ಅಭಿಪ್ರಾಯ / ಸಲಹೆಗಳು

Crime Reported in : Mangalore East PS

ಪಿರ್ಯಾದಿ Shashank Aithal S ದಾರರ ತಾಯಿ ಶ್ರೀಮತಿ ಸುಮತಿ ಎಸ್ ಎ ಪ್ರಾಯ.52 ವರ್ಷ ಗಂಡ. ಶ್ರೀರಂಗ ಸ್ ಎ ವಾಸ.ಶ್ರೀ ಭೂಮಿಕ ಮನೆ,ರುದ್ರ ಭೂಮಿ ರಸ್ತೆ ,ಕದ್ರಿ ಮಂಗಳೂರು ಎಂಬವರು ದಿನಾಂಕ 03-10-2022 ರಂದು ಮಧ್ಯಾಹ್ನ ಸಮಯ ಸುಮಾರು 1.30 ಗಂಟೆಗೆ ಮನೆಯಿಂದ ಹೋದವರು ಈವರೆಗೆ ಮನೆಗೆ ಬಾರದೇ ಮತ್ತು ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಆದ್ದರಿಂದ ಕಾಣೆಯಾದ ತನ್ನ ತಾಯಿಯರವರನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂಬಿತ್ಯಾದಿ.

ಕಾಣೆಯಾದ ಸುಮತಿ ಎಸ್ ಎ ರವರ ಚಹರೆ:

ಹೆಸರು: ಸುಮತಿ ಎಸ್ ಎ, ಪ್ರಾಯ 52 ವರ್ಷ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಎತ್ತರ 5’ 4”, ಹಳದಿ ಬಣ್ಣದ ಚೂಡಿದಾರ ಮತ್ತು ಹಸಿರು ಬಣ್ಣದ ಚೂಡಿದಾರ ಪ್ಯಾಂಟ್  ಧರಿಸಿರುತ್ತಾರೆ.

Panambur PS

ಪಿರ್ಯಾದಿ MOGANTI SRINIVAS RAO ದಾರರು ಮಂಗಳೂರು ನಗರದ ಪಣಂಬೂರು ಎನ್. ಎಂ.ಪಿ.ಟಿ.ಯಲ್ಲಿ ಕೆಲಸ ಮಾಡುತ್ತಿದ್ದು, ಸದ್ರಿಯವರ ಅಕ್ಕನ ಮಗನಾ ಶ್ಯಾಮ್ ಸುಂದರ್ (32)  ಎಂಬವರು ಸುಮಾರು 7 ವರ್ಷಗಳಿಂದ ಅನಘ ರಿಫೈನರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಹೊಸಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸದ್ರಿಯವರು ದಿನಾಂಕ 04-10-2022 ರಂದು ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಕಂಪೆನಿಯಿಂದ ಹೋದವರು ವಾಪಾಸುಬಾರದೆ ರೂಮಿಗೂಹೋಗದೆ ಕಾಣೆಯಾಗಿರುತ್ತಾರೆ. ಸದ್ರಿಯವರ ಹುಟ್ಟು ಮನೆಯಾದ ಚೆನೈಗೆ ಕರೆಮಾಡಿ ವಿಚಾರಿಸಿದರೂ ಸದ್ರಿಯವರು ಅಲ್ಲಿಗೂ ಹೋಗಿರುವುದಿಲ್ಲ, ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ಈವರೆಗೂ ಹುಡುಕಾಡಿದರೂ ಪತ್ತೆಯಾಗದೇ ಇದ್ದುದ್ದರಿಂದ ವಿಳಂಬವಾಗಿ ದೂರು ನೀಡಿದ್ದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶವಾಗಿರುತ್ತದೆ.

Traffic South Police Station

ದಿನಾಂಕ: 06-10-2022 ರಂದು ಪಿರ್ಯಾದಿದಾರರಾದ ಜಯಪ್ರಕಾಶ್ ರವರು ಸಹ್ಯಾದ್ರಿ ಕಾಲೇಜ್ ಎದುರು ಇರುವ HPCL ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿರುವಾಗ ಅವರ ಪೆಟ್ರೋಲ್ ಪಂಪ್ ಗೆ ಬಂದ ಕೆಂಪು ಬಣ್ಣದ  ಸ್ಕೂಟರ್ ನಂಬ್ರ:KA-19-HK-8362 ನೇದರ ಸವಾರ ಸ್ಟ್ಸಾನಿ ಮಸ್ಕರೇನಿಸ್ ಎಂಬುವರು ಪೆಟ್ರೋಲ್ ಹಾಕಿಸಿಕೊಂಡು ಮಂಗಳೂರು ಕಡೆಗೆ ಹೋಗಲು ಪಡೀಲ್ ಕಡೆಯಿಂದ ಬಿಸಿ ರೋಡ್ ಕಡೆಗೆ ಹೋಗಿರುವ ಡಾಮಾರು ರಸ್ತೆಯ ಎಡಬದಿಯಲ್ಲಿರುವ HPCL ಪೆಟ್ರೋಲ್ ಪಂಪ್ ನಿಂದ ಸಹ್ಯಾದ್ರಿ ಕಾಲೇಜ್ ಎದುರು ಇರುವ ತೆರೆದ ರಸ್ತೆ ವಿಭಾಜಕದ ಕಡೆಗೆ ಸ್ಟ್ಸಾನಿ ಮಸ್ಕರೇನಿಸ್ ರವರು ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು  ಮಧ್ಯಾಹ್ನ 3-50 ಗಂಟೆಗೆ ಪಡೀಲ್ ಕಡೆಯಿಂದ ಬಿ.ಸಿ ರೋಡ್ ಕಡೆಗೆ ರಾ.ಹೆ -73 ರಲ್ಲಿ ಲಾರಿ ನಂಬ್ರ:KA-01-AB-6635 ನೇದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಟ್ಸಾನಿ ಮಸ್ಕರೇನಿಸ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಟ್ಸಾನಿ ಮಸ್ಕರೇನಿಸ್ ರವರು ಸ್ಕೂಟರ್ ಸಮೇತ ಲಾರಿಯ ಮುಂದುಗಡೆ ಬಿದ್ದಾಗ ಲಾರಿಯ ಮುಂದಿನ ಎಡಬದಿ ಚಕ್ರ ಸ್ಟ್ಸಾನ ಮಸ್ಕರೇನಿಸ್ ರವರ ಹೆಲ್ಮೇಟ್ ಮೇಲೆ ಹರಿದು ಸ್ಟ್ಸಾನ ಮಸ್ಕರೇನಿಸ್ ರವರ ತಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಎಡಕೈ ಮತ್ತು ಮುಖಕ್ಕೆ ರಕ್ತ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಅಂಬುಲೆನ್ಸ್ ವೊಂದರಲ್ಲಿ ಅವರನ್ನು  ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಹಾಗೂ ಅಪಘಾತ ಪಡಿಸಿದ ಲಾರಿಯ ಚಾಲಕ ಲಾರಿಯನ್ನು ಬಿಟ್ಟು ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

 

Moodabidre PS

ಪಿರ್ಯಾದುದಾರರು ಮೂಡಬಿದ್ರೆ ತಾಲೂಕು ಕಂದಾಯ ನಿರೀಕ್ಷಕರಾಗಿದ್ದು ಮೇಲಾಧಿಕಾರಿಗಳ ಆದೇಶದಂತೆ ದಿನಾಂಕ:06-10-2022 ರಂದು ತಾಲೂಕು ಭೂಮಾಪಕರಾದ ಸತೀಶ್, ಗ್ರಾಮ ಲೆಕ್ಕಾಧಿಕಾರಿ ಅಪೂರ್ವ, ಗ್ರಾಮ ಸಹಾಯಕರಾದ ಉಮೇಶ್ ರವರ ಜೊತೆಯಲ್ಲಿ ಹೊಸಬೆಟ್ಟು ಗ್ರಾಮದ ಬಿರಾವು ಎಂಬಲ್ಲಿರುವ ಸರ್ವೆ ನಂಬ್ರ:198/ * ರಲ್ಲಿ ಸರ್ವೆ ನಡೆಸಲು  ಹೋಗಿ ಬೆಳಿಗ್ಗೆ 11-00 ಗಂಟೆ ಸಮಯಕ್ಕೆ ಸರ್ವೆ ನಡೆಸಲು ಮುಂದಾದಾಗ ಆರೋಪಿಗಳಾದ ಜೀವನ್ ಕಿರಣ್ ಡೆಲಿಯಾ, ನೆಲ್ಲಿ ಮೋನಿಸ್, ರೀಟಾ ಕುಟಿನ್ಹಾ ಮತ್ತು ಇತರರು ಸ್ಥಳಕ್ಕೆ ಬಂದು ಸರ್ವೆ ನಡೆಸದಂತೆ ಸರಕಾರಿ ಕೆಲಸಕ್ಕೆ ಅಡ್ಡಿ ಮಾಡಿ ಆರೋಪಿಗಳ ಪೈಕಿ ಜೀವನ್ ಕಿರಣ್ ಡೇಲಿಯಾ ಮತ್ತು ರೀಟಾ ಕುಟಿನ್ಹಾರವರು ಕತ್ತಿ, ದೊಣ್ಣೆ ಹಿಡಿದುಕೊಂಡು ಬಂದು ಆರೋಪಿ ಜೀವನ್ ಕಿರಣ್ ನು ಕೊಲೆ ಮಾಡುವ ಉದ್ದೇಶದಿಂದಲೇ ಕತ್ತಿಯಿಂದ ಪಿರ್ಯಾದುದಾರರಿಗೆ ಹೊಡೆಯಲು ಬಂದಿದ್ದು ಆ ಸಂದರ್ಭದಲ್ಲಿ ಪಿರ್ಯಾದುದಾರರು ತಪ್ಪಿಸಿಕೊಂಡಿದ್ದು  ಮುಂದಕ್ಕೆ ಸರ್ವೆ ಮಾಡಲು ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಆರೋಪಿಗಳು ಜೀವ ಬೆದರಿಕೆ ಹಾಕಿರುತ್ತಾರೆ.

  ಸರಕಾರಿ ಅಧಿಕಾರಿಯಾದ ಪಿರ್ಯಾದುದಾರರು ಮೇಲಾದಿಕಾರಿಗಳ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಿ ಸರ್ವೆ ಕಾರ್ಯಕ್ಕೆ ಹೋದಾಗ ಆರೋಪಿಗಳು ಸಮಾನ ಉದ್ದೇಶದಿಂದ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಕೊಲೆ ಮಾಡುವ ಉದ್ದೇಶದಿಂದಲೇ ಕತ್ತಿಯಿಂದ ಹಲ್ಲೆ ಮಾಡಲು ಮುಂದಾಗಿ ಸರ್ವೆ ನಡೆಸದಂತೆ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿಯಾಗಿದೆ.

 

ಇತ್ತೀಚಿನ ನವೀಕರಣ​ : 07-10-2022 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080