ಅಭಿಪ್ರಾಯ / ಸಲಹೆಗಳು

Crime Reported in Mangalore East PS               

ಫಿರ್ಯಾದಿ MADHU KIRAN ದಾರರು ಮಂಗಳೂರು ನಗರದ ರೂಟ್ ನಂಬ್ರ 31 ರ ಪಿ.ಟಿ.ಸಿ ಹೆಸರಿನ ಖಾಸಗಿ ಬಸ್ ನಂಬ್ರ KA-19-AC-7956 ನೇದ್ದರಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ.  ಈ ದಿನ ದಿನಾಂಕ 08-09-2022 ರಂದು ಸಮಯ ಸುಮಾರು ಸಂಜೆ 5.05 ಗಂಟೆಗೆ ನವಭಾರತ್ ಸರ್ಕಲ್ ಬಳಿಯಿರುವ ಹೋಟೆಲ್ ಒಷಿಯನ್ ಪರ್ಲ್ ಮುಂಭಾಗದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿರುವ ಸಮಯ ಹಿಂದಿನಿಂದ ಬಂದ ಬಸ್ ನಂಬ್ರ KA-19-D-0477 ನೇಯದ್ದು ಪಿರ್ಯಾದಿದಾರರು ಚಲಿಸುತ್ತಿದ್ದ ಬಸ್ ಮುಂದೆ ಬಂದು ಅಡ್ಡ ನಿಲ್ಲಿಸಿ ಸದ್ರಿ ಬಸ್ ನಿರ್ವಾಹನಾದ ವಿಘ್ನೇಶ್ ಎಂಬಾನತು ಬಸ್ ನಿಂದ ಕೆಳಗಿಳಿದು ಬಂದು ಪಿರ್ಯಾದಿದಾರರಿಗೆ ಬೇವರ್ಸಿ ಕೆಳಗೆ ಇಳಿದು ಬಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಬಲಕೆನ್ನೆಗೆ ಕೈಯಿಂದ ಹೊಡೆದು ಶರ್ಟ್ ಕಾಲರ್ ಹಿಡಿದು ದೂಡಿದ ಸಮಯ ಪಿರ್ಯಾದಿದಾರರು ಬಸ್ ನಿಲ್ದಾಣದ ಬಳಿಯಲ್ಲಿದ್ದ ಗಿಡದ ಕುಂಡಕ್ಕೆ ಬಿದ್ದು ಪಿರ್ಯಾದಿದಾರರ ತಲೆಯ ಬಲಭಾಗಕ್ಕೆ ರಕ್ತಗಾಯವಾಗಿರುತ್ತದೆ ಮತ್ತು ಬಲಗೈಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಚಾಲಕನ ಸಹಾಯದಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Panambur PS           

 ಪಿರ್ಯಾದಿ ESHWAR ದಾರರು  ಕಳೆದ 10 ವರ್ಷಗಳಿಂದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶ್ರೀ ದಯಾನಂದ ರವರ ಮಾಲಕತ್ವದ ಶ್ರೀ ದುರ್ಗಾಂಬ  ಜನರಲ್ ಫ್ಯಾಬ್ರಿಕೇಶನ್ ಎಂಬ ಗ್ಯಾರೇಜನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿ ಕೊಂಡಿದ್ದು  ಗ್ಯಾರೇಜ್ ಗೆ    ಶ್ರೀ ಯೋಗೀಶ್ ಎಂಬವರ ಮಾಲಕತ್ವದ ನಂ: ಕೆಎ 20ಡಿ 5575ನೇ ಟಿಪ್ಪರ್ ಲಾರಿಯು ಹೈಡ್ರೋಲಿಕ್ ಜಾಕ್ ಕೆಲಸದ ಬಗ್ಗೆ ಬಂದಿದ್ದು, ಪಿರ್ಯಾದಿದಾರರು ಅದರ ಹೈಡ್ರೋಲಿಕ್ ಕೆಲಸ ಮಾಡಿಕೊಂಡಿದ್ದು, ನಿನ್ನೆ ದಿನ ದಿ:   08-09-2022 ರಂದು ಸಂಜೆ ಸುಮಾರು 05-45 ಗಂಟೆ ಸಮಯಕ್ಕೆ ಟಿಪ್ಪರ್ ಲಾರಿಯ ಬಾಡಿ ಭಾಗವನ್ನು ಮೇಲಕ್ಕೆ ಎತ್ತಿ ಹೈಡ್ರೋಲಿಕ್ ಜಾಕ್ ನ  ರಿಪೇರಿ ಕೆಲಸ ಮಾಡಿಕೊಂಡಿರುವಾಗ ಲಾರಿ ಚಾಲಕನು ಟಿಪ್ಪರ್ ಅನ್ನು  ಒಮ್ಮೆಲೆ ಹಿಂದಕ್ಕೆ ಚಲಾಯಿಸಿದ ಪರಿಣಾಮ ಲಾರಿಯ ಬಾಡಿಯು ಪಿರ್ಯಾದಿ ಸೊಂಟದ ಭಾಗಕ್ಕೆ ಬಿದ್ದು, ಸೊಂಟಕ್ಕೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಕೂಡಲೇ ಗ್ಯಾರೇಜ್ ನಲ್ಲಿ  ಕೆಲಸ ಮಾಡುತ್ತಿದ್ದ ಸಂತೋಷ್ ಹಾಗೂ ಗ್ಯಾರೇಜ್ ನ  ಮಾಲಕರಾದ ದಯಾನಂದ  ಎಂಬವರು ಒಂದು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸೊಂಟಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದ ನನ್ನನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಅಫಘಾತಕ್ಕೆ ನಂ: ಕೆಎ 20ಡಿ 5575 ನೇ ಟಿಪ್ಪರ್ ಲಾರಿಯ ಹೈಡ್ರೋಲಿಕ್ ಜಾಕ್ ರಿಪೇರಿ ಕೆಲಸದಲ್ಲಿದ್ದ ಸಮಯ ಅದರ ಚಾಲಕ ಯಾವುದೇ ಮುನ್ಸೂಚನೆ ನೀಡದೆ ನಿರ್ಲಕ್ಷ್ಯತನದಿಂದ ಒಮ್ಮೆಲೆ ಟಿಪ್ಪರ್ ಲಾರಿಯನ್ನು ಹಿಂದಕ್ಕೆ ಚಲಾಯಿಸಿದ ಪರಿಣಾಮ ಟಿಪ್ಪರ್ ನ  ಬಕೆಟ್ ಒಮ್ಮೆಲೆ ಕೆಳಕ್ಕೆ ಬಿದ್ದದ್ದಲ್ಲದೆ,  ಶ್ರೀ ದುರ್ಗಾಂಬಾ ಜನರಲ್ ಫ್ಯಾಬ್ರಿಕೇಶನ್ ನ  ಮಾಲಕರು ಈ ಬಗ್ಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ವಹಿಸದೆ ಕೆಲಸ ಮಾಡಿಸಿದ ಪರಿಣಾಮ ಈ ಘಟನೆಗೆ ಕಾರಣವಾಗಿರುತ್ತದೆ.  ಆದುದರಿಂದ  ಕೆಎ 20ಡಿ 5575 ನೇ ಟಿಪ್ಪರ್ ಲಾರಿಯ ಚಾಲಕ ಕೆ. ರಘುರಾಜ್ ಹಾಗೂ ಶ್ರೀ ದುರ್ಗಾಂಬಾ ಜನರಲ್ ಫ್ಯಾಬ್ರಿಕೇಶನ್ ನ  ಮಾಲಕರಾದ ದಯಾನಂದ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ  ಎಂಬಿತ್ಯಾದಿ

 

Crime Reported in Kankanady Town PS                         

ಪಿರ್ಯಾದು Manjunath S ದಾರರು ಕಾವೂರು ಶಾಖೆಯ ಮಂಗಳೂರು ವಿದ್ಯುತ್ ಸರಬರಾಜು  ಇಲಾಖೆಯಲ್ಲಿ (ಮೆಸ್ಕಾಂ) ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿದೆ. ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸುತ್ತಿರುವ ವ್ಯಾಪ್ತಿಗೆ ಒಳಪಡುವಂತಹ ಪದವಿನಂಗಡಿಯ ಇನ್ ಲ್ಯಾಂಡ್ ಬಿಲ್ಡಿಂಗ್ ನ ಆಪಲ್ ಮಾರ್ಟ್ ಮಳಿಗೆಯ ಮುಂಭಾಗದಲ್ಲಿದ್ದ ಹೆಚ್.ಟಿ/ಎಲ್. ಟಿ ವಿದ್ಯುತ್ ಕಂಬಕ್ಕೆ ದಿನಾಂಕ 09-09-2022 ರ ರಾತ್ರಿ ಸಮಯ ಸುಮಾರು 20:30 ಗಂಟೆಗೆ  ನೊಂದಣಿ ಸಂಖ್ಯೆ ತಿಳಿಯದ ಕಪ್ಪು ಬಣ್ಣದ ಸ್ಕಾರ್ಪಿಯೂ ವಾಹನವು ರಸ್ತೆಯಲ್ಲಿ  ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಡಿಕ್ಕಿ ಹೊಡೆದ ಪರಿಣಾಮ  ಮಂಗಳೂರು ವಿದ್ಯುತ್ ಸರಬರಾಜು  ಕಂಪನಿಗೆ (ಮೆಸ್ಕಾಂ) ಸೇರಿದ  ಹೆಚ್.ಟಿ/ಎಲ್. ಟಿ ವಿದ್ಯುತ್ ಕಂಬದ ಬುಡ ತುಂಡಾಗಿದ್ದು ಮೆಸ್ಕಾಂ ಇಲಾಖೆಗೆ ರೂ 20,000  ರೂಪಾಯಿ   ನಷ್ಟ ಉಂಟಾಗಿರುತ್ತದೆ  ಎಂಬಿತ್ಯಾದಿ.

 

Crime Reported in Traffic North Police Station   

 ಪಿರ್ಯಾದಿ MOHAMMED SAMSHEER B A ದಾರರು ದಿನಾಂಕ:09/09/2022 ರಂದು ಪಿರ್ಯಾದಿದಾರರ ಬಾಬ್ತು KA-19-EH-7341 ನಂಬ್ರದ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು  ಕಾವೂರಿಗೆ ಕೆಲಸಕ್ಕೆ ಹೋದವರು, ಕೆಲಸ ಮುಗಿಸಿ ವಾಪಸ್ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಮನೆಯ ಕಡೆಗೆ ಅಂದರೆ ಕಾವೂರುನಿಂದ ಕೂಳುರು ಕಡೆಗೆ ಬರುತ್ತಿದ್ದ ಸಮಯ ಸುಮಾರು ಸಂಜೆ 04.21 ಗಂಟೆಗೆ ಪಂಜಿಮೊಗರು ಎಮ್ ವಿ ಶೆಟ್ಟಿ ಕಾಲೇಜು ಎದುರುಗಡೆ ರಸ್ತೆಯ ತೀರಾ ಎಡಬದಿಯಲ್ಲಿ ಬರುತ್ತಿದ್ದಂತೆ, KA-19-AD-4387 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ಅಬ್ದುಲ್ ಸತ್ತಾರ್ ಎಂಬುವರು ಯಾವುದೇ ಸೂಚನೆ ನೀಡದೇ ನಿರ್ಲಕ್ಯತನದಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಕಾವೂರು ಕಡೆಯಿಂದ ಕೂಳುರು ಕಡೆಗೆ ಹೋಗುತ್ತಿದ್ದ ತಮ್ಮ ಬಾಬ್ತು ಮೋಟಾರ್ ಸೈಕಲ್ ಗೆ ಬ್ರೇಕ್ ಹಾಕಿದ್ದೂ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಮುಂಭಾಗ ಆಟೋರಿಕ್ಷಾದ ಹಿಂಭಾಗಕ್ಕೆ ಡಿಕ್ಕಿಯಾಗಿ ಸ್ಕೂಟರ್ ಸಮೇತ ಪಿರ್ಯಾದಿದಾರರು ರಸ್ತೆಯ ಬಲಬದಿಗೆ ಬಿದ್ದು ಅವರ ಬಲಕಾಲಿನ ಪಾದದ ಮೇಲೆ ಚರ್ಮ ಹರಿದ ರೀತಿಯ ಮೂಳೆ ಬಿರುಕುಬಿಟ್ಟ ಗಾಯವಾಗಿದ್ದು, ಅಲ್ಲದೇ ಬಲಕೈಯ ಉಂಗುರ ಬೆರಳು ಮತ್ತು ಕಿರುಬೆರಳಿಗೆ ಚರ್ಮ ಹರಿದ ರೀತಿಯ ಗಾಯವಾಗಿದ್ದು ಈ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬಿತ್ಯಾದಿ.

 

Crime Reported in Traffic South Police Station               

ದಿನಾಂಕ:09-09-2022 ರಂದು ಪಿರ್ಯಾದಿ VIDHYA SHETTY ದಾರರು ಹಾಗೂ ಅವರ ಗೆಳತಿ ಮನಿಷಾ ರವರು ಮರೋಳಿ ಎಂಬ ಹೆಸರಿನ 43 ಎ ರೂಟ್ ನಂಬರ್ ಬಸ್ಸಿನಲ್ಲಿ ಪಿರ್ಯಾದಿದಾರರ ಮನೆಯಾದ ಕೊಂಡಾಣ ಎಂಬಲ್ಲಿಗೆ ಹೋಗಿ ಕೊಂಡಾಣ ಕೈಕಂಬ ಎಂಬಲ್ಲಿ ಬಸ್ಸಿನಿಂದ ಇಳಿದು ಅವರ ಮನೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 8-35 ಗಂಟೆಗೆ ಪಳ್ಳ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಕೆಸಿ ರೋಡ್ ಕಡೆಯಿಂದ ನಾಟೇಕಲ್ ಕಡೆಗೆ ಬರುತ್ತಿದ್ದ ಆಟೋರಿಕ್ಷಾವೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರು ಮತ್ತು ಮನಿಷಾ ರವರಿಗೆ ಡಿಕ್ಕಿ ಪಡಿಸಿ ಆಟೋರಿಕ್ಷಾ ಸಮೇತ ಪರಾರಿಯಾಗಿರುತ್ತಾನೆ ಡಿಕ್ಕಿಯ ಪರಿಣಾಮ ಅವರಿಬ್ಬರು ರಸ್ತೆ ಬದಿಗೆ ಬಿದ್ದು ಪಿರ್ಯಾದಿದಾರರ ಬಲಗೈಯ ಮೊಣಗಂಟಿಗೆ ಗುದ್ದಿದ ರೀತಿಯ ಗಾಯ ಹಾಗೂ ಮನಿಷಾರವರಿಗೆ ತಲೆಗೆ ಮತ್ತು ಕೈಗೆ ಗುದ್ದಿದ ರೀತಿಯ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರೆಳಿರುತ್ತಾರೆ ಮನಿಷಾರವರಿಗೆ ಗಂಭೀರ ಸ್ವರೂಪದ ಗಾಯವಾಗಿರುವುದರಿಂದ ಅವರು ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಈ ಅಪಘಾತದ ಬಗ್ಗೆ ದೂರನ್ನು ನೀಡುವರೇ ಪಿರ್ಯಾದಿದಾರರ ಮನೆಯವರಲ್ಲಿ ವಿಚಾರಿಸಿ ಚರ್ಚಿಸಿ ಈ ದೂರನ್ನು ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ.

 

Crime Reported in Surathkal PS

ಪಿರ್ಯಾದಿ Prashanth Mondal ದಾರರು ತನ್ನ ತಂಗಿಯ ಮಗ ಭಾಪಾ ಮೊಂಡಲ್ ರೊಂದಿಗೆ ಕೃಷ್ಣಾಪುರ 7ನೇ ಬ್ಲಾಕಿನ ನೀರಿನ ಟ್ಯಾಂಕ್ ನಿರ್ಮಾಣದ ಕೆಲಸವನ್ನು ಮಾಡುತ್ತಿದ್ದು, ದಿನಾಂಕ 09-09-2022 ರಂದು ಬೆಳಿಗ್ಗೆ ಸಮಯ 11:45 ಗಂಟೆಗೆ SCOFFHOLDING ( ಅಟ್ಟಳಿಗೆ) ಜೋಡಣೆಯ ಕೆಲಸ ಮಾಡುವಾಗ ಸದ್ರಿ SCOFFHOLDING ( ಅಟ್ಟಳಿಗೆ) ಅನ್ನು ಭಾಪಾ ಮೊಂಡಲ್ ರವರು ಹಿಡಿದುಕೊಂಡು ನಿಂತಿದ್ದು ಸದ್ರಿ ಕಬ್ಬಿಣದ  SCOFFHOLDING ( ಅಟ್ಟಳಿಗೆ) ಹತ್ತಿರದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ಭಾಪಾ ಮೊಂಡಲ್ ರವರು ಮೃತಪಟ್ಟಿದ್ದು ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿದ್ದವರು ತಾನು ಕೆಲಸ ಮಾಡಿಸುತ್ತಿರುವ ಜಾಗದಲ್ಲಿ ಮುಂದಕ್ಕೆ ಕೆಲಸ ಮಾಡಿದ್ದಲ್ಲಿ ಸಾವು ಸಂಭವಿಸುವುದು ಖಚಿತ ಎಂದು ತಿಳಿದ್ದಿದ್ದರು ಕೂಡ ಯಾವುದೇ ಮುಂಜಾಗ್ರತೆ ವಹಿಸದೇ ತೀರಾ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿದ ಪರಿಣಾಮ ಕೆಲಸ ಮಾಡುತ್ತಿದ್ದ ಭಾಪಾ ಮೊಂಡಲ್ ರವರು ಮೃತ ಪಟ್ಟಿರುವುದಾಗಿದೆ.

 

Crime Reported in Mangalore South PS            

ಪಿರ್ಯಾದಿದಾರರಾದ ರಾಜಕುಮಾರ [40] ಜೆ.ಸಿ.ಬಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು. ಪಿರ್ಯಾದಿ ಹೆಂಡತಿ ರಾಜೇಶ್ವರಿ [36] ದವರು ಮಂಗಳೂರು ನಗರದಲ್ಲಿ ಕುಷ್ಟರೋಗಿಗಳಿಗೆ ಮತ್ತು ಎಡ್ಸ್ ರೋಗಿಗಳಿಗೆ ಸಾಮಾಜಿಕ ಸೇವೆಯ ಕೆಲಸ ಮಾಡಿಕೊಂಡಿದ್ದರು, ದಿನಾಂಕ: 08.09.2022 ರಂದು ಸಂಜೆ ಸುಮಾರು 7:30 ಗಂಟೆಗೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಹತ್ತಿರ ಇರುವ ಮೀನು ಮಾರ್ಕೆಟಿಗೆ  ಹೆಂಡತಿ ಜೊತೆಯಲ್ಲಿ  ಬಂದಿದ್ದು, ರಾಜೇಶ್ವರಿ ಮಕ್ಕಳಿಗೆ ತಿಂಡಿ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವರು ಮರಳಿ ಬರಲಿಲ್ಲ, ನಂತರ ಅವರನ್ನು ಸುತ್ತಮುತ್ತಲಿನ ಕಡೆಗಳಲ್ಲಿ ಹುಡುಕಾಡಿದ್ದಲ್ಲಿ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ, ಅವರ ಮೊಬೈಲ್ ಪೋನ್ ಕೂಡಾ ಪಿರ್ಯಾದಿದಾರರ ಬ್ಯಾಗಿನಲ್ಲಿ ಹಾಕಿ ಹೋಗಿರುತ್ತಾರೆ. ಅಲ್ಲದೇ ಅವರ ಬಗ್ಗೆ ಸ್ನೇಹಿತರಲ್ಲಿ, ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿಯು ಸಿಕ್ಕಿರುವುದಿಲ್ಲ, ಆದುದರಿಂದ ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ. ಚಹರೆ ವಿವರ:-                                                            

ಎತ್ತರ: 5 ಅಡಿ. ಬಣ್ಣ : ಬಿಳಿ ಮೈಬಣ್ಣ,

ತಲೆ ಮುಂಭಾಗ ಸ್ವಲ್ಪ ಬಿಳಿ ಇದ್ದು ಉಳಿದ ಕಡೆ ಕಪ್ಪು ಕೂದಲು,. 

ಬಟ್ಟೆ: ಪಿಂಕ್ ಬಣ್ಣದ ಚೂಡಿದಾರ್, ಲೆಗ್ಗಿನ್ಸ್ ಮತ್ತು ಹಳದಿ ಬಣ್ಣದ ಶಾಲ್ ಧರಿಸಿರುತ್ತಾರೆ.

ಭಾಷೆ: ಕನ್ನಡ, ತುಳು,ಮಲೆಯಾಳಂ, ಹಿಂದಿ, ಬಾಷೆ ಮಾತನಾಡುತ್ತಾಳೆ.

 

Crime Reported in Ullal PS       

ದಿನಾಂಕ: 10-09-2022 ರಂದು ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ಉಳ್ಳಾಲ ತಾಲೂಕಿನ ಉಳ್ಳಾಲ ಗ್ರಾಮದ ಮುಕ್ಕಚ್ಚೇರಿ ಕಡಪುರ ಬಳಿ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಅಬ್ದುಲ್ ರಶೀದ್, ಪ್ರಾಯ 43 ವರ್ಷ,  ವಾಸ: ಹಿಲೇರಿಯಾ ನಗರ ಮಸಿದಿಯ ಬಳಿ, ಮುಕ್ಕಚ್ಚೇರಿ, ಉಳ್ಳಾಲ ಗ್ರಮಾ ಮತ್ತು ಅಂಚೆ, ಉಳ್ಳಾಲ ತಾಲೂಕು. ಎಂಬಾತನು ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದವನನ್ನು  ವಶಕ್ಕೆ ಪಡೆದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಂತೆ ಆಪಾದಿತನು  ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿದಂತೆ, ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 10-09-2022 09:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080