ಅಭಿಪ್ರಾಯ / ಸಲಹೆಗಳು

Crime Reported in :  Surathkal PS   

ದಿನಾಂಕ: 08-12-2022 ರಂದು ಪಿರ್ಯಾದಿದಾರರಾದ ವಿಕಾಸ್ (18 ವರ್ಷ) ರವರ ಅಣ್ಣನಾದ ಮೌನೇಶ್ ಬಡಿಗೇರ ಪ್ರಾಯ 20 ವರ್ಷ ರವರು ಸುಮಾರು ಎರಡು ವರ್ಷದಿಂದ ಸುರತ್ಕಲ್ ಪೇಟೆ ಬಳಿ ಇರುವ ರಚನಾ ಹೋಟೆಲ್ ನಲ್ಲಿ ಸಪ್ಲೆಯರ್ ಕೆಲಸ ಮಾಡಿಕೊಂಡಿದ್ದು ದಿನಾಂಕ: 06-10-2022 ರಂದು ಹೋಟೆಲ್ ಮಾಲಿಕರಾದ ಪ್ರಜ್ವಲ್ ರವರಿಗೆ ದೂರವಾಣಿ ಕರೆ ಮಾಡಿ ಊರಿಗೆ ಹೋಗುವುದಾಗಿ ತಿಳಿಸಿ ಊರಿಗೆ ಹೋಗದೇ ಹಾಗೂ ಪ್ರಸ್ತುತ ಎಲ್ಲಿದ್ದಾರೆಂದು ತಿಳಿದು ಬಾರದೆ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ

ಕಾಣೆಯಾದವರ ಚಹರೆ:

ಹೆಸರು: ಮೌನೇಶ್  ಬಡಿಗೇರ

ಎತ್ತರ: 5-2 ಇಂಚು

ಮೈಬಣ್ಣ: ಕಪ್ಪು ಮೈಬಣ್ಣ, ಸಾಧಾರಣ ಶರೀರ

ಭಾಷೆ: ಕನ್ನಡ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆ

Mangalore East PS

ದಿನಾಂಕ:08-12-2022 ರಂದು ಬೆಳಿಗ್ಗೆ 11.30 ರ ವೇಳೆಗೆ ಕೆ.ಪಿ.ಟಿ.ಯಿಂದ ಬಾರೆಬೈಲ್ ಕಡೆಯ ಎಸ್. ಕೆ. ಎಸ್. ಹೆಸರಿನ ಅಪಾರ್ಟ್ ಮೆಂಟ್  ಎದುರಿನಲ್ಲಿ   ಸಾರ್ವಜನಿಕ ಸ್ಥಳದಲ್ಲಿ ಗುಣಾಕರ್  ವಾಸ: ಶ್ರೀಮಾತ ನಿಲಯ ಛಾವಡಿಯ ಹತ್ತಿರ ಹರೆಕಳ ಪೋಸ್ಟ್ ಮಂಗಳೂರು ಎಂಬಾತನು  ಸಿಗರೇಟ್ ಸೇದುತ್ತಿದ್ದುದನ್ನು ಕಂಡು ಆತನ ಬಳಿ ಹೋಗಿ ವಿಚಾರಿಸಲಾಗಿ ಆತನು ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಆತನನ್ನು ಕೂಲಂಕುಷವಾಗಿ ವಿಚಾರಿಸಿದ್ದಲ್ಲಿ ಆತನು ಸಿಗರೇಟಿನ ಜೊತೆ ಗಾಂಜಾ ಎಂಬ ಅಮಲು ಪದಾರ್ಥವನ್ನು ಸೇರಿಸಿ  ಸೇದಿದ ಬಗ್ಗೆ ಒಪ್ಪಿಕೊಂಡಿದ್ದು  ಆತನನ್ನು  ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ಆತನು ಗಾಂಜಾ ಸೇವನೆ ಮಾಡಿರುವುದು  ವ್ಯೆದಕೀಯ ಪರೀಕ್ಷೆಯಿಂದ ದೃಡಪಟ್ಟಿರುವುದರಿಂದ ಆತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

2) ಫಿರ್ಯಾದಿದಾರರಾದ ಶ್ರೀಮತಿ ಉಷಾ ದಿನೇಶ್ ರವರ ಗಂಡನಾದ  ದಿನೇಶ ಕೆ,ವಿ ಎಂಬವರು ಮನೆ ಕಟ್ಟುವ  ಕಂಟ್ರಾಕ್ಟ್ ದಾರ ರಾಗಿದ್ದು, ಅವರಿಂದ ಮನೆಯನ್ನು ಕಟ್ಟಿಸಿದ ಆರೋಪಿತರಾದ 1) ಮಹಾಬಲ ಶೆಟ್ಟಿ, 2) ಸೀತಾರಾಮ ಶೆಟ್ಟಿ, 3) ದೀಪಕ್ ಕೋಡಿಕಲ್, 4) ರಮೇಶ್ ಬಿ.ಎನ್/ ನಾಗರಾಜ, 5) ಸಪ್ನಾ ರಾಜೇಶ್, 6) ಸೀತಾರಾ ಶೆಟ್ಟಿ, 7)ನಾರಾಯಣ ಶೆಟ್ಟಿ, 8) ಗಂಗಾಧರ ಎಂಬವರುಗಳು ಸದ್ರಿಯವರಿಗೆ ಕಾಮಗಾರಿಯ ಹಣವನ್ನು ಸರಿಯಾಗಿ ನೀಡದೇ ತೊಂದರೆ ನೀಡುತ್ತಿದ್ದ ಬಗ್ಗೆ ಹಾಗೂ ಅವರುಗಳಿಂದ ಬರಬೇಕಾದ ಹಣದ ಬಗ್ಗೆ  ಡೈರಿಯಲ್ಲಿ ನಮೂದಿರುವ ಬಗ್ಗೆ ತನ್ನ ಹೆಂಡತಿಯಾದ ಫಿರ್ಯಾದಿದಾರರಲ್ಲಿ ತಿಳಿಸಿರುವುದಲ್ಲದೇ ಇದೇ ವಿಚಾರದಲ್ಲಿ ಮಾನಸಿಕ ಖಿನ್ನತೆಗೊಳಗಾಗಿ ಫಿರ್ಯಾದಿದಾರರ ಗಂಡನಾದ  ದಿನೇಶ ಕೆ,ವಿ ಎಂಬವರು ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ,  ಅರೋಪಿತರುಗಳು ಫಿರ್ಯಾದಿದಾರರ ಗಂಡನಿಗೆ ಮನೆಯ ಕಾಮಗಾರಿಯ ಬಾಕಿ ಇರುವ ಹಣವನ್ನು ನೀಡದೇ ಮೋಸ ಮಾಡಿರುವುದರಿಂದ ಇದೇ ಅಘಾತದಿಂದ ಮಾನಸಿಕವಾಗಿ ನೊಂದ ದಿನೇಶ ಕೆ,ವಿ ಎಂಬವರು ದಿನಾಂಕ 16/04/2022 ರಂದು  ಅನಾರೋಗ್ಯದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ನಂತರ ಫಿರ್ಯಾದಿದಾರರು ತನ್ನ ಗಂಡನು ಡೈರಿಯಲ್ಲಿ ಬರೆದಿರುವ  ಮೇಲಿನ ಆರೋಪಿಗಳ ಮೊಬೈಲ್ ನಂಬ್ರಕ್ಕೆ ಕರೆ ಮಾಡಿ ತನ್ನ ಗಂಡನಿಗೆ ನೀಡಲು ಬಾಕಿ ಇರುವ ಹಣದ ಬಗ್ಗೆ ಕೇಳಿದಾಗ  ಅರೋಪಿತರುಗಳು ಫಿರ್ಯಾದುದಾರ  ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ  ಜೀವ ಬೆದರಿಕೆ ಒಡ್ಡಿರುವುದಲ್ಲದೇ ಬಾಕಿ ಇರುವ ಹಣವನ್ನು ನೀಡದೇ ಮೋಸ ಮಾಡಿದ್ದಾಗಿದೆ ಎಂಬಿತ್ಯಾದಿ ಈ ಪ್ರಕರಣದ ಸಾರಾಂಶವಾಗಿರುತ್ತದೆ.

 

Mulki PS

ದಿನಾಂಕ 08-12-2022 ರಂದು ಮಾನ್ಯ ಪೊಲೀಸ್ ಉಪಾಧೀಕ್ಷರು ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರು ಸಾರ್ವಜನಿಕ ದೂರಿನಂತೆ ಮುಲ್ಕಿ ತಾಲೂಕು ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ಎಂಬಲ್ಲಿ ಅಕ್ರಮ ಮರಳು ದಾಸ್ತಾನು ಮಾಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿರುವ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಿನಾಂಕ 08-12-2022 ರಂದು 17:00 ಗಂಟೆಗೆ ಸ್ಥಳ ತನಿಖೆ ನಡೆಸಿದಾಗ ಮುಲ್ಕಿ ತಾಲೂಕು ಕೆಮ್ರಾಲ್ ಗ್ರಾಮದ ಸರ್ವೆ ನಂಬ್ರ 100/2 ರಲ್ಲಿ 0.15 ಎಕ್ರೆ ಜಮೀನಿನಲ್ಲಿ 15 ಲೋಡ್ ಗಳಷ್ಟು ಮರಳು (150 ಮೆಟ್ರಿಕ್ ಟನ್ ) ಮತ್ತು KA-19-B-9286, KA-20-A-2467, KA-19-D-1648 ಮೂರು ಲಾರಿಗಳಿದ್ದು KA-19-MC-3086 JCB ಮತ್ತು KA-19-AB-9786 ಲಾರಿಯನ್ನು ಅದರ ಮಾಲಿಕರು ಎರಡು ವಾಹನಗಳನ್ನು ಸ್ಥಳಾಂತರಿಸಿದ್ದು. 0.06.75 ಎಕರೆ ಜಮೀನಿನಲ್ಲಿ 10 ಲೋಡ್ (100 ಮೆಟ್ರಿಕ್ ಟನ್) ಮತ್ತು ಸರ್ವೆ ನಂಬ್ರ 101/1A ರಲ್ಲಿ 0.50 ಎಕ್ರೆ ಜಮೀನಿನಲ್ಲಿ 25 ಲೋಡ್ (250 ಮೆಟ್ರಕ್ ಟನ್ ) ಮರಳನ್ನು ಕಳ್ಳತನದಿಂದ ಅನಧಿಕೃತವಾಗಿ ದಾಸ್ತಾನಿರಿಸಿದ್ದು, ಒಟ್ಟು ಅಂದಾಜು 500 ಮೆಟ್ರಿಕ್ ಟನ್ ಮರಳು ಅದರ ಮೌಲ್ಯ ರೂ 3,50.000/- ಮತ್ತು KA-19-B-9286, KA-20-A-2467, KA-19-D-1648 ಮೂರು ಲಾರಿಗಳ ಒಟ್ಟು ಅಂದಾಜು ಮೌಲ್ಯ ರೂ 24,00,000/- ಆಗಬಹುದು ಮರಳನ್ನು ಕಳ್ಳತನದಿಂದ ಅನಧಿಕೃತವಾಗಿ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ರಾಜಧನವನ್ನು ವಂಚಿಸಿ ದಸ್ತಾನಿರಿಸಿದ ಕೆಮ್ರಾಲ್ ಗ್ರಾಮದ ಸರ್ವೆ ನಂಬ್ರ 100/2 ರ ಮತ್ತು ಸರ್ವೆ ನಂಬ್ರ 101/1A ಮಾಲಿಕರಾದ ಅಮೀನಾ ಕೋಂ ಕೆ.ಯು.ಮೊಹಮ್ಮದ್ ಮತ್ತು ಸರ್ವೆ ನಂಬ್ರ : 100/2 ರ ಮಾಲಿಕರಾದ ಕೆ.ಯು ಮೂಸಬ್ಬ ಬಿನ್ ದಿ|| ಎಂ. ಕುಂಞ ಬ್ಯಾರಿ ರವರ ಮೇಲೆ ಮತ್ತು ಮರಳು ಸಾಗಾಟಕ್ಕೆ ಬಳಸಿರುವ KA-19-B-9286, KA-20-A-2467, KA-19-D-1648, KA-19-AB-9786 ಲಾರಿ ಮಾಲಿಕರ ಹಾಗೂ KA-19-MC-3086 JCB ಮಾಲಿಕರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿ.

 

ಇತ್ತೀಚಿನ ನವೀಕರಣ​ : 09-12-2022 07:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080