ಅಭಿಪ್ರಾಯ / ಸಲಹೆಗಳು

Crime Reported in : : Mangalore East PS 

ಪಿರ್ಯಾದಿದಾರರಾದ ಕೃಷ್ಣಪ್ರಸಾದ್ ರವರು ಕೆಎ-70-ಇ-6870  ನೇ ಹೊಂಡಾ ಕಂಪೆನಿಯಾ ಗ್ರಾಜೀಯಾ ಸ್ಕೂಟರ್ ನ್ನು ಉಪಯೋಗಿಸಿಕೊಂಡಿದ್ದು, ಈ ಸ್ಕೂಟರ್ ನ್ನು ದಿನಾಂಕ: 02-10-2022 ರಂದು ಮದ್ಯಾಹ್ನ 1-45 ಗಂಟೆಗೆ ದೀಪಾ ಕಂಪಾರ್ಟ್ ಹೊಟೇಲ್ ನ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿ, ಸ್ವಿಗ್ಗಿಯಾ ಪಾರ್ಸಲ್ ನ್ನು ತೆಗೆದಕೊಂಡು ಬರಲು ಹೋಗಿದ್ದು, ಸ್ವಿಗ್ಗಿ ಪಾರ್ಸಲ್ ನ್ನು ತೆಗೆದುಕೊಂಡು ಬಂದು ನೋಡಿದಾಗ  ಪಾರ್ಕ್ ಜಾಗದಲ್ಲಿ ಸ್ಕೂಟರ್ ಇಲ್ಲದೇ ಇದ್ದು, ಪಿರ್ಯಾದಿದಾರರ ಕೆಎ-70-ಇ-6870  ನೇ ಹೊಂಡಾ ಕಂಪೆನಿಯಾ ಗ್ರಾಜೀಯಾ  ಸ್ಕೂಟರ್ ನ್ನು ದಿನಾಂಕ: 02-10-2022 ರಂದು ಮಧ್ಯಾಹ್ನ 1-45 ಗಂಟೆಯಿಂದ 2-00 ಗಂಟೆಯ ಮದ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿದ್ದು, ಇದರ ಮೌಲ್ಯ ರೂ: 46,867/- ಆಗಬಹುದು. ಇದರ ಚಾಸಿಸ್ ನಂ: ME4JF49KBKU000073, ಇಂಜಿನ್ ನಂಬರ್: JF49EU5001517 ಮಾಡೆಲ್- 2019, ಬಣ್ಣ: ಪರ್ಲ್ ಆಮೆಜಿಂಗ್ ಆಗಿರುತ್ತದೆ. ಪಿರ್ಯಾದಿದಾರರು ಕಳವಾದ ತನ್ನ ಸ್ಕೂಟರ್ ನ್ನು ನಗರ ಎಲ್ಲಾ ಕಡೆ ಹುಡಕಾಡಿದ್ದು, ಪತ್ತೆಯಾಗದ ಕಾರಣ  ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

 

2)  ಫಿರ್ಯಾದಿ ರವರ ಮಗಳು ಮದುವೆ ವಯಸ್ಸಿಗೆ ಬಂದ ಕಾರಣ ಫಿರ್ಯಾದಿರವರು ಅವಳಿಗೆ ಸಂಬಂಧ ಹುಡುಕುತ್ತಿದ್ದಾಗ ವರಾನ್ವೇಷಣೆಯ ಬಗ್ಗೆ ಆರೋಪಿಯ FMB ELITE MARRIAGE  BUERAU(A1)D-24, 1st Flor, Defence Colony, New Delhi-110024  ವೆಬ್ ಸೈಟ್ ನಲ್ಲಿ ಜಾಹೀರಾತು ನೋಡಿ ಫಿರ್ಯಾದಿರವರು ಆತನನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಆರೋಪಿಯ ಸಂಸ್ಥೆಗೆ ರೂ. 2 ಲಕ್ಷ ನೀಡಿ ಸದಸ್ಯರಾಗುವಂತೆ ಆರೋಪಿ ಸೂಚಿಸಿದ ಕಾರಣ ಫಿರ್ಯಾದುದಾರರು ಬ್ಯಾಂಕ್ ಖಾತೆಯಿಂದ ಆರೋಪಿಯ ಬ್ಯಾಂಕ್ ಖಾತೆಗೆ ರೂ. 2 ಲಕ್ಷ ವರ್ಗಾಯಿಸಿದ್ದು, ಹಣ ಪಡೆದುಕೊಂಡ ಆರೋಪಿ ನಂತರ ಫಿರ್ಯಾದುದಾರರ ಮನವಿ ಸ್ಪಂದಿಸದೆ ಫಿರ್ಯಾದುದಾರರ ಯಾವುದೇ ಫೋನ್ ಕರೆಗೆ ಉತ್ತರಿಸದೆ ವಂಚಿಸಿರುವುದಲ್ಲದೆ, ಆರೋಪಿಯು ಫಿರ್ಯಾದುದಾರರಿಗೆ ವಂಚಿಸಿರುವಂತೆ ಇನ್ನೂ ಹಲವಾರು ಜನರಿಗೆ ವಂಚಿಸಿರುವುದರಿಂದ  ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Urva PS

ಪಿರ್ಯಾದಿದಾರರಾದ ಪ್ರಕಾಶ್ ಎನ್.ಸಿ, ಪ್ರಾಯ 61 ವರ್ಷ ಎಂಬವರು ದಿನಾಂಕ 04-12-2022 ರಂದು ಬೆಳಿಗ್ಗೆ 04:30 ಗಂಟೆಗೆ  ಅವರ ಬಾಬ್ತು KA19X7742 ನೇ ಬಜಾಜ್ ಡಿಸ್ಕವರಿ 135 ಬೈಕ್ ನ್ನು ಮಂಗಳೂರಿನ ಕೊಟ್ಟಾರ ಚೌಕಿ ಪ್ಲೇ ಓವರ್ ಕೆಳಗೆ ಪಾರ್ಕ್ ಮಾಡಿ ಸ್ನೇಹಿತನ ತಂಗಿಯ ಮದುವೆಗೆಂದು ಬಸ್ಸಿನಲ್ಲಿ ಕುಂದಾಪುರಕ್ಕೆ ತೆರಳಿದವರು ದಿನಾಂಕ 05-12-2022 ರಂದು ಸಮಯ ಬೆಳಿಗ್ಗೆ 08:50 ಗಂಟೆಗೆ ವಾಪಾಸು ಬಂದು ನೋಡಿದಾಗ ಪಾರ್ಕ್ ಮಾಡಿದ ಸ್ಥಳದಲ್ಲಿ ಬೈಕ್ ಇರದೇ ಇದ್ದು ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಬೈಕ್ ನ ಅಂದಾಜು ಮೌಲ್ಯ 14,000/- ರೂಪಾಯಿ ಆಗಬಹುದು ಎಂಬಿತ್ಯಾದಿ.

Traffic South Police Station

ದಿನಾಂಕ 06/12/2022 ರಂದು ಫಿರ್ಯಾದಿದಾರರಾದ ಮಾಕ್ಸಿಮ್ ಹಿಲರಿ ಕುಟಿನ್ಹೋರವರು ಅವರ ಕ್ಯಾಂಟೀನ್ ಬಂದ್ ಮಾಡಿ ಮನೆಯಾದ ಪಚ್ಚನಾಡಿ ಕಡೆಗೆ ಅವರ ಓಮಿನಿ ಕಾರು ನಂಬ್ರ. KA-19-MF-9166 ನೇದರಲ್ಲಿ ಫಿರ್ಯಾದಿದಾರರು ಚಾಲಕನಾಗಿ ಅವರ ಹೆಂಡತಿ ಹಿಲ್ಡಾ ಕುಟಿನ್ಹೊ ರವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಪಚ್ಚನಾಡಿ ಕಡೆಗೆ ಹೋಗುತ್ತಾ ಸಮಯ ಸುಮಾರು ಸಂಜೆ 6-30 ಗಂಟೆಗೆ ಕುಲಶೇಖರ ಗಜಾನನ ಹೋಟೆಲ್ ಹತ್ತಿರ ತಲುಪಿದಾಗ ಫಿರ್ಯಾದಿದಾರರು ಓಮಿನಿ ಕಾರನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಕಾರಿನಿಂದ ಇಳಿದು ಗಜಾನನ ಹೋಟೆಲ್ ಗೆ ಹೋಗಲು ರಸ್ತೆ ದಾಟುತ್ತಿರುವಾಗ  ವಾಮಂಜೂರು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬುಲೆಟ್ ಬೈಕ್ ನಂಬ್ರ KA-19-ER-3953 ನೇದರ ಸವಾರ ರಾಬಿನ್ ಜೇಸನ್ ಲೋಬೋ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರು ಹಾಗೂ ಡಿಕ್ಕಿಪಡಿಸಿದ ಬೈಕ್ ಸವಾರ ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಫಿರ್ಯಾದಿದಾರರಿಗೆ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಬಲ ಕಾಲಿಗೆ ಗಂಭೀರ ಸ್ವರೂಪದ ಗುದ್ದಿದ ಗಾಯ ಹಾಗೂ ಎಡಬದಿಯ ಹೊಟ್ಟೆಗೆ ಗುದ್ದಿದ ಗಾಯವಾಗಿದ್ದು ಡಿಕ್ಕಿ ಪಡಿಸಿದ ಬೈಕ್ ಸವಾರನಿಗೂ ಗಾಯವಾಗಿರುತ್ತದೆ., ಕೂಡಲೇ ಅಲ್ಲಿ ಸೇರಿದ ಜನರು ಹಾಗೂ ಫಿರ್ಯಾದಿದಾರರ ಹೆಂಡತಿ ಹಿಲ್ಡಾ ಕುಟಿನ್ಹೊ ರವರು ಆಟೋರಿಕ್ಷಾ ಒಂದರಲ್ಲಿ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ. ಜ್ಯೋತಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 07-12-2022 06:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080