ಅಭಿಪ್ರಾಯ / ಸಲಹೆಗಳು

Crime Reported in : Bajpe PS

ಪಿರ್ಯಾದಿ Vikram Shetty ದಿನಾಂಕ 09.01.2023 ರಂದು ಸಂಜೆ ಕೆಲಸದ ನಿಮಿತ್ತ ತನ್ನ ಬಾಬ್ತು ಬೈಕಿನಲ್ಲಿ ಎಕ್ಕಾರಿನಿಂದ ಕಟೀಲ್ ಕಡೆಗೆ ಹೋಗುತಿದ್ದ ಸಮಯ ಸಂಜೆ ಸುಮಾರು 7.00 ಗಂಟೆಗೆ  ಪಿರ್ಯಾದಿದಾರರ ಬೈಕಿನ ಮುಂದೆಯಿಂದ KA19HA9194 ನೇ ಬೈಕ್ ಸವಾರನು ಬಜಪೆ ಕಡೆಯಿಂದ ಕಟೀಲ್ ಕಡೆಗೆ ಹೋಗುತಿದ್ದು ಮಂಗಳೂರು ತಾಲೂಕು ಬಡಗ ಎಕ್ಕಾರು ಗ್ರಾಮದ ಎಕ್ಕಾರು ಶಾಲೆ ತಲುಪುತಿದ್ದಂತೆ  ಎದುರಿನಿಂದ ಅಂದರೆ ಕಟೀಲ್ ಕಡೆಯಿಂದ ಬಜಪೆ ಕಡೆಗೆ KA14K4957 ನೇ ಬೈಕ್ ಸವಾರನು ಅತೀ ವೇಗ ಮತ್ತು ಅಜಾಗಾರುಕತೆಯಿಂದ ತನ್ನ ಬೈಕ್ ನ್ನು ಚಲಾಯಿಸಿ KA19HA9194 ನೇ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರೆಡೂ ಬೈಕ್ ಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಕೂಡಲೇ ಪಿರ್ಯಾದಿದಾರರ ಮತ್ತು ಸಾರ್ವಜನಿಕರು ಬೈಕ್ ಸವಾರರನ್ನು  ಉಪಚರಿಸಿದ್ದು KA19HA9194 ನೇ ಬೈಕ್ ಸವಾರನು  ಕೆಂಜಾರಿನ ಯತೀಶ್ ಎಂಬುದಾಗಿ ತಿಳಿದಿದ್ದು ಸದ್ರಿಯವನಿಗೆ ಅಪಘಾತದಿಂದ ಮುಖಕ್ಕೆ ತೀವ್ರ ಸ್ವರೂಪ ಗಾಯಾವಾಗಿದ್ದು ಆರೋಪಿ KA14K4957 ನೇ ಸವಾರನಾದ ದುರ್ಗಾ ಪ್ರಸಾದನಿಗೂ ಮುಖಕ್ಕೆ ಮತ್ತು ಅಲ್ಲಲ್ಲಿ ತರಚಿದ ಗಾಯವಾಗಿದ್ದು KA19HA9194 ನೇ ಬೈಕ್ ಸವಾರನಾದ ಯತೀಶ್ ರವರನ್ನು ಮಂಗಳೂರು ಎಜೆ ಆಸ್ಪತ್ರೆಗೆ ಮತ್ತು ದುರ್ಗಾಪ್ರಸಾದ್ ರವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರಗೆ ದಾಖಲಿಸಿದ್ದು ಈ ಅಪಘಾತಕ್ಕೆ ದುರ್ಗಾಪ್ರಸಾದ್ ರವರು ತನ್ನ ಬೈಕ್ ನ್ನು ಅತೀವೇಗ ಮತ್ತು ಅಜಾಗಾರುಕತೆಯಾಗಿ ಚಲಾಯಿಸಿದ್ದೆ ಕಾರಣವಾಗಿರುತ್ತದೆ ಎಂಬಿತ್ಯಾದಿ

 

Crime Reported in : Ullal PS                                                                                    

ದಿನಾಂಕ  11/01/2023 ರಂದು ಬೆಳಿಗ್ಗೆ 11-15 ಗಂಟೆಗೆ ಪೆರ್ಮನ್ನೂರು ಗ್ರಾಮದ, ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಟ್ರಾಕ್ ಬಳಿಯಲ್ಲಿ ಇರುವ ಸಾರ್ವಜನಿಕ ಸ್ಥಳದಲ್ಲಿ  ಅಬ್ದುಲ್ ಇರ್ಷಾದ್ ಪ್ರಾಯ 30 ವರ್ಷ,  ವಾಸ: ಡೋರ್ ನಂಬ್ರ 7/270, ನವಾಝ್ ಮಂಜಿಲ್, ಪಚ್ಚಂಬಳ, ಪೈವಳಿಕೆ ಪಂಚಾಯತ್ ಇಚಿಲಂಗೋಡು ಅಂಚೆ, ಮಂಗಲ್ಪಾಡಿ ಗ್ರಾಮ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ.ಎಂಬಾತನು ಯಾವುದೋ ಮಾದಕ ವಸ್ತುವನ್ನು ಸೇದಿ ಅಮಲಿನಲ್ಲಿ ಮಾತನಾಡುತ್ತಿದ್ದವನನ್ನು ವಶಕ್ಕೆ ಪಡೆದು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರಿಂದ ಪರೀಕ್ಷೆ ನಡೆಸಿದಲ್ಲಿ ಸದ್ರಿ ವ್ಯಕ್ತಿಯು ಅಮಲು ಪದಾರ್ಥವಾದ ಗಾಂಜಾ ಸೇವನೆ ಮಾಡಿರುವುದು ಧೃಢಪಟ್ಟಿರುವುದರಿಂದ ಈ ಬಗ್ಗೆ ಸದ್ರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿ ಎಂಬಿತ್ಯಾದಿ.

 

Crime Reported in : Mangalore East PS   

ದಿನಾಂಕ: 11-01-2023 ರಂದು ಪೂರ್ವಾಹ್ನ ಸಮಯ 11-50 ಗಂಟೆಗೆ ಅತ್ತಾವರದಲ್ಲಿ ಆರೋಪಿ ಶುಭಂ ನಂದನ್ (29) ವಾಸಃ ಕದ್ರಿ ಮಂಗಳೂರು ಎಂಬಾತನು ಪಾರ್ಕ್ ನ ಬಳಿ ಸಿಗರೇಟಿನೊಂದಿಗೆ ಮಾದಕ ದ್ರವ್ಯ ಸೇವಿಸುತ್ತಿದ್ದವನನ್ನು  ವಶಕ್ಕೆ ಪಡೆದು  ಮಾದಕ ದ್ರವ್ಯ ಸೇವನೆ ಮಾಡಿರುವುದರ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಆತನನ್ನು ವೈದ್ಯಾಧಿಕಾರಿಯವರು, ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆ, ಮಂಗಳೂರು ಇವರ ಮುಂದೆ ಹಾಜರುಪಡಿಸಿ  ವೈದ್ಯಕೀಯ ಪರೀಕ್ಷೆಗೊಳಪಡಿಸಿದಲ್ಲಿ ಈತನು Amphetamine ಮತ್ತು Methamphetamine ಎಂಬ ಮಾದಕ ದ್ರವ್ಯ  ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಢಪಟ್ಟಿರುವುದರಿಂದ,  ಈತನ ವಿರುದ್ಧ  NARCOTIC DRUGS AND PSYCHOTROPIC SUBSTANCES ACT 1985 ರಂತೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

 Crime Reported in :Moodabidre PS

ದಿನಾಂಕ 10-01-2023 ರಂದು ಪಿರ್ಯಾದಿ Sujith, ಪ್ರಶಾಂತ್, ಸುದೇಶ್, ಏಕನಾಥ್, ನಾಗೇಶ್, ಮನೋಜ್ ಮತ್ತು ಇತರರು ಸೇರಿ ಭಜನೆ ಮಾಡಲೆಂದು ಮಾಸ್ತಿಕಟ್ಟೆ ಕಡೆಗೆ ಹೋಗಿದ್ದು ವಿಶ್ವಾಸ್ ತ್ರಿಭುವನ ಪ್ಲಾಟ್ ಹತ್ತಿರ ಇರುವ ನೆಚರ್ ಐಸ್ ಕ್ರಿಂ ಅಂಗಡಿಯ ಹತ್ತಿರ ಇರುವ ಮನೆಯಲ್ಲಿ ಭಜನೆ ಮುಗಿಸಿಕೊಂಡು ಮುಂದಿನ ಮನೆಗೆ ಹೊಗಲೆಂದು ನೇಚರ್ ಐಸ್‌ಕ್ರೀಂ ಅಂಗಡಿಯ ಮುಂದೆ ರಸ್ತೆ ದಾಟಲೆಂದು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಸಂಜೆ ಸುಮಾರು 7.45 ಗಂಟೆಗೆ ಇರುವೈಲು ಕಡೆಯಿಂದ ಮೂಡಬಿದ್ರೆ ಕಡೆಗೆ KA-14-EK-3922 ನಂಬರಿನ ಮೋಟಾರು ಬೈಕ್ ನ್ನು ಅದರ ಸವಾರ ಸಮರ್ಥ್ ಎಂಬಾತನು ಹಿಂಬದಿ ಸೀಟಿನಲ್ಲಿ ಇನ್ನಿಬ್ಬರನ್ನು ಕುಳ್ಳಿರಿಸಿಕೊಂಡು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಬದಿಗೆ ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಮನೋಜನಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

 

2) ಪಿರ್ಯಾದಿ Sujith Shetty ಚಿಕ್ಕಮ್ಮನವರ ಮೂಲ ಮನೆಯಾದ ಪಟ್ಲ, ತುಲಮೊಗೇರು, ಕಡಂದಲೆ ಗೋಳಿದಡಿಯಲ್ಲಿ ದಿನಾಂಕ 05-01-2023 ರ ರಾತ್ರಿ ಗಂಟೆ 08.00 ರಿಂದ ದಿನಾಂಕ: 06-01-2023 ರ ಬೆಳಿಗ್ಗೆ 5.00 ರ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಪಿರ್ಯಾದುದಾರರ ಮನೆಯ ಕಿಟಕಿಯನ್ನು ಮುರಿದು ಒಳಗೆ ಪ್ರವೇಶಿಸಿ ಮನೆಯೊಳಗಿದ್ದ ಕಬ್ಬಿಣದ ಕಪಾಟನ್ನು ಜಾಲಾಡಿ ಅಲ್ಲೇ ಪಕ್ಕದ ಗೋಡೆಯಲ್ಲಿದ್ದ ಕೈ ಚೀಲ ಒಂದರಲ್ಲಿ ಅಡಿಕೆ ಮಾರಿ ತಂದಿದ್ದ 50.000/- ರೂಗಳನ್ನು ಇರಿಸಿದ್ದ ಆ ಕೈಚೀಲವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 11-01-2023 07:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080