ಅಭಿಪ್ರಾಯ / ಸಲಹೆಗಳು

Crime Reported in : Kavoor PS                

ಪಿರ್ಯಾದಿದಾರರಾದ ಕ್ರಿಸ್ತ್ ಕಿರಣ್ ಡಿಸೋಜಾ ಎಂಬವರು URBAN INFRATECH PVT.LTD. ಎಂಬ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು. ಇವರ ಸಂಸ್ಥೆಯ ಕಟ್ಟಡ ಕೆಲಸವು ದೇರೆಬೈಲ್ ಕೊಂಚಾಡಿಯ ಬಳಿಯ ಕರ್ಮಿಕಂಡ ಎಂಬ ಸ್ಥಳದಲ್ಲಿ ಸೈಟ್ ನಲ್ಲಿ ಕೆಲಸ ನಡೆಯುತ್ತಿದ್ದು. ಈ ಸೈಟ್ ನ ಬಾವಿಗೆ AQUA 0.5 HP VR 525 370 WSPPHOWSOS ಪಂಪ್ ಸೆಟ್ ನ್ನು ಅಳವಡಿಸಿ ಕೆಲಸ ಮಾಡುತ್ತಿದ್ದು, ಸದ್ರಿ ಪಂಪ್ ಸೆಟ್ ನ್ನು 07/10/2022 ರಂದು ಸಂಜೆ 6.00 ಗಂಟೆಯಿಂದ ದಿನಾಂಕ 08/10/2022 ರಂದು ಬೆಳಿಗ್ಗೆ 9.00 ಗಂಟೆಯ ಮಧ್ಯ ಯಾರೋ ಕಳ್ಳರು ಸದ್ರಿ ಪಂಪ್ ಸೆಟ್ ನ್ನು ಕಳುವುಮಾಡಿರುತ್ತಾರೆ.ಕಳುವಾದ ಪಂಪ್ ಸೆಟ್ ನ ಅಂದಾಜು ಮೌಲ್ಯ ರೂ. 14038/- ಆಗಿರುತ್ತದೆ, ಎಂಬಿತ್ಯಾದಿ.

Mangalore North PS                      

ಪಿರ್ಯಾದಿ ಕಂಪ್ಯೂಟರ್, ಲ್ಯಾಪ್ ಟಾಪ್, ಪ್ರಿಂಟರ್, ಸಿಸಿಟಿವಿ ಮತ್ತು ಸಂಬಂಧಿತ ಬಿಡಿಭಾಗಗಳನ್ನು ಮಾರಾಟ ಮಾಡುವ ಉದ್ಯಮಿಯಾಗಿದ್ದು, ಮನೋಜ್ ಚೌರಾಸಿಯಾ, ಮಿರಾಕಲ್ ಟೆಕ್ನಾಲಜಿಸ್, LG -18, ಕ್ರೌನ್ ಪ್ಲಾಜಾ, ವೈಶಾಲಿ ನಗರ, ಜೈಪುರ ಎಂಬ ವ್ಯಕ್ತಿಯು 7976190779 ನೇ ಮೊಬೈಲ್ ನಂಬರಿನಿಂದ ಕರೆ ಮಾಡಿ (ಸಿಸಿಟಿವಿ ಹೊರತುಪಡಿಸಿ) ಲ್ಯಾಪ್ ಟಾಪ್ ಗಳನ್ನು  ಕಡಿಮೆ ದರದಲ್ಲಿ ಒದಗಿಸುವ ಕುರಿತು ತಿಳಿಸಿರುತ್ತಾರೆ. ಅದರಂತೆ ಆಗಸ್ಟ್ ತಿಂಗಳಲ್ಲಿ ಎರಡು ಲ್ಯಾಪ್ ಟಾಪ್ ಗಳನ್ನು ಖರೀದಿಸಿರುತ್ತಾರೆ. ನಂತರ ಮನೋಜ್ ಚೌರಾಸಿಯಾ ಹಾಗೂ ಅವರ ಸಹಾಯಕಿ ಸುರಕ್ಷಾ ಖಾಂಡೆಲ್ವಾಲ್ (ಮೊ ನಂ 9950107712) ಕರೆಮಾಡಿ ಕಡಿಮೆ ದರದಲ್ಲಿ ಹೆಚ್ಚು ಲ್ಯಾಪ್ ಟಾಪ್ ಖರೀದಿಸುವಂತೆ ಆಫರ್ ನೀಡಿದ್ದು, ದಿನಾಂಕ 12.08.2022 ರಂದು ಫಿರ್ಯಾದಿದಾರರು 15 ಹೆಚ್ ಪಿ ಲ್ಯಾಪ್ ಟಾಪ್ ಜೊತೆಗೆ ಬ್ಯಾಗ್ ಗಳನ್ನು ಒದಗಿಸುವಂತೆ ತಿಳಿಸಿರುತ್ತಾರೆ. ಸದ್ರಿ 15 ಲ್ಯಾಪ್ ಟಾಪ್ ಗಳ ಮೊತ್ತ 5,73,750/- ರ ಬಿಲ್ ನಂ 7812277163871 ನ್ನು ಫಿರ್ಯಾದಿದಾರರ ಈಮೇಲ್ ಗೆ ಕಳುಹಿಸಿರುತ್ತಾರೆ. ಅದರಂತೆ ದಿನಾಂಕ 12.08.2022 ರಂದು ಬಂಟ್ಸ್ ಹಾಸ್ಟೆಲ್ ಶಾಖೆ ಮಂಗಳೂರಿನ ಆಕ್ಸಿಸ್ ಬ್ಯಾಂಕ್ ನಿಂದ 5,73,750/- ರೂ ಗಳನ್ನು ಮನೋಜ್ ಚೌರಾಸಿಯಾ ರವರು ಜೈಪುರದ ಚಿತ್ರಕೂಟದ ಆಕ್ಸಿಸ್ ಬ್ಯಾಂಕ್ ಖಾತೆ ಸಂಖ್ಯೆ 92002005564030 ನೇದಕ್ಕೆ 5,73,750/- ರೂ ಗಳನ್ನು ವರ್ಗಾಹಿಸಿರುತ್ತಾರೆ.  ಹೇಳಿದ ಸಮಯಕ್ಕೆ ಲ್ಯಾಪ್ ಟಾಪ್ ಗಳನ್ನು ತಲುಪಿಸದೇ ಇದ್ದು, ಸಂಶಯಾಗೊಂಡ ಫಿರ್ಯಾದಿದಾರರ ಮನೋಜ್ ಚೌರಾಸಿಯ ಬಗ್ಗೆ ವಿಚಾರಿಸಿದಾಗ ಈ ಹಿಂದೆ ಇದೇ ರೀತಿ ತುಂಬಾ ಜನರಿಗೆ ಕಡಿಮೆ ದರದಲ್ಲಿ ಕಂಪ್ಯೂಟರ್ ನೀಡುವುದಾಗಿ ಹೇಳಿ ಅವರಿಂದ ಹಣ ಪಡೆದು ಕಂಪ್ಯೂಟರ್ ಗಳನ್ನು ಒದಗಿಸದೇ ಮೋಸ ಮಾಡಿದ ಬಗ್ಗೆ ತಿಳಿದುಬಂದಿರುತ್ತದೆ. ಫಿರ್ಯಾದಿದಾರರಿಗೆ ಲ್ಯಾಪ್ ಟಾಪ್ ನೀಡುವುದಾಗಿ ರೂ 5,73,520/- ಮೊತ್ತವನ್ನು ಪಡೆದು ಲ್ಯಾಪ್ ಟಾಪ್ ಗಳನ್ನು ನೀಡದೇ ಮೋಸ ಮಾಡಿದ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದಕೊಳ್ಳಬೇಕೆಂಬಿತ್ಯಾದಿ.

 

Urva PS

ಈ ಪ್ರಕರಣದ ಸಾರಾಂಶವೆನೆಂದರೆ  ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ  ಉರ್ವಾಸ್ಟೋರ್   ಬಸ್  ನಿಲ್ದಾಣದ  ಬಳಿಯ ಸಾರ್ವಜನಿಕ  ರಸ್ತೆಯಲ್ಲಿ  1) ಬಸವರಾಜ್  ಮಡಿವಾಳ್  2)  ಈರಣ್ಣ ನೈನಾಪುರ,  3)  ರಾಮಪ್ಪ  ತಂಬೂರಿ, 4)  ಪರಶುರಾಮ  ಎಂಬವರುಗಳು  ದಿನಾಂಕ  09.10.2022  ರಂದು  ಬೆಳಗಿನ  ಜಾವ 03:30  ಗಂಟೆಗೆ   ಮಾರ್ಕೆಟ್  ಕೂಲಿ ಕೆಲಸಕ್ಕೆ  ಹೋಗುವ  ವಿಚಾರದಲ್ಲಿ    ಪರಸ್ಪರ ಒಬ್ಬರನ್ನೊಬ್ಬರು ಬೈದಾಡಿಕೊಳ್ಳುತ್ತ ಪರಸ್ಪರ ತಳ್ಳುತ್ತ ಸಾರ್ವಜನಿಕ ಸ್ಥಳದಲ್ಲಿ ಕಲಹವನ್ನು ಉಂಟು ಮಾಡಿ ಸಾರ್ವಜನಿಕ  ನೆಮ್ಮದಿಗೆ  ಭಂಗವುಂಟು  ಮಾಡಿರುವುದಾಗಿದೆ  ಎಂಬಿತ್ಯಾದಿ.

 

Konaje PS

ಮಂಗಳೂರು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ.ಆರ್ ರವರು ದಿನಾಂಕ 09.10.2022 ರಂದು ಸಿಸಿಬಿ ಘಟಕದ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ ಸುಮಾರು 01.30 ಗಂಟೆಗೆ ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಬಳಿಯ ಮಿತ್ತಕೋಡಿ ಎಂಬಲ್ಲಿ ಕೆಎ-19-ಡಿ-3941 ನೇ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಸದ್ರಿ ಲಾರಿಯ ಚಾಲಕನಲ್ಲಿ ಆತನ ಹೆಸರು ಕೇಳಲಾಗಿ ಅಲ್ಲಾವುದ್ದೀನ್, ಪ್ರಾಯ(32),  ವಾಸ: ಉಪ್ಪಾಳ್ಳಿ ಮನೆ, ಶಾಂತಿನಗರ, ಚಿಕ್ಕಮಗಳೂರು ಎಂಬುದಾಗಿ ತಿಳಿಸಿದ್ದು, ಸದ್ರಿ ಮೇಲ್ಕಂಡ ಕೆಎ-19-ಡಿ-3941 ನೇ ಟಿಪ್ಪರ್ ಲಾರಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೇ ಮರಳನ್ನು ಕದ್ದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದಲ್ಲದೇ ಸರಕಾರಕ್ಕೆ ಯಾವುದೇ ರಾಜಸ್ವವನ್ನು ಪಾವತಿಸದೇ ಇರುವ ಸಂಭವವಿರುವುದರಿಂದ, ಸದ್ರಿ ಕೆಎ-19-ಡಿ-3941 ನೇ ಟಿಪ್ಪರ್ ಲಾರಿ, ಅದರಲ್ಲಿ ಸಾಗಾಟ ಮಾಡುತ್ತಿದ್ದ ಮರಳಿನೊಂದಿಗೆ ಹಾಗೂ ಚಾಲಕನಾದ ಅಲ್ಲಾವುದ್ದೀನ್ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ಮರಳು ಸುಮಾರು 3 ಯೂನಿಟ್ ಮರಳು ಆಗಿರುತ್ತದೆ. ಆದುದರಿಂದ ಕೆಎ-19-ಡಿ-3941 ನೇ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕ ಅಲ್ಲಾವುದ್ದೀನ್ ಹಾಗೂ ಲಾರಿ ಮಾಲಕ ಬದ್ರು ಎಂಬಾತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರು ನೀಡಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 10-10-2022 07:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080