ಅಭಿಪ್ರಾಯ / ಸಲಹೆಗಳು

Crime Reported in : Kavoor PS

ಪಿರ್ಯಾದಿ ZAAFAR SADEEK ದಾರರ ಮಗಳಾದ ಫಾತಿಮಾ ಜಝೀಲಾ (18 ವರ್ಷ) ಎಂಬವರು ದಿನಾಂಕ 07/11/2022 ರಂದು ಬೆಳಿಗ್ಗೆ ಸುಮಾರು 8.30 ಗಂಟೆಗೆ ಬಜಪೆಯಲ್ಲಿರುವ ಶಿ. ಕ್ಯಾಂಪಸ್ ಹಾಗೂ ಇತರ ಪಠ್ಯ ಪುಸ್ತಕಗಳ ವಿಧ್ಯಾಭ್ಯಾಸವನ್ನು ಕಲಿಸಿಕೊಡುವ ಶಾಲೆಗೆ ಹೋಗುತ್ತೇನೆಂದು ಹೋದವರು ಶಾಲೆಗೂ ಹೋಗದೇ- ಮನೆಗೂ ಬಾರದೆ ಕಾಣೆಯಾಗಿದ್ದು, ಸ್ನೇಹಿತರ ಹಾಗೂ ಸಂಬಂಧಿಕರ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಟ ನಡೆಸಿದಲ್ಲಿ ಪತ್ತೆಯಾಗಿರುವುದಿಲ್ಲ, ಕಾಣೆಯಾದ ಫಾತಿಮಾ ಜಝೀಲಾ ರವರ ಬಗ್ಗೆ ದಿನಾಂಕ 07/11/2022 ರಿಂದ ದಿನಾಂಕ 09/11/2022 ರಂದು ಮಧ್ಯಾಹ್ನ 12.30 ಗಂಟೆಯವರೆಗೆ ಎಲ್ಲಾ ಕಡೆ ಹುಡುಕಾಟ ನಡೆಸಿದಲ್ಲಿ ಪತ್ತೆಯಾಗಿರುವುದಿಲ್ಲ ಆದುದರಿಂದ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಚಹರೆ:

  1. ಫಾತಿಮಾ ಜಝೀಲಾ (18ವರ್ಷ್) ತಂದೆ: ಜಾಫರ್ ಸಾದಿಕ್
  2. ಎತ್ತರ: 5 ಅಡಿ, ದುಂಡು ಮುಖ ಬಿಳಿ ಮೈಬಣ್ಣ, ಕಪ್ಪು ಬಣ್ಣದ ಉದ್ದವಾದ ತಲೆ ಕೂದಲು
  3. ಧರಿಸಿರುವ ಬಟ್ಟೆ: ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾರೆ.
  4. ಮಾತನಾಡುವ ಭಾಷೆ: ಕನ್ನಡ, ಇಂಗ್ಲೀಷ್ ಮತ್ತು ಬ್ಯಾರಿ

Mulki PS  

“ಪಿರ್ಯಾದಿದಾರರು ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಕಿನ್ನಿಗೋಳಿಯ ಮುಖ್ಯೋಪಾಧ್ಯಾಯರಾಗಿದ್ದು, ದಿನಾಂಕ: 08-11-2022 ರಂದು ಸಂಜೆ 5.30 ಗಂಟೆಯಿಂದ  ದಿನಾಂಕ: 09-11-2022 ರಂದು ಬೆಳಿಗ್ಗೆ 7.30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮೆನ್ನಬೆಟ್ಟು ಗ್ರಾಮದ ಕಿನ್ನಿಗೋಳಿ ಎಂಬಲ್ಲಿರುವ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ನ ಪ್ರವೇಶ ದ್ವಾರದ ಬಳಿ ಇರುವ ಗ್ರಿಲ್ಸ್ ನ ಬಾಗಿಲಿನ ಬೀಗವನ್ನು ಒಡೆದು ತೆಗೆದು ಒಳ ಪ್ರವೇಶಿಸಿ ಮುಖ್ಯೋಪಾಧ್ಯಾಯರ ಕೋಣೆಯ ಗ್ಲಾಸ್ ನ ಬಾಗಿಲಿನ ಲಾಕನ್ನು ತೆಗೆದು ಬಳಿಕ  ಮರದ ಬಾಗಿಲಿನ ಬೀಗವನ್ನು ಒಡೆದು ತೆಗೆದು ಬೀಗವನ್ನು ಅಲ್ಲಿಯೇ ನೆಲದಲ್ಲಿ ಬಿಸಾಡಿ ಒಳ ಪ್ರವೇಶಿಸಿ ಮುಖ್ಯೋಪಾಧ್ಯಾಯರ ಕೋಣೆಯ ಮೇಜಿನ ಡ್ರಾವರ್ ನ ಲಾಕನ್ನು ಮುರಿದು ಫೈಲ್ ಗಳನ್ನು ಚೆಲ್ಲಾಪಿಲ್ಲಿ ಮಾಡಿ ಆ ಕೋಣೆಯ ಬದಿಯಲ್ಲಿರುವ ಕಛೇರಿ ಕೋಣೆಯ ಒಳಗಡೆ ಇರುವ ಗಾದ್ರೇಜ್ ಗಳ ಲಾಕ್ ಗಳನ್ನು ಯಾವುದೋ ಸಾಧನದಿಂದ ಮುರಿದು ಅದರಲ್ಲಿ ಒಂದು ಗಾದ್ರೇಜ್ ನ ಲಾಕರ್ ನಲ್ಲಿದ್ದ ವಿದ್ಯಾರ್ಥಿಗಳ  ಹಾಗೂ ಶಾಲೆಯ ಉಪಯೋಗದ ವಿವಿದ ಕಂಪೆನಿಯ ಮೊಬೈಲ್ ಪೋನ್ ಗಳನ್ನು ಹಾಗೂ     ಕಛೇರಿಯ ಒಳಗಡೆ ಕಂಪ್ಯೂಟರ್ ಮೇಜಿನ ಡ್ರಾವರ್  ನ  ಒಳಗಿದ್ದ ಒಂದು PLAYGO N20  ಕಂಪನಿಯ ಹೆಡ್ ಪೋನ್  ಕಳವು ಮಾಡಿ ಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 32,೦೦೦/- ಆಗಬಹುದು ಅಲ್ಲದೇ ಶಾಲೆಯ ಇತರ ಕೊಣೆಯಲ್ಲಿಯೂ ಕಳ್ಳರು ಜಾಲಾಡಿರುವುದಾಗಿದೆ.”  ಎಂಬಿತ್ಯಾದಿಯಾಗಿದೆ.

 

Traffic South Police Station

ದಿನಾಂಕ:08-11-2022 ರಂದು ಪಿರ್ಯಾದಿ ABHISHEK ದಾರರ ಅಣ್ಣ ಭರತೇಶ್ (27) ರವರು ಅವರ ಸ್ಕೂಟರ್ ನಂಬ್ರ:KA-19-ER-1306 ನೇದನ್ನು ಸವಾರಿ ಮಾಡಿಕೊಂಡು ಉಚ್ಚಿಲ ಪೆಟ್ರೋಲ್ ಬಂಕಿಗೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡು ವಾಪಸ್ಸು ಮನೆ ಕಡೆಗೆ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗಿರುವ ರಾ.ಹೆ-66 ರ ರಸ್ತೆಯಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ರಾತ್ರಿ 10-00 ಗಂಟೆಗೆ ಕೋಟೆಕಾರ್ ಬೀರಿ ಜಂಕ್ಷನ್ ಬಳಿ ತಲುಪಿದಾಗ ತೆರೆದ ರಸ್ತೆ ವಿಭಾಜಕದ ಮೂಲಕ ಕೊಂಡಾಣ ಕಡೆಗೆ ಹೋಗಲು ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹಾದು ಹೋಗುವ ರಾ.ಹೆ-66 ರ ಏಕಮುಖ ರಸ್ತೆಯಲ್ಲಿ ಕಾರು ನಂಬ್ರ : KA-21-N-5744 ನೇದನ್ನು ಅದರ ಚಾಲಕ ಮೊಹಮ್ಮದ್ ಪೈಝಾನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಭರತೇಶ್ ರವರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಎಡಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಾಯ ,ಎಡಕಾಲಿನ ಹೆಬ್ಬೆರಳ ಬಳಿ ರಕ್ತಗಾಯ ಹಾಗೂ ಎರಡು ಕೈಗಳಿಗೆ ತರಚಿದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಹಾಗೂ ಕಾರಿನ ಚಾಲಕ ಚಿಕಿತ್ಸೆ ಬಗ್ಗೆ ಕಾರೊಂದರಲ್ಲಿ  ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 09-11-2022 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080