Crime Reported in : : Kavoor PS
ಪಿರ್ಯಾದಿ SHIVAYYA NAYAK ದಾರರ ಹೆಂಡತಿಯಾದ ಗೀತಾಬಾಯಿ (35) ಎಂಬವರು ದಿನಾಂಕ 27/11/2022 ರಂದು ಸಂಜೆ 5 ಗಂಟೆಯ ಸಮಯ ಮನೆಗೆ ಬೇಕಾದ ಸಾಮಾಗ್ರಿಗಳನ್ನು ತರಲು ಪಂಜಿಮೊಗೆರು ಮಾರ್ಕೇಟ್ ಗೆ ಹೋಗುವುದಾಗಿ ಪಿರ್ಯಾದಿದಾರರ ಹಿರಿಯ ಮಗಳಾದ ಸ್ಣೇಹಾಳಲ್ಲಿ ತಿಳಿಸಿ ಹೋದವರು ಈ ವರೆಗೂ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ದಿನಾಂಕ 27/11/2022 ರಿಂದ ದಿನಾಂಕ 06/12/2022 ರವರೆಗೆ ನೆರೆಕೆರೆಯವರಲ್ಲಿ, ಪಂಜಿಮೊಗರು ಪರಿಸರದಲ್ಲಿ ಹಾಗೂ ರಕ್ತ ಸಂಬಂದಿಕರಲ್ಲಿ ವಿಚಾರಿಸಲಾಗಿ ಇವರೆಗೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ, ಎಂಬಿತ್ಯಾದಿ.
ಚಹರೆ:
ಗೀತಾಬಾಯಿ (35) ಗಂಡ: ಶಿವಯ್ಯನಾಯ್ಕ್
ಎತ್ತರ: 5 ಅಡಿ, ಉದ್ದಮುಖ ಗೋಧಿ ಮೈಬಣ್ಣ, ಸಾದಾರಣಾ ಮೈಕಟ್ಟು
ಧರಿಸಿರುವ ಬಟ್ಟೆ: ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಮಾತನಾಡುವ ಭಾಷೆ: ಕನ್ನಡ, ಕೊಂಕಣಿ, ಲಂಬಾಣಿ, ಹಿಂದಿ ಮತ್ತು ಮರಾಠಿ
2) ಪಿರ್ಯಾದಿ MANJUNATH MARUTI POOJAR ದಾರರು ಹೆಂಡತಿ ಶಿಲ್ಪ (25 ವರ್ಷ) ಮತ್ತು ಮಗ (6 ವರ್ಷ) ಎಂಬವರೊಂದಿಗೆ ಮಾಲೇಮಾರ್ ನೆಕ್ಕಿಲ ಗುಡ್ಡೆ ಎಂಬಲ್ಲಿ ಮಲ್ಲಪ್ಪ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು. ದಿನಾಂಕ 01/12/2022 ರಂದು 7.15 ಗಂಟೆಗೆ ಪಿರ್ಯಾದಿದಾರರು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ ವಾಪಾಸ್ಸು ಮನೆಗೆ ಬಂದಾಗ ಮನೆಗೆ ಚಿಲಕ ಹಾಕಿದ್ದು, ಈ ಬಗ್ಗೆ ಮಲ್ಲಪ್ಪರವರ ಹೆಂಡತಿಯಲ್ಲಿ ವಿಚಾರಿಸಿದಾಗ ಬೆಳಿಗ್ಗೆ 11.00 ಗಂಟೆಗೆ ಮಂಗಳೂರು ಮಾರ್ಕೇಟ್ ಗೆ ಹೋಗುವುದಾಗಿ ಹೇಳಿರುತ್ತಾರೆ ಎಂದು ತಿಳಿಸಿರುತ್ತಾರೆ. ಪಿರ್ಯಾದಿದಾರರ ಹೆಂಡತಿ ಶಿಲ್ಪ ರವರು ಮಗ ಕಲಿಯುವ ಕೊಟ್ಟಾರ ಶಾಲೆಗೆ ಬೆಳಿಗ್ಗೆ 11.30 ಗಂಟೆಗೆ ಹೋಗಿ ಮಗನನ್ನು ಕರೆದುಕೊಂಡು ಹೋದವರು ಈ ವರೆಗೂ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ದಿನಾಂಕ 01/12/2022 ರಿಂದ ದಿನಾಂಕ 06/12/2022 ರವರೆಗೆ ನೆರೆಕೆರೆಯವರಲ್ಲಿ ಹಾಗೂ ರಕ್ತ ಸಂಬಂದಿಕರಲ್ಲಿ ವಿಚಾರಿಸಲಾಗಿ ಇವರೆಗೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ, ಎಂಬಿತ್ಯಾದಿ.
1.ಶಿಲ್ಪ (25) ಗಂಡ: ಮಂಜುನಾಥ
ಎತ್ತರ: 5.5 ಅಡಿ, ಎಣ್ಣೆ ಕಪ್ಪು ಮೈಬಣ್ಣ, ಸಾದಾರಣಾ ಮೈಕಟ್ಟು
ಧರಿಸಿರುವ ಬಟ್ಟೆ: ಹಸಿರು ಸೀರೆ ಕೆಂಪು ಬಣ್ಣದ ರವಿಕೆ ಧರಿಸಿರುತ್ತಾರೆ.
ಮಾತನಾಡುವ ಭಾಷೆ: ಕನ್ನಡ
Urva PS
ಪಿರ್ಯಾದಿದಾರರಾದ ಜಗನ್ನಾಥ ಶೆಟ್ಟಿ ಕೆ, ಪ್ರಾಯ 66 ವರ್ಷ ಎಂಬವರು ದಿನಾಂಕ 03-12-2022 ರಂದು ಮಧ್ಯಾಹ್ನ 12:15 ಗಂಟೆಗೆ ಪಿರ್ಯಾದಿದಾರರ ಬಾಬ್ತು KA19HB5114 ನೇ ಸುಜುಕಿ ಆಕ್ಸಿಸ್ ಸ್ಕೂಟರ್ ನ್ನು ಪಿರ್ಯಾದಿದಾರರು ಕೆಲಸ ಮಾಡುವ ಮಂಗಳೂರಿನ ಉರ್ವಾಸ್ಟೋರ್ ನ, ಕೃಷ್ಣ ವಿಲಾಸ ಹೋಟೇಲ್ ನ ಹಿಂಭಾಗ, ಇರುವ ನೋವಾ ಫಾರ್ಮಾ ಎದುರು ನಿಲ್ಲಿಸಿ ಕೆಲಸದ ನಿಮಿತ್ತ ನೋವಾ ಫಾರ್ಮಾ ಒಳಗೆ ಹೋಗಿ ಸಮಯ ಮಧ್ಯಾಹ್ನಾ 12:30 ಗಂಟೆಗೆ ವಾಪಾಸು ಬಂದು ನೋಡಿದಾಗ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಸ್ಕೂಟರ್ ನ ಅಂದಾಜು ಮೌಲ್ಯ 70,000/- ರೂಪಾಯಿ ಆಗಬಹುದು ಎಂಬಿತ್ಯಾದಿ.
Kankanady Town PS
ದಿನಾಂಕ: 06.12.2022 ರಂದು ಬೆಳಿಗ್ಗೆ 06:00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಠಾಣಾ ನಿರೀಕ್ಷಕರಾದ ಹೆಚ್ ಎಸ್ ಭಂಜತ್ರಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿ ಹೊರಟು ಬಜಾಲ್ ಕಡೆಗೆ ಹೋಗುತ್ತಿರುವ ಸಮಯ ಬೆಳಿಗ್ಗೆ 08:10 ಗಂಟೆ ಸಮಯಕ್ಕೆ ಠಾಣಾ ವ್ಯಾಪ್ತಿಯ ಕಣ್ಣೂರು ಗ್ರಾಮದ ಕಣ್ಣೂರು ಮಸೀದಿಯ ಹಿಂದುಗಡೆ ನೇತ್ರಾವತಿ ನದಿ ತೀರದ ಮರಳಿನ ಧಕ್ಕೆಯಲ್ಲಿ ಯಾರೋ ಅಕ್ರಮವಾಗಿ ಮರಳನ್ನು ಟಿಪ್ಪರ್ ವಾಹನಕ್ಕೆ ಜೆ.ಸಿ.ಬಿ ಯಂತ್ರದಿಂದ ತುಂಬಿಸುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಬಂದಂತೆ ಕೂಡಲೇ 08:30 ಗಂಟೆಗೆ ಮಾಹಿತಿ ಬಂದ ಸ್ಥಳಕ್ಕೆ ತಲುಪಿದಾಗ ನದಿ ಕಿನಾರೆಯಲ್ಲಿ ಅಕ್ರಮವಾಗಿ ಸಾಮಾನ್ಯ ಮರಳನ್ನು ಜೆಸಿಬಿ ಯಂತ್ರದ ಮುಖೇನ ಟಿಪ್ಪರ್ ಲಾರಿಗೆ ಲೋಡ್ ಮಾಡುತ್ತಿರುವುದು ಕಂಡು ಬಂದಿದ್ದು, ಸಿಬ್ಬಂದಿ ಮುಖೇನ ಇವರನ್ನು ಸುತ್ತುವರಿದಾಗ ಜೆ.ಸಿ.ಬಿ ಯಂತ್ರದ ಚಾಲಕ ಜೆಸಿಬಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು, ಟಿಪ್ಪರ್ ಲಾರಿಯ ಚಾಲಕ ಲಾರಿಯಿಂದ ಇಳಿದು ಓಡಲು ಯತ್ನಿಸಿದವನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ವಿಚಾರಿಸಿದಾಗ ತನ್ನ ಹೆಸರು ಸುಭಾಸ್ ಕೆಲೂರ, ಪ್ರಾಯ: 27 ವರ್ಷ, ವಾಸ: 206, ಹುಲಗಿನಹಾಲ ಗ್ರಾಮ, ಹುನಗುಂದ ತಾಲೂಕು, ಬಾಗಲಕೋಟೆ ಜಿಲ್ಲೆ ಎಂಬುದಾಗಿ ತಿಳಿಸಿ ಟಿಪ್ಪರ್ ಮತ್ತು ಜೆ.ಸಿ.ಬಿಯ ಮಾಲಕ ಮೊಹಮ್ಮದ್ ಆಯುಬ್ ರವರ ಸೂಚನೆಯಂತೆ ಧಕ್ಕೆಯಲ್ಲಿದ್ದ ಮರಳನ್ನು ಜೆ.ಸಿ.ಬಿ ಯಂತ್ರದ ಮೂಲಕ ಟಿಪ್ಪರಿಗೆ ಲೋಡ್ ಮಾಡುತ್ತಿರುವುದಾಗಿ ಮತ್ತು ಓಡಿ ಹೋದ ಜೆ.ಸಿ.ಬಿ ಯಂತ್ರದ ಚಾಲಕನ ಹೆಸರು ಅಲ್ಲಾವುದ್ದೀನ್ ಎಂಬುದಾಗಿ ತಿಳಿಸಿರುತ್ತಾನೆ. ನಂತರ ಸದ್ರಿ ಟಿಪ್ಪರ್ ಲಾರಿಯನ್ನು ಪರಿಶೀಲಿಸಿದಾಗ ಇದು KA-19-AD-7207ನೇ ನಂಬ್ರದ ಟಿಪ್ಪರ್ ಲಾರಿ ಆಗಿದ್ದು, ಇದರ ಬಾಡಿಯ ಮಟ್ಟಕ್ಕೆ ಸುಮಾರು ಎರಡು ಯುನಿಟ್ ಸಾಮಾನ್ಯ ಮರಳು ಇರುವುದು ಕಂಡು ಬರುತ್ತದೆ. ಮರಳನ್ನು ತುಂಬಿಸುತ್ತಿದ್ದ ಜೆ.ಸಿ.ಬಿ ಯಂತ್ರದ ನೋಂದಣಿ ಸಂಖ್ಯೆ KA19-MK-7310 ಆಗಿರುತ್ತದೆ. KA-19-AD-7207ನೇ ನಂಬ್ರದ ಟಿಪ್ಪರ್ ಲಾರಿಯ ಅಂದಾಜು ಮೌಲ್ಯ 10 ಲಕ್ಷ ಮತ್ತು ಇದರಲ್ಲಿದ್ದ ಸುಮಾರು ಎರಡು ಯುನಿಟ್ ಸಾಮಾನ್ಯ ಮರಳಿನ ಅಂದಾಜು ಮೌಲ್ಯ ಸುಮಾರು 6,000/- ಹಾಗೂ 19-MK-7310ನೇ ನಂಬ್ರದ ಜೆ.ಸಿ.ಬಿ ಯಂತ್ರದ ಅಂದಾಜು ಮೌಲ್ಯ 25 ಲಕ್ಷ ಆಗಬಹುದು. ಅದ್ದರಿಂದ ಟಿಪ್ಪರ್ ಚಾಲಕ ಸುಭಾಸ್ ಕೆಲೂರ ಮತ್ತು ಮಾಲಕ ಮೊಹಮ್ಮದ್ ಆಯುಬ್ ಹಾಗೂ ಜೆಸಿಬಿ ಚಾಲಕ ಅಲ್ಲಾವುದ್ದೀನ್ ಎಂಬವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.
Traffic North Police Station
ದಿನಾಂಕ:05/12/2022 ರಂದು ಪಿರ್ಯಾದಿ Shekar Kotian ದಾರರು ತನ್ನ ಮೋಟಾರು ಸೈಕಲ್ ನಂಬ್ರ KA-19-X-5629 ನೇ ದರಲ್ಲಿ ಕುಳಾಯಿ ಹೊನ್ನಕಟ್ಟೆ ಯಲ್ಲಿನ ಸಂಬಂಧಿಕರ ಮನೆಗೆ ತೆರಳಿ ಅಲ್ಲಿಂದ ವಾಪಾಸು ತನ್ನ ಮನೆ ಕುಂಜತ್ ಬೈಲ್ ಕಡೆಗೆ ಹೋಗುತ್ತಿರುವಾಗ ಸಮಯ ರಾತ್ರಿ ಸುಮಾರು 9-45 ಗಂಟೆಗೆ NH 66 ರಲ್ಲಿ ಕುಳಾಯಿ AP MARBLE ನ ಹತ್ತಿರ ತಲುಪಿದಾಗ ಎದುರಿನಿಂದ ಅಂದರೆ ಬೈಕಂಪಾಡಿ ಕಡೆಯಿಂದ ವಿರುದ್ದ ದಿಕ್ಕಿನಲ್ಲಿ KA-19-ET-1142 ನೇ ನಂಬ್ರದ ಮೋಟಾರು ಸೈಕಲನ್ನು ಅದರ ಸವಾರನಾದ ನಂದಕುಮಾರ್ ಎಂಬುವವನು ದುಡುಕುತನ, ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರ ಮೋಟಾರು ಸೈಕಲ್ಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ಮೋಟಾರು ಸೈಕಲ್ ಗಳು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ಎಡಗೈಯ ಉಂಗುರ ಬೆರಳಿಗೆ ಮೂಳೆ ಮುರಿತದ ಗಾಯ ಹಾಗೂ ಎಡಗಾಲಿಗೆ ತೆರಚಿದ ಗಾಯಗಳಾಗಿದ್ದು , ಡಿಕ್ಕಿ ಪಡಿಸಿದ ಮೋಟಾರು ಸೈಕಲ್ ನ ಸವಾರನಿಗೂ ಕೂಡ ಸಣ್ಣ ಪುಟ್ಟ ಗಾಯಗಳಾಗಿದ್ದು ಪಿರ್ಯಾದಿದಾರರು ಚಿಕಿತ್ಸೆಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.