ಅಭಿಪ್ರಾಯ / ಸಲಹೆಗಳು

Crime Reported in : CEN Crime PS  

ದಿನಾಂಕ 10-01-2023 ರಂದು 09-30 ಗಂಟೆಗೆ ಬಂದರು ದಕ್ಷಿಣ ಧಕ್ಕೆಯಲ್ಲಿರುವ ಟ್ರಾಲ್ ಬೋಟ್ ಕಟ್ಟಡದ ಎದುರು ಝಾಹೀರ್ ಅಬ್ಬಾಸ್ ಸಫ್ವಾನ್ (26) ವಾಸ: ಮನೆ ನಂಬ್ರ 4-94(Y)6, ನ್ಯೂ ಕಾಲೋನಿ ರೈಲ್ವೇ ಸ್ಟೇಶನ್ ರಸ್ತೆ, ಕೋಟೆಕಾರ್ ಸೋಮೇಶ್ವರ ಗ್ರಾಮ ಮಂಗಳೂರು  ಎಂಬವರು ಮಾದಕ ವಸ್ತುವಾದ ಗಾಂಜಾ ವನ್ನು ಸೇವನೆ ಮಾಡಿ ನಷೆಯಲ್ಲಿರುವವನನ್ನು ವಶಕ್ಕೆ ಪಡೆದು ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ಪರೀಕ್ಷೆಗೊಳಪಡಿಸಿದಾಗ ಮಾಧಕ ವಸ್ತು ಗಾಂಜಾ ಸೇದಿರುವುದು ದೃಢಪಟ್ಟಿರುವುದರಿಮದ  ಆರೋಪಿ ಝಾಹೀರ್ ಅಬ್ಬಾಸ್ ಸಫ್ವಾನ್ ಎಂಬವನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

Surathkal PS

ದಿನಾಂಕ 09-01-2023 ರಂದು ರಾತ್ರಿ 11-00  ಗಂಟೆಗೆ  ಇಡ್ಯಾ ಗ್ರಾಮದ ಹೊಸಬೆಟ್ಟು ಮುಖ್ಯ ಪ್ರಾಣದ ಮಠದ ಮುಂಭಾಗ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬಳಿ  ಕಿಶೋರ್ ಅಮನ್ ಶೆಟ್ಟಿ ಪ್ರಾಯ 30 ವರ್ಷ ವಾಸ: ಎ ಒನ್ ಬೀಡಿ ಕುಳಾಯಿ ಹತ್ತಿರ, ಕುಳಾಯಿ ಗ್ರಾಮ, ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ  ಎಂಬಾತನು  ಸೀಗರೇಟ್ ಬತ್ತಿಯೊಂದಿಗೆ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿ ನಶೆಯಲ್ಲಿರುವವನನ್ನು ವಶಕ್ಕೆ ಪಡೆದು  ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಖಾತ್ರಿಪಡಿಸಲು ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ “ Tetrahydracannabinoid : POSITIVE, The drug one step screen test panel (Urine) is an immunoassay based on the principle of competitive binding” ಎಂಬುದಾಗಿ ವರದಿ ನೀಡಿದ್ದು ಆರೋಪಿತನು ಮಾದಕ ವಸ್ತು ಸೇವನೆ ಮಾಡಿರುವುದು ಧೃಡಪಟ್ಟಿರುವುದರಿಂದ ರೋಪಿತನ ವಿರುದ್ದ ಪ್ರಕರಣ ದಾಕಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Ullal PS

ದಿನಾಂಕ 09-01-2023 ರಂದು ಪ್ರಕರಣದ ಪಿರ್ಯಾದಿದಾರರಾದ ರೇವಣಸಿದ್ದಪ್ಪ PSI ರವರು ಠಾಣಾ ಸಿಬ್ಬಂದಿಗಳು ಠಾಣಾ ಸರಹದ್ದಿನಲ್ಲಿ ವಿಶೇಷ ರೌಂಡ್ಸ್ ಕರ್ತವ್ಯವನ್ನು ನಿರ್ವಹಿಸುತ್ತಾ ಕೋಟಕಾರು ಬೀರಿ ಜಂಕ್ಷನ್ ಬಳಿ ಇರುವಾಗ ತಲಪಾಡಿ ಗ್ರಾಮದ ತಚ್ಚಾಣಿ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ತುಂಬಿದ ಕಟ್ಟನ್ನು ಕೈಯಲ್ಲಿ ಹಿಡಿದುಕೊಂಡು ಮಾರಾಟ ಮಾಡುವ ಸಲುವಾಗಿ ಮೋಟಾರ್ ಸೈಕಲಿನಲ್ಲಿ ದೇವಿಪುರ ಕಡೆಯಿಂದ ತಚ್ಚಾಣಿ ಮೂಲಕ ತಲಪಾಡಿ ಕಡೆಗೆ ಹೋಗಲು ಬರುತ್ತಿದ್ದಾರೆ ಎಂಬುದಾಗಿ  ಮಾಹಿತಿ ಬಂದಂತೆ  ಮುಂಜಾನೆ 5-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ತಲಪಾಡಿ  ಗ್ರಾಮದ ತಚ್ಚಾಣಿ ಬಳಿ ತಲುಪಿದಾಗ ಅಲ್ಲಿ ರಸ್ತೆಯಲ್ಲಿ ಒಂದು ಮೋಟಾರು ಸೈಕಲಿನಲ್ಲಿ ಸವಾರ ಮತ್ತು ಸಹಸವಾರ ಪ್ರಯಾಣಿಸುತ್ತಿದ್ದು,  ಆ ಮೋಟಾರು ಸೈಕಲಿನ ಹ್ಯಾಂಡಲಿಗೆ ಒಂದು ಪ್ಲಾಸ್ಟಿಕ್ ಕಟ್ಟನ್ನು ಸಿಕ್ಕಿಸಿಕೊಂಡು ಪ್ರಯಾಣಿಸುತ್ತಿದ್ದುದನ್ನು ಕಂಡು ಆ ಮೋಟಾರು ಸೈಕಲ್ ಸವಾರನಿಗೆ ಮೋಟಾರು ಸೈಕಲನ್ನು ನಿಲ್ಲಿಸುವಂತೆ ಸೂಚಿಸಿದಾಗ ಮೋಟಾರ್ ಸೈಕಲ್ ಸವಾರನು ಪಿರ್ಯಾದಿದಾರರು ಹಾಗೂ ಸಿಬ್ಭಂಧಿಯವರನ್ನು ಕಂಡು ಮೋಟಾರ್ ಸೈಕಲನ್ನು ಬಂದ ದಾರಿಗೆ ಹಿಂದಕ್ಕೆ ತಿರುಗಿಸಿದಾಗ ಸಹ ಸವಾರನು ಮೋಟಾರ್ ಸೈಕಲಿನಿಂದ ಜಿಗಿದು ಓಡಿ ಹೋಗಿ ತಪ್ಪಿಸಿಕೊಂಡಿದ್ದು  ಸವಾರನನ್ನು ಪಿರ್ಯಾದಿದಾರರು ಹಾಗೂ ಸಿಬ್ಭಂಧಿಯವರು ಸುತ್ತುವರಿದು ಅಲ್ಲಿಂದ  ತಪ್ಪಿಸಿಕೊಳ್ಳದಂತೆ ಹಿಡಿದು ನಿಲ್ಲಿಸಿ. ಮೋಟಾರು ಸೈಕಲ್ ಸವಾರನ ಹೆಸರು ವಿಳಾಸ ವಿಚಾರಿಸಿದಾಗ 1) ಮೊಹಮ್ಮದ್ ರಾಜಿಕ್ (23) ವಾಸ: ಪುರುಶಂ ಕೋಡಿ, ಜಲ್ಲಿ ಕ್ರಶರ್ ಹತ್ತಿರ, ಸುಂಕದಕಟ್ಟೆ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ ಎಂಬುದಾಗಿ ತಿಳಿಸಿರುತ್ತಾನೆ. ಮೋಟಾರು ಸೈಕಲಿನ ನಂಬ್ರ ನೋಡಲಾಗಿ ಕೆಎಲ್60 ಅರ್-4825 ನೇ ಯಮಹಾ ಕಂಪೆನಿಯ ಅರ್. ಒನ್.5 ಮೋಟಾರು ಸೈಕಲ್ ಆಗಿದ್ದು ಈ ಮೋಟಾರು ಸೈಕಲಿನ ಹ್ಯಾಂಡಲಿಗೆ ಒಂದು ಪ್ಲಾಸ್ಟಿಕ್ ಕಟ್ಟವನ್ನು ಸಿಕ್ಕಿಸಿರುವುದು ಕಂಡು ಬಂದಿದ್ದು, ಸದ್ರಿ ಕಟ್ಟನ್ನು ಪರಿಶೀಲಿಸಿದಾಗ ಗಾಂಜಾ ಇದ್ದು ವಿಚಾರಿಸಲಾಗಿ ಅವರಿಬ್ಬರೂ ಕೇರಳ ಕಡೆಯಿಂದ ಹೆಸರು ವಿಳಾಸ ತಿಳಿಯದ ಒಬ್ಬ ವ್ಯಕ್ತಿಯಿಂದ ಕ್ರಯಕ್ಕೆ ಪಡೆದುಕೊಂಡು ಬಂದ ಸುಮಾರು 4ಕೆ.ಜಿ.ತೂಕದ ಗಾಂಜಾ ತುಂಬಿದ ಕಟ್ಟನ್ನು ಗಿರಾಕಿಗಳಿಗೆ ಹಣಕ್ಕೆ ಮಾರಾಟ ಮಾಡಲು ಅಕ್ರಮವಾಗಿ  ಸಾಗಾಟ ಮಾಡಿಕೊಂಡು ಹೋಗುವುದು ಎಂದು ತಿಳಿಸಿದ್ದು  ಗಾಂಜಾದ ಅಂದಾಜು ಮೌಲ್ಯ ರೂ.40,000/- ಆಗಬಹುದು. ಸವಾರನಲ್ಲಿ ಆತನ ಜೊತೆಯಲ್ಲಿ ಸಹ ಸವಾರನ ಹೆಸರು ವಿಳಾಸ ಕೇಳಿದಾಗ ಮೊಹಮ್ಮದ್ ಅಸ್ಗರ್ @ ಮೊರತನ ಅಸ್ಗರ್ ವಾಸ: ಅಂಗನವಾಡಿ ಶಾಲೆಯ ಹತ್ತಿರ, ಮೊರತಾನ ಮನೆ, ಕಡಂಬಾರು ಗ್ರಾಮ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ ಎಂದು  ತಿಳಿಸಿದ್ದು ಇವರುಗಳು ಮಾದಕ ವಸ್ತು ಗಾಂಜಾ ತುಂಬಿದ ಕಟ್ಟನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೆಎಲ್60 ಅರ್-4825 ನೇ ಯಮಹಾ ಕಂಪೆನಿಯ ಅರ್. ಒನ್.5 ಮೋಟಾರು ಸೈಕಲ್ ಇದರ ಅಂದಾಜು ಮೌಲ್ಯ ರೂ. 1,00,000/- ಈ ಎಲ್ಲಾ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಆರೋಪಿಗಳು ಯಾವುದೇ ಪರವಾನಿಗೆ ಹಾಗೂ ದಾಖಲಾತಿಗಳನ್ನು ಹೊಂದದೇ ಮಾದಕವಸ್ತುವಾದ ಗಾಂಜಾವನ್ನು ಹಣಕ್ಕಾಗಿ ಗಿರಾಕಿಗಳಿಗೆ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮೋಟಾರು ಸೈಕಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಪತ್ತೆ ಮಾಡಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Kankanady Town PS                

ಪಿರ್ಯಾದುದಾರರಾದ ತೇಜಪಾಲ್ ಸುವರ್ಣ ಇವರು ಮಂಗಳೂರಿನ ಖಾಸಗೀ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಪಿಗ್ಮಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 16.12.2022 ರಂದು ಸಂಜೆ 18:30 ಗಂಟೆಗೆ KA19EL7585 ನೇ T.V.S ಕಂಪನಿಯ ಪೆಪ್ ಪ್ಲಸ್ ಸ್ಕೂಟರನ್ನು ಪಂಪವೆಲ್ ಜಂಕ್ಷನ್ ನಲ್ಲಿ ಪಾರ್ಕಿಂಗ್ ಮಾಡಿ ಕೀಯನ್ನು ಸ್ಕೂಟರ್ ನಲ್ಲಿಯೇ ಬಿಟ್ಟು ಪಿಗ್ಮಿ ಕಲೆಕ್ಷನ್ ಗೆ ಹೋಗಿರುವುದಾಗಿದ್ದು. ವಾಪಾಸ್ ಸಂಜೆ 18:45 ಗಂಟೆಗೆ ಬಂದು ನೋಡಿದಲ್ಲಿ ಪಾರ್ಕ್ ಮಾಡಿದ ಸ್ಥಳದಲ್ಲಿ ಸ್ಕೂಟರ್ ಇರುವುದಿಲ್ಲ. ಪಿರ್ಯಾದುದಾರರು ಪಂಪವೆಲ್ ಜಂಕ್ಷನ್ನ ಸುತ್ತಮುತ್ತ ಹುಡುಕಾಡಿ ಸ್ನೇಹಿತರು ಹಾಗೂ ಮುಂತಾದವರುಗಳಲ್ಲಿ ವಿಚಾರಸಿದ್ದು ಸ್ಕೂಟರ್ ಪತ್ತೆಯಾಗಿರುವುದಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದ್ದು ಕಳ್ಳತನವಾದ ಸ್ಕೂಟರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ. ಕಳ್ಳತನವಾದ ಸ್ಕೂಟರ್ ನ ಆದಾಂಜು ಮೌಲ್ಯ 15000/- ರೂಪಾಯಿ ಆಗಬಹುದಾಗಿದೆ.

Mangalore Rural PS             

ಪಿರ್ಯಾದಿದಾರರ ಚಿಕ್ಕಪ್ಪ ತಾಲೆಪಾಡಿ ಎಂಬವರು ಮಂಗಳೂರು ತಾಲೂಕು ನೀರುಮಾರ್ಗ  ಕೆಲರೈ ಮನೆಯಲ್ಲಿ ಹೆಂಡತಿಯೊಂದಿಗೆ ವಾಸವಾಗಿದ್ದು ಇವರ ಮಗಳು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಅಲ್ಲಿಯೆ ಹೆರಿಗೆಯಾದ ಕಾರಣ ಮಗು ಮತ್ತು ತಾಯಿಯ ಆರೈಕೆ ನೋಡಿಕೊಳ್ಳುವರೇ ಆಸ್ಟ್ರೇಲಿಯಾಕ್ಕೆ ಹೋಗುವ ಸಮಯ ಅವರ ಮಿತ್ರ ಕಿರಣಕುಮಾರ್ ಎಂಬವರಲ್ಲಿ ಮನೆಯನ್ನು ನೋಡಿಕೊಳ್ಳಲು ತಿಳಿಸಿರುತ್ತಾರೆ. ದಿನಾಂಕ 31/12/2022 ರಂದು ಕಿರಣಕುಮಾರ್ ರವರು ಸಂಜೆ 06.00 ಗಂಟೆಗೆ ವಿಜಯಕುಮಾರ ರವರ ಮನೆಗೆ ಬಂದು ಕಾರ್ ಸ್ಟಾರ್ಟ್ ಮಾಡಿ ಹೋಗಿರುತ್ತಾರೆ. ದಿನಾಂಕ 09/01/2023 ರಂದು ಸಂಜೆ 04.00 ಗಂಟೆಗೆ ಕಿರಣಕುಮಾರ್ ರವರು ವಿಜಯಕುಮಾರ್ ರವರ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಮುಖ್ಯ ಬಾಗಿಲ ಬೀಗವನ್ನು ಒಡೆದು ಯಾವುದೋ ಆಯುಧದಿಂದ ತೆರೆದು ಒಳ ಪ್ರವೇಶಿಸಿ ಮನೆಯ ಬೆಡ್ ರೂಂಗಳ ಬಾಗಿಲ ಬೀಗವನ್ನು ಒಡೆದು ಮನೆಯಲ್ಲಿ ಜಾಲಾಡಿ ಕಾರ್ ಪಾರ್ಕನಲ್ಲಿದ್ದ KA-19 ML-5719 BREZZA ಕಾರನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿಯೂ ಕಾರಿನ ಅಂದಾಜು ಮೌಲ್ಯ 8 ಲಕ್ಷ ರೂಪಾಯಿಗಳು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 10-01-2023 07:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080