Feedback / Suggestions

 

Crime Reported in : Kavoor PS

ದಿನಾಂಕ 08/04/2023 ರಂದು ಸಮಯ ರಾತ್ರಿ 21-30 ಗಂಟೆಗೆ ಪಿರ್ಯಾದಿ RAGHU NAYAK

 ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಮಯ ಬಾತ್ಮಿದಾರರಿಂದ ದೂರವಾಣಿಗೆ ಕರೆ ಮಾಡಿ “ಮರಕಡ ಗ್ರಾಮದಿಂದ ಪಡುಶೆಡ್ಡೆ ಕಡೆಗೆ ಹೋಗುವ ಕಾಂಕ್ರೀಟ್ ರಸ್ತೆಯಲ್ಲಿ ಸುಮಾರು 20 ರಿಂದ 25 ವರ್ಷದ ಯುವಕನೋರ್ವನು ಸ್ಕೂಟಿಯಲ್ಲಿ ಗಾಂಜಾವನ್ನು ಇರಿಸಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಕಾಯುತ್ತಿರುವುದಾಗಿ ನೀಡಿದ  ಮಾಹಿತಿಯಂತೆ,  ಯುವಕನೊರ್ವ ಸ್ಕೂಟರ್ ವಾಹನವನ್ನು ನಿಲ್ಲಿಸಿರುವುದು ಕಂಡು ಬಂದಿದ್ದು, ಕೂಡಲೇ ಸದ್ರಿ ಸ್ಥಳಕ್ಕೆ ರಾತ್ರಿ ಸುಮಾರು 22-10 ಗಂಟೆಗೆ ತಲುಪಿ ಸ್ಕೂಟರ್ ಪಕ್ಕದಲ್ಲಿ ನಿಂತುಕೊಂಡಿದ್ದ ಯುವಕನು ಇಲಾಖಾ ವಾಹನವನ್ನು ಕಂಡು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಗಳ ಸಹಾಯದಿಂದ  ತಡೆದು ಆತನನ್ನು ವಿಚಾರಿಸಿದಲ್ಲಿ ಹೆಸರು ಸುಹಾನ್ ಎಸ್ ಪೂಜಾರಿ (23) ವಾಸ: ಡೋ. ನಂಬ್ರ: 4-99 ವಡ ಬಂಡೇಶ್ವರ ರಸ್ತೆ, ಕೋಲಾ ಮಲ್ಪೆ ಉಡುಪಿ. ಜಿಲ್ಲೆ ಎಂಬುದಾಗಿ ತಿಳಿಸಿರುತ್ತಾನೆ. ಆತನನ್ನು ವಶಕ್ಕೆ ಪಡೆದು ಹೂ, ಬೀಜ, ಕಾಂಡ ಮತ್ತು ಎಲೆಗಳಿಂದ ಕೂಡಿರುವ ಮಾದಕ ವಸ್ತುವಾದ ಗಾಂಜಾ ಪ್ಯಾಕೇಟ್ ನ್ನು ಹಾಜರುಪಡಿಸಿದ್ದನ್ನು ಡಿಜಿಟಲ್ ತೂಕ ಮಾಪಕದಲ್ಲಿ ತೂಕ ಮಾಡಲಾಗಿ 1 ಕೆ.ಜಿ 990 ಗ್ರಾಂ ಆಗಿದ್ದು, ಇದರ ಅಂದಾಜು ಮೌಲ್ಯ 44,000/- ರೂ ಆಗಬಹುದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಹಾಗೂ ಮೋಬೈಲ್ಲ ಪೋನ್ ನ್ನು ಸ್ವಾಧಿನ ಪಡಿಸಿಕೊಂಡಿರುವುದಾಗಿ ಎಂಬಿತ್ಯಾದಿ.

Traffic South Police Station                                        

ಪಿರ್ಯಾದಿ ವಿಜಿತ್ (20 ವರ್ಷ) ರವರು  ದಿನಾಂಕ: 09-04-2023 ರಂದು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ; KA-19-HK-4446 ನೇದನ್ನು ಸವಾರಿ ಮಾಡಿಕೊಂಡು ಅವರ ಮನೆಯಾದ ಇರಾದಿಂದ ಅಸೈಗೋಳಿ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10-50 ಗಂಟೆಗೆ ಮುಡಿಪು ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ತಲುಪಿದಾಗ ಕಂಬ್ಳಪದವು ಕಡೆಯಿಂದ ಮುಡಿಪು ಕಡೆಗೆ ಬರುತ್ತಿದ್ದ ಕಾರು ನಂಬ್ರ: KA-19-MF-5202 ನೇದನ್ನು ಅದರ ಚಾಲಕ ವರದರಾಜ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಲ್ಲಿನ ತೆರೆದ ರಸ್ತೆ ವಿಭಾಜಕದ ಮೂಲಕ ಓಮ್ಮೇಲೆ ಕಾರನ್ನು ಮುಡಿಪು ಕಡೆಯಿಂದ ಕಂಬ್ಳಪದವು ಕಡೆಗೆ ಹಾದು ಹೋಗಿರುವ ರಸ್ತೆಗೆ ಕಾರನ್ನು ತಂದಾಗ ಸದ್ರಿ ಅದೇ ರಸ್ತೆಯಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರು ನಿಯಂತ್ರಣ ತಪ್ಪಿ ಅವರ ಮೋಟಾರ್ ಸೈಕಲ್ ನ್ನು ಕಾರಿನ ಹಿಂದಿನ ಎಡಭಾಗದ ಡೋರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಗೈ ಭುಜಕ್ಕೆ ಗುದ್ದಿದ ಗಾಯ ಹಾಗೂ ಮುಖದ ಎಡಬದಿಗೆ ರಕ್ತ ಗಾಯವಾಗಿದ್ದ ಅವರನ್ನು ಅಪಘಾತ ಸ್ಥಳಕ್ಕೆ ಬಂದ ಅವರ ಸ್ನೇಹಿತ ವಿಜೇತ್ ರವರು ಆಂಬ್ಯುಲೇನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Crime Reported in : CEN Crime PS Mangaluru City

ಪಿರ್ಯಾದಿ Pramod vas ಮಂಗಳೂರು ನಗರದ ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರ ಸಂಘ ನಿಯಮಿತದ ಪ್ರಭಾರ ಕಾರ್ಯದರ್ಶಿಯಾಗಿ ದಿನಾಂಕ 01-03-2023 ರಿಂದ ಕರ್ತವ್ಯವನ್ನು ನಿರ್ವಹಿಸುತ್ತಿರುವುದಾಗಿದೆ.ಸದ್ರಿ ಸಂಘದ ಹಿಂದಿನ ಕಾರ್ಯದರ್ಶಿ ಶ್ರೀಮತಿ ಸುಶ್ಮಾರವರು ದಿನಾಂಕ 01-12-2017 ರಿಂದ ಅಕೌಂಟೆಂಟ್ ಆಗಿಯೂ ಹಾಗೂ ದಿನಾಂಕ 01-02-2022 ರಿಂದ ದಿನಾಂಕ 08-03-2022 ರವರೆಗೆ ಪ್ರಭಾರ ಕಾರ್ಯದರ್ಶಿಯಾಗಿಯೂ ಮತ್ತು ಅಕೌಂಟೆಂಟ್ ಆಗಿಯು ಸದ್ರಿಯವರು ಸಂಘದ ಹಣಕಾಸು ಮತ್ತು ಲೆಕ್ಕ ಪತ್ರಗಳನ್ನು ನಿರ್ವಹಿಸುವ ಹೊಣೆಗಾರಿಕೆ ಹೊಂದಿರುವುದಾಗಿದೆ. ಅಂತೆಯೇ ಶ್ರೀಮತಿ ಅನಿತಾ ಫೇರಾವೋ ರವರು ದಿನಾಂಕ 03-05-2004 ರಿಂದ ಸದ್ರಿ ಸಂಘದಲ್ಲಿ ಕ್ಯಾಶಿಯರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುವುದಾಗಿದೆ. ಶ್ರೀಮತಿ ಸುಶ್ಮಾ ರವರು ಅಕ್ರಮ ಲಾಭವನ್ನು ಪಡೆಯುವ  ದುರುದ್ದೇಶದಿಂದ ತನ್ನ ಹೆಸರಿನಲ್ಲಿ, ತನ್ನ ತಾಯಿ ಶ್ರೀಮತಿ ಸೌಮ್ಯ ಶೆಣೈ ರವರ ಹೆಸರಿನಲ್ಲಿ ಮತ್ತು ತನ್ನ ಗಂಡ ಸಂತೋಷ್ ಡಿ”ಸೋಜಾ ರವರ ಹೆಸರಿನಲ್ಲಿ  ಕ್ರೆಡಿಟ್ ಬ್ಯಾಲೆನ್ಸ್ ಇಲ್ಲದಿದ್ದರೂ, ಸದ್ರಿ ಸಂಘದಲ್ಲಿ ಉಳಿತಾಯ ಖಾತೆಯನ್ನು ತೆರದು 18,61,800/-ರೂ.ಗಳನ್ನು  ಅಕ್ರಮವಾಗಿ ಸಂಘದ ಹಣವನ್ನು ವರ್ಗಾಯಿಸಿ ದುರುಪಯೋಗಪಡಿಸಿಕೊಂಡಿರುತ್ತಾರೆ, ಮುಂದುವರೆದು ಸಂಘದ ಎಸ್.ಬಿ.ಐ ಬ್ಯಾಂಕ್ ಆರ್ಯಾ ಸಮಾಜ ರಸ್ತೆ ಚಾಲ್ತಿ ಖಾತೆಯಿಂದ 13,52,618/- ರೂ ಗಳನ್ನು  ಅಕ್ರಮವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುತ್ತಾರೆ. ನಂತರ ಸಂಘದ ಈ ಹಿಂದಿನ ಸೆಕ್ರಟಾರಿ ನೀಡಿದ ಚೆಕ್ ನ್ನು ವಿಜೇಂದ್ರ ಜ್ಯೂವೆಲ್ಲರ್ಸ್ ನಲ್ಲಿ 8,28,000/- ರೂ ಗಳನ್ನು ಪಾವತಿ ಮಾಡಿರುತ್ತಾರೆ. ಸದ್ರಿ ಸಂಘದ ಮಾರಾಟ ಮಾಡುವ ಮುದ್ರಾಂಕ ಪೇಪರುಗಳ ಮಾರಾಟದ ಬಾಬ್ತು 6,05,895/- ರೂ. ಗಳನ್ನು ತನ್ನ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿರುತ್ತಾರೆ.ಬಜಾಜ್ ವಿಮಾ ಕಂಪನಿಗೆ ಸಂಘದ ಖಾತೆಯಿಂದ 2,23,235/-ರೂ ಗಳನ್ನು ಅಕ್ರವಾಗಿ ವರ್ಗಾವಣೆಮಾಡಿರುತ್ತಾರೆ. ಅಷ್ಟೆ ಅಲ್ಲದೆ ತನ್ನ ಮಾಸಿಕ ವೇತನದಲ್ಲಿ 71,035/-ರೂಗಳನ್ನು ಹೆಚ್ಚುವರಿಯಾಗಿ ನಗದಿಕರಿಸಿಕೊಂಡಿರುತ್ತಾರೆ. ಈ ರೀತಿಯಾಗಿ  ಆರೋಪಿಗಳಾದ ಶ್ರೀಮತಿ ಸುಶ್ಮಾ, ಶ್ರೀಮತಿ ಅನಿತಾ ಮರಿಯಾ ಫೇರಾವೋ, ಶ್ರೀಮತಿ ಸೌಮ್ಯ ಶೆಣೈ ರವರು  ಅಕ್ರಮ ಲಾಭಗಳಿಸುವ ಉದ್ದೇಶದಿಂದ ಪಿರ್ಯಾದಿದಾರರ ಸಹಕಾರಸಂಘದ  ಲೆಕ್ಕ ಪತ್ರದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಂಘದ ಒಟ್ಟು 49,42,583/-ರೂಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ ಅಲ್ಲದೆ  ಸಂಘದ ಕಂಪ್ಯೂಟರ್ ನಲ್ಲಿದ್ದ ದಾಖಲೆಗಳನ್ನು ಅಳಿಸಿ ಹಾಕಿ ಸಾಕ್ಷ ನಾಶ ಮಾಡಿರುತ್ತಾರೆ ಎಂಬಿತ್ಯಾದಿ.

 

 Mangalore South PS

ದಿನಾಂಕ 08-04-2023 ರಂದು ಬೆಳಿಗ್ಗೆ 07-50 ಗಂಟೆಯಿಂದ ಬೆಳಿಗ್ಗೆ 09-55 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ದಕ್ಷಿಣ ದಕ್ಕೆಯಲ್ಲಿರುವ ದಕ್ಷಿಣ ಕನ್ನಡ & ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಷನ್ ಕಟ್ಟಡದ ಹತ್ತಿರ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದುದಾರರಾದ ರಾಜೇಂದ್ರರವರ  ಆರ್. ಸಿ. ಮಾಲಕತ್ವದ KA 19 HE 9825 ನೊಂದಣಿ ಸಂಖ್ಯೆಯ ME4JF914JLG169911 ಚೆಸಿಸ್ ನಂಬ್ರದ, JF91EG1168180 ಇಂಜೀನ್ ನಂಬ್ರದ 09/2020ನೇ ಮೋಡಲ್ ನ ಪರ್ಲ್ ಬಿಳಿ  ಬಣ್ಣದ ಅಂದಾಜು ರೂಪಾಯಿ 80,000/- ಬೆಲೆ ಬಾಳುವ ಹೊಂಡಾ ಆಕ್ಟಿವಾ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ದಕ್ಷಿಣ ದಕ್ಕೆ, ಹೊಸ ದಕ್ಕೆ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿಯಾಗಿರುತ್ತದೆ.

 

Mangalore West Traffic PS                        

ಪಿರ್ಯಾದಿ Anandappa ದಿನಾಂಕ:05-04-2023 ರಂದು ತನ್ನ ಹೆಂಡತಿ ಶ್ರೀಮತಿ ಪಾರ್ವತವ್ವ [53] ಹಾಗೂ ಮೊಮ್ಮಗ ಶಿವರಾಜ್ [7] ರವರ ಜೊತೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ತನ್ನ ಹೆಂಡತಿಗೆ ವೈದ್ಯರಲ್ಲಿ ಪರೀಕ್ಷಿಸಲು ಬಂದು ನಂತರ ಅಲ್ಲಿಂದ ವಾಪಾಸ್ಸು ಮನೆಗೆ ಹೋಗಲು ಮಂಗಳೂರು ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಪಿರ್ಯಾದಿದಾರರು ಹಾಗೂ ತನ್ನ ಹೆಂಡತಿ ಮೊಮ್ಮಗನ ಜೊತೆ KA-20-AA-6816ನೇ ದುರ್ಗಾಂಭ ಎಂಬ ಹೆಸರಿನ ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿರುವಾಗ ಸದ್ರಿ ಬಸ್ಸಿನ ಚಾಲಕನು ಲಾಲ್ ಭಾಗ್ ಕಡೆಯಿಂದ ಲೇಡಿಹಿಲ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲೇಡಿಹಿಲ್ ಸಾಯಿಬಾಬ ಮಂದಿರದ ಬಳಿ ತಲುಪುತ್ತಿದ್ದಂತೆ ಸಮಯ ಸುಮಾರು ಬೆಳಿಗ್ಗೆ 11-15 ಗಂಟೆಗೆ ಬಸ್ಸಿನ ಚಾಲಕನು ರಸ್ತೆಗೆ ಹಾಕಲಾದ ಹಪ್ಸ್ ನ್ನು ಗಮನಿಸದೇ ಒಮ್ಮೇಲೆ ಚಲಾಯಿಸಿ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪಿರ್ಯಾದಿದಾರರ ಹೆಂಡತಿ ನಿಯಂತ್ರಣ ತಪ್ಪಿ ಬಸ್ಸಿನೊಳಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಹೆಂಡತಿಗೆ ಎಡ ಕಾಲಿಗೆ ಸೊಂಟಕ್ಕೆ ಗುದ್ದಿದ ನಮೂನೆಯ ಗಾಯ ಹಾಗೂ ಬೆನ್ನು ಮೂಳೆಗೆ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ:06-04-2023 ರಂದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಹಾಗೂ ಪಿರ್ಯಾದಿದಾರರು ಈ ದೂರನ್ನು ನೀಡಲು ಪಿರ್ಯಾದಿದಾರರ ಹೆಂಡತಿಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅವರ ಆರೈಕೆಯನ್ನು ನೋಡಿಕೊಳ್ಳುತ್ತಿದ್ದು ಹಾಗೂ ಮನೆಯವರಲ್ಲಿ ಚರ್ಚಿಸಿ ದೂರನ್ನು ನೀಡಲು ವಿಳಂಬವಾಗಿರುತ್ತದೆ ಎಂಬಿತ್ಯಾದಿ

Mangalore East Traffic PS  

ಪಿರ್ಯಾದಿ ಮುರುಗೇಶ್ ರವರು ದಿನಾಂಕ: 08/04/2023 ರಂದು ಬೆಳಿಗ್ಗೆ ಸಮಯ ಸುಮಾರು 7-30 ಗಂಟೆಗೆ ಪಂಪವೆಲ್ ಕಡೆಯಿಂದ ನಂತೂರು ಕಡೆಗೆ ಹಾದು ಬರುವ ರಾ.ಹೆ 66 ನೇಯದರ ತಾರೆತೋಟ ಎಂಬಲ್ಲಿ ರಸ್ತೆ ಬದಿಯಲ್ಲಿ ಎಳೆನೀರು ಕುಡಿಯಲೆಂದು ನಿಂತುಕೊಂಡಿದ್ದ ವೇಳೆ ಪಂಪವೆಲ್ ಕಡೆಯಿಂದ ನಂತೂರು ಕಡೆಗೆ ಕಾರು ನೊಂದಣಿ ಸಂಖ್ಯೆ: KA-01-P 7945 ನೇಯದನ್ನು ಅದರ ಚಾಲಕ ರಮೇಶ್ ಎಂಬಾತನು ದುಡುಕುತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿವೈಡರ್ ಕಡೆಗೆ ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಾದಾಚಾರಿ ಶರಣಪ್ಪ ಎಂಬುವರಿಗೆ ಢಿಕ್ಕಿ ಪಡಿಸಿದ ಪರಿಣಾಮ ಶರಣಪ್ಪ ರವರು ಕಾರಿನ ಬೊನೆಟ್ ಮೇಲೆ ಬಿದ್ದು ಗಾಜಿಗೆ ಢಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದು  ಅವರ ಬಲ ಕಾಲಿನ ತೊಡೆಗೆ ಗುದ್ದಿದ ರೀತಿಯ ಗಾಯವಾಗಿ ಮೂಳೆ ಮುರಿತ ಉಂಟಾಗಿದ್ದು ಕೈಕಾಲುಗಳಿಗೆ ತರಚಿದ ಗಾಯಗಳಾಗಿರುತ್ತವೆ, ಕೂಡಲೇ ಸ್ಥಳದಲ್ಲಿ ಉಪಚರಿಸಿ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂಬಿತ್ಯಾದಿ.

Mangalore Rural PS   

ದಿನಾಂಕ 08/04/2023 ರಂದು ಮಂಗಳೂರು ಸಿ.ಸಿ.ಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ಪಿರ್ಯಾದಿ ಶರಣಪ್ಪ ಭಂಡಾರಿಯವರಿಗೆ ಕೆ.ಎಲ್ 14 ಯು 6933 ನೇ ಬಿಳಿ ಬಣ್ಣದ ಮಾರುತಿ ಬ್ರೆಜ್ಜಾ ಕಾರಿನಲ್ಲಿ ಓರ್ವ ವ್ಯಕ್ತಿ ಮಾದಕ ವಸ್ತುವಾದ MDMA ನೇದನ್ನು ಅಕ್ರಮವಾಗಿ ಮಂಗಳೂರು ಕಡೆಗೆ ಕಾರಿನಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿ.ಸಿ.ಬಿ ಘಟಕದ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ತನಿಖಾ ಸಲಕರಣೆಗಳೊಂದಿಗೆ ಮಂಗಳೂರು ತಾಲೂಕು ಅರ್ಕುಳ ಗ್ರಾಮದ ಅರ್ಕುಳ ಬಸ್ಟಾಂಡ್ ಬಳಿ ಬೆಳಿಗ್ಗೆ 09.30 ಗಂಟೆಗೆ ತಲುಪಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಮಯ ಬೆಳಿಗ್ಗೆ 10.00 ಗಂಟೆಗೆ ಫರಂಗಿಪೇಟೆ ಕಡೆಯಿಂದ ಕೆ.ಎಲ್ 14 ಯು 6933 ನೇ ಬಿಳಿ ಬಣ್ಣದ ಮಾರುತಿ ಬ್ರೆಜ್ಜಾ ಕಾರು ಬರುವುದನ್ನು ನೋಡಿದ ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು ವಾಹನವನ್ನು ತಡೆದು ನಿಲ್ಲಿಸಿ ಕಾರಿನೊಳಗಿದ್ದ ಚಾಲಕ ಅಬ್ದುಲ್ಲಾ ಸಿ ಎಂಬುವವನು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸಿಬ್ಬಂದಿಗಳ ಸಹಾಯದಿಂದ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಬೆಂಗಳೂರಿನ ಎಂ.ಎಸ್ ಪಾಳ್ಯ ಎಂಬಲ್ಲಿಯ ಫಯಾಜ್ ಎಂಬುವವನು ತಿಳಿಸಿದ ಸ್ಥಳಕ್ಕೆ ಹೋಗಿ ಆತನಿಂದ MDMA ಮಾದಕ ವಸ್ತುವನ್ನು ಖರಿದಿ ಮಾಡಿ ಬಂದಿರುವುದಾಗಿಯು ಸದ್ರಿ MDMA ಮಾದಕ ವಸ್ತುವನ್ನು ಸೈದು ಎಂಬಾತನೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಮುಡಿಪು ದೇರಳಕಟ್ಟೆ ಪರಿಸರದ ಸಾರ್ವಜನಿಕರಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುವ ಉದ್ಧೇಶದಿಂದ ತಂದಿರುವುದಾಗಿಯು ಈ ಬಗ್ಗೆ ಸೈದು ಎಂಬುವವನು 1 ಲಕ್ಷ ಹಣ ನೀಡಿದ್ದಾಗಿಯೂ 100 ಗ್ರಾಂ ಮತ್ತು 50 ಗ್ರಾಂ ತೂಕದ 7,50,000 ರೂ ಮೌಲ್ಯದ MDMA ನ 2 ಪ್ಯಾಕೇಟ್ ಗಳನ್ನು ಮತ್ತು ಆರೋಪಿ ಉಪಯೋಗಿಸುತ್ತಿದ್ದ ರೆಡ್ಮಿ ಮೊಬೈಲ್ ಫೋನ್-1, ನಗದು ರೂ 1260/- ಹಣವನ್ನು ಹಾಗೂ ಕಾರನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ಪಿರ್ಯಾದಿಯ ಸಾರಾಂಶ.

Traffic North Police Station

ಪಿರ್ಯಾದಿ Raghavendra Naik ತಂದೆ ಕೃಷ್ಣಯ್ಯ ನಾಯ್ಕ್ (78 ವರ್ಷ) ರವರು ಈ ದಿನ ದಿನಾಂಕ: 08-04-2023 ರಂದು ಮದ್ಯಾಹ್ನ ವೇಳೆಗೆ ಕುಳಾಯಿಯ ಜಾತ್ರೆ ಮುಗಿಸಿ ಮನೆ ಕಡೆಗೆ KA-19-EW-9542 ನಂಬ್ರದ ದ್ವಿಚಕ್ರ ವಾಹನದಲ್ಲಿ ಮಂಗಳೂರು- ಉಡುಪಿ ರಾಹೆ 66ರಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಮದ್ಯಾಹ್ನ ಸಮಯ ಸುಮಾರು 3:15 ಘಂಟೆಗೆ ಸುರತ್ಕಲಿನ ರಾಘವೇಂದ್ರ ಕ್ಲೀನಿಕ್ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ತಂದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಲಾರಿ ಒಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಲಾರಿಯನ್ನು ಎಡಕ್ಕೆ ಚಲಾಯಿಸಿ ಪಿರ್ಯಾದಿದಾರರ ತಂದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬಲಬದಿಯ ಮಿರರ್ ಗೆ ಡಿಕ್ಕಿ ಪಡಿಸಿದ ಪರಿಣಾಮ  ಪಿರ್ಯಾದಿದಾರರ ತಂದೆ ಕೃಷ್ಣಯ್ಯ ನಾಯ್ಕ್ ರವರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಕೃಷ್ಣಯ್ಯ ನಾಯ್ಕ್ ರವರಿಗೆ ಹಣೆಯ ಬಲಬದಿ, ಬಲಕಣ್ಣಿನ ಕೆಳಗೆ ರಕ್ತ ಗಾಯ ಮತ್ತು ಬಲಕಣ್ಣಿಗೆ ಗುದ್ದಿದ ಗಾಯ ಮತ್ತು ಎರಡೂ ಕಾಲುಗಳಿಗೆ ತರಚಿದ ಗಾಯವಾಗಿದ್ದು ಸುರತ್ಕಲಿನ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಹಾಗೂ ಅಪಘಾತ ಪಡಿಸಿದ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡದೇ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ ಸಾರಾಂಶ.

Moodabidre PS    

ದಿನಾಂಕ 08-04-2023 ರಂದು ಉಮೇಶ್ ಶೆಟ್ಟಿರವರು ತನ್ನ ಬಾಬ್ತು ಕೆಎ-19-ಹೆಚ್.ಕೆ-8241 ನಂಬ್ರದ ಸ್ಕೂಟರಿನಲ್ಲಿ ಮೂಡಬಿದ್ರೆ ಕಡೆಯಿಂದ ಬಂದು ಜ್ಯೋತಿನಗರ ಕ್ರಾಸ್ ಬಳಿ ಲಾಡಿ ಕಡೆಗೆ ಹಾದು ಹೋಗಿರುವ ರಸ್ತೆಯನ್ನು 20.05 ಗಂಟೆ ಸಮಯಕ್ಕೆ ಉತ್ತರದ ಬದಿಯಿಂದ ದಕ್ಷಿಣದ ಬದಿಗೆ ದಾಟುತಿದ್ದಂತೆ ವೇಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಕೆಎ-18-ಸಿ-5170 ನಂಬ್ರದ ಕಾರನ್ನು ಅದರ ಚಾಲಕನು ಅತೀ ವೇಗ ಹಾಗು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಸ್ಕೂಟರನ್ನು ತಳ್ಳಿಕೊಂಡು ಹೋಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಪಿಲ್ಲರಿಗೆ ಉಮೇಶ ಶೆಟ್ಟಿರವರ ತಲೆಯು ತಾಗಿ ಸ್ಕೂಟರ್  ಸಮೇತ ಕೆಳಕ್ಕೆ ಎಸೆಯಲ್ಪಟ್ಟು ತಲೆಗೆ ಗಂಭೀರ ರೀತಿಯಲ್ಲಿ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ 20.39 ಗಂಟೆಗೆ ಉಮೇಶ್ ಶೆಟ್ಟಿರವರು ಮೃತ ಪಟ್ಟಿರುವುದಾಗಿದೆ.

                      

                                   

 

Last Updated: 21-08-2023 12:28 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080