ಅಭಿಪ್ರಾಯ / ಸಲಹೆಗಳು

Crime Reported in : Traffic North Police Station       

ದಿನಾಂಕ 08-01-2023 ರಂದು ಪಿರ್ಯಾದಿ GIRISH U ದಾರರಿಗೆ ರಾತ್ರಿ ವೇಳೆಯಲ್ಲಿ ಹೈವೇ ಪೆಟ್ರೋಲ್-01 ಕರ್ತವ್ಯದಲ್ಲಿದ್ದು, ದಿನಾಂಕ  09-01-2023 ರಂದು ಬೆಳಿಗ್ಗೆ ಪಣಂಬೂರು ಜಂಕ್ಷನ್ ಬಳಿ ಕರ್ತವ್ಯದಲ್ಲಿರುವಾಗ ಕಂಟ್ರೋಲ್ ರೂಮಿನಿಂದ ಪಣಂಬೂರು ಎನ್.ಎಂ.ಪಿ.ಎ. ಬಳಿ ರಸ್ತೆ ಅಫಘಾತವಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ಬೆಳಿಗ್ಗೆ ಸುಮಾರು 06:50 ಗಂಟೆಗೆ ಮಂಗಳೂರು ತಾಲೂಕು, ಪಣಂಬೂರು ಎನ್.ಎಂ.ಪಿ.ಎ. ಬಳಿ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗಿ ನೋಡಲಾಗಿ ಸುಮಾರು 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಿದ್ದುಕೊಂಡಿದ್ದು, ಆ ವ್ಯಕ್ತಿಯನ್ನು ನೋಡಲಾಗಿ ಆತನು ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದು, ಹಾಗೂ ಅಫಘಾತ ಸ್ಥಳದಲ್ಲಿ ಬಸ್ ನಂಬ್ರ KA-19-AC-8483 ನೇಯದನ್ನು ಕೂಡಾ ನಿಲ್ಲಿಸಲಾಗಿರುತ್ತದೆ. ಬಳಿಕ ಅಂಬ್ಯುಲೆನ್ಸ್ ನಲ್ಲಿ ಸದ್ರಿ ವ್ಯಕ್ತಿಯನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ಅಫಘಾತದ ಬಗ್ಗೆ ವಿಚಾರ ತಿಳಿಯಲಾಗಿ ಬೆಳಿಗ್ಗೆ ಸುಮಾರು 06:40 ಗಂಟೆಗೆ Ashel ಬಸ್ ನಂಬ್ರ KA-19-AC-8483 ನೇಯದನ್ನು ಅದರ ಚಾಲಕ ಬಾಲಕೃಷ್ಣ ಎಂಬಾತನು ಬೈಕಂಪಾಡಿ ಕಡೆಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದುಡುಕುತನ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಾ ರಸ್ತೆಯ ಎಡ ಅಂಚಿಗೆ ತಲುಪಿದ್ದ ಅಪರಿಚಿತ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ವ್ಯಕ್ತಿಯು ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಸದ್ರಿ ವ್ಯಕ್ತಿಯ ತಲೆಯು ಡಾಮಾರು ರಸ್ತೆಗೆ ಬಡಿದು ತಲೆಗೆ ಗಾಯಗೊಂಡಿದ್ದು, ಸದ್ರಿ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವೈದ್ಯರು ದಿನಾಂಕ 09/01/2023 ರಂದು ಸಮಯ 7.58 ಗಂಟೆಗೆ ಪರೀಕ್ಷಿಸಿ ಅಪರಿಚಿತ ಗಂಡಸು ಮೃತಪಟ್ಟಿರುವುದಾಗಿ ದೃಢಪಡಿಸಿ ಸೂಚನಾ ಪತ್ರವನ್ನು ಕಳುಹಿಸಿರುವುದಾಗಿದೆ ಎಂಬಿತ್ಯಾದಿ.

   

Moodabidre PS

ದಿನಾಂಕ: 08-01-2023 ರಂದು 11-40 ಗಂಟೆಗೆ ಪಿರ್ಯಾದಿ MUKHESH CHANDRA RAO ದಾರರು ಕೆ.ಎ-01-ಎಂ.ಪಿ-0533 ನೇದರಲ್ಲಿ ಮೂಡಬಿದರೆಯ ಚರ್ಚ ಗೆ ಹೋಗುತ್ತಿರುವಾಗ ಪಟ್ಟಾಡಿ ಕ್ರಾಸ್ ಬಳಿ ತಲುಪುತ್ತಿದ್ದಂತೆ ಎದರುಗಡೆಯಿಂದ ಬಂದಂತಹ ಕೆ.ಎ-70-ಎಮ್-4009 ನೇ ವಾಗನರ್ ಕಾರಿನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿಪಡಿಸಿದ್ದರಿಂದ ಕಾರಿಗೆ ಜಖಂಗಳಾಗಿರುತ್ತವೆ. ಯಾವುದೇ ಗಾಯದ ನೋವುಗಳು ಆಗಿರುವುದಿಲ್ಲ. ಆದ್ದರಿಂದ ಕೆ.ಎ-70-ಎಮ್-4009 ನೇ ಕಾರಿನ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರು ಎಂಬಿತ್ಯಾದಿ.

   

ಇತ್ತೀಚಿನ ನವೀಕರಣ​ : 09-01-2023 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080