ಅಭಿಪ್ರಾಯ / ಸಲಹೆಗಳು

Crime Reported in : Traffic North PS

ಪಿರ್ಯಾದಿ Sathishದಾರರು ದಿನಾಂಕ: 07-11-2022 ರಂದು ತನ್ನ ಬಾಬ್ತು KA-19-EU-6303 ನೇ ಮೊಟಾರು ಸೈಕಲಿನಲ್ಲಿ ಮುಲ್ಕಿಯಿಂದ ತನ್ನ ಹಾಲಿ ಮನೆಯಾದ ಲಿಂಗಪ್ಪಯ್ಯಕಾಡಿಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 6:30 ಗಂಟೆಗೆ ಕಾರ್ನಾಡು ಗಾಂಧಿ ಮೈದಾನದ ಪ್ರೆಶ್ ಬಕೆಟ್ ಮಾಲ್ ಮುಂಬಾಗ ತಲುಪುತ್ತಿದ್ದಂತೆ ತನ್ನ ಎದುರಿನಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ ಬಂದಂತಹ KA-51-2716 ನೇ ಲಾರಿಯನ್ನು ಅದರ ಚಾಲಕ ಪರಸಪ್ಪ ಎಂಬುವರು ಅತೀ ವೇಗ ಹಾಗೂ ಅಜಾಗರುಕತೆಯಿಂದ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಪಾದದ ಹಿಮ್ಮಡಿ ಬಳಿ ಮೂಳೆ ಮುರಿತದ ರೀತಿಯ ಗುದ್ದಿದಂತಹ ಗಂಭೀರ ಸ್ವರೂಪದ ಗಾಯ ಹಾಗೂ ಅಲ್ಲಲ್ಲಿ ತರಚಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಲ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

Bajpe PS

ಪಿರ್ಯಾದಿ C M Meer Lia khat Ali ದಾರರಿಗೆ ಇಬ್ಬರು ಹೆಂಡತಿಯರಿದ್ದು  ಎರಡನೇ ಹೆಂಡತಿಯಾದ ಮೈಮುನಾ ರವರ ಮಗಳಾದ ಸುಪಿಯಾ ಬಿ (18 ವರ್ಷ) ರವರು ಈ ಹಿಂದೆ  ಚಿಕ್ಕಮಗಳೂರಿನ ಮೆಹರಾಜ್  ಶರೀಪ್ ಎಂಬುವರನ್ನು ಪ್ರೀತಿಸಿ ಮನೆ ಬಿಟ್ಟು ಹೋಗಿರುವ    ಬಗ್ಗೆ ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು ನಂತರ ಪಿರ್ಯಾದಿದಾರರ ಮಗಳನ್ನು ಪೊಲೀಸರು ಹುಡುಕಿ ಪಿರ್ಯಾದಿದಾರರಿಗೆ ಒಪ್ಪಿಸಿದ್ದು ನಂತರ ಪಿರ್ಯಾದಿದಾರರ ಮಗಳು ಮನಸ್ಥಿತಿ ಸುದಾರಣೆಗಾಗಿ ತಮ್ಮ ಸಂಬಂದಿಕರಾದ ಮಂಗಳೂರಿನ ಗುರುಪುರ ಕೈಕಂಬದ ಮೊಹಮ್ಮದ್ ಶರೀಪ್ ರವರ ಮನೆಗೆ ಕಳುಹಿಸಿದ್ದು ಸುಮಾರು 25 ದಿನಗಳ ಕಾಲ ಚೆನ್ನಾಗಿದ್ದು ಆದರೆ ದಿನಾಂಕ 07.11.2022 ರಂದು ಬೆಳಗ್ಗೆ 6.00 ಗಂಟೆಗೆ ಪಿರ್ಯಾದಿದಾರರಿಗೆ ಸಂಬಂದಿಕರಾದ ಮಹಮ್ಮದ್ ಶರೀಪ್ ಫೋನ್ ಕರೆಮಾಡಿ ಪಿರ್ಯಾದಿದಾರರ ಮಗಳಾದ ಸುಪಿಯಾ ರವರು ಕಾಣಿಸುತ್ತಿಲ್ಲಾ ಎಂದು ತಿಳಿಸಿದ್ದರಿಂದ ಪಿರ್ಯಾದಿದಾರರು ಕೂಡಲೇ ಮಂಗಳೂರಿಗೆ ಬಂದು ಎಲ್ಲಾ ಕಡೆ ಹುಡುಕಿ ಸಂಬಂದಿಕರಲ್ಲಿ ವಿಚಾರಿಸಿದ್ದು  ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಆದ್ದರಿಂದ ಕಾಣೆಯಾದ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ  ಎಂಬಿತ್ಯಾದಿ

Surathkal PS

 ದಿ: 07-11-2022  ರಂದು ಮದ್ಯಾಹ್ನ ಮಾನ್ಯ ಉಪ- ನಿರ್ದೇಶಕರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇವರಿಗೆ ದೊರೆತ ಮಾಹಿತಿ ಮೇರೆಗೆ  ಮದ್ಯಾಹ್ನ 13-30 ಗಂಟೆಗೆ ಬಾಳ ಗ್ರಾಮದ ಹೆಚ್ ಪಿ ಸಿ ಎಲ್ ಬಳಿ ಇರುವ ಬುಲೆಟ್ ಟ್ಯಾಂಕರ್ ನಿಲ್ಲಿಸುವ ಯಾರ್ಡ್ ನಲ್ಲಿ ಯಾವುದೇ ಪರವಾನಗಿ ಇಲ್ಲದೇ  ಹಾಗೂ ಯಾವುದೇ  ದಾಖಲಾತಿಗಳು ಇಲ್ಲದೇ ಸಾರ್ವಜನಿಕರಿಗೆ ಅವಶ್ಯಕವಾದ ಪೆಟ್ರೋಲಿಯಂ ಉತ್ಪನ್ನಗಳನ್ನು ಮತ್ತು ಸಿಮೇ ಎಣ್ಣೆಯನ್ನು ಅಕ್ರಮವಾಗಿ ಪಿಕ್ ಆಫ್ ವಾಹನ ನೊಂದಣಿ ಸಂಖ್ಯೆ KA-20-A-7060 ನೇದರ ಚಾಲಕ ಸದ್ರಿ ವಾಹನದ ಬಾಡಿಯಲ್ಲಿ ಸುಮಾರು 20 ಲೀಟರ್ ಸೀಮೆ ಎಣ್ಣೆ ತುಂಬಿದ 3 ಕ್ಯಾನ್ ಗಳು ಹಾಗೂ ಪೆಟ್ರೋಲಿಯಂ ಉತ್ಪನ್ನ ತುಂಬಿದ  ಸುಮಾರು 200 ಲೀಟರ್ ನ 4 ಬ್ಯಾರಲ್ ಹಾಗೂ ಖಾಲಿ  2 ಬ್ಯಾರಲ್ ಗಳು ಹಾಗೂ ಖಾಲಿ ಸುಮಾರು 20 ಲೀಟರ್ ನ  3 ಕ್ಯಾನ್ ಗಳನ್ನು ಇರಿಸಿದ್ದಲ್ಲದೇ ಟ್ಯಾಂಕರ್ ನಂಬ್ರ KA-30-8332 ಹಾಗೂ KA-01-AL-2016 ನೇದರ ಚಾಲಕರುಗಳು ಸದ್ರಿ ಟ್ಯಾಂಕರ್ ನ ಟ್ಯಾಂಕಿನ ಮುಚ್ಚಳವನ್ನು ತೆಗೆದು ಅದರಲ್ಲಿದ್ದ ATF ಪೆಟ್ರೋಲಿಯಂ ಉತ್ಪನ್ನಗಳನ್ನು ತೆಗೆಯಲು ಪ್ರಯತ್ನಿಸಿದ್ದಲದೇ ಸದ್ರಿ ಯಾರ್ಡ್ ನ  ಎದುರುಗಡೆ ಇರುವ ಯಾರ್ಡ್ ನ ಯಾರೋ ಅಪರಿಚಿತ ಆರೋಪಿ ತನ್ನ ಸ್ವಂತ ಲಾಭಕ್ಕೊಸ್ಕರ ನೆಲದಲ್ಲಿ ಉದುಗಿದ ಟ್ಯಾಂಕಿನ ಒಳಗಡೆಯ ಪೆಟ್ರೋಲಿಯೋ ಉತ್ಪನ್ನಗಳನ್ನು ಕಲಬೆರಕೆ ಮಾಡಿ ಫರ್ನೀಶ್ ಆಯಿಲ್ ನ್ನು ತಯಾರಿಸಿದ್ದಾಗಿರುತ್ತದೆ.

            ಸ್ಥಳದಲ್ಲಿದ್ದ ಮೇಲ್ಕಾಣಿಸಿದ ಟ್ಯಾಂಕರ್ ಹಾಗೂ ಅದರಲ್ಲಿದ್ದ ATF ಪೆಟ್ರೋಲಿಯೋ ಉತ್ಪನ್ನಗಳನ್ನು ಪಿಕಪ್ ವಾಹನ ಹಾಗೂ ಅದರಲ್ಲಿದ್ದ ಮೇಲ್ಕಾಣಿಸಿದ ಸೊತ್ತುಗಳಾದ ಸುಮಾರು 20 ಲೀಟರ್ ಸೀಮೆ ಎಣ್ಣೆ ತುಂಬಿದ 3 ಕ್ಯಾನ್ ಗಳು ಹಾಗೂ ಪೆಟ್ರೋಲಿಯಂ ಉತ್ಪನ್ನ ತುಂಬಿದ  ಸುಮಾರು 200 ಲೀಟರ್ ನ 4 ಬ್ಯಾರಲ್ ಹಾಗೂ ಖಾಲಿ  2 ಬ್ಯಾರಲ್ ಗಳು ಹಾಗೂ ಸುಮಾರು 20 ಲೀಟರ್ ನ  3 ಖಾಲಿ ಕ್ಯಾನ್ ಗಳನ್ನು ಹಾಗೂ ನೆಲದಲ್ಲಿ ಉದುಗಿದ ಟ್ಯಾಂಕಿನ ಒಳಗಡೆಯ ಪೆಟ್ರೋಲಿಯೋ ಉತ್ಪನ್ನಗಳನ್ನು ಹಾಗೂ ಅದನ್ನು ಪಂಪ್ ಮಾಡಲು ಉಪಯೋಗಿಸಿ ಪಂಪ್ ಸೆಟ್ ನ್ನು ಮಹಜರು ಮುಖೇನಾ ಸ್ವಾಧೀನಪಡಿಸಿದ್ದಾಗಿರುತ್ತದೆ.. ಆರೋಪಿಗಳ ವಿರುದ್ದ ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 08-11-2022 05:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080