ಅಭಿಪ್ರಾಯ / ಸಲಹೆಗಳು

Crime Reported in : Traffic South Police Station

ದಿನಾಂಕ:06-04-2023 ರಂದು ಪಿರ್ಯಾದಿ MANOHAR ಮಾವನ ಮಗಳಾದ  ಚೈತ್ರಾ ಅಚಾರ್ಯ ರವರನ್ನು  ಗಂಡನಾದ ಶಿವರಾಜ್ ರವರು ಸವಾರರಾಗಿ ಚೈತ್ರಾ ಅಚಾರ್ಯ ರವರನ್ನು   ಸಹಸವಾರಳಾಗಿ ಕುಳ್ಳಿರಿಸಿಕೊಂಡು ಸ್ಕೂಟರ ನಂಬ್ರ KA-19-HM-7807 ನೇದರಲ್ಲಿ   ವಾಮಂಜೂರು ನೀರಾಹಳ್ಳ ಕಡೆಯಿಂದ ಪಡೀಲ್ ವೈದ್ಯನಾಥ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ  ರಾತ್ರಿ 09.30 ಗಂಟೆಗೆ ವಾಮಂಜೂರಿನ ಓರಿಯೇಂಟಲ್ ಬ್ಯಾಂಕಿನ ಬಿಷಫ್ ರಸ್ತೆಯ ಬಳಿ ತಲಪುತ್ತಿದಂತೆ ಸ್ಕೂಟರ ಸವಾರ ಶಿವರಾಜ್ ರವರು ರಸ್ತೆಯಲ್ಲಿ ಇದ್ದ ರೋಡ್ ಹಂಪ್ಸನ್ನು ಲೆಕ್ಕಿಸಿದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸ್ಕೂಟರನ್ನು ಸವಾರಿ ಮಾಡಿಕೊಂಡು ಬಂದ ಪರಿಣಾಮ  ಡಾಮಾರು ರಸ್ಯಗೆ ಬಿದ್ದು ಶಿವರಾಜ್ ರವರಿಗೆ ಯಾವುದೇ ಗಾಯವಾಗದೆ ಹಾಗೂ ಸಹಸವಾರಳಾಗಿದ್ದ ಚೈತ್ರಾ ಅಚಾರ್ಯರವರಿಗೆ ಎಡಕಿವಿಯ ರಕ್ತಗಾಯ ಹಾಗೂ ಬಲಗೈ ಮೊಣಗಂಟಿಗೆ ಗುದ್ದಿದವಾಗಿದ್ದು ಕೊಡಲೇ ಚಿಕಿತ್ಸೆ ಬಗ್ಗೆ ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Barke PS

ದಿನಾಂಕ:06-04-2023 ರಂದು ಹೋಟೇಲ್ ಜನತಾ ಡಿಲೆಕ್ಸ್ ಗೆ ರಾತ್ರಿ ಸಮಯ ಸುಮಾರು 8-15 ಗಂಟೆಗೆ ಹೊಟೇಲ್ ನಲ್ಲಿ ಊಟ ಮಾಡಿಕೊಂಡು ಮನೆಗೆ ತೆರಳಲು ಪಿರ್ಯಾದಿ Madhukrishna Shenoy ಅವರ ಬಾಬ್ತು ಕೆಎ19 ಎಂಜೆ1410 ನೇ ಕಾರನ್ನು ಪಾರ್ಕಿಂಗ್ ನಲ್ಲಿರಿಸಿದ ಸ್ಥಳಕ್ಕೆ ಬಂದು ಪಿರ್ಯಾದಿದಾರರು ವಾಹನವನ್ನು ಪಾರ್ಕಿಂಗ್ ಸ್ಥಳದಿಂದ ಹಿಂದಕ್ಕೆ ತೆಗೆಯುತ್ತಿದ್ದಾಗ ಪಿರ್ಯಾದಿದಾರರಿಗೆ ಕಾಣದ ಹಾಗೆ ಪಿರ್ಯಾದಿದಾರರ ಪರಿಚಯ ಇರದ ವ್ಯಕ್ತಿಯೋರ್ವ ದಾಟುವಾಗ ಅವರು ಡ್ರೈವಿಂಗ್ ಮಾಡುತ್ತಿರುವ ಡೋರ್ ಬಳಿಗೆ ಬಂದು ಅವರ ಕಾರನ್ನು ನಿಲ್ಲಿಸಿ ಕಾರಿನ ಡೋರ್ ಬಡಿದು ಗ್ಲಾಸ್ ನ್ನು ತಗೆಯಲು ಹೇಳಿ ಕೈ ಸೆನ್ನೆ ಮಾಡಿದಾಗ ಅವರು ಕಾರಿನ ಗ್ಲಾಸ್ ನ್ನು ತೆಗೆದಿದ್ದು ಆ ವ್ಯಕ್ತಿಯು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿದಾಗ ಆ ವ್ಯಕ್ತಿಗೆ ಪಿರ್ಯಾದಿಯು ತುಳು ಭಾಷೆಯಲ್ಲಿ ನಿಕ್ಕ ಏಂಚಿನ ಅಂಡೇ ಮರೆಯಾ ಎಂದು ಹೇಳಿದ್ದಕ್ಕೆ, ಆತನು ಬೇವರ್ಶಿ ನಿಕ್ಕ ಕಣ್ಣು ತೋರ್ವಜಿಯಾ, ಎಂದು ಹೇಳಿ ಕೈಯಿಂದ ಮುಷ್ಠಿಹಿಡಿದು ಏಕಾಏಕಿ ಪಿರ್ಯಾದಿದಾರರ ದವಡೆಗೆ ಬಲವಾಗಿ ಹೊಡೆದು ಹಲ್ಲೆ ಮಾಡಿರುತ್ತಾನೆ. ನಂತರ ಸ್ಥಳದಲ್ಲಿದ್ದ ಅಕ್ಕಪಕ್ಕದವರು ಜಗಳ ಬಿಡಿಸಿರುತ್ತಾರೆ. ನಂತರ ಪಿರ್ಯಾದಿದಾರರು ಮನೆಗೆ ಹೋಗಿ ಮುಖವನ್ನು ತೊಳೆಯುವಾಗ ಅವರ ಬಾಯಿಂದ ರಕ್ತ ಬಂದಿದ್ದು ಅವರಿಗೆ ಜನತಾ ಡಿಲೇಕ್ಸ್ ಹೋಟೇಲ್ ನ ಪಾರ್ಕಿಂಗ್ ಸ್ಥಳದಲ್ಲಿ ಪಿರ್ಯಾದಿದಾರು ಕಾರನ್ನು ಹಿಂತೆಗೆಯುವಾಗ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಕೈಯಿಂದ ಹಲ್ಲೆ ಮಾಡಿ, ಅವರಿಗೆ ಅವಾಚ್ಯ ಶಬ್ದಗಳಿಂದ ಬೈದ ಶೋಭಿತ್ ಕೊಟ್ಟಾರಿ ಎಂಬಾತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಕೇಂದು ವಿನಂತಿ.

Mangalore Rural PS

ಪಿರ್ಯಾದಿ Praveen Monthero ದಿನಾಂಕ 07-04-2023 ರಂದು ಗುಡ್  ಫ್ರೈಡೆ ಆದುದರಿಂದ ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿ ಪಾಲ್ದನೆ ಚರ್ಚ್ ಗೆ 17-45 ಗಂಟೆ ಸಂಜೆ ವೇಳೆಗೆ ಹೋಗಿ ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ವಾಪಾಸು ರಾತ್ರಿ 19-45 ಗಂಟೆಗೆ ಮನೆಗೆ ಬಂದು ಬೀಗ ತೆರೆದು ಮನೆ ಒಳಗಡೆ ಬಂದು ನೋಡಿದಾಗ ಯಾರೋ ಕಳ್ಳರು ಪಿರ್ಯಾದಿದಾರರ ಹಂಚಿನ ಮನೆಯ ಛಾವಣಿಯ ಹಂಚುಗಳನ್ನು ತೆಗೆದು ಮನೆ ಒಳಗಡೆ ಪ್ರವೇಶಿಸಿ ಅವರ ತಾಯಿ ಕೋಣೆಯಲ್ಲಿ ಬೀಗ ಹಾಕಿದ್ದ ಕಬ್ಬಿಣದ ಕಪಾಟಿನ ಬಾಗಿಲುಗಳನ್ನು ಮುರಿದು ಒಳಗಡೆ ಇದ್ದ ತಾಯಿಯ ಬ್ಯಾಗ್ ನಲ್ಲಿರಿಸಿದ್ದ ಅಂದಾಜು 20 ಗ್ರಾಂ ಬಂಗಾರದ ಚೈನ್ ಮತ್ತು 8 ಗ್ರಾಂ ನ ಬಂಗಾರದ ಒಂದು ಜೊತೆ ಬೆಂಡೋಲೆ, 4 ಗ್ರಾಂ ನ ಒಂದು ಬಂಗಾರದ ಉಂಗುರ ಮತ್ತು ಪಿರ್ಯಾದಿದಾರರ ಕೋಣೆಯ ಕವಾಟಿನಲ್ಲಿರಿಸಿದ್ದ  ಪಿಗ್ಗಿ ಬಾಕ್ಸ್ ನಲ್ಲಿದ್ದ ಅಂದಾಜು 4 ಸಾವಿರ ರೂಪಾಯಿ ನಗದು ಹಣ ವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಒಟ್ಟು 32 ಗ್ರಾಂ ತೂಕದ ಬಂಗಾರದ ಒಡವೆಗಳ ಅಂದಾಜು ಮೌಲ್ಯ 1 ಲಕ್ಷ 20 ಸಾವಿರ ಆಗಬಹುದು ಆದುದರಿಂದ ಕಳವಾದ ಸೊತ್ತುಗಳನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿ ನ್ಯಾಯ ಒದಗಿಸಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿಯಾಗಿದೆ.

Panambur PS

ಪಿರ್ಯಾದಿ HULIGEMMA ಮಗನಾದ ಬಸವರಾಜ್ ಪ್ರಾಯ ಸುಮಾರು 40 ವರ್ಷ ಮತ್ತು ಆತನ ಹೆಂಡತಿ ಹುಲಿಗಮ್ಮ ಎಂಬಾಕೆಯೊಂದಿಗೆ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವುದಾಗಿದೆ. ದಿನಾಂಕ 06-04-2023 ರಂದು ನನ್ನ ಪರಿಚಯದ ಬರ್ಮಪ್ಪ ಎಂಬವರು ಬೆಳಿಗ್ಗೆ 11-30 ರ ಸುಮಾರಿಗೆ ನನಗೆ ಮೊಬೈಲ್ ಕರೆಮಾಡಿ ಅಣ್ಣನಾದ ಬಸವರಾಜ್ ಎಂಬಾತನು ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಪ್ಯಾಕೇಜಿಂಗ್ ಕಂಪೆನಿಯಲ್ಲಿ ಗಾರೆ ಕೆಲಸ ಮಾಡುವ ಸಮಯದಲ್ಲಿ ಹಳೆಯ ಸಿಮೆಂಟ್ ಶೀಟ್ ಮೇಲೆ ಕಾಲಿಟ್ಟದ್ದರಿಂದ ಸಿಮೆಂಟ್ ಶೀಟ್ ತುಂಡಾಗಿ ಸುಮಾರು 35 ಅಡಿ ಎತ್ತರದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದು, ಕೂಡಲೇ ಬರುವಂತೆ ತಿಳಿಸಿದ್ದು,  ನಾನು ಪ್ರವೀಣ್ ಎಂಬವರೊಡನೆ ಕೂಡಲೇ ಎ.ಜೆ. ಆಸ್ಪತ್ರೆಗೆ ಹೋಗಿರುತ್ತೇನೆ. ಎ.ಜೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈಧ್ಯಾಧಿಕಾರಿಯವರು ಕೂಡಲೇ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇವೆ. ಅಲ್ಲಿ ನನ್ನ ಅಣ್ಣನಾದ ಬಸವರಾಜ್ ನನ್ನು ಒಳರೋಗಿಯಾಗಿ ದಾಖಲಿಸಿದ್ದು, ಮದ್ಯಾಹ್ನ 4 ಗಂಟೆ ಸುಮಾರಿಗೆ ನನ್ನ ಅಣ್ಣ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ದಿನಾಂಕ 06-04-2023 ರಂದು ನನ್ನ ಅಣ್ಣನಾದ ಬಸವರಾಜ್ ಮತ್ತು ಬರ್ಮಪ್ಪ ಎಂಬವರು ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಪ್ಯಾಕೇಜಿಂಗ್ ಕಂಪೆನಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾಗ ಬೆಳಿಗ್ಗೆ ಸುಮಾರು 11-00 ಗಂಟೆಗೆ ಹಳೆಯ ಸಿಮೆಂಟ್ ಶೀಟ್ ಮೇಲೆ ಕಾಲಿಟ್ಟದ್ದರಿಂದ ಸಿಮೆಂಟ್ ಶೀಟ್ ತುಂಡಾಗಿ ಸುಮಾರು 35 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದು, ತೀವ್ರ ಗಾಯಗೊಂಡಿದ್ದವನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಕಂಟ್ರಾಕ್ಟರ್ ರಾಘುವೇಂದ್ರ ಮಹಾದೇವ ನಾಯ್ಕ್  ಮತ್ತು ಪ್ಯಾಕೇಜಿಂಗ್ ಕಂಪೆನಿಗೆ ಸಂಬಂಧಪಟ್ಟವರು ಕೆಲಸ ಮಾಡುವ ಸಮಯದಲ್ಲಿ ಸುರಕ್ಷತೆಗೆ ಅಗತ್ಯವಿರುವ ಸೇಪ್ಟಿಬೆಲ್ಟ್ ಹಾಗೂ ಇತ್ಯಾದಿ ಸುರಕ್ಷತಾ ಸಾಧನಗಳನ್ನು ನೀಡದೆ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿರುವುದರಿಂದ ಬಸವರಾಜ್  ಎಂಬಾತನು  ಮೃತಪಡಲು ಕಾರಣರಾಗಿರುತ್ತಾರೆ. ಆದುದರಿಂದ ಕಂಟ್ರಾಕ್ಟರ್ ರಾಘುವೇಂದ್ರ ಮಹಾದೇವ ನಾಯ್ಕ್ ಮತ್ತು ಪ್ಯಾಕೇಜಿಂಗ್ ಕಂಪೆನಿಗೆ ಸಂಬಂಧಪಟ್ಟವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಾರಾಂಶವಾಗಿರುತ್ತದೆ.

Kavoor PS

ಪಿರ್ಯಾದಿ LANCY DSOUZA ದಿನಾಂಕ 06/04/2023 ರಂದು ರಾತ್ರಿ 10.30 ಗಂಟೆಗೆ ತಮ್ಮ ತೋಟಕ್ಕೆ ಟಿಪ್ಪರ್ ನಲ್ಲಿ ಮಣ್ಣು ತರುತ್ತಿರುವ ಸಮಯ ನೆರೆಮನೆಯ ಫಿಲಿಕ್ಸ್ ಡಿಸೋಜಾ ಎಂಬುವರ ಮಗನಾದ ಲಸ್ಸಿ ಎಂಬುವರು ಪಿರ್ಯಾದಿದಾರರಲ್ಲಿ ಬಂದು ರಾತ್ರಿ ಸಮಯ ಮಣ್ಣು ಕೊಂಡು ಹೋಗಬಾರದು ಎಂದು ತಿಳಿಸಿದಾಗ ಪಿರ್ಯಾದಿದಾರರು ರಾತ್ರಿ ಸಮಯ ಕೊಂಡು ಹೋಗದೆ ಮತ್ತೆ ಯಾವ ಸಮಯದಲ್ಲಿ ಕೊಂಡು ಹೋಗಬೇಕು ಎಂಬುದಾಗಿ ಮಾತುಕತೆ ನಡೆದು ಸ್ವಲ್ಪ ಸಮಯದ ನಂತರ ಫಿಲಿಕ್ಸ್ ಡಿಸೋಜಾ ರವರ ಹಿರಿಯ ಮಗ ಡೆಲ್ವಿನ್ ಡಿಸೋಜಾ ಎಂಬುವನು ಕೂಳುರಿನ ನದಿ ತೀರದ ಬಳಿ ಸಾರ್ವಜನಿಕ ರಸ್ತೆಗೆ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ “ ನೀವು ನನ್ನ ತಮ್ಮನಿಗೆ ಹೊಡೆದಿದ್ದಿಯಾ ನಿನ್ನನ್ನು ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು ಲಸ್ಸಿ ಡಿಸೋಜಾ ಮತ್ತು ಡೆಲ್ವೀನ್ ಡಿಸೋಜಾ ಸೇರಿಕೊಂಡು ಪಿರ್ಯಾದಿದಾರರಿಗೆ ಕೈಯಿಂದ ಎರಡು ಕೆನ್ನೆಗೆ ಹೊಡೆದಿರುತ್ತಾರೆ, ಎಂಬಿತ್ಯಾದಿ.

Kavoor PS

ದಿನ ದಿನಾಂಕ: 06-04-2023 ರಂದು ರಾತ್ರಿ ಸಮಯ ಸುಮಾರು 10.30 ಗಂಟೆಗೆ ಬಂಗ್ರ ಕೂಳೂರು ನದಿ ತೀರದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿ DELWIN DSOUZA ನೆರೆಮನೆಯ ಲ್ಯಾನ್ಸಿ ಡಿ ಸೋಜಾ ಎಂಬವರ ತೋಟಕ್ಕೆ 10 ಚಕ್ರದ ಟಿಪ್ಪರ್ ಲಾರಿಯಲ್ಲಿ ಮಣ್ಣು ತೆಗೆದುಕೊಂಡು ಹೋಗುತ್ತಿರುವ ಸಮಯ ಪಿರ್ಯಾದಿದಾರರ ತಮ್ಮ ಮೆಲ್ವಿನ್ ಲೆಸ್ಲಿ ಡಿ ಸೋಜಾ ನು ಟಿಪ್ಪರ್ ಚಾಲಕನಲ್ಲಿ ಟಿಪ್ಪರ್ ನ್ನು ನಿಧಾನವಾಗಿ ಚಲಾಯಿಸು ಟಿಪ್ಪರಿನಲ್ಲಿದ್ದ ಮಣ್ಣು ರಸ್ತೆಗೆ ಬಿದ್ದು ದೂಳು ಬರುತ್ತದೆ ಎಂಬುದಾಗಿ ತಿಳಿಸಿದಾಗ ಟಿಪ್ಪರ್ ಚಾಲಕನು ಲ್ಯಾನ್ಸಿ ಡಿ’ ಸೋಜಾರವರಿಗೆ ಫೋನ್ ಮೂಲಕ ವಿಷಯ ತಿಳಿಸಿ ಸ್ವಲ್ಪ ಸಮಯದ ನಂತರ ಲ್ಯಾನ್ಸಿ ಡಿ ಸೋಜಾರವರು ಬಂದು ಪಿರ್ಯಾದಿದಾರರ ತಮ್ಮನನ್ನು ತಡೆದು ನಿಲ್ಲಿಸಿ “ನೀನು ಯಾರೂ ಟಿಪ್ಪರನ್ನು ನಿಲ್ಲಿಸಲು ಬೇವರ್ಸಿ ನಾಯಿದ ಮಗ”  ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು “ಅದು ನನ್ನ ತೋಟಕ್ಕೆ ಮಣ್ಣು ಬರುವುದು ನೀನು ಯಾರೂ ತಡೆಯಲು” ಎಂದು ಹೇಳಿ ಕೈಯಿಂದ ಹೊಡೆದ ವಿಷಯವನ್ನು ಪಿರ್ಯಾದಿದಾರರಿಗೆ ಪೋನ್ ಮೂಲಕ ವಿಷಯ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಅಲ್ಲಿಗೆ ಹೋಗಿ ಆಲ್ಲಿದ್ದ ಲ್ಯಾನ್ಸಿ ಡಿ ಸೋಜಾರವರಲ್ಲಿ ವಿಚಾರಿಸದಾಗ ಲ್ಯಾನ್ಸಿ ಡಿ ಸೋಜಾರವರು ಪಿರ್ಯಾದಿದಾರರಿಗೆ “ಬೇವರ್ಸಿ ಈ ಬತ್ತನಾ ಕೇನರೇ ರಂಡೇ ಮಗ ಯಾನ್ ಎಕ್ಸ್ ಮಿಲಿಟ್ರಿದಯೇ ಗೊತ್ತುಂಡಂತ್ ನಿನನ್ ಕಡತ್ ಸುದೇಕ್  ದಕ್ಕುವೇ” ಎಂಬುದಾಗಿ ಬೈದು ಕೈಯಿಂದ ಪಿರ್ಯಾದಿದಾರರ ಮೂಖಕ್ಕೆ ಹೊಡೆದಿರುತ್ತಾರೆ, ಎಂಬಿತ್ಯಾದಿ.

 

07-04-2023

Traffic North Police Station

ಪಿರ್ಯಾದಿ Miss.Sahana ದಿನಾಂಕ :06-04-2023 ರಂದು ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ 13 ಮಂದಿ ಸ್ನೇಹಿತರೊಂದಿಗೆ ಮಡಿಕೇರಿಯಿಂದ ರಾತ್ರಿ 10:30 ಗಂಟೆಗೆ ಗೋಕರ್ಣ ಕ್ಷೇತ್ರಕ್ಕೆ ಪ್ರವಾಸದ ಬಗ್ಗೆ KA-13-A-8294 ನಂಬ್ರದ ಬಾಡಿಗೆ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ಹೊರಟು ಈ ದಿನ ದಿನಾಂಕ 07-04-2023 ರಂದು ಮುಂಜಾನೆ 04:00 ಗಂಟೆಗೆ ರಾ.ಹೆ.66 ರಲ್ಲಿ ಪಣಂಬೂರು-KIOCL ಜಂಕ್ಷನಿನಿಂದ ಸ್ವಲ್ಪ ಮುಂದಕ್ಕೆ NMPA ಟವರ್ ಸಮೀಪ ತಲುಪುತ್ತಿದ್ದಂತೆ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ ವಾಹನದ ಚಾಲಕ ನರಸಿಂಹ ಸ್ವಾಮಿಯವರು ತನ್ನ ವಾಹನವನ್ನು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಹೋಗಿ ರಾ.ಹೆ.66 ನೇ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ  KA-04-AC-1369 ನಂಬ್ರದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ್ದು,ಇದರ ಪರಿಣಾಮ ಟೆಂಪೋ ಟ್ರಾವೆಲ್ಲರ್ ವಾಹನದ ಚಾಲಕರ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಪಿರ್ಯಾದಿದಾರರ ಎಡಕಣ್ಣಿನ ಹುಬ್ಬಿನ ಮೇಲೆ ತೂತಾದ ರೀತಿಯ ರಕ್ತಗಾಯವಾಗಿದ್ದು ಅಲ್ಲದೇ ಪಿರ್ಯಾದಿದಾರರ ಸ್ನೇಹಿತೆಯರಾದ ಕು|| ನವ್ಯಶ್ರೀ(20) ಎಂಬಾಕೆಯ ಕೆಳ ತುಟಿಗೆ ರಕ್ತಗಾಯ, ಕು|| ಸರಳ(22) ಎಂಬಾಕೆಗೆ ಎಡಕಾಲಿನ ಪಾದದ ಬಳಿ ಗುದ್ದಿದ ಗಾಯ ಮತ್ತು ವಾಹನ ಚಾಲಕ ನರಸಿಂಹ ಸ್ವಾಮಿಯವರ ಎಡಕೈಗೆ ತರಚಿದ ರೀತಿಯ ಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆ ಬಗ್ಗೆ A J ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಅಪಘಾತದಿಂದ ಟೆಂಪೋ ಟ್ರಾವೆಲ್ಲರ್ ವಾಹನದ ಮುಂಭಾಗ ಸಂಪೂರ್ಣ ಹಾನಿಯಾಗಿರುತ್ತದೆ ಎಂಬಿತ್ಯಾದಿ.

Traffic North Police Station        

ಪಿರ್ಯಾದಿ Shrinivasa ದಿನಾಂಕ :07-04-2023 ರಂದು MRPL ನಲ್ಲಿ ಸೆಕ್ಯೂರಿಟಿ ಕೆಲಸ ಮುಗಿಸಿ ತನ್ನ ಬಾಬ್ತು KA-17-EW-6867 ನಂಬ್ರದ ಮೋಟಾರು ಸೈಕಲಿನಲ್ಲಿ ಸುರತ್ಕಲ್ –ಗೋವಿಂದಾಸ್ ಜಂಕ್ಷನ್ ಗೆ ಬಂದು ವಾಪಸು ಸುರತ್ಕಲ್ ಚರ್ಚ್ ರಸ್ತೆಯ ಮುಖೇನ ಒಳರಸ್ತೆಯಲ್ಲಿ  ಹೋಗುತ್ತಾ ಸಮಯ ಸುಮಾರು 12:45 ಗಂಟೆಗೆ MRPL-ಸುರತ್ಕಲ್ ಜಂಕ್ಷನ್ ಕಡೆಗೆ ಹಾದು ಹೋಗುವ S.K MOBILE ಅಂಗಡಿ ಜಂಕ್ಷನ್ ತಲುಪಿ ತೆರದ ಡಿವೈಡರ್ ಬಳಿ ಬೈಕಿನಲ್ಲಿ ರಸ್ತೆ ದಾಟುತ್ತಿದ್ದಂತೆ MRPL ಕಡೆಯಿಂದ ಸುರತ್ಕಲ್ ಜಂಕ್ಷನ್ ಕಡೆಗೆ KA-19-AC-3156 ನೇ ನಂಬ್ರದ ಆಟೋರಿಕ್ಷವನ್ನು ಅದರ ಚಾಲಕ ಶೇಕಬ್ಬ ಹಸನ್ ಸಾಹೇಬ್ ಎಂಬಾತನು ವೇಗವಾಗಿ ಚಲಾಯಿಸಿಕೊಂಡು ಪಿರ್ಯಾದಿದಾರರ ಬೈಕಿನ ಬಲಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಬೈಕ್  ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದ ಪರಿಣಾಮ ಬಲಗಾಲಿನ ಮೊಣಗಂಟಿನಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಅಲ್ಲದೇ ಬಲಗಾಲಿನ ಕೋಲು ಕಾಲಿಗೆ ತರಚಿದ ಗಾಯ ಆಗಿದ್ದು ಚಿಕಿತ್ಸೆ ಬಗ್ಗೆ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic North Police Station

ಪಿರ್ಯಾದಿ Manjunatha B Gaganada ತಂದೆಯಾದ ಭೀಮಪ್ಪ ದ್ಯಾಮಪ್ಪ ಗಗನದ (59 ವರ್ಷ) ರವರು ದಿನಾಂಕ: 01-04-2023 ರಂದು ದೇರೆಬೈಲು ಕೋಂಚಾಡಿಯ ಶ್ರೇಯಾ ಪ್ರಿಂಟರ್ಸ್ ಗೋಡನ್ ನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸಂಜೆ ವೇಳೆಗೆ ಹೋಗಿದ್ದವರು ಸಂಜೆ ಸಮಯ ಸುಮಾರು 7:15 ಘಂಟೆಗೆ ಗೋಡಾನಿನಿಂದ ಅಂಗಡಿಗೆ ಸಾಮಾನು ತರಲು ಹೊರಟು ಕುಂಟಿಕಾನ- ಕಾವೂರು ರಸ್ತೆಯನ್ನು ದಾಟುತ್ತಿರುವಾಗ ಕುಂಟಿಕಾನ ಕಡೆಯಿಂದ ಮೋಟಾರ್ ಸೈಕಲ್ ಒಂದನ್ನು ಅದರ ಸವಾರನು ದುಡುಕುತನ & ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಂದೆಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ತಂದೆ ಭೀಮಪ್ಪ ದ್ಯಾಮಪ್ಪ ಗಗನದ ರವರಿಗೆ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ತಲೆಯ ಹಿಂಭಾಗಕ್ಕೆ ಗುದ್ದಿದ ರೀತಿಯ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಸ್ಥಳದಲ್ಲಿ ಮೋಟಾರ್ ಸೈಕಲನ್ನು ನಿಲ್ಲಿಸದೇ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡದೇ  ಸ್ಥಳದಿಂದ ಪರಾರಿಯಾಗಿರುತ್ತಾನೆ ಹಾಗೂ ಮೋಟಾರ್ ಸೈಕಲ್ ನೋಂದಣಿ ನಂಬ್ರ ತಿಳಿದು ಬಂದಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

Traffic South Police Station

ದಿನಾಂಕ:05-04-2023 ರಂದು ಪಿರ್ಯಾದಿ ಮನ್ಸೂರ್ ಹುಸೇನ್ (57 ವರ್ಷ) ರವರು ಅವರ ಬಾಬ್ತು ಕಾರು ನಂಬ್ರ: KA-19-MF-8318 ನೇದನ್ನು ಚಲಾಯಿಸಿಕೊಂಡು ಅವರ ಪತ್ನಿ ನಜುಮುನ್ನಿಸಾ ಮತ್ತು ಮಗಳು ಕತಿಜಾ ನಾಸಿಹಳನ್ನು ಸಹ ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ದೇರಳಕಟ್ಟೆ ಕಡೆಯಿಂದ ನಾಟೇಕಲ್ ಕಡೆಗೆ ಹೋಗುವ ರಸ್ತೆ ಮಧ್ಯೆ ಕಣಚೂರು ಆಸ್ಪತ್ರೆಯ ಎದುರು ರಸ್ತೆಯ ಎಡಬದಿಯಲ್ಲಿ  ಕಚ್ಚಾ ಮಣ್ಣು ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಹಣ್ಣಿನ ಅಂಗಡಿಯೊಂದರಿಂದ ಹಣ್ಣು ತೆಗೆದುಕೊಳ್ಳುತ್ತಿರುವ ಸಮಯ ದೇರಳಕಟ್ಟೆ ಕಡೆಯಿಂದ ಬರುತ್ತಿದ್ದ KA-19-MG-4667 ನಂಬ್ರದ ಇನೋವಾ ಕಾರನ್ನು ಅದರ ಚಾಲಕ ಅಬ್ದುನ್ ನಾಸೀರ್ ರವರು ಸಮಯ ಸುಮಾರು ಮದ್ಯಾಹ್ನ 2-30 ಗಂಟೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಬದಿಯಲ್ಲಿ ನಿಲ್ಲಿಸಿದ ಪಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ಕಾರು ಮಂದಕ್ಕೆ ಜಾರಿ ರಸ್ತೆಯ ಸೂಚನಾ ಫಲಕದ ಕಂಬಕ್ಕೆ ಮತ್ತು ಹಣ್ಣಿನ ಅಂಗಡಿಯ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ರಸ್ತೆ ಬದಿಯಲ್ಲಿ ನಿಂತಿದ್ದ KA-26-B-3225 ಲಾರಿಯ ಹಿಂಬದಿಗೆ ಪಿರ್ಯಾದಿದಾರರ ಕಾರು ಡಿಕ್ಕಿ ಹೊಡೆದ ಪರಿಣಾಮ ಅಲ್ಲಿಯೇ ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಮತ್ತು ಕಾರಿನೊಳಗಿದ್ದ ಅವರ ಹೆಂಡತಿಯಾದ ನಜುಮುನ್ನಿಸಾ ಹಾಗೂ ಮಗಳು ಕತಿಜಾ ನಾಸಿಹಳಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಹಾಗೂ ಪಿರ್ಯಾದಿದಾರರ ಕಾರಿನ ಹಿಂಭಾಗವು ಸಂಫೂರ್ಣ ಜಖಂಗೊಂಡಿದ್ದು ,ಕಾರಿನ ಮುಂಭಾಗದ ಟಾಫ್ ಹಾಗೂ ಎಡಭಾಗ ,ಬಲಭಾಗದ ಹಿಂಬದಿ ಸಂಪೂರ್ಣವಾಗಿ ಜಖಂಗೊಂಡಿರುತ್ತದೆ ಹಾಗೂ ಅಪಘಾತ ಪಡಿಸಿದ ಇನ್ನೋವಾ ಕಾರಿನ ಚಾಲಕರಾದ ಅಬ್ದುನ್ ನಾಸೀರ್ ರವರು ಅಪಘಾತದ ಸಮಯ ಖರ್ಚು ವೆಚ್ಚ ನೀಡುವುದಾಗಿ ತಿಳಿಸಿದ್ದು ಈಗ ಖರ್ಚು ವೆಚ್ಚ ನೀಡಲು ನಿರಾಕರಿಸಿರುವುದ್ದರಿಂದ ಪಿರ್ಯಾದಿದಾರರು ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡಿರುತ್ತಾರೆ ಎಂಬಿತ್ಯಾದಿ.

Mangalore North PS

ದಿನಾಂಕ26-03-2023 ರಂದು ಪಿರ್ಯಾದಿ ಶ್ರೀಮತಿ ಆತೀಕಾ ಎಂಬವರಿಗೆ   ತೊಕ್ಕೊಟ್ಟು ರೈಲ್ವೈ ಟ್ರಾಕ್ ಬಳಿ ಪರಿಚಯವಾದ ಸುಮಾರು 50 ವರ್ಷ ಪ್ರಾಯದ ಅಪರಿಚಿತ ಗಂಡಸು ಪಿರ್ಯಾದುದಾರರನ್ನು ಪರಿಚಯಿಸಿ,ತನ್ನ ಹೆಸರು ರಶೀದ್ ಎಂದು ಹೇಳಿ  ಪಿರ್ಯಾದುದಾರರೊಂದಿಗೆ ಅವರ ಬಾಡಿಗೆ  ಮನೆಗೆ ಹೋಗಿ ಪಿರ್ಯಾದುದಾರರಲ್ಲಿ  ಮಾತನಾಡುತ್ತಾ ನೀವು ಇಷ್ಟು ಬಾಡಿಗೆ ಕೊಟ್ಟು ಈ ಮನೆಯಲ್ಲಿ ಇರುತ್ತೀರಾ, ನೀವು ಬೇರೆಮನೆ ಮಾಡಲು ನಾನು ವ್ಯವಸ್ಥೆ ಮಾಡುತ್ತೇನೆ, ನೀನು ನಾಳೆ ದಿನ ಬಂದರ್ ಮಸೀದಿಯಲ್ಲಿ ನನಗೆ ಸಿಗಬೇಕು  ಎಂದು ಹೇಳಿ ಆ ಗಂಡಸು 8891247313, ಮತ್ತು 9447945994 ಎರಡು ಮೊಬೈಲ್ ನಂಬ್ರವನ್ನು ಪಿರ್ಯಾದುದಾರರಿಗೆ  ಕೊಟ್ಟು ಪಿರ್ಯಾದುದಾರರನ್ನು . ದಿನಾಂಕ 27-03-2023 ರಂದು ಮನೆಯಲ್ಲಿರುವ ಸಮಯ ಬೆಳಿಗ್ಗೆ 8891247313 ರಿಂದ ನನಗೆ ಕರೆಮಾಡಿ ಬೇಗ ಬಾ ಎಂದು ತಿಳಿಸಿದಂತೆ ಪಿರ್ಯಾದುದಾರರು ಬಂದರ್ ಮಸೀದಿಗೆ ಬಂದಾಗ ಅಪರಿಚಿತ ಗಂಡಸು ಪಿರ್ಯಾದುದಾರರನ್ನು ಮದ್ಯಾಹ್ನ 1.45 ಗಂಟೆಗೆ ಮಂಗಳೂರು ನಗರದ ಪಳ್ನೀರ್  ರಸ್ತೆಯ ಬ್ಲೂಸ್ಟಾರ್ ಹೋಟೇಲಿನ ಮೂರನೇ ಮಹಡಿಯಲ್ಲಿದ್ದ ರೂಮಿಗೆ ಕರೆದುಕೊಂಡು ಹೋಗಿ ಪಿರ್ಯಾದುದಾರರಲ್ಲಿ ಮಾತನಾಡುತ್ತಾ ಈಗ ಶೇಖ್ ನ ಹೆಂಡತಿ ಬರುತ್ತಾರೆ ನಿಮ್ಮ ಮೈಮೇಲಿದ್ದ ಚಿನ್ನಾಭರಣ ವನ್ನು ನನ್ಲಲ್ಲಿ ಕೊಡಿ ಶೇಖ್ ಗೆ ಗೊತ್ತಾಗದಂತೆ ಇಟ್ಟುಕೊಳ್ಳುತ್ತೇನೆ. ಈ ಚಿನ್ನಾಭರಣವನ್ನು ಶೇಖ್ ನ ಹೆಂಡತಿ  ನೋಡಿದರೆ ನಿಮಗೆ ಸಹಾಯ ಮಾಡುವುದಿಲ್ಲ ಎಂದು ಹೇಳಿದಾಗ ಆ ಅಪರಿಚಿತ ಗಂಡಸು ರಶೀದ್  ಮಾತನ್ನು ನಂಬಿ  ಪಿರ್ಯಾದುದಾರರು.ತನ್ನ ಮೈಮೇಲಿದ್ದ ಸುಮಾರು 10 ಗ್ರಾಂ ತೂಕದ  ಕಿವಿಯೋಲೆ, 4 ಗ್ರಾಂ ತೂಕದ  ಉಂಗುರ,2.5 ತೂಕದ ಒಂದು ಬಳೆ  ಇತ್ಯಾದಿಯನ್ನು ಅಪರಿಚಿತ ಗಂಡಸು ತೆಗೆದುಕೊಂಡು  ನಂತ್ರ ಅದೇ ದಿನ ದಿನಾಂಕ 27-03-2023 ರಂದು  ಸಂಜೆ ಸುಮಾರು 4.30 ಗಂಟೆಗೆ  ಅಪರಿಚಿತ ಗಂಡಸು ರಶೀದ್ ಎಂಬ ವ್ಯಕ್ತಿ  ಪಳ್ನೀರ್  ಮೋತಿ ಮಹಲ್  ಹೋಟೇಲ್ ಗೆ ಕರೆದುಕೊಂಡು ಹೋಗಿ ಅಲ್ಲಿ ಶೇಖ್ ಮತ್ತು ಶೇಖ್ ನ ಹೆಂಡತಿ ಇದ್ದಾರೆ ಎಂದು ಹೇಳಿ  ಪಿರ್ಯಾದುದಾರರನ್ನು ಮೋತಿ ಮಹಲ್ ಹೋಟೇಲ್ ಗೆ  ಕರೆದುಕೊಂಡು ಹೋಗಿ ಕುಳ್ಳಿರಿಸಿ ನಂತರ ಅಪರಿಚಿತ ಗಂಡಸು ಶೇಖ್ ನ ಹೆಂಡತಿಯನ್ನು ಕರೆದುಕೊಂಡು ಬರುವುದಾಗಿ  ಹೇಳಿ ನೆಪವೊಡ್ಡಿ  ಹೊರಗಡೆ ಹೋಗಿದ್ದ  ಅಪರಿಚಿತ ಗಂಡಸು ರಶೀದ್ ಎಂಬಾತನು ಮೋತಿ ಮಹಲ್ ಹೋಟೇಲ್ ಗೆ ಬಾರದೇ  ನನ್ನ ಮೈಮೇಲಿದ್ದ  2,00,000/ ರೂ ಮೌಲ್ಯದ ಸುಮಾರು 27 ಗ್ರಾಂ ತೂಕದ ಚಿನ್ನಾಭರಣವನ್ನು ಪಿರ್ಯಾದುದಾರರಿಗೆ ವಾಪಾಸು ಕೊಡದೇ ನಿಮಗೆ ಬೇರೆ ಮನೆ ಮಾಡಲು ವ್ಯವಸ್ಥೆ ಮಾಡುತ್ತೇನೆಂದು ನಂಬಿಸಿ  ನಂಬಿಕೆ ದ್ರೋಹ  ಹಾಗೂ ಮೋಸ ಮಾಡಿರುತ್ತಾರೆ ಎಂಬಿತ್ಯಾದಿಯಾಗಿ ಸಾರಾಂಶ

Konaje PS     

ಪಿರ್ಯಾದಿ Smt Archana Marry ಗಂಡ ಪ್ರವೀಣ್ ಕ್ರಾಸ್ತ(38) ಎಂಬವರು ದಿನಾಂಕ 20.03.2023 ರಂದು ಸಂಜೆ ಸುಮಾರು 7.30 ಗಂಟೆಗೆ ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ಸಿದ್ಧಿ ವೀವು ಪ್ಲಾಟ್ ಎಂಬಲ್ಲಿ ಪಿರ್ಯಾದಿದಾರರೊಂದಿಗೆ ಮಾತಿಗೆ ಮಾತು ಬೆಳದು ಜಗಳ ಮಾಡಿಕೊಂಡು ಮನೆ ಬಿಟ್ಟು ಹೋದವರು ಈವರೆಗೆ ಮನೆಗೆ ಬಂದಿರುವುದಿಲ್ಲ. ಪಿರ್ಯಾದಿದಾರರು ಈ ಬಗ್ಗೆ ಸಂಬಂಧಿಕರಲ್ಲಿ, ನೆರೆಕೆರೆಯವರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿ, ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ಪ್ರವೀಣ್ ಕ್ರಾಸ್ತ(38) ರವರು ಈವರೆಗೆ ಪತ್ತೆಯಾಗಿರುವುದಿಲ್ಲ.  ಪ್ರವೀಣ್ ಕ್ರಾಸ್ತ(38) ರವರು ಈ ಮೊದಲು ಜಗಳವಾದಾಗ ಮನೆ ಬಿಟ್ಟು ಹೋದವರು ಸ್ವಲ್ಪ ಹೊತ್ತಿನಲ್ಲಿ ಮನೆಗೆ ಬರುತ್ತಿದ್ದರು. ಅದೇ ರೀತಿ ಈಗಲೂ ಸಹಾ ಬರಬಹುದೆಂದು ತಿಳಿದು ಪಿರ್ಯಾದಿದಾರರು ಈವರೆಗೆ ದೂರು ನೀಡಿರುವುದಿಲ್ಲ. ಪಿರ್ಯಾದಿದಾರರು ತನ್ನ ಗಂಡ ಕಾಣೆಯಾದ ಬಗ್ಗೆ ಸಂಬಂಧಿಕರಲ್ಲಿ ಚರ್ಚಿಸಿ, ಠಾಣೆಗೆ ಬಂದು ಕಾಣೆಯಾದ ಪ್ರವೀಣ್ ಕ್ರಾಸ್ತ(38)ರವರನ್ನು ಹುಡುಕಿಕೊಡಬೇಕಾಗಿ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

                                                            

 

 

 

 

 

 

 

06-04-2023

Mangalore West Traffic PS     

ಪಿರ್ಯಾದಿ Umesh Rathod ಸಂಚಾರ ಪಶ್ಚಿಮ ಪೊಲೀಸ್ ಠಾಣೆ ಪಿಸಿ  ಉಮೇಶ್ ರಾಠೋಡ್ ರವರು ದಿನಾಂಕ:06-04-2023 ರಂದು ಕೆ.ಬಿ ಕಟ್ಟೆಯ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವ ಸಮಯ ಸುಮಾರು ಬೆಳಿಗ್ಗೆ 9-47 ಗಂಟೆಗೆ ಕೆ.ಬಿ ಕಟ್ಟೆ ಜಂಕ್ಷನ್ ಬಳಿ ಸಾರ್ವಜನಿಕ ಕಾಂಕ್ರೀಟ್ ರಸ್ತೆಯ ಮಧ್ಯದಲ್ಲಿ ಕೆಎ-19-ಡಿ-4824  ನೇ ನಂಬ್ರದ ಬಸ್ಸನ್ನು ಸಾರ್ವಜನಿಕ ರಸ್ತೆಯಲ್ಲಿ ಸಂಚಾರ ಸುವ್ಯವಸ್ಥೆಗೆ ಆಡಚಣೆಯಾಗುವಂತೆ ಅಪಾಯಕಾರಿಯಾದ ರೀತಿಯಲ್ಲಿ ನಿಲ್ಲಿಸಿ ಜನರನ್ನು ಹತ್ತಿಸಿ ಇತರ ವಾಹನ  ಸಂಚಾರಕ್ಕೆ ಅಡ್ಡಿಯುಂಟಾಗುವಂತೆ ಅಪಾಯಕಾರಿಯಾಗಿ  ಬಸ್ಸನ್ನು ನಿಲ್ಲಿಸಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಆಡಚಣೆಯುಂಟು ಮಾಡಿದ್ದು ಈ ಬಗ್ಗೆ ಚಾಲಕರ ವಿರುದ್ದ ಸೂಕ್ತ ಕಾನೂನು ಕ್ರಮದ ಕೈಗೊಳ್ಳುವಂತೆ ವರದಿ ನಿವೇದನೆ.

Mangalore East Traffic PS          

ಪಿರ್ಯಾದಿ THIPPESWAMY ದಿನಾಂಕ: 06/04/2023 ರಂದು ಪಿ.ಸಿ 756 ಶರತ್ ಕುಮಾರ್, ಪಿ.ಸಿ 851 ಮಹೇಶ್, ಪಿಸಿ 996 ವಿಠ್ಠಲ್ ರವರೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್ ನಿಂದ ಅರವಿಂದ ಜಂಕ್ಷನ್ ವರೆಗೆ 2ನೇ ಪಾಳಿಯಲ್ಲಿ ಮೂವಿಂಗ್  ಕರ್ತವ್ಯದಲ್ಲಿದ್ದ ಸಮಯ  ಬೆಳಿಗ್ಗೆ ಸುಮಾರು 11.30 ಗಂಟೆಗೆ ಅರವಿಂದ ಜಂಕ್ಷನ್ ಹತ್ತಿರ ನೋ ಪಾರ್ಕಿಂಗ್ ಸ್ಥಳದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಹಾಗೂ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುವ ರೀತಿಯಲ್ಲಿ KA-19-HD-8339 ನೊಂದಣಿ ನಂಬ್ರದ ಮೋಟಾರ್ ಸೈಕಲನ್ನು  ನಿಲ್ಲಿಸಿದ್ದು, ಸದ್ರಿ ಮೋಟಾರ್ ಸೈಕಲಿನ  ಮುಂಭಾಗದಲ್ಲಿ ನಂಬರ್ ಪ್ಲೇಟ್ ಇದ್ದು, ಹಿಂಭಾಗದ ನಂಬರ್ ಪ್ಲೇಟನ್ನು ಯಾರಿಗೂ ಕಾಣದ ಹಾಗೇ ಮಡಿಚಿರುತ್ತಾರೆ.  ಅಲ್ಲದೇ ಮೋಟಾರ್ ಸೈಕಲಿಗೆ ಸೈಡ್ ಮಿರರ್ ಕೂಡ ಇರುವುದಿಲ್ಲ. ಆದ್ದರಿಂದ ಮೋಟಾರ್ ಸೈಕಲ್ ಸವಾರನ ವಿರುದ್ಧ  ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ.

Mangalore East Traffic PS

ಪಿರ್ಯಾದಿ ರಾಕೇಶ್ ರವರು ಈ ದಿನ ದಿನಾಂಕ: 06/04/2023 ರಂದು  ರೂಟ್ ನಂಬ್ರ 13B ನೊಂದಣಿ ಸಂಖ್ಯೆ: KA-19-C-3367 ನೇ ಖಾಸಗಿ ಬಸ್ಸಿನಲ್ಲಿ ಕಾವೂರಿನಿಂದ ಹಂಪನಕಟ್ಟೆ ಕಡೆಗೆ ಪ್ರಯಾಣಿಸಿಕೊಂಡು ಹೋಗುತ್ತಿರುವಾಗ ಸದ್ರಿ ಬಸ್ಸು ಮಧ್ಯಾಹ್ನ ಸಮಯ ಸುಮಾರು 2.30 ಗಂಟೆಗೆ ಬಲ್ಮಠ ಕಡೆಯಿಂದ ಹಂಪನಕಟ್ಟೆ ಕಡೆಗೆ ಇರುವ ಸಾರ್ವಜನಿಕ ರಸ್ತೆಯಲ್ಲಿನ ಹಂಪನಕಟ್ಟೆ ಜಂಕ್ಷನ್ ದಾಟುತ್ತಿದ್ದಂತೆ ಬಸ್ಸ ಚಾಲಕ ನವೀನ್ ಎಂಬಾತನು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆಯ ಡಿವೈಡರ್ ಕಡೆಯಿಂದ ಪುಟ್ ಪಾತ್ ಕಡೆಗೆ ನಡೆದುಕೊಂಡು ರಸ್ತೆದಾಟಲೆಂದು ಡಿವೈಡರ್ ನಿಂದ ರಸ್ತೆಗೆ ಇಳಿಯುತ್ತಿದ್ದ ಪಾದಾಚಾರಿ ಅಪರಿಚಿತ ವ್ಯಕ್ತಿ, (ಗಂಡಸು) ರವರಿಗೆ ಸದ್ರಿ ಬಸ್ಸಿನ ಬಲ ಮುಂಭಾಗದ ಬಂಪರ್ ಢಿಕ್ಕಿಯಾಗಿ ಪಾದಾಚಾರಿಯು ರಸ್ತೆಗೆ ಬಿದ್ದು ತಲೆಗೆ, ಹಾಗೂ ಹಣೆಗೆ ಗುದ್ದಿದ ರೀತಿಯ ಊದಿಕೊಂಡ ರಕ್ತಗಾಯವಾಗಿ ಗಾಯಾಳು ಅರೆಪ್ರಜ್ಞಾವಸ್ಥೆಯಲ್ಲಿದ್ದು ಪಿರ್ಯಾದಿದಾರರು ಸ್ಥಳದಲ್ಲಿದ್ದ ಸಾರ್ವಜನಿಕರೊಂದಿಗೆ ಉಪಚರಿಸಿ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ, ಎಂಬಿತ್ಯಾದಿ.

Mangalore Rural PS

ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪಿರ್ಯಾದಿ Francis Praveen Crasta ಕಾರ್ಯ ವ್ಯಾಪ್ತಿಗೆ ಒಳಪಡುವ ವಾಮಂಜೂರು ಪ್ರಗತಿ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಂ: A 3225 ರಂತೆ ಸದಸ್ಯತ್ವ ಹೊಂದಿದ್ದ ಆರೋಪಿ ಸುಧೀರ್ ರಾವ್ ರವರು ಸೊಸೈಟಿಗೆ ವಂಚನೆ ಮಾಡುವ ಉದ್ಧೇಶದಿಂದ ದಿನಾಂಕ: 16-04-2018 ರಂದು ISUZU D-MAX ವಾಹನವನ್ನು ಖರೀದಿಸಲು ಸಾಲ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ಸ್ವಸ್ತಿಕ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಉಡುಪಿ ಇವರ ಕೊಟೇಶನ್ ಮತ್ತು ಇತರ ದಾಖಲಾತಿಗಳನ್ನು ಸಲ್ಲಿಸಿದ್ದು, ಅವುಗಳನ್ನು ಪರಿಶೀಲಿಸಿ ದಿನಾಂಕ: 24-04-2018 ರಂದು ಆರೋಪಿಗೆ ರೂ: 6,70000-00 ಸಾಲ ಮಂಜೂರು ಮಾಡಿ ಆರೋಪಿ ತಿಳಿಸಿದ ಸ್ವಸ್ತಿಕ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಉಡುಪಿ ಇವರಿಗೆ ಕುಲಶೇಖರ ಶಾಖೆಯ ಐ.ಸಿ.ಐ.ಸಿ.ಐ ಬ್ಯಾಂಕ್ ಗೆ ಮಂಜೂರಾದ ಸಾಲದ ಮೊತ್ತವನ್ನು ಪಾವತಿಸಲಾಗಿದ್ದು, ತದನಂತರ ಆರೋಪಿಯು ದಿನಾಂಕ: 17-05-2018 ರಂದು ಮೊದಲನೇ ಸಾಲದ ಕಂತನ್ನು ಸೊಸೈಟಿಗೆ ಮರು ಪಾವತಿಸಿ ನಂತರದ ಸಾಲದ ಕಂತುಗಳನ್ನು ಪಾವತಿಸಿರುವುದಿಲ್ಲ. ಈ ಬಗ್ಗೆ ಸೊಸೈಟಿಯ ವತಿಯಿಂದ ಆಡಿಟ್ ಮಾಡಿದಾಗ ಆರೋಪಿಯು ಸ್ವಸ್ತಿಕ್ ಮೋಟಾರ್ಸ್ ನ ಕೊಟೇಶನನ್ನು ಸುಳ್ಳು ಸೃಷ್ಟನೆ ಮಾಡಿ ಅದೇ ಸಂಸ್ಥೆಯ ಹೆಸರಿನಲ್ಲಿ ಐ.ಸಿ.ಐ.ಸಿ.ಐ ಬ್ಯಾಂಕಿನಲ್ಲಿ ಖಾತೆ ತೆರೆದು ಮಂಜೂರಾಗಿದ್ದ ಸಾಲದ ಸಂಪೂರ್ಣ ಮೊತ್ತವನ್ನು ಸದ್ರಿ ಖಾತೆಯಿಂದ ಪಡೆದುಕೊಂಡು ಅಪ್ರಾಮಾಣಿಕವಾಗಿ ದುರ್ವಿನಿಯೋಗ ಮಾಡಿಕೊಂಡು ಪ್ರಗತಿ ಕೋ-ಆಪರೇಟಿವ್ ಸೊಸೈಟಿಗೆ ವಂಚನೆ ಮಾಡಿರುವುದು ಎಂಬಿತ್ಯಾದಿ.

Mangalore North PS

ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕ್ಲಾಸಿಕ್ ಪ್ಯಾರಡೈಸ್ ಅಪಾರ್ಟ್ ಮೆಂಟ್ ನ  ಮಾಲೀಕರ ಸಂಘದ ಯಾವುದೇ ಮಂಡಳಿಯ ಸಭೆಗೆ ಹಾಜರಾಗದ ಅಥವಾ ಭಾಗವಹಿಸದಿರುವ ಸದರಿ ಮಾಲೀಕರ ಸಂಘದ ಪ್ರಸ್ತುತ ಬೋರ್ಡ್ ಆಫ್ ಮ್ಯಾನೇಜರ್ ಗಳಾದ (1) ಶ್ರೀ ಅನಂತ ಪ್ರಸಾದ್ ( ಪ್ಲ್ಯಾಟ್ ನಂಬ್ರ 410) (2) ಶ್ರೀ ಆತ್ಮ ಚರಣ್ (ಪ್ಲ್ಯಾಟ್ ನಂಬ್ರ 004) ಮತ್ತು (3) ಶ್ರೀಮತಿ ಅನಿತಾ  ಮುರಳೀಧರನ್ (ಪ್ಲ್ಯಾಟ್ ನಂಬ್ರ 501) ಇವರು ಅಪಾರ್ಟ್ ಮೆಂಟ್ ಗೆ ಸಂಬಂಧಿಸಿದ  ಈಜುಕೊಳ ನವೀಕರಣ, ಕಂಪೌಂಡ್ ಪುನರ್ ನಿರ್ಮಾಣ , ಇಂಟರ್ ಲಾಕ್ ಅಳವಡಿಕೆ , ಕಬ್ಬಿಣದ ಗ್ರಿಲ್ ಅಳವಡಿಕೆ , ತೋಟಗಾರಿಕೆ, ಕುರ್ಚಿಗಳ ಖರೀದಿ  ಮತ್ತು ಭದ್ರತಾ ಶುಲ್ಕಗಳನ್ನು ಯಾವುದೇ ಅನುಮೋದನೆಯಿಲ್ಲದೇ ಕ್ಲಾಸಿಕ್ ಅಪಾರ್ಟ್ ಮೆಂಟ್ ನ ಉಪ-ಕಾನೂನಿಗೆ ವಿರುದ್ದವಾಗಿ ಪುಸ್ತಕದಲ್ಲಿ ನಮೂದಿಸದೇ ತಮ್ಮ ಇಚ್ಚೆಯಂತೆ ಮಂಡಳಿ/ಕಾರ್ಯಕಾರಿ ಸಮಿತಿಯಲ್ಲಿ ಪೂರ್ವಾನುಮತಿ ಪಡೆಯದೇ, ತುಲನಾತ್ಮಕದರಗಳನ್ನು ಅನುಮೋದಿಸದೇ,  ಸದರಿ ಸಂಘದ 7 ಜನ ಬೋರ್ಡ್ ಆಫ್  ಮ್ಯಾನೇಜರ್ ಗಳ ಪೈಕಿ ದೂರುದಾರರಾದ ರಾಹುಲ್ ರಾವ್ ಮತ್ತು  ಶ್ರೀ ಕೆ.ಪಿ.ಎ. ಶುಕೂರ್ ( ಪ್ಲ್ಯಾಟ್ ನಂಬ್ರ 806), ಶ್ರೀ ಪ್ರದೀಪ್ ಜಯರಾಮ ನಾಯರ್ ( ಪ್ಲ್ಯಾಟ್ ನಂಬ್ರ: 608)  ಮತ್ತು ಶ್ರೀಮತಿ ವೀಣಾ ಪಣಿಕ್ಕರ್ ರವರ ಸಹಿಯನ್ನು ಪಡೆಯದೇ ಸಂಘದ ಮೊತ್ತವನ್ನು ಹೊಂದಿರುವ ಭಾರತ್  ಕೋ ಅಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್  ಇದರ  ಚೆಕ್ ನ್ನು ಹಲವಾರು ಲಕ್ಷಗಳಿಗೆ ಚಾಲನೆಯನ್ನು ಪಡೆದಿರುವ ಕೆಲಸ ಕಾರ್ಯಗಳಿಗೆ  ಉಪಯೋಗಿಸಿ  ಮೂವರು ವ್ಯಕ್ತಿಗಳು ಹಣವನ್ನು ದುರುಪಯೋಗ ಪಡಿಸಿದ್ದು, ಈ ಕುರಿತು ದೂರುದಾರರಾದ ರಾಹುಲ್ ರಾವ್ ಮತ್ತು  ಶ್ರೀ ಕೆ.ಪಿ.ಎ. ಶುಕೂರ್, ಶ್ರೀ ಪ್ರದೀಪ್ ಜಯರಾಮ ನಾಯರ್ ರವರುಗಳು  ದಿನಾಂಕ: 17-02-2023 ರಂದು ಸದರಿ ಅಪಾರ್ಟ್ ಮೆಂಟ್ ನ ಮ್ಯಾನೇಜರ್ ರವರಿಗೆ  ನಿರ್ವಹಿಸಿದ ಕಾಮಗಾರಿಗಳ ಹಾಗೂ ಕಳೆದ ಎರಡು ವರ್ಷಗಳಲ್ಲಿ ಮಾಡಿದ ಖರ್ಚು ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ ಗಳು, ವೆಚ್ಚಕ್ಕೆ  ಮಂಡಳಿಯ ಅನುಮೋದನೆ ಬಗ್ಗೆ ವಿವರಗಳನ್ನು ಕೇಳಿದ್ದು ನೀಡಿರುವುದಿಲ್ಲ. ಆದುದರಿಂದ ಕ್ಲಾಸಿಕ್ ಅಪಾರ್ಟ್ ಮೆಂಟ್ ಅಸೋಸಿಯಶನ್ ನ  ಹಣವನ್ನು ದುರುಪಯೋಗಪಡಿಸಿ  ಪ್ಲ್ಯಾಟ್ ನ ಸದಸ್ಯರ ಹಣವನ್ನು ವಂಚನೆ ಮಾಡಿದ ಬೋರ್ಡ್ ಆಫ್ ಮ್ಯಾನೇಜರ್ ಗಳಾದ (1) ಶ್ರೀ ಅನಂತ ಪ್ರಸಾದ್ (2) ಶ್ರೀ ಆತ್ಮ ಚರಣ್ (ಮತ್ತು (3) ಶ್ರೀಮತಿ ಅನಿತಾ  ಮುರಳೀಧರನ್  ರವರುಗಳ ವಿರುದ್ದ ಸೂಕ್ತ ಕಾನೂನು ಕ್ರಮದ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶ.

Konaje PS

ಪಿರ್ಯಾದಿ Sharath Kumar ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಎಂಬಲ್ಲಿ ಸಾಯಿ ಟ್ರೇಡರ್ಸ್ ಎಂಬ ಅಂಗಡಿಯನ್ನು ನಡೆಸುತ್ತಿದ್ದು ಪಿರ್ಯಾದಿದಾರರು ಎಂದಿನಂತೆ ನಿನ್ನೆ ದಿನ ಸಂಜೆ ಸುಮಾರು 5.30 ಗಂಟೆಗೆ ಅಂಗಡಿ ಮುಚ್ಚಿ ಶೆಟರಿಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 06.04.2023 ರ ಬೆಳಗ್ಗೆ ಸಮಯ ಸುಮಾರು 07.45 ಗಂಟೆಗೆ ಹಾಲು ತರಲೆಂದು ಮನೆಯಿಂದ ಮುಡಿಪು ಕಡೆಗೆ ಹೋಗುತ್ತಿರುವಾಗ ತಮ್ಮ ಅಂಗಡಿಯ ಕಡೆಗೆ ನೋಡಿದಾಗ ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮರಾ ಕೆಳಗೆ ಬಿದ್ದಿದ್ದು, ಶೆಟರ್ ನ ಬೀಗ ಇಲ್ಲದಿರುವುದನ್ನು ಕಂಡು ಪಿರ್ಯಾದಿದಾರರು ಹಾಗೂ ನಿಶಿತಾ ಭಂಡಾರಿ ಎಂಬವರೊಂದಿಗೆ ಅಂಗಡಿಯ ಒಳಗೆ ಹೋಗಿ ನೋಡಿದಾಗ ಅಂಗಡಿಯಲ್ಲಿ ಇಟ್ಟಿರುವ 3 ಗೋಣಿಚೀಲದಲ್ಲಿ ಇಟ್ಟಿದ್ದ ಸುಮಾರು 170 ಕೆಜಿ ಸಿಪ್ಪೆ ಸುಲಿದ ಅಡಿಕೆ, 1 ಗೋಣಿಚೀಲದಲ್ಲಿಟ್ಟ ಸುಮಾರು 25 ಕೆಜಿ ಕಾಳು ಮೆಣಸು, 1 ಗೋಣಿ ಚೀಲದಲ್ಲಿಟ್ಟ ಸುಮಾರು 25 ಕೆಜಿ ಸಿಪ್ಪೆ ಇರುವ ಅಡಿಕೆ ಹಾಗೂ ನಗದು ಹಣ 6000 ರೂಪಾಯಿಯನ್ನು ಯಾರೋ ಕಳ್ಳರು ಅಂಗಡಿಯ ಬೀಗವನ್ನು ಬಲತ್ಕಾರದಿಂದ ಮುರಿದು ಕಳವು ಮಾಡಿರುತ್ತಾರೆ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 86,000/- ಆಗಬಹುದು ಎಂಬಿತ್ಯಾದಿ.

Moodabidre PS

ದಿನಾಂಕ 06-04-2023 ರಂದು ಮುಂಜಾನೆ ಪಿರ್ಯಾದಿ Bhaskara ಬಾವ ದಿನೇಶ್ ರವರು KA-20-ED-6112 ನಂಬರಿನ ಮೋಟಾರು ಸೈಕಲಿನಲ್ಲಿ ತನ್ನ ಹೆಂಡತಿಯಾದ ಮಮತಾ ರವರನ್ನು ಸಹ  ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಅವರ ಮನೆಯಾದ ಈದುವಿನಿಂದ ಹೊರಟು ಮೂಡಬಿದ್ರೆಯಿಂದ ನಿಡ್ಡೋಡಿ ಕಟೀಲು ಮಾರ್ಗವಾಗಿ ಹೋಗುತ್ತಾ ಮುಂಜಾನೆ 4.45 ಗಂಟೆ ಸಮಯಕ್ಕೆ ಕಲ್ಲಕುಮೇರು ಬಳಿ ತಲುಪುತಿದ್ದಂತೆ ಮೋಟಾರು ಸೈಕಲನ್ನು ದಿನೇಶರವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರಿತಿಯಲ್ಲಿ ಚಲಾಯಿಸಿ ಹಂಪ್ ಬಳಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲಿನ ಹಿಂಬದಿಯಲ್ಲಿ ಕುಳಿತಿದ್ದ ಮಮತಾರವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟು ತಲೆಯ ಹಿಂಬದಿಗೆ ಗಂಭೀರ ರೀತಿಯ ಗಾಯವಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದವರನ್ನು ಚಿಕಿತ್ಸೆಗಾಗಿ ಕಟೀಲು ಶ್ರೀ ದುರ್ಗಾ ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 6.20 ಗಂಟೆಗೆ ಮೃತ ಪಟ್ಟಿರುವುದಾಗಿದೆ ಎಂಬಿತ್ಯಾದಿ.

 

05-04-2023

CEN Crime PS Mangaluru City

ಪ್ರಕರಣದ 2ನೇ ಆರೋಪಿ ಸುಶಾಂತ್ ಎಂಬಾತನು 2020ನೇ ಇಸವಿಯಲ್ಲಿ ಬಾಡಿಗೆ ಮನೆ ಕೇಳಿಕೊಂಡು ಪಿರ್ಯಾದಿ ಮನೆಗೆ ಬಂದಿದ್ದವನಿಗೆ ಪಿರ್ಯಾದಿಯ ಮನೆ ಬಾಡಿಗೆಗೆ ಪಡೆದುಕೊಂಡು ಅದೇ ವರ್ಷ ಎಪ್ರಿಲ್ ತಿಂಗಳಲ್ಲಿ ಸುಶಾಂತ್ ಪ್ರೇಮಾಳನ್ನು ತನ್ನ ಸೋದರಿಯೆಂದು ಪಿರ್ಯಾದಿಗೆ ಪರಿಚಯಿಸಿ ನಂತರ ಇಬ್ಬರು ಜೊತೆಯಲ್ಲಿ ವಾಸವಾಗಿದ್ದರು. ಸ್ವಲ್ಪ ಸಮಯದ ನಂತರ ಪಿರ್ಯಾದಿಯ ಬಳಿ ಕಷ್ಟವಿದೆಯೆಂದು ಹೇಳುತ್ತಾ 1ನೇ ಆರೋಪಿ ಪ್ರೇಮಾಳು ಸಹಾಯಕ್ಕಾಗಿ ಕೋರಿಕೊಂಡಿರುತ್ತಾಳೆ.. ದಿನಾಂಕ:27/05/2020 ರಂದು ರಾತ್ರಿ 10:00 ಗಂಟೆಗೆ 1ನೇ ಆರೋಪಿ ಪ್ರೇಮಾ 3ನೇ ಆರೋಪಿ ಸಪ್ನಾಳ ಜೊತೆ ಪಿರ್ಯಾದಿಯ ಮನೆಗೆ ಬಂದು ಸಂಬಂದಿಕರ ಮದುವೆಗೆ ಹೋಗುವರೇ ಚಿನ್ನಾಭರಣ ನೀಡುವಂತೆ ಪಿರ್ಯಾದಿಯನ್ನು ಪುಸಲಾಯಿಸಿದಂತೆ ಪಿರ್ಯಾದಿ ತನ್ನಲ್ಲಿದ್ದ ಸುಮಾರು 449.569 ಗ್ರಾಂ ತೂಕ ವಿವಿದ ಮಾದರಿಯ ಚಿನ್ನಾಭರಣಗಳನ್ನು ನೀಡಿದ್ದನ್ನು 1ನೇ ಆರೋಪಿತೆ ಬಳಿಕ ಪಿರ್ಯಾದಿಗೆ ತಿಳಿಸಿದೆ ಬ್ಯಾಂಕಿಗೆ ಅಡಮಾನ ಇರಿಸಿ ತನ್ನ ಅಕ್ಕ ಪ್ರಮೀಳಾಳ ಚಿಕಿತ್ಸೆಗಾಗಿ ಬ್ಯಾಂಕಿನಲ್ಲಿ ಚಿನ್ನಾಭರಣವನ್ನು ಅಡಮಾನ ಇರಿಸಿರುವುದಾಗಿ ಪಿರ್ಯಾದಿ ಬಳಿ ಹೇಳಿ ನಂಬಿಸಿದ್ದು, ಬಳಿಕ ಪಿರ್ಯಾದಿ ಚಿನ್ನಾಭರಣ ಕೇಳಲು ಆತ್ಮಹತ್ಯ ಮಾಡುವುದಾಗಿ ಬೆಧರಿಸಿದಂತೆ ಸುಮ್ಮನ್ನಿದ್ದರು. ಬಳಿಕ ದಿನಾಂಕ:11/12/2020 ರಂದು ರಾತ್ರಿ 11:00 ಗಂಟೆಗೆ ಪುನಃ 1 ಮತ್ತು 3ನೇ ಆರೋಪಿತರು ಪಿರ್ಯಾದಿಯ ಮನೆಗೆ ಬಂದು ಅಡಮಾನ ಇಟ್ಟ ಚಿನ್ನಾಭರಣವನ್ನು ಬಿಡಿಸಲು ಹಣವಿಲ್ಲ ನಾವು ಆತ್ಮಹತ್ಯ ಮಾಡುವ ಪರಿಸ್ಥಿತಿಯಲ್ಲಿದ್ದೇವೆ ಸಹಾಯ ಮಾಡಿ ಎಂದಾಗ ಸ್ಥಳಕ್ಕೆ ಬಂದ 2ನೇ ಆರೋಪಿ ತಾನು ಬಂಗಾರದ ಬಗ್ಗೆ ಜವಾಬ್ದಾರನಾಗಿರುತ್ತೇನೆಂದು ಪಿರ್ಯಾದಿಯನ್ನು ಪುಸಲಾಯಿಸಿಕೊಂಡು ಸುಮಾರು 426.467 ಗ್ರಾಂ ತೂಕದ ವಿವಿದ ಮಾದರಿಯ ಚಿನ್ನಾಭರಣಗಳನ್ನು ಪಡೆದುಕೊಂಡು ಚಿನ್ನಾಭರಣವನ್ನು ವಿವಿದ ಬ್ಯಾಂಕ್, ಸೊಸೈಟಿಯಲ್ಲಿ ಅಡಮಾನ ಇಟ್ಟಿರುತ್ತಾರೆ. ಅದಲ್ಲದೆ ದಿನಾಂಕ:16/08/2022 ರಂದು ರೂ.30,092/-, ದಿನಾಂಕ:10/05/2022 ರಂದು ರೂ.90,000/- ಮತ್ತು 30,000/- ಒಟ್ಟು ರೂ.3,14,092/- ಹಣವನ್ನು ಕೂಡ ಆರೋಪಿತರಿಗೆ ಪಿರ್ಯಾದಿ ನೀಡಿದ್ದು ನಂತರ ಆರೋಪಿತರಲ್ಲಿ ಪಿರ್ಯಾದಿ ಚಿನ್ನಾಭರಣವನ್ನು ಮತ್ತು ಹಣವನ್ನು ಕೇಳಲು ಪಿರ್ಯಾದಿಗೆ ಆರೋಪಿತರು ಜೀವ ಬೆಧರಿಕೆ ನೀಡಿ ಚಿನ್ನಾಭರಣ ಮತ್ತು ಹಣವನ್ನು ವಾಪಸು ನೀಡದೆ ನಂಬಿಸಿ ವಂಚಿಸಿರುವುದಾಗಿ.     

Urva PS

ಪಿರ್ಯಾದಿ ಗಿರೀಶ್ ಡಿ ಶೇಟ್ ರವರ ಹೆಂಡತಿಯ  ತಂಗಿ ದೀಕ್ಷಾ @ ರಿಯಾ ಪ್ರಾಯ 19 ವರ್ಷ ಎಂಬಾಕೆಯು ಸುಮಾರು 6 ವರ್ಷಗಳಿಂದ ಪಿರ್ಯಾದಿದಾರರ ಮನೆಯಲ್ಲಿ  ವಾಸವಿದ್ದು ಉರ್ವಾ ಮಾರ್ಕೆಟ್ ಬಳಿಯಿರುವ ಪ್ಯಾಷನ್ ಡಿಸೈನ್ ಸಂಸ್ಥೆಯಲ್ಲಿ ಸುಮಾರು ಒಂದುವರೆ ತಿಂಗಳಿನಿಂದ  ವಿದ್ಯಾಬ್ಯಾಸ ಮಾಡುತ್ತಿದ್ದು, ದಿನಾಂಕ:04-04-2023 ರಂದು ಪ್ಯಾಷನ್ ಡಿಸೈನ್ ಶಾಲೆಗೆ ಹೋಗದೇ ಮನೆಯಲ್ಲಿಯೇ ಇದ್ದವಳು ಸಂಜೆ ಸುಮಾರು 5-00 ಗಂಟೆಗೆ ಅಶೋಕನಗರ ಬಸ್ ಸ್ಟಾಪ್ ಬಳಿ ಹೋಗಿ ಪಾನಿ ಪೂರಿ ತಿಂದು ಬರುತ್ತೇನೆ ಎಂದು ಹೇಳಿ ಹೋದವಳು ರಾತ್ರಿಯಾದರು ಮನೆಗೆ ವಾಪಸ್ಸು ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಪಿರ್ಯಾದಿದಾರರು ಅಶೋಕನಗರ. ಉರ್ವಾಮಾರ್ಕೆಟ್ ಉರ್ವಾ ಸ್ಟೋರ್ ಮುಂತಾದ ಕಡೆಗಳಲ್ಲಿ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ಸಂಬಂದಿಕರಲ್ಲಿ  ಮಾಹಿತಿ ತಿಳಿಸಿ ಹಡುಕಾಡಿದರೂ ಈವರೆಗೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ದೀಕ್ಷಾ @ ರಿಯಾ  ಎಂಬಾಕೆಯನ್ನು ಪತ್ತೆ ಮಾಡಿ ಕೊಡಬೇಕಾಗಿ ಈ ಮೂಲಕ ಕೋರಿಕೆ ಎಂಬಿತ್ಯಾದಿ.

(ಕಾಣೆಯಾದವರ ವಿವರ-  ಹೆಸರು:ದೀಕ್ಷಾ @ ರಿಯಾ ಪ್ರಾಯ:19 ವರ್ಷ ಎತ್ತರ: 5 .1 ಅಡಿ, ಚಹರೆ: ದುಂಡು ಮುಖ, ಗೋದಿ ಮೈಬಣ್ಣ. ಕಪ್ಪು  ಕೂದಲು, ಬಲಗೈಯಲ್ಲಿ ರಿಯಾ ಎಂದು ಇಂಗ್ಷೀಷ್ ನಲ್ಲಿ ಬರೆದ ಟ್ಯಾಟು, ಧರಿಸಿದ ಬಟ್ಟೆ: ಹಳದಿ ನೀಲಿ ಮಿಶ್ರಿತ ಬಣ್ಣದ ಚೂಡಿದಾರ,  ಮಾತನಾಡುವ ಬಾಷೆ: ಹಿಂದಿ)

Urva PS

ಪಿರ್ಯಾದಿ ಅವಾದೇಶ್ ರಾಜ್ಬಾರ್, ರವಿ ಹಾಗೂ ಇತರರು ದಿನಾಂಕ:05-04-2023ರಂದು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಮಲರಾಯ ದೇವಸ್ಥಾನದ ರಸ್ತೆಯಲ್ಲಿರುವ  ಮಾರ್ಸ ಆಂಡ್ ವಿನಸ್ ಅಪಾರ್ಟಮೆಂಟ್ ಏಳನೆ ಮಹಡಿಯ ಹೋರ ಭಾಗದಲ್ಲಿ  ಪೆಂಟಿಂಗ್ ಕೆಲಸ ಮಾಡಿಕೊಂಡಿದ್ದು ಸಮಯ ಸುಮಾರು  ಬೆಳಿಗ್ಗೆ 11-30 ಗಂಟೆಗೆ ರವಿ ಎಂಬಾತನು ಕೆಲಸ ಮಾಡಿಕೊಂಡಿರುವಾಗ  ಆಯ ತಪ್ಪಿ ಕೆಳಗೆ ನೇಲಕ್ಕೆ  ಬಿದ್ದಿದ್ದು, ರವಿಯ ಮುಖ,ಕೈ,ಹಾಗೂ ಕಾಲುಗಳಿಗೆ ತೀವ್ರ ಸ್ವರೋಪದ ರಕ್ತ ಗಾಯ ಉಂಟಾಗಿ ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಘಟನೆಗೆ ರವಿಯು ಕೆಲಸ ಮಾಡುವಾಗ ಮುಂಜಾಗ್ರತೆ ಸಲಕರಣೆಗಳನ್ನು ನೀಡದೆ ನಿರ್ಲಕ್ಷತನ ವಹಿಸಿದ ಕಾಂಟ್ರಕ್ಟಾರ್ ಸನೀಶ್ ಕುಮಾರ ಹಾಗೂ ಸುಪರ್ ವೈಸರ್ ತ್ರೀವೇಣಿ ರವರು ಕಾರಣವಾಗಿರುತ್ತಾರೆ. ಎಂಬಿತ್ಯಾದಿ

Surathkal PS

ದಿ:05-04-2023 ರಂದು ಮದ್ಯಾಹ್ನ 2-00 ಗಂಟೆಗೆ ಸುರತ್ಕಲ್ ಠಾಣೆಯಯಲ್ಲಿದ್ದ  ಪಿರ್ಯಾದಿ ಪಿ. ಎಸ್. ಐ ಅರುಣ್ ಕುಮಾರ್ ಡಿ ಇವರಿಗೆ KA-19/ MG 0755  ನೇ ನೊಂದಣಿ ಸಂಖ್ಯೆಯ  ಕಾರಿನಲ್ಲಿ ಯಾರೋ ಒಬ್ಬ ಅಕ್ರಮವಾಗಿ ಮಾದಕ ವಸ್ತುವನ್ನು  ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ NITK ಮುಕ್ಕ ಶ್ರೀನಿವಾಸ  ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜ್ ವಠಾರದಲ್ಲಿ ರೌಂಡ್ಸ್ ಮಾಡಿ ಮುಂದಕ್ಕೆ ಸುರತ್ಕಲ್ ರೈಲ್ವೇ ನಿಲ್ದಾಣದ ಬಳಿ  ನಿಲ್ಲಿಸಿದ KA-19/ MG 0755  ನೇ ನೊಂದಣಿ ಸಂಖ್ಯೆಯ ಕಡು ನೀಲಿ ಬಣ್ಣದ ಕಾರು ನಿಂತಿರುವುದನ್ನು  ಕಂಡು ಆರೋಪಿಯನ್ನು ಸುತ್ತುವರಿದ್ದು, 16-30 ಗಂಟೆಗೆ ಹಿಡಿದು ಆತನ ಹೆಸರು ವಿಳಾಸ ಪಡೆದು  ಕಾರಿನಲ್ಲಿ MDMA, ಗಾಂಜಾ, ನಂತಿರುವ ,ಮಾದಕ ವಸ್ತುವನ್ನು  ಕಾರಿನಲ್ಲಿ ಇರಿಸಿದ್ದಾಗಿಯೂ ಅದನ್ನು ಯತಿರಾಜ್ ಎಂಬವನಿಗೆ ಮಾರಾಟ ಮಾಡಲು ತಂದು ಕಾಯುತ್ತಿರುವುದಾಗಿ ತಿಳಿಸಿದ್ದಾಗಿರುತ್ತದೆ. ಆರೋಪಿತನಿಗೆ ನಿಷೇಧಿತ ಮಾದಕ ವಸ್ತುವನ್ನು ವಶದಲ್ಲಿ ಇಟ್ಟುಕೊಳ್ಳಲು, ಸಾಗಾಟ ಮಾಡಲು ಮತ್ತು ಮಾರಾಟ ಮಾಡಲು ಯಾವುದಾದರೂ ಸಕ್ಷಮ ಪ್ರಾಧಿಕಾರದಿಂದ  ಪರವಾನಿಗೆ ಇಲ್ಲದೇ ಆತ ಕೇರಳ ರಾಜ್ಯದಿಂದ ಪ್ರತಿ ಗ್ರಾಂ ಗೆ ರೂ. 1,500/ ರಂತೆ ಖರೀದಿಸಿ ಮಂಗಳೂರಿಗೆ ಅದನ್ನು  ತಂದು ಪ್ರತಿ ಗಾಂ ಗೆ ರೂ 3,000/ ರಂತೆ ಮಾರಾಟ ಮಾಡಲು ತಂದಿರುವುದ್ದಾಗಿದೆ   ಆರೋಪಿತನ ಬಾಭ್ತು ಕಾರು ನೊಂದಣಿ ಸಂಖ್ಯೆ KA-19/ MG 0755  ನೇದರ ಡ್ಯಾಶ್ ಬೋರ್ಡ್ ನಿಂದ   ತೋರಿಸಿಕೊಟ್ಟು ತಲಾ 1 ಗ್ರಾಂ ನಂತೆ ಒಟ್ಟು 3 ಸಣ್ಣ ಸಣ್ಣ ಪ್ಲಾಸ್ಟಿಕ್ ಪ್ಯಾಕೇಟ್ ನಲ್ಲಿರುವ MDMA  ನಂತೆ ತೋರುವ ಮಾದಕ ವಸ್ತು, ಅಂದಾಜು ಮೌಲ್ಯ ರೂ 9000/- ,50 ಗ್ರಾಂ ತೂಕದ ಎಲೆ ಕಾಂಡ, ಹೂ ಮತ್ತು ಮೊಗ್ಗುಗಳಿಂದ ಕೂಡಿರುವ  ಗಾಂಜಾದಂತೆ ತೋರುವ ಮಾದಕ ವಸ್ತು ಅಂದಾಜು ಮೌಲ್ಯ ರೂ 750/-, 2 ಗ್ರಾಂ ತೂಕದ ಹ್ಯಾಶ್ ಆಯಿಲ್ ಇದರ ಅಂದಾಜು ಮೌಲ್ಯ ರೂ 750/- 250 ML ನ Frutos ಜ್ಯೂಸ್ ಪ್ಲಾಸ್ಟಿಕ್ ಬಾಟಲಿ ಹಾಗೂ ಅದರೊಳಗಡೆ ಇರುವ ಒಂದು ಗೋಲ್ಡನ್ ಬಣ್ಣದ ವೃತ್ತಾಕಾರದ ನಳಿಕೆ , OPPO ಕಂಪೆನಿಯ ಮೊಬೈಲ್ ಫೊನ್ -1 ಅಂದಾಜು ಮೌಲ್ಯ ರೂ. 6,000/- ಹಾಗೂ ನಗದು ರೂ 1200/- ಹಾಗೂ KA-19-MG-0755 ನೇ ನೊಂದಣಿ ಸಂಖ್ಯೆಯ ಕಾರು ಇದರ ಅಂದಾಜು ಮೌಲ್ಯ ರೂ 4,00,000 ಇವರುಗಳನ್ನು . ಮಹಜರು ಮುಖೇನಾ ಸ್ಥಳದಲ್ಲಿ ಸ್ವಾಧೀನಪಡಿಸಿ ಆರೋಪಿಯನ್ನು  ದಸ್ತಗಿರಿ ಮಾಡಿದ್ದಾಗಿದೆ  ಆರೋಪಿ ಅಫ್ಸಲ್ ಎ ಐ ಇವರು ತಮ್ಮ ಸ್ವಂತ ಲಾಭಗೋಸ್ಕರ ಮೇಲ್ಕಾಣಿಸಿದ MDMA ಹಾಗೂ ಎಲೆ ಕಾಂಡ, ಹೂ ಮತ್ತು ಮೊಗ್ಗುಗಳಿಂದ ಕೂಡಿರುವ  ಗಾಂಜಾದಂತೆ ತೋರುವ ಮಾದಕ ವಸ್ತು  ಖರೀದಿಸಿದ ಬಗ್ಗೆ  ಯಾವುದೇ ದಾಖಲೆ ಪತ್ರಗಳು ಇಲ್ಲದೇ ಹಾಗೂ ಅದನ್ನು ಮಾರಾಟ ಹಾಗೂ ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಟ ಮಾಡಿಕೊಂಡು ಮಾರಾಟ ಮಾಡಿದ್ದಾಗಿ ಕ್ರಮ ಜರಗಿಸುವರೇ ಕೋರಲಾಗಿದೆ ಎಂಬಿತ್ಯಾದಿ.

Kankanady Town PS

ಪಿರ್ಯಾದಿ Dinesh M ಮಂಗಳೂರಿನಲ್ಲಿ PWD ಕಾಂಟ್ರ್ಯಾಕ್ಟರ್ ಕೆಲಸ ಮಾಡಿಕೊಂಡಿರುತ್ತಾರೆ. ಇವರು ಸುಮಾರು 20 ದಿನಗಳಿಂದ ಮಂಗಳೂರಿನ ಕೋಡೆಕ್ಕಲ್ ಎಂಬಲ್ಲಿ ರಾಜ ಕಾಲುವೆ ತಡೆಗೋಡೆಯ ಸೆಂಟ್ರಿಂಗ್ ಕೆಲಸ ಮಾಡಿಸುತ್ತಿದ್ದು, ಸದ್ರಿ ಸ್ಥಳದಲ್ಲಿ ಪಿರ್ಯಾದುದಾರರು ತಡೆಗೋಡೆಯ ಸೆಂಟ್ರಿಂಗ್ ಕೆಲಸಕ್ಕೆಂದು ತಂದಿರಿಸಿದ್ದ ಒಟ್ಟು 67 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳಲ್ಲಿ  32 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಯಾರೋ ಕಳ್ಳರು ದಿನಾಂಕ: 03.04.2023 ರಂದು ಸಂಜೆ 5:30 ಗಂಟೆಯಿಂದ ದಿನಾಂಕ: 04.04.2023 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು. ಕಳ್ಳತನವಾದ 32 ಕಬ್ಬಿಣದ ಸೆಂಟ್ರಿಂಗ್ ಶೀಟ್ ನ ಒಟ್ಟು ಮೌಲ್ಯ ಸುಮಾರು 18,000/- ರೂ. ಆಗಬಹುದು. ಪಿರ್ಯಾದುದಾರರು ಕಳ್ಳತನವಾದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳ ಬಗ್ಗೆ ಪಿರ್ಯಾದುದಾರರು ತಮ್ಮ ಸ್ನೇಹಿತರಲ್ಲಿ ವಿಚಾರಿಸಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದಲ್ಲಿ ಇದುವರೆಗೆ ಪತ್ತೆಯಾಗದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ಕಳ್ಳತನವಾದ 32 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

Ullal PS

ಪಿರ್ಯಾದಿ ಮಹಮ್ಮದ್ ಮುಸ್ತಕ್ ರವರಿಗೆ ದಿನಾಂಕ 28.01.2023 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿಯು ಮೀನು ಮಾರಾಟ ಮಾಡುವ  ಸ್ಥಳವಾದ ಕಲ್ಲಾಪುವಿಗೆ ಆರೋಪಿಗಳಾದ ಖತೀಜಮ್ಮ ತೌಸಿಯಾ,  ಕೆ, ಮುಸ್ತಾಫ ಮತ್ತು ಹಸನ್ ತೌಸೀಫ್  ರವರುಗಳು ಬಂದು ನಗದು ರೂ 25,00,000 /-( 25 ಲಕ್ಷ )  ಹಣವನ್ನು ನೀಡಬೇಕೆಂದು ಹೇಳಿ  ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಹಲ್ಲೆ ಮಾಡುವುದಾಗಿ ಹೇಳಿ ಜೀವ ಬೆದರಿಕೆಯನ್ನು ಹಾಕಿರುವುದರಿಂದ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೋಳ್ಳಬೇಕಾಗಿ ನೀಡಿದ ಪಿರ್ಯಾದಿ ಮೇಲೆ ದಾಖಲಾದ ಪ್ರಕರಣದ ಸಾರಾಂಶ.

 

04-04-2023

CEN Crime PS Mangaluru City

ಪಿರ್ಯಾದಿದಾರರಿಗೆ   ದಿನಾಂಕ 13-03-2023 ರಂದು ಸಂಜೆ 3-11 ಗಂಟೆಗೆ ಯಾರೋ ಅಪರಿಚಿತರ ವ್ಯಕ್ತಿಯ +447468726354 ಮೊಬೈಲ್ ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ  ನೇದರ ವಾಟ್ಸಾಫ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ.  ನಂತರ ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ಟಾಸ್ಕ್ ನೀಡಿ ರೂಪಾಯಿ 100/- ಹಣವನ್ನು ಪಾವತಿಸಲು ತಿಳಿಸಿರುತ್ತಾನೆ. ಅದರಂತೆ ಪಿರ್ಯಾದಿದಾರರು ಹಣವನ್ನು ಫೋನ್ ಪೇ ಮೂಲಕ ವರ್ಗಾಯಿಸಿರುತ್ತಾರೆ. ನಂತರ ಸದ್ರಿ ವ್ಯಕ್ತಿಯು ಟೆಲಿಗ್ರಾಂ ಆಪ್ ನ ಲಿಂಕ್ ಕಳುಹಿಸಿರುತ್ತಾನೆ. ಅದರಲ್ಲಿ ಪಿರ್ಯಾದಿದಾರರಿಗೆ ಹಣವನ್ನು ಆನ್ ಲೈನ್ ಮೂಲಕ ದ್ವಿಗುಣ ಮಾಡಲು 8 ಟಾಸ್ಕ್ ಮಾಡಲು ತಿಳಿಸಿದ್ದು, ಬಳಿಕ ಪಿರ್ಯಾದಿದಾರರು ವಿವಿಧ ಬ್ಯಾಂಕ್ ಗಳಿಗೆ ಹಂತ ಹಂತವಾಗಿ ರೂಪಾಯಿ 4,25,068/- ವರ್ಗಾಯಿಸಿರುತ್ತಾರೆ. ನಂತರ ಪಿರ್ಯಾದಿದಾರರು ಹಣ ಖಾಲಿಯಾದ ಬಗ್ಗೆ ಲಿಂಕ್ ಕಳುಹಿಸಿದ ವ್ಯಕ್ತಿಗಳಿಗೆ ತಿಳಿಸಿದಾಗ, ಅದೇ ವ್ಯಕ್ತಿಗಳು ಬಜಾಜ್  ಲೋನ್ ನ ಆಫರ್ ನೀಡಿ ಪ್ರೋಸೆಸ್ ಚಾರ್ಜಸ್, ಟಿ.ಡಿ.ಎಸ್. ಮತ್ತು ಜಿ.ಎಸ್.ಟಿ ಹಣ ಹಾಗೂ ಬ್ಯಾಂಕ್ ಸೆಕ್ಯುರಿಟಿ ಡಿಪಾಸಿಟ್ ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ ಆರೋಪಿತರ ವಿವಿಧ ಬ್ಯಾಂಕ್ ಖಾತೆಗಳಿಗೆ   ಪಿರ್ಯಾದಿದಾರರ ಗೂಗಲ್ ಪೇ, ಫೋನ್ ಪೇ ಮೂಲಕ ವಿವಿಧ ಬ್ಯಾಂಕ್ ಗಳಿಗೆ ಯು.ಪಿ.ಐ ಟ್ರಾನ್ಸಾಕ್ಷನ್, ನೆಫ್ಟ್, ಬ್ಯಾಂಕ್ ಟ್ರಾನ್ಸ್ ಫರ್ ಮೂಲಕ ರೂಪಾಯಿ 4,53,638/- ಹೀಗೆ ಒಟ್ಟು ರೂಪಾಯಿ 8,78,706/- ಹಣವನ್ನು ದಿನಾಂಕ 13-03-2023 ರಿಂದ 03-04-2023 ರವರೆಗೆ ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Urva PS

ಪಿರ್ಯಾದಿ ಶರತ್ ರವರ ಬಾಬ್ತು KA19ED7398 ಕಪ್ಪು ಬಣ್ಣದ HERO HONDA SPLENDOR ಬೈಕನ್ನು ಪಿರ್ಯಾದಿದಾರರ  ಸ್ನೇಹಿತ ಅನಿಲ್ ಕುಮಾರ್ ರವರು ದಿನಾಂಕ 26-03-2023 ರಂದು ಸಮಯ ಸುಮಾರು ರಾತ್ರಿ 09:00 ಗಂಟೆಗೆ ಲೇಡಿಹಿಲ್ ನಾರಾಯಣ ಗುರು ವೃತ್ತದ ಬಸ್ ನಿಲ್ದಾಣದಲ್ಲಿ ಪಾರ್ಕ್ ಮಾಡಿ ಅಲ್ಲಿ ನಡೆಯುತ್ತಿದ್ದ ಸ್ಟ್ರೀಟ್ ಪುಡ್ ಪೆಸ್ಟಿವಲ್ ಕಾರ್ಯಕ್ರಮಕ್ಕೆ ಹೋಗಿದ್ದು, ಕಾರ್ಯಕ್ರಮ ಮುಗಿಸಿ ಅದೇ ದಿನ ರಾತ್ರಿ 11:00 ಗಂಟೆಗೆ ಬೈಕ್ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ಸ್ಥಳದಲ್ಲಿ ಬೈಕ್ ಇಲ್ಲದೇ ಇದ್ದುದರಿಂದ ಪಿರ್ಯಾದಿದಾರರ ಸ್ನೇಹಿತ ಅನಿಲ್ ರವರು ಎಲ್ಲಾ ಕಡೆ ಹುಡುಕಾಡಿದಲ್ಲಿ ಈ ತನಕ ಪತ್ತೆಯಾಗದೇ ಇದ್ದು ಈ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಮೋಟಾರು ಸೈಕಲಿನ ಅಂದಾಜು ಮೌಲ್ಯ ರೂ. 20,000 ಆಗಿರುತ್ತದೆ ಎಂಬಿತ್ಯಾದಿ.

Panambur PS    

ಪಿರ್ಯಾದಿ Mr.R.M KOTI  ನಿವೃತ್ತ  ಎಮ್.ಎಮ್.ಪಿ.ಟಿ  ನೌಕರರಾಗಿದ್ದು    ಆರೋಪಿತನಾದ  ರಾಜ ಲಿಟ್ಟೋರಲ್ @ಜೋಸೆಫ್ ರಾಜ  ಇವರು ಹೊನ್ನಕಟ್ಟೆಯಲ್ಲಿರುವ  ಪಿರ್ಯಾದಿದಾರರ   ಮನೆಯಲ್ಲಿ  ಬಾಡಿಗೆದಾರರಿದ್ದು  ಖಾಸಗಿ ಕಂಪನಿಯಲ್ಲಿ   ಕೆಲಸ  ಮಾಡಿಕೊಂಡಿದ್ದು    ಪಿರ್ಯಾದಿದಾರರ  ಮಗನಾದ  ಸುಪ್ರೀತ್  ಕುಮಾರ್  ಇವರು  ಮರೈನ್  ಇಂಜಿನಿಯರಿಂಗ್  ಕೋರ್ಸ್   ಅನ್ನು ಮುಗಿಸಿರುವ  ಬಗ್ಗೆ    ಮಾಹಿತಿ ಪಡೆದುಕೊಂಡ   ಆರೋಪಿತನು  ತಾನು  ಪ್ರಭಾವ ಶಾಲಿಯಾಗಿದ್ದು  ನಿಮ್ಮ ಮಗನಿಗೆ  ಮರೈನ್  ಇಲಾಖೆಯಲ್ಲಿ ಒಳ್ಳೆಯ  ಕೆಲಸಗಳಿವೆ ತಾನು   ತನಗೆ  ಗೊತ್ತಿರುವ  ಕಡೆ ಒಳ್ಳೆಯ  ಕೆಲಸ  ಕೊಡಿಸುತ್ತೇನೆಂದು ದಿನಾಂಕ:06-08-2020 ರಿಂದ 10-05-2022 ರವರೆಗೆ  ಒಳ್ಳೆಯ  ಕೆಲಸ  ಕೊಡಿಸುತ್ತೇನೆಂದು 605000/- ಹಣವನ್ನು RTGS  ಮುಖಾಂತರ  ಹಣ  ಹಾಕಿಸಿಕೊಂಡು  ನಿಮ್ಮ ಮಗನಿಗೆ ಕೆಲಸ  ಕೊಡಿಸುತ್ತೇನೆಂದು   ಹೇಳಿ  ಹಣ  ಪಡೆದು  ಇದುವರೆಗೂ  ಮಗನಿಗೆ  ಕೆಲಸವನ್ನು  ಕೊಡಿಸದೆ ಕೊಟ್ಟ  ಹಣವನ್ನು ವಾಪಸ್ಸು ಕೊಡದೇ  ನಂಬಿಸಿ ದ್ರೋಹ  ಮಾಡಿ ನಮ್ಮಿಂದ  ಹಣ  ಪಡೆದು ವ್ಯಕ್ತಿಯ  ವಿರುದ್ಧ  ಸೂಕ್ತ ಕ್ರಮ ಜರುಗಿಸಬೇಕೆಂದು ಎಂಬಿತ್ಯಾದಿ  ಸಾರಾಂಶವಾಗಿರುತ್ತದೆ.

Mangalore North PS.

ಪಿರ್ಯಾದಿ GANESH  ತಮ್ಮ ದಿನನಿತ್ಯದ ಕೆಲಸಕ್ಕೆ ಹೋಗಿ ಬರಲು ಬಜಾಜ್ ಪಲ್ಸರ್ 135, ನಂಬ್ರ KA-19-ED-7437 ನೇದ್ದನ್ನು ಉಪಯೋಗಿಸಿಕೊಂಡಿದ್ದು, ದಿನಾಂಕ: 25.03.2023 ರಂದು ಸಾಯಂಕಾಲ 6:40 ಗಂಟೆಗೆ  ರಾವ್ &ರಾವ್ ವೃತ್ತದಿಂದ ಬಂದರ್ ಕಡೆಗೆ ಬರುವ ಮಿಶನ್ ಸ್ಟ್ರೀಟ್ ರಸ್ತೆಯಲ್ಲಿರುವ ಜ್ಯೋತಿ ಸೈಕಲ್ ಕಂಪನಿ ಅಂಗಡಿಯ ಎದುರು ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಅಂಗಡಿಗೆ ಹೋಗಿ ರಾತ್ರಿ 7:15 ಗಂಟೆಗೆ ವಾಪಾಸ್ಸು ಬಂದು ನೋಡಿದಾಗ ಸದ್ರಿ ಸ್ಥಳದಲ್ಲಿ ಬೈಕ್  ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು  ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದುದರಿಂದ  ತನ್ನ  ಬಾಬ್ತು KA-19-ED-7437 ನೇ ನೊಂದಣಿಯ ಕಪ್ಪು ಬಣ್ಣದ ಬಜಾಜ್ ಪಲ್ಸರ್ 135 ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದು ಎಂಬಿತ್ಯಾದಿ ದೂರಿನ ಸಾರಾಂಶ.     

          ಕಳವಾದ ಸ್ಕೂಟರಿನ   ವಿವರಗಳು ಈ ಕೆಳಗಿನಂತಿದೆ:

KA-19-ED-7437 ನೇ ನೊಂದಣಿ ನಂಬ್ರದ ಕಪ್ಪು ಬಣ್ಣದ ಬಜಾಜ್ ಪಲ್ಸರ್ 135 ಬೈಕ್ ಮಾಡೆಲ್ 2011 ಆಗಿದ್ದು ,ಅಂದಾಜು ಮೌಲ್ಯ ರೂ. 15,000/-ಆಗಬಹುದು.

Ullal PS

ದಿನಾಂಕ04.04.2023 ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಗ್ರಾಮದ ದೇರಳಕಟ್ಟೆ ಯೇನೆಪೋಯಾ ಆಸ್ಪತ್ರೆಯ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ 1)ಶ್ರೀಜಿತ್ ಶೆಟ್ಟಿ 2) ಶ್ರೀಜಿತ್ ಬಂಗೇರಾ  3)ಧನರಾಜ್ ರವರು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆಯನ್ನು ಹೊಂದಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಭಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಮದ್ಯಾಹ್ನ 12-15 ಗಂಟೆಗೆ ಮಾದಕ ವಸ್ತುವನ್ನು ಸೇವಿಸಿ ನಶೆಯನ್ನು ಹೊಂದಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವವರನ್ನು ವಶಕ್ಕೆ ಪಡೆದು  ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿಗಳು ಮಾದಕ ವಸ್ತು ಗಾಂಜಾ ಸೇವನೆ ಬಗ್ಗೆ ಟೊಕ್ಸಿಕೋಲಜಿ ಎನಲೈಸಿಸ್ ರಿಪೋರ್ಟ್ ನ್ನು  ಪಡೆದುಕೊಂಡು ನಂತರ ಆರೋಪಿಗಳ ವಿರುದ್ಧ ದಾಖಲಾದ ಪ್ರಕರಣದ ಸಾರಾಂಶ.

 

 

 

 

 

 

ಇತ್ತೀಚಿನ ನವೀಕರಣ​ : 21-08-2023 12:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080