ಅಭಿಪ್ರಾಯ / ಸಲಹೆಗಳು

Crime Reported in : : Mangalore West Traffic PS                        

ಪಿರ್ಯಾದಿ G  ANAND ದಾರರು ದಿನಾಂಕ:09-12-2022 ರಂದು ಸಮಯ ಸುಮಾರು ಬೆಳಿಗ್ಗೆ  11.00 ಗಂಟೆಗೆ ಉರ್ವ ಚಿಲಿಂಬಿ ಮೋರ್ ಅಂಗಡಿ ಎದುರು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಲೇಡಿಹಿಲ್ ಕಡೆಯಿಂದ ಉರ್ವಸ್ಟೋರ್ ಕಡೆಗೆ KA-20-AA-7677 ನೇ ಎಕೆಎಮ್ಎಸ್ ಬಸ್ಸನ್ನು ಅದರ ಚಾಲಕನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದವರನ್ನು ಸಾರ್ವಜನಿಕರು ಹಾಗೂ ಪರಿಚಯದ ನಾಗರಾಜ ಮತ್ತು ಬಸ್ಸು ಚಾಲಕನು ಉಪಚರಿಸಿ ಚಿಕಿತ್ಸೆಗೆ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷೀಸಿದ ವೈದ್ಯರು ಪಿರ್ಯಾದಿದಾರರಿಗೆ ಬಲಭುಜಕ್ಕೆ ಗಂಭೀರ ಸ್ವರೂಪದ ಮೂಳೆ ಮುರಿತದ ಗಾಯ ತಲೆಯ ಬಲಭಾಗಕ್ಕೆ ಗುದ್ದಿದ ರಕ್ತಗಾಯವಾಗಿದ್ದವರನ್ನು ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 Panambur PS

 ಪಿರ್ಯಾದಿ NEELAPPA ದಾರರು ತನ್ನ  ಹೆಂಡತಿ ಹಾಗೂ 3 ಜನ  ಮಕ್ಕಳೊಂದಿಗೆ  ವಾಸಮಾಡಿಕೊಂಡಿದ್ದು ಪಂಜಿಮೊಗರಿನಲ್ಲಿರುವ ಸಿಮೇಂಟ್  ಗೋಡಾನ್ ನಲ್ಲಿ  ಲೋಡಿಂಗ್ ಕೆಲಸ  ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ  ಮಗ ಪ್ರಶಾಂತ್  ನೀಲಪ್ಪ ಹಂಡೇನ್ ಪ್ರಾಯ  19  ವರ್ಷ ರವರು  ಸಹ ಸಿಮೇಂಟ್  ಗೋಡಾನ್ ನಲ್ಲಿ  ಲೋಡಿಂಗ್ ಕೆಲಸ    ಮಾಡಿಕೊಂಡಿದ್ದು ಪ್ರತಿ ದಿನ ಪಿರ್ಯಾದಿ ಜೊತೆಯಲ್ಲಿ ಕೆಲಸಕ್ಕೆ  ಹೋಗುವವನು ದಿನಾಂಕ:06-12-2022 ರಂದು  ಕೆಲಸಕ್ಕೆ  ಹೋಗದೇ ಮನೆಯಲ್ಲಿ ಇದ್ದವನು, ಪಿರ್ಯಾದಿದಾರರು  ಕೆಲಸ  ಮುಗಿಸಿ ಸಂಜೆ  ಸುಮಾರು 5.00 ಗಂಟೆಗೆ  ಮನೆಗೆ  ಹೋಗಿ  ನೋಡಿದಾಗ ಪಿರ್ಯಾದಿ  ಮಗ ಪ್ರಶಾಂತ್  ನೀಲಪ್ಪ ಹಂಡೇನ್ ಪ್ರಾಯ  19  ವರ್ಷ  ಮನೆಯಲ್ಲಿ ಇರಲಿಲ್ಲ.  ಪಿರ್ಯಾದಿದಾರರು ಅಕ್ಕ ಪಕ್ಕದ  ಮನೆಯವರಲ್ಲಿ  ವಿಚಾರಿಸಿದಾಗ ಎಲ್ಲಿಯೂ ಕಂಡಿರುವುದಿಲ್ಲ ಎಂದು ತಿಳಿಸಿರುತ್ತಾರೆ, ಆತನ  ಮೊಬೈಲ್ ನಂಬ್ರ   ನೇದಕ್ಕೆ  ಕರೆ  ಮಾಡಿದ್ದು  ಸ್ವಿಚ್  ಆಫ್  ಬಂದಿರುತ್ತದೆ. ಹಾಗೂ  ಹಿರೋ ಸ್ಪೆಂಡರ್ ಕೆಎ 19 ಹೆಚ್.ಹೆಚ್ 7432  ನೇ ಬೈಕ್ ತೆಗೆದುಕೊಂಡು   ಹೋಗಿದ್ದು  ನಂತರ  ಎಲ್ಲಾ ಕಡೆ ಹುಡುಕಾಡಿದ್ದು  ಹಾಗೂ ಬಾಗಲಕೋಟೆಯ ಸಂಬಂಧಿಕರ ಬಳಿ ವಿಚಾರಿಸಿದ್ದ   ಈವರೆಗೂ  ಪತ್ತೆಯಾಗಿರುವುದಿಲ್ಲ.ಆದುದರಿಂದ ತನ್ನ ಮಗನನ್ನು ಪತ್ತೆ  ಮಾಡಿಕೊಡಬೇಕಾಗಿ  ಎಂಬಿತ್ಯಾದಿ  ಸಾರಾಂಶವಾಗಿರುತ್ತದೆ, 

ಕನ್ನಡ  ಮತ್ತು ತುಳು ಭಾಷೆ  ಮಾತನಾಡುತ್ತಾರೆ

ಪ್ರಾಯ:19 ವರ್ಷ

ಎತ್ತರ:5 ಅಡಿ

ಮೈಬಣ್ಣ:  ಗೋಧಿ  ಮೈಬಣ್ಣ, ಸಪುರ ಶರೀರ, ಕಪ್ಪು  ಕೂದಲು

ಕನ್ನಡ  ಮತ್ತು ತುಳು ಭಾಷೆ  ಮಾತನಾಡುತ್ತಾರೆ.

 

Konaje PS

ಪಿರ್ಯಾದಿ Latheef ದಾರರ ಅಕ್ಕ ಅನೀಷಾ (46) ಎಂಬಾಕೆಯನ್ನು ಕೇರಳ ಹೊಸಂಗಡಿ ವಾಸಿ ಹುಸೆನಬ್ಬ ಎಂಬುವವರಿಗೆ ಮದುವೆ ಮಾಡಿ ಕೊಟ್ಟಿದ್ದು, ದಿನಾಂಕ 02/12/2022 ರಂದು ಅನೀಶಾಳು ಪಿರ್ಯಾದಿದಾರರ ಮನೆಯಾದ ಮುಡಿಪುಗೆ ಬಂದಿದ್ದವರು, ದಿನಾಂಕ 04/12/2022 ರಂದು ಮುಡಿಪುವಿನಲ್ಲಿಯೇ ಇರುವ ತಾಯಿ ಮನೆಗೆ ಹೋಗಿದ್ದು, ಮಧ್ಯಾಹ್ನ ಸುಮಾರು 02 ಗಂಟೆಗೆ ಊಟ ಮಾಡಿ ಗಂಡನ ಮನೆಗೆ ಹೊಗುವುದಾಗಿ ತಾಯಿಯಲ್ಲಿ ಹೇಳಿ ಹೋದವರು ಈವರೆಗೂ ಗಂಡನ ಮನೆಗೂ ಹೋಗದೆ, ತಾಯಿಯ ಮನೆಗೂ ಬಾರದೇ, ನನ್ನ ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ. ಕಾಣೆಯಾದ ಅನೀಷಾಳನ್ನು ನೆರಕೆರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿಕೊಂಡು ಈವರೆಗೂ ಹುಡುಕಾಡಿದರೂ ಪತ್ತೆಯಾಗದೆ ಇದ್ದು, ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ.

 

Traffic North Police Station                             

“ಫಿರ್ಯಾದಿ Abdul Khader ದಾರರು ದಿನಾಂಕ 09.12.2022 ರಂದು ತನ್ನ ಬಾಬ್ತು ಆಕ್ಟಿವಾ ಸ್ಕೂಟರ್ ನಂಬ್ರ KA-19EA-7434 ನೇದರಲ್ಲಿ ಮನೆಯಿಂದ ಬೈಕಂಪಾಡಿ ಫ್ಯಾಕ್ಟರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 09:00 ಗಂಟೆಗೆ ಬೈಕಂಪಾಡಿ ಜೋಕಟ್ಟೆ ಕ್ರಾಸ್ ಬಳಿ ತಲುಪುತ್ತಿದ್ದಂತೆಯೇ ಹಿಂದಿನಿಂದ ECCO ಕಾರು ನಂಬ್ರ KA-19MK-0870 ನೇಯದನ್ನು ಅದರ ಚಾಲಕ ಮೋಹನ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಬಲ ಪಕ್ಕೆಲುಬಿಗೆ ಮುರಿತದ ಗಾಯವಾಗಿದ್ದು, ಗಾಯಾಳು ಚಿಕಿತ್ಸೆಯ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 10-12-2022 08:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080