ಅಭಿಪ್ರಾಯ / ಸಲಹೆಗಳು

Crime Reported in : Traffic South Police Station               

ಪಿರ್ಯಾದಿ FAROOQ ದಾರರು ದಿನಾಂಕ 03-10-2022 ರಂದು ಅವರ ಬಾಬ್ತು ಬುಲೆಟ್ ಮೋಟಾರ್ ಸೈಕಲ್  ನಂಬ್ರKA-19-HK-9543 ನೇದರಲ್ಲಿ ಸವಾರಿ ಮಾಡಿಕೊಂಡು ಸಂಜೆ   ಸುಮಾರು 4-00 ಗಂಟೆಗೆ ಕೇರಳದ ಕಲ್ಮಂಜ ಬಳಿಗೆ ಹೋಗಿ ವಾಪಸ್ಸು ಬರುತ್ತಿರುವಾಗ ಮುಡಿಪುನಲ್ಲಿ ಮೊಹ್ಮದ್ ಎಂಬವರನ್ನು  ಸಹಸವಾರನ್ನಾಗಿ ಕುಳ್ಳಿರಿಸಿಕೂಂಡು ಸಜಿಪನಡು ಕಡೆಗೆ ಹೋಗುತ್ತಿರುವಸಮಯ ಸುಮಾರು  ಸಂಜೆ 5-00 ಗಂಟೆಗೆ ಬೋಳಿಯಾರ ಪೆಟ್ರೋಲ್ ಬಂಕ್ ಬಳಿ ತಲುಪಿತ್ತಿದ್ದಂತೆ  ಸಜಿಪು ಕಡೆಯಿಂದ ಬೋಳಿಯಾರ ಕಡೆಗೆ ಆಟೋರೀಕ್ಷಾ ನಂಬ್ರ KA-21-C-0064 ನೇದನ್ನು ಅದರ ಚಾಲಕ ವೈಶಾಖ ಎಂಬುವನು  ಎದುರುಗಡೆ ಹೋಗುತ್ತಿದ್ದ  ಕಾರನ್ನು ಓವರ್ ಟೀಕ್  ಮಾಡುವ ಬರದಲ್ಲಿ ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು  ಹಾಗೂ ಸಹಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಅವರ ಮೇಲೆ ಆಟೋರೀಕ್ಷಾ ಮುಗಿಚಿ ಬಿದ್ದು ಪಿರ್ಯಾದಿದಾರರಿಗೆ ಮೂಳೆಮುರಿತದ ಗಾಯ, ಬಲ ಕೈಗೆ ರಕ್ತಗಾಯವಾಗಿದ್ದು, ಮತ್ತು ಸಹಸವಾರ ಮೊಹ್ಮದ್ ರವರಿಗೆ ಎಡಕಣ್ಣಿನ ಮೇಲೆ ರಕ್ತಗಾಯವಾಗಿದ್ದು, ಹಾಗೂ ಆಟೋರೀಕ್ಷಾ ಚಾಲಕನಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಅಲ್ಲಿ ಸೇರಿದ  ಸಾರ್ವಜನಿಕರು ಚಿಕಿತ್ಸೆ ಬಗ್ಗೆ ದೇರಳಕಟ್ಟೆ K S ಹೆಗಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ  ಎಂಬಿತ್ಯಾದಿ.

 

2) ಪಿರ್ಯಾದಿ ADAM  BYARI ದಾರರು ಉಳಾಯಿ ಬೆಟ್ಟುವಿನಲ್ಲಿ ಮದರಾಸದ ಪ್ರಾಧ್ಯಾಪಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ:03-10-2022 ರಂದು ಅವರ ಬಾಬ್ತು ಸ್ಕೂಟರ್ ನಂಬ್ರ:KA-70-E-5267 ನೇದರಲ್ಲಿ ಸವಾರರಾಗಿ  ತನ್ನ ಮನೆಯಿಂದ ಮಲ್ಲೂರು ಮೂಲಕ ಉಳಾಯಿಬೆಟ್ಟು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಂಜೆ ಸುಮಾರು 05-30 ಗಂಟೆಗೆ ಪೆರ್ಮಂಕಿ ದರಿ ಬಾಗಿಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಸ್ಕೂಟರ ನಂಬ್ರ KA19-ET-3937 ಸವಾರನು ಉಳಾಯಿ ಬೆಟ್ಟು ಕಡೆಯಿಂದ ಮಲ್ಲೂರು ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯಲ್ಲಿದ್ದ ಹೊಂಡ ಒಂದನ್ನೂ ತಪ್ಪಿಸಿ ನಾನು ಸವಾರಿ ಮಾಡುತ್ತಿದ್ದ ಸ್ಕೂಟರಿನ ಮುಖ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾನು ಸ್ಕೂಟರ ಸಮೇತ ರಸ್ತೆಗೆ ಬಿದ್ದು ನನ್ನ ಬಲಕೈಗೆ ಮೂಳೆಮುರಿತದ ಗಾಯ ಹಾಗೂ ಬಲಗಾಲಿಗೆ ತರಚಿದ ರೀತಿಯಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರೂ ನನ್ನನ್ನೂ ಆಟೋರಿಕ್ಷಾ ಒಂದರಲ್ಲಿ ಕುಳ್ಳರಿಸಿಕೊಂಡು ಸುರತ್ಕಲನ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ತೆರಳಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುಕೊಂಡಿರುತ್ತಾರೆ ಎಂಬಿತ್ಯಾದಿ

 

Bajpe PS     

ಪಿರ್ಯಾದಿ Padma Nabha Kundre ದಾರರು ಬಜಪೆ ಪೇಟೆಯಲ್ಲಿರುವ ತನ್ನ ಟೈಯರ್ ವರ್ಕಶಾಪ್ ನ್ನು ನೋಡಲು ದಿನಾಂಕ 03.10.2022 ರಂದು ತನ್ನ ಮನೆಯಿಂದ  ನೊಂದಾಣಿಯಾಗದ ಹೊಸ ಮೋಟಾರ್ ಸೈಕಲ್ ನಲ್ಲಿ ಬಂದಿದ್ದು ನಂತರ ವಾಪಸ್ಸು ಅದೇ ದಿನ ಸಂಜೆ 6.15 ಗಂಟೆಗೆ ಬಜಪೆಯಿಂದ ಹೊರೆಟು ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಕೆಂಜಾರು ಸರ್ಕಲ್ ಎಂಬಲ್ಲಿ ಸಂಜೆ 6.30 ಗಂಟೆಗೆ ತಲುಪುತಿದ್ದಂತೆ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಅತೀ ವೇಗ ಮತ್ತು ಅಜಾಗರುಕತೆಯಿಂದ   ಕೆಎ 19 ಎಎ 2327 ನೇ ಆಟೋರಿಕ್ಷಾದ  ಚಾಲಕನಾದ ರವಿರಾಜ್  ಎಂಬುವನು ಆಟೋರಿಕ್ಷಾವನ್ನು ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದರಿಂದ ಪಿರ್ಯಾದಿದಾರರಿಗೆ ಬಲಕೈ ನ ಮೊಣ ಗಂಟಿನ ಕೆಳಗೆ ಮೂಲೆ ಮುರಿತದ ಗಾಯ ಮತ್ತು ಗಲ್ಲಕ್ಕೆ ,ತುಟಿಗೆ ರಕ್ತಗಾಯವಾಗಿರುತ್ತದೆ     ಎಂಬಿತ್ಯಾದಿ

                           

Ullal PS   

ಪಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರು ದಿನಾಂಕ:05-10-2022 ರಂದು ಸಮಯ   15-30 ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ  ರೌಂಡ್ಸ್ ಕರ್ತವ್ಯ ನಿರ್ವಹಿಸಿಕೊಂಡಿದ್ದಾಗ, ಸಮಯ 15-45 ಗಂಟೆಗೆ ಪಿರ್ಯಾದಿದಾರರಿಗೆ ಸೋಮೇಶ್ವರ ಗ್ರಾಮದ ಬಟ್ಟಂಪ್ಪಾಡಿ, ಕೋಟೆಪುರ ಕಿಲೈಯ ಮಸೀದಿ ಎಂಬಲ್ಲಿ ಫಾರೂಕ್ ಮತ್ತು ಇಬ್ರಾಹಿಂ ಎಂಬವರುಗಳು ಬಟ್ಟಂಪ್ಪಾಡಿ ನದಿಯಿಂದ ಅಥವಾ ಸಮುದ್ರ ತೀರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಸಾಮಾನ್ಯ ಮರಳನ್ನು ಕಳವು ಮಾಡಿಕೊಂಡು ಅಕ್ರಮ ದಾಸ್ತಾನು ಇರಿಸಿಕೊಂಡಿರುತ್ತಾರೆ. ಎಂಬುದಾಗಿ ಮಾಹಿತಿ ಬಂದಂತೆ ಸ್ಥಳಕ್ಕೆ ಸಮಯ 16-00 ಗಂಟೆಗೆ ತಲುಪಿ ಪರಿಶೀಲಿಸಿದಾಗ ಸೋಮೇಶ್ವರ ಗ್ರಾಮದ, ಉಚ್ಚಿಲ, ಬಟ್ಟಂಪ್ಪಾಡಿ, ಕೋಟೆಪುರ, ಕಿಲೈಯ ಮಸೀದಿ ಬಳಿಯ ಖಾಲಿ ಸ್ಥಳದಲ್ಲಿ  ಸುಮಾರು 12 ರಿಂದ 15 ಟಿಪ್ಪರ್ ಲಾರಿಯಲ್ಲಿ ತುಂಬಬಹುದಾದಷ್ಟು ಸಾಮಾನ್ಯ ಮರಳಿನ ಲೋಡ್ ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕಂಡು ಬಂದಿರುತ್ತದೆ. ಸದ್ರಿ ಸಾಮಾನ್ಯ ಮರಳನ್ನು ಫಾರೂಕ್ ಮತ್ತು ಇಬ್ರಾಹಿಂ ಎಂಬವರುಗಳು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಬಟ್ಟಂಪ್ಪಾಡಿ ನದಿಯಿಂದ  ಅಥವಾ ಸಮುದ್ರದ ತೀರದಿಂದ ಕಳವು ಮಾಡಿಕೊಂಡು ಅಕ್ರಮವಾಗಿ ಶೇಖರಿಸಿಟ್ಟಿರುವುದು ಬಾತ್ಮಿದಾರರಿಂದ ಮಾಹಿತಿ ಬಂದಿರುತ್ತದೆ. ಸರಕಾರಿ ಪೊರಂಬೋಕು ಸ್ಥಳದಿಂದ ಸಾಮಾನ್ಯ ಮರಳನ್ನು ಕಳವು ಮಾಡಿಕೊಂಡು ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಾಭಗಳಿಸುವ ಉದ್ದೇಶದಿಂದ ಅಕ್ರಮವಾಗಿ ಸಾಮಾನ್ಯ ಮರಳನ್ನು ಸೋಮೇಶ್ವರ ಗ್ರಾಮದ, ಉಚ್ಚಿಲ, ಬಟ್ಟಂಪ್ಪಾಡಿ, ಕೋಟೆಪುರ, ಕಿಲೈಯ ಮಸೀದಿ ಬಳಿಯ ಖಾಲಿ ಸ್ಥಳದಲ್ಲಿ ಸುಮಾರು 12-15 ಟಿಪ್ಪರ್ ಲೋಡಿನಷ್ಟು ಸಾಮಾನ್ಯ ಮರಳನ್ನು ಸಂಗ್ರಹಿಸಿರುವ ಫಾರೂಕ್ ಮತ್ತು ಇಬ್ರಾಹಿಂ ಎಂಬವರುಗಳು ವಿರುದ್ಧ ದೂರು ತಯಾರಿಸಿರುವುದು.ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 06-10-2022 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080