ಯದಿ AHAMMED SHAHIR ದಾರು ಮತ್ತು ಅವರ  ಚಿಕ್ಕಮ್ಮ ನಾದ ನಝೀಯ ಹಾಗೂ ಚಿಕ್ಕಮ್ಮನ ಮಗು ಅರ್ಫಾಝ್, ಅತ್ತೆಯಾದ ಆಯಿಷಾರವರೊಂದಿಗೆ  ಆಟೋರಿಕ್ಷಾ ನಂಬರ್  KA-19-AC-3421  ನೇದರಲ್ಲಿ  ಪ್ರಯಾಣಿಕಾರಾಗಿ ಮತ್ತು  ಮುತಾಲಿಫ್  ಎಂಬವರು  ಆಟೋರಿಕ್ಷಾ ಚಾಲಕರಾಗಿ ಕಣ್ಣೂರು ಕಡೆಯಿಂದ  ಪಾವೂರು  ಕಡೆಗೆ  ಆಟೋರಿಕ್ಷಾವನ್ನು   ಚಯಾಯಿಸಿಕೊಂಡು   ಹೋಗುತ್ತಿರುವ  ಸಮಯ ಸುಮಾರು 16:30 ಗಂಟೆಗೆ  ಕಣ್ಣೂರು ಕುಂಡಾಲ  ಎಂಬಲ್ಲಿಗೆ ತಲುಪುತ್ತಿದ್ದಂತೆ  ತಿರುವು ರಸ್ತೆಯಲ್ಲಿ ಆಟೋರಿಕ್ಷಾ  ಚಾಲಕನು ಆಟೋರಿಕ್ಷವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿದ ಪರಿಣಾಮ ಓಬ್ಲಿಂಗ್ ಆಗಿ    ಪಿರ್ಯಾದಿದಾರರು ಎಡಬದಿಯಲ್ಲಿ ಕುಳಿತುಕೊಂಡಿದ್ದು  ಅವರ   ಕಾಲು  ರಸ್ತೆ ಬದಿಯಲ್ಲಿದ್ದ  ವಿದ್ಯುತ್ ಕಂಬಕ್ಕೆ  ಹೊಡೆದು ಅವರು ಮತ್ತು  ಆಯಿಷಾರವರು  ಆಟೋರಿಕ್ಷಾದಿಂದ  ಕೆಳಗೆ  ಬಿದ್ದರು . ಈ  ಅಪಘಾದ  ಪರಿಣಾಮ  ಪಿರ್ಯಾದಿದಾರರಿಗೆ ಎಡಕಾಲು ಮುಳೆ ಮುರಿತದ  ಗಾಯವಾಗಿರುತ್ತದೆ  ಮತ್ತು  ಆಯುಷಾರವರಿಗೆ ತೊಡೆಗೆ  ಗುದ್ದಿದ ಗಾಯವಾಗಿದ್ದು ಅವರನ್ನು   ಚಿಕಿತ್ಸೆ  ಬಗ್ಗೆ ಆಟೋರಿಕ್ಷಾ  ಚಾಲಕ  ಕಂಕನಾಡಿ  ಫಾದರ್ ಮುಲ್ಲರ್  ಆಸ್ಪತ್ರೆಗೆ ಕರೆದುಕೊಂಡು  ಹೋಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

Crime Reported in :  Mangalore South PS                

ಪಿರ್ಯಾದಿದಾರರಾದ ಶ್ರೀ ಬಂಡಿ ಜನಾರ್ಧನ ರೆಡ್ಡಿ ಇವರು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಇದರ ಏರಿಯಾ ಹೆಡ್ ಆಗಿರುತ್ತಾರೆ.  1 ರಿಂದ 3 ನೇ ಆರೋಪಿತರು ದಿನಾಂಕ 12.09.2020 ರಿಂದ 18.02.2021 ರ ಮಧ್ಯೆ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್,ಮಂಗಳಾದೇವಿ ರಸ್ತೆ, ಬೋಳಾರ ಮಂಗಳೂರು ಇಲ್ಲಿ 401.7 ಗ್ರಾಂ ಚಿನ್ನಾಭರಣಗಳನ್ನು ಅಡಮಾನವಿರಿಸಿ ಒಟ್ಟು ರೂಪಾಯಿ 13,12,069/- ಸಾಲ ಪಡೆದಿರುತ್ತಾರೆ. ಚಿನ್ನಾಭರಣಗಳನ್ನು ಅಡಮಾನ ವಿರಿಸುವ ಸಮಯ ಸದ್ರಿ ಚಿನ್ನಾಭರಣಗಳು 22 ಕ್ಯಾರೇಟ್ ನ ಚಿನ್ನಾಭರಣಗಳೆಂದು, ಅಲ್ಲದೇ ಪಿರ್ಯಾದಿದಾರರ ಸಂಸ್ಥೆಯವರು ಚಿನ್ನಾಭರಣಗಳ ಪರಿಶುದ್ದತೆಯನ್ನು ಪರಿಶೀಲಿಸುವ ಹಕ್ಕನ್ನು ಹೊಂದಿರುತ್ತಾರೆ ಹಾಗೂ ಕೊರತೆ ಸಂಧರ್ಭದಲ್ಲಿ ಕಂಪೆನಿಗೆ ಆಗಬಹುದಾದದ ನಷ್ಠ ವೆಚ್ಚವನ್ನು ಆರೋಪಿತರು ಸರಿತೂಗಿಸುವುದಾಗಿ ಡಿಮಾಂಡ್ ಪ್ರಾಮಿಸರಿ ನೋಟಿನಲ್ಲಿ ತಿಳಿಸಿರುತ್ತಾರೆ. ಈ ಘೋಷಣೆಯ ಆಧಾರದಲ್ಲಿ ಚಿನ್ನದ ಪ್ರಾಥಮಿಕ ಪರಿಶೀಲನೆಯ ಆಧಾರದ ಮೇಲೆ ಪಿರ್ಯಾದಿದಾರರ ಸಂಸ್ಥೆಯಿಂದ 1 ರಿಂದ 3 ನೇ ವರೆಗಿನ ಆರೋಪಿತರಿಗೆ ಒಟ್ಟು ರೂ. 13,12,069/- ಸಾಲ ಮಂಜೂರಾಗಿರುತ್ತದೆ.  ದಿನಾಂಕ 04-03-2021 ರಂದು ಕಂಪೆನಿಯ ವಿಜಿಲೆನ್ಸ್ ವಿಭಾಗವು ತಪಾಸಣೆ ನಡೆಸಿದಾಗ 1 ರಿಂದ 3 ನೇ ವರೆಗಿನ ಆರೋಪಿತರುಗಳು ಅಡಮಾನ ಇರಿಸಿದ ಚಿನ್ನಾಭರಣಗಳು 22 ಕ್ಯಾರೇಟುಗಳು ಆಗಿರುವುದಿಲ್ಲ.  ಅಲ್ಲದೇ ಚಿನ್ನಾಭರಣಗಳು ನಕಲಿ ಆಗಿರುವುದು ಕಂಡು ಬರುತ್ತದೆ. ಸಾಲ ಮರುಪಾವತಿಸುವಂತೆ ಆರೋಪಿತರುಗಳಿಗೆ ತಿಳಿಸಿದಾಗ ಆರೋಪಿತರುಗಳು ಪಾವತಿ ಮಾಡಿರುವುದಿಲ್ಲ. 1 ರಿಂದ 3 ನೇ ವರೆಗಿನ ಆರೋಪಿತರುಗಳು ಪಿರ್ಯಾದಿ ಸಂಸ್ತೆಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ಚಿನ್ನವನ್ನು ಗಿರವಿ ಇಟ್ಟು ಸಾಲ ಪಡೆದು ಸಾಲ ಮರುಪಾವತಿಸದೇ ನಂಬಿಕೆ ದ್ರೋಹ ಎಸಗಿ ಅಕ್ರಮ ನಷ್ಠ ಉಂಟು ಮಾಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

                                       

ಇತ್ತೀಚಿನ ನವೀಕರಣ​ : 06-09-2022 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080