ಅಭಿಪ್ರಾಯ / ಸಲಹೆಗಳು

Crime Reported in : Kavoor PS

 ಫಿರ್ಯಾದಿ SULOCHANA ದಾರರ ಮಗಳಾದ ಜಯಶ್ರೀ (19 ವರ್ಷ) ಎಂಬವರು ಕಾವೂರಿನ ನಿಸರ್ಗ ಹೋಂ ಪ್ರಾಡೆಕ್ಟ್ ನಲ್ಲಿ ಸುಮಾರು 5 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ದಿನಾಂಕ: 07-11-2022 ರಂದು ನಿಸರ್ಗ ಹೋಂ ಪ್ರಾಡೆಕ್ಟ್ ಮಾಲಕರಾದ ಕೇಶವ ಎಂಬುವವರು ಫಿರ್ಯಾದಿದಾರರ ಮೊಬೈಲ್ ಪೋನ್ ನಂಬ್ರಕ್ಕೆ ಕರೆ ಮಾಡಿ ನಿಮ್ಮ ಮಗಳಾದ ಜಯಶ್ರೀ(19) ವರ್ಷ ಎಂಬವರು ದಿನಾಂಕ:05/11/2022 ರಂದು 10:00 ಗಂಟೆ ಸುಮಾರಿಗೆ 2 ದಿನಗಳ ರಜೆಯನ್ನು ಪಡೆದು ಮನೆಗೆ ಹೋಗಿ ಬರುವುದಾಗಿ ತೆರಳಿದ್ದು, ಈ ದಿನ ದಿನಾಂಕ:07/11/2022 ರಂದು ಕೆಲಸಕ್ಕೆ ಬರಬೇಕಾದವರು ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ನಂತರ ಫಿರ್ಯಾದಿದಾರರು ಮಗಳ ಮೊಬೈಲ್ ಪೋನ್ ನಂಬ್ರಕ್ಕೆ ಕರೆ ಮಾಡಿದಾಗ ಸ್ಟಿಚ್ ಆಪ್ ಆಗಿರುತ್ತದೆ. ನಂತರ ಎಲ್ಲಾ ಕಡೆ ಹುಡುಕಾಡಿ ಹಾಗೂ ಸಂಬಂಧಿಕರನ್ನು ವಿಚಾರಿಸಿದಲ್ಲಿ ಯಾವುದೇ ಮಾಹಿತಿ ತಿಳಿದು ಬಾರದೇ ಇರುವುದರಿಂದ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಕಾಣಿಯಾದವರ ಚಹರೆ:

ಹೆಸರು: ಜಯಶ್ರೀ (19 ವರ್ಷ)

ಎತ್ತರ: 5 ಅಡಿ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಕಪ್ಪು ಗುಂಗುರು ಕೂದಲು

ಧರಿಸಿದ ಬಟ್ಟೆ: ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಡು ಕೆಂಪು ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಶೂ

ಮಾತಾನಾಡುವ ಭಾಷೆ: ತುಳು ಮತ್ತು ಕನ್ನಡ

 

Crime Reported in : Traffic South Police Station       

ದಿನಾಂಕ: 06-11-2022 ರಂದು ಪಿರ್ಯಾದಿ VIJAYA ದಾರರು  ಮಂಗಳೂರು ಕಡೆಯಿಂದ ಪಂಡಿತ್ ಹೌಸ್ ಕಡೆಗೆ ರಾ ಹೆ 66 ರಸ್ತೆಯಲ್ಲಿ ಹೋಗುತ್ತಿರುವಾಗ ಅವರ ಮುಂದಿನಿಂದ ಅಂದರೆ ಪಂಪುವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ KA-19-HB-6137 ಸ್ಕೂಟರ್ ನಲ್ಲಿ  ಅದರ ಸವಾರ ಮತ್ತು ಸಹಸವಾರೆ ಹಾಗೂ ಎರಡೂ ಮಕ್ಕಳನ್ನು ಕುಳ್ಳಿರಿಸಿಕೊಂಡು ಹೋಗುತ್ತಿರುವ  ಸಮಯ ಸುಮಾರು ಬೆಳಿಗ್ಗೆ 09-45 ಗಂಟೆಗೆ  ಕಲ್ಲಾಪು ಗ್ಲೋಬಲ್ ಮಾರ್ಕೆಟ್  ಬಳಿ ತಲುಪಿದಾಗ ಗ್ಲೋಬಲ್ ಮಾರ್ಕೆಟ್ ಒಳಗಿನಿಂದ ಲಾರಿ ನಂಬ್ರ RJ-14-GJ-4137 ನೇದನ್ನು ಅದರ ಚಾಲಕ ಮೊಹಮ್ಮದ್ ಹನೀಪ್ @ ಹನೀಪ್ ಎಂಬಾತನು ಯಾವುದೇ ಸೂಚನೇ ನೀಡದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಒಮ್ಮೆಲೇ ರಾ ಹೆ 66 ರ ಮುಖ್ಯ ರಸ್ತೆಗೆ ಬಂದು ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ಸ್ಕೂಟರಿಗೆ ಲಾರಿಯ ಮುಂದಿನ ಬಲಭಾಗ ಡಿಕ್ಕಿಪಡಿಸಿದನು. ಪರಿಣಾಮ ಸ್ಕೂಟರ್ ಸವಾರ ಸಹಸವಾರೆ ಹಾಗೂ ಮಕ್ಕಳು ಡಾಮಾರು ರಸ್ತೆಗೆ ಬಿದ್ದರು ಸವಾರ ಹಾಗೂ ಸಹಸವಾರೆ ತಲೆಗೆ ಗಂಭೀರ ಸ್ವರೂಪದ ಗಾಯ ಹಾಗೂ ಒಂದು ಮಗುವಿಗೆ ಎಡಕಣ್ಣಿಗೆ ಗುದ್ದಿದ ಗಾಯವಾಗಿದ್ದು ಮತ್ತೊಂದು ಮಗುವಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ.  ಕೂಡಲೇ ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಸಾರ್ವಜನಿಕರು ಗಾಯಾಳುಗಳನ್ನು ಬೇರ ಬೇರೆ ಆಟೋರಿಕ್ಷಾಗಳಲ್ಲಿ  ದೇರಳಕಟ್ಟೆಯ ಯೆನೆಪೋಯಾ ಆಸ್ಪತ್ರಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಗಂಭಿರ ಗಾಯಗೊಂಡಿದ್ದ ಗಾಯಾಳು ಸ್ಕೂಟರ್ ಸವಾರ ಗಂಗಾಧರ ಹಾಗೂ ಸಹಸವಾರೆ  ನೇತ್ರಾವತಿ ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿರುವುದಾಗಿ ತಿಳಿಸಿ ಮಕ್ಕಳನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ .

Crime Reported in : Ullal PS

ಪಿರ್ಯಾದಿ K Santhosh ದಾರರು ಉಳ್ಳಾಲ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು ದಿನಾಂಕ 06/11/2022 ರಂದು ಬೆಳಿಗಿನ ಜಾವ 02-25 ಗಂಟೆಯ ಸಮಯಕ್ಕೆ ಉಳ್ಳಾಲ ತಾಲೂಕು ಬಿ.ಹೋಬ್ಳಿಯ ದಕ್ಷಿಣ ಕನ್ನಡ ಜಿಲ್ಲೆ ಕರಾವಳಿ ನಿಯಂತ್ರಣ ವಲಯ(CRZ) ವ್ಯಾಪ್ತಿಯಲ್ಲಿ ಹರಿಯುವ ನದಿ ಪಾತ್ರಗಳಲ್ಲಿ ಮತ್ತು ಸೋಮೇಶ್ವರ ಸಮುದ್ರ ದಡದಲ್ಲಿ ಅನಧಿಕೃತವಾಗಿ ಮರಳು ಸಾಗಾಟ ತಡಯುವ ನಿಮಿತ್ತ 24*7 ಇಂಟರನೆಟ್ ಕನೆಕ್ಷನ್ ನಿರಂತರ ವಿದ್ಯುತ್ ಸಂಪರ್ಕ ಇರುವ ಸಿಸಿ ಕ್ಯಾಮೇರಾವನ್ನು ಮಾನ್ಯ ಜಿಲ್ಲಾಧಿಕಾರಿ ಹಾಗೂ ಅದ್ಯಕ್ಷರು ಜಿಲ್ಲಾ ಮರಳು ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ರವರ ಆದೇಶದ ಮೇರೆಗೆ ಒಂದು ವರ್ಷದ ಅವಧಿಯವರೆಗೆ ಸಿಸಿ ಕ್ಯಾಮೆರಾ ವನ್ನು ಅಳವಡಿಸಿದ್ದು ಸದ್ರಿ ಸಿಸಿ ಕ್ಯಾಮೆರಾವನ್ನು ದಿನಾಂಕ 06/11/2022 ರಂದು 02-25 ಗಂಟೆಯ ಸಮಯಕ್ಕೆ KA-19-Z-7354 ನೇ ಕಾರ್ ನಲ್ಲಿ ಬಂದ ವ್ಯಕ್ತಿಯು ಉಳ್ಳಾಲ ಮೂಡ ಎಂಬಲ್ಲಿರುವ ಸರ್ವೆ ನಂಬ್ರ 136 ರಲ್ಲಿ ಅಳವಡಿಸಿದ 2 ಸಿಸಿ ಕ್ಯಾಮೆರಾ ಗಳಲ್ಲಿ ಒಂದನ್ನು ಅಲುಗಾಡಿಸಿ ಸಾರ್ವಜನಿಕ ಸೊತ್ತಾದ ಸಿಸಿ ಕ್ಯಾಮೆರಾವನ್ನು ಹಾಳು ಮಾಡಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲು ಪ್ರಯತ್ನಿಸಿರುವುದಾಗಿದೆ ಎಂಬಿತ್ಯಾದಿ ಪಿರ್ಯಾದಿಯ ಸಾರಾಂಶ.

       

Crime Reported in : Mangalore North PS                                  

ದಿನಾಂಕ 06-11-2022  ರಂದು ಉತ್ತರ ಪೊಲೀಸ್ ಠಾಣಾ ಪೊಲೀಸ್ ಉಪ  ನಿರೀಕ್ಷಕರಾದ ಫೈಝುನೀಸಾ   ಪಿಸಿಆರ್ ವಾಹನದಲ್ಲಿ ಚಾಲಕರಾಗಿದ್ದ, ಪಿ.ಸಿ ಸಾಗರ್ ರತ್ನಾಕರ ಹಾಗೂ ಪಿಸಿ ಅಭಿಷೇಕ್  ರವರೊಂದಿಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ರಾತ್ರಿ   ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ರಾತ್ರಿ 9.00 ಗಂಟೆಗೆ  ಮಂಗಳೂರು  ನಗರದ ಕಾರ್ ಸ್ಟ್ರೀಟ್  ತಲುಪುವಾಗ ಇಬ್ಬರು ವ್ಯಕ್ತಿಗಳು  ಯಾವುದೋ ಅಮಲು ಪದಾರ್ಥ ಸೇವಿಸಿ ತೂರಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು , ಇವರ ಬಳಿಗೆ ಹೋಗಿ ನೋಡಿದಾಗ ಇವರು  ನಶೆಯಲ್ಲಿದ್ದು, ಯಾವುದೋ ಅಮಲು ಪದಾರ್ಥ ಸೇವಿಸಿದವನಂತೆ ಕಂಡು ಬರುತ್ತಿದ್ದುದರಿಂದ ವಾಹನವನ್ನು ನಿಲ್ಲಿಸಿ ಇವರನ್ನು  ವಿಚಾರಿಸಿದಾಗ ಒಬ್ಬಾತನ  ಹೆಸರು ಗಗನ್ ಪ್ರಾಯ: 22 ವರ್ಷ  ವಾಸ: 4-61 ಬಜಾಲ್ ನಂತೂರು ಫೈಜಲ್ ನಗರ ಬಜಾಲ್ ಮಂಗಳೂರು  ಹಾಗೂ ಇನ್ನೂರ್ವ ವಿಜೀತ್ ಪ್ರಾಯ: 21 ವಾಸ : ಜಲ್ಲಿಗುಡ್ಡೆ ಜಯನಗರ ಬಜಾಲ್ ಪೋಸ್ಟ್ ಬಜಾಲ್ ಮಂಗಳೂರು ಎಂಬುವುದಾಗಿ ಹೇಳಿದರು. , ನಂತರ  ಇವರನ್ನು  ಎ.ಜೆ ಆಸ್ಪತ್ರೆ  ಕುಂಟಿಕಾನ, ಮಂಗಳೂರು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಸಾಣೆಗೆ ಒಳಪಡಿಸಿ ವೈದ್ಯರು ನೀಡಿದ ವರದಿಯನ್ನು ಪರಿಶೀಲಿಸಿ ನೋಡಲಾಗಿ ಗಗನ್ ಪ್ರಾಯ: 22  ಹಾಗೂ ವಿಜೀತ್ ಪ್ರಾಯ: 21  ಎಂಬುವರು  ಅಮಲು ಪದಾರ್ಥವಾದ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ವರದಿಯಿಂದ ದೃಡಪಟ್ಟಿರುವುದರಿಂದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 07-11-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080