ಅಭಿಪ್ರಾಯ / ಸಲಹೆಗಳು

Crime Reported in : Traffic North Police Station               

 ಪಿರ್ಯಾದಿದಾರರಾದ ಪ್ರೀತಮ್ ಶೆಟ್ಟಿ (25 ವರ್ಷ) ರವರು ದಿನಾಂಕ: 07-10-2022 ರಂದು ಅವರ ಬಾಬ್ತು ನೋಂದಣಿಯಾಗದ ಹೊಸ ಡಿಯೋ ಸ್ಪೋರ್ಟ್ಸ್ (ಇಂಜಿನ್ ನಂಬ್ರ JF98E-G-0170325) ಮೋಟಾರು ಸೈಕಲಿನಲ್ಲಿ ಕೊಡಿಕೆರೆ- ಕಾನಾ ಮಾರ್ಗವಾಗಿ ಸುರತ್ಕಲ್ ಗೆ ಬರುತ್ತಾ ಸಮಯ ಸಂಜೆ ಸುಮಾರು 6:30 ಗಂಟೆಗೆ ಸುರತ್ಕಲ್ ನ ಎಸ್ ಕೆ ಮೋಬೈಲ್ ಅಂಗಡಿಯ ಬಳಿ ಇರುವ ಜಂಕ್ಷನ್ ತಲುಪುತ್ತಿದ್ದಂತೆ ಸುರತ್ಕಲ್ ಚರ್ಚ್ ರಸ್ತೆಯಿಂದ KA-19-MB-5551 ನಂಬ್ರದ ಆಲ್ಟೋ ಕಾರನ್ನು ಅದರ ಚಾಲಕಿ ಉಮೈ ಬಾನು ಎಂಬುವರು ನಿರ್ಲಕ್ಷ್ಯತನ ಹಾಗೂ ಅಜಾಗರುಕತೆಯಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಾನಾ ಸುರತ್ಕಲ್ ಮುಖ್ಯ ರಸ್ತೆಗೆ ಮುನ್ನುಗ್ಗಿಸಿ ನೇರವಾಗಿ ಬರುತ್ತಿದ್ದ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ್ದು ಇದರಿಂದ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿನಿಂದ ಕೆಳಗೆ ಕೋಲು ಕಾಲಿಗೆ ಮೂಳೆ ಮುರಿತದ ಗಂಬೀರ ಸ್ವರೂಪದ ಗಾಯ, ಎಡಕೈ ಮಧ್ಯದ ಬೆರಳಿಗೆ ಮೂಳೆ ಮುರಿತದ ಗಾಯ, ಹಣೆಯ ಬಲ ಹುಬ್ಬಿನ ಮೇಲೆ ಚರ್ಮ ಹರಿದ ರಕ್ತಗಾಯ ಹಾಗೂ ಎದೆಯ ಬಲಬದಿ ಗುದ್ದಿದಂತಹ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Traffic South Police Station

ದಿನಾಂಕ: 06-10-2022 ರಂದು ಪಿರ್ಯಾದಿ KARTHIK RAJ ದಾರರು  ಅವರ ಬಾಬ್ತು  ಕಾರು ನಂಬ್ರ KA-19-MH-6473 ನೇದರಲ್ಲಿ ಚಾಲಕನಾಗಿ ಅವರ  ಸಂಭಂದಿಕರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಕಾರ್ ಸ್ಟ್ರಿಟ್ ಕಡೆಯಿಂದ ಕುತ್ತಾರ್ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೊಗುತ್ತಿರುವಾಗ ಸಮಯ ಸುಮಾರು ರಾತ್ರಿ 11-30 ಗಂಟೆಗೆ ರಾ ಹೆ 66 ರ ರಸ್ತೆಯಲ್ಲಿ ಪಂಪುವೆಲ್ ಪ್ಲೈ ಓವರ್ ಮೇಲೆ ತಲುಪಿದಾಗ ಅಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿ ಕೆಲಸ ಮಾಡುವ  ಲಾರಿಯನ್ನು ನಿಲ್ಲಿಸಿದ್ದು ಅದನ್ನು ನೋಡಿ ಪಿರ್ಯಾದಿದಾರು ಕಾರನ್ನು ನಿಲ್ಲಿಸಿದಾಗ ಅವರ ಹಿಂದಿನಿಂದ ಅಂದರೆ ಪಂಪುವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲನ್ನು ನಂಬರ್ KA-19-HB-7704  ನೇದನ್ನು ಅದರ ಸವಾರ ಸಹಸವಾರನನ್ನ ಕುಳ್ಳಿರಿಸಿಕೊಂದು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರ ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸವಾರನ ತಲೆಗೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗುದ್ದಿದ ಗಾಯವಾಗಿದ್ದು ಸಹಸವಾರನಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ.ಕೂಡಲೇ ಅವರನ್ನು  ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ  ಪಂಪುವೆಲ್ ಇಂಡಿಯಾನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Surathkal PS

ದಿನಾಂಕ: 07-10-2022 ರಂದು ಪಿರ್ಯಾದಿದಾರರಾದ ಸುರತ್ಕಲ್ ಪೊಲೀಸ್ ಠಾಣಾ ಪಿ.ಸಿ. ದಿಲೀಪ್ ರವರು  ಸುರತ್ಕಲ್ ಕರ್ತವ್ಯದಲ್ಲಿದ್ದವರು ಸಂಜೆ ಸುಮಾರು 16-00 ಗಂಟೆಗೆ ಸುರತ್ಕಲ್ ಮುಕ್ಕ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಸಾರ್ವಜನಿಕ ರಸ್ತೆ ಬದಿಯಲ್ಲಿ  ಆರೋಪಿಗಳಾದ ರಾಯನ್ ಎಂ.ಜೆಸ್ಸಿ, ಸಿದ್ದಾರ್ಥ, ಗುರುಪ್ರಸಾದ್ ಶೆಟ್ಟಿ ಹಾಗೂ ಮನೀಷ್ ಇವರುಗಳು ಪರಸ್ಪರ ಕೈ ಕೈ ಮಿಲಾಯಿಸಿ ಕೊಂಡು ವೈಯುಕ್ತಿಕ ದ್ವೇಷದಿಂದ ಪರಸ್ಪರ ಸೇರಿಕೊಂಡು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಜಗಳಮಾಡಿಕೊಂಡು ಕಾಲೇಜಿನ ಇತರೆ ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ ನಡೆದಾಡಲು ಹಾಗೂ ಸಂಚರಿಸಲು ಅಡ್ಡಿ ಪಡಿಸಿ,ಸಾರ್ವಜನಿಕರ ಶಾಂತತೆ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿದ ಅಪರಾಧ ವೆಸಗಿರುತ್ತಾರೆ ಎಂಬಿತ್ಯಾದಿ.

2) ಪಿರ್ಯಾದಿ Sri Lingappa S Salian ದಾರರು ಅವರ ಪತ್ನಿ ಶ್ರೀಮತಿ ಕುಸುಮಾ ಎಲ್ ಸಾಲ್ಯಾನ್ ಹಾಗೂ ಅವರ ದತ್ತು ಪುತ್ರ ಆರೋಪಿ 1 ನೇ ಮಹೇಶ್ ಎಲ್ ಸಾಲ್ಯಾನ್  ಜೊತೆ ವಾಸವಾಗಿರುವುದಾಗಿದೆ. ಪಿರ್ಯಾದಿದಾರರ ಬಾಬ್ತು ಮಂಗಳೂರು ಸಬ್ ರಿಜಿಸ್ಟರ್ ಕಛೇರಿಯಲ್ಲಿ ನೊಂದಣಿಯಾಗಿರುವ ದಾಖಲಾತಿ ನಂಬ್ರ ****ರ ಎ ಷೆಡ್ಯೂಲ್ ನ ಜಾಗವನ್ನು ಅನುಭೋಗಿಸಿಕೊಂಡು ಬಂದಿರುದುದಾಗಿದೆ. ಪಿರ್ಯಾದಿದಾರರ ದತ್ತುಪುತ್ರ ಆರೋಪಿ 1ನೇಯವರು ಪಿರ್ಯಾದಿದಾರರಿಗೆ ಬೆದರಿಕೆ ಹಾಕಿ ಕಾರನ್ನು ಖರೀದಿಸಿ ಬಳಿಕ ಅದನ್ನು ಡಿಕ್ಕಿ ಹೊಡೆಸಿ ಸಂಪೂರ್ಣ ಜಖಂ ಮಾಡಿರುವುದು ಆಗಿದೆ. ಆ ಬಳಿಕ ಆರೋಪಿ 1 ನೇಯವರು ಪಿರ್ಯಾದಿದಾರರ ಮೇಲ್ಕಾಣಿಸಿದ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿದ ಬಗ್ಗೆ ದಿ. 25-06-2022 ರಂದು ದಾಖಲಾತಿಗಳ ಪ್ರತಿಗಳನ್ನು ಹಾಜರುಪಡಿಸಿದ್ದು ಅದರಲ್ಇ ಪಿರ್ಯಾದಿದಾರರು ಆರೋಪಿ 5 ನೇ Sirajuddin ಯವರ ನೋಟರಿ ಕಛೇರಿಗೆ ಹೋಗದೇ ಆರೋಪಿ 1 ನೇಯವರು ಮೋಸದಿಂದ ಆರೋಪಿ 1 ನೇಯವರ ಸಹಿ ಮಾಡಿದ ಜನರಲ್ ಪವರ್ ಆಫ್ ಆಟಾರ್ನಿ ಉಪಯೋಗಿಸಿ  ಆರೋಪಿ 2 ನೇ Sri Vijaya Shetty ಯವರ ಹೆಸರಿಗೆ ವರ್ಗಾಯಿಸಿ ಮಾರಾಟ ಮಾಡಿದ್ದಾರುತ್ತದೆ. ಸದ್ರಿ ದಾಖಲಾತಿಗಳು ಆರೋಪಿ 3 ನೇ Sri Vinay Shetty ಯವರ ಬಳಿಯಲ್ಲಿ ಇರುವುದಾಗಿದೆ. ಆರೋಪಿ 1 ನೇಯವರನ್ನು ವಿಚಾರಿಸಿದಾಗ ಆತ ಆರೋಪಿ 2 ರಿಂದ 7 ನೇ ( 6 Ravichandra P M, 7 Sri Sudhakar) ಯವರೊಂದಿಗೆ ಸೇರಿಕೊಂಡು ಪಿರ್ಯಾದಿದಾರರಿಗೆ ಆರೋಪಿ 3 ಮತ್ತು 4 ನೇ Sri Karunakar Shetty ಯವರ ನಿರ್ದೇಶನದಂತೆ ಪೋರ್ಜರಿ ಜನರ್ಲ್ ಪವರ್ ಆಫ್ ಆಟಾರ್ನಿಯ ಸುಳ್ಳು ದಾಖಲಾತಿಗಳನ್ನು ತಯಾರಿಸಿ ಪೋರ್ಜರಿ ಸಹಿ ಮಾಡಿ ಪಿರ್ಯಾದಿದಾಋರಿಗೆ ಮೋಸ, ವಂಚನೆ ಎಸಗಿ ನಂಬಿಕೆ ದ್ರೋಹ ಮಾಡಿ ಸದ್ರಿ ಜಿ .ಪಿ.ಎ ಅನ್ನು ಅಪ್ರಮಾಣಿಕವಾಗಿ ದುರ್ಬಳಕೆ ಮಾಡಿ ಪಿರ್ಯಾದಿದಾರರನ್ನು ವಂಚಿಸುವ ದ್ದೇಶದಿಂದ ಒಳಸಂಚು ಮಾಡಿ ಕೃತ್ಯ ಎಸಗಿದ್ದಾಗಿರುತ್ತದೆ.

 

 

 

 

ಇತ್ತೀಚಿನ ನವೀಕರಣ​ : 08-10-2022 08:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080