ಅಭಿಪ್ರಾಯ / ಸಲಹೆಗಳು

Crime Reported in : Mangalore East PS

ಫಿರ್ಯಾದಿ ಶಿಲ್ಪಾ ಪೂಂಜಾ ರವರು ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತ, ಶಾಂತಿ ನಗರ, ಜೆಪ್ಪು, ಮಂಗಳೂರು ರವರಿಂದ ಸಾಲ ಪಡೆಯುವ ಸಮಯ ಸೊಸೈಟಿ ಕೇಳಿದ ಪ್ರಕಾರ ತನ್ನ ಬ್ಯಾಂಕ್ ಖಾತೆ ಇರುವ ಐಡಿಬಿಐ ಬ್ಯಾಂಕ್ , ಮೆಟಾಲ್ಕೊ ಪ್ಲಾಝಾ,  ಹೈಲ್ಯಾಂಡ್ ರಸ್ತೆ, ಫಳ್ನೀರ್, ಕಂಕನಾಡಿ, ಮಂಗಳೂರು ಇಲ್ಲಿನ ಖಾತೆ ನಂ.  ಕೆಲವು ಖಾಲಿ ಚೆಕ್ ಗಳನ್ನು ಸೊಸೈಟಿಗೆ ನೀಡಿದ್ದು, ಫಿರ್ಯಾದುದಾರರಿಗೆ ಮೋಸ ಮಾಡುವ ಸಮಾನ ಉದ್ದೇಶದಿಂದ ನಾಲ್ಕನೇ ಆರೋಪಿ ವ್ಯವಸ್ಥಾಪಕರು ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತ, ಶಾಂತಿ ನಗರ, ಜೆಪ್ಪು, ಮಂಗಳೂರು ಇವರು ಫಿರ್ಯಾದುದಾರರ ವ್ಯವಹಾರಕ್ಕೆ ಸಂಬಂಧವಿಲ್ಲದ 1, 2 ಮತ್ತು 3ನೇ ಆರೋಪಿಗಳೊಂದಿಗೆ ಸೇರಿಕೊಂಡು   ದಿನಾಂಕ: 04-02-2021 ರಂದು ಆರೋಪಿ 1ನೇ ಪ್ರಜ್ವಲ್ ಜೋಯೆಲ್ ಫೆರ್ನಾಂಡಿಸ್ ರವರ ಹೆಸರಿನಲ್ಲಿ ಒಂದು ಚೆಕ್ ಮೂಲಕ ರೂ.50,000/-, ಆರೋಪಿ 2ನೇ ರತನ್ ಕುಮಾರ್ ಕೆ. ರವರ ಹೆಸರಿನಲ್ಲಿ ಒಂದು ಚೆಕ್ ಮೂಲಕ ರೂ. 99,000/- ಮತ್ತು ಆರೋಪಿ 3ನೇ ಅಶ್ರಫ್ ಅಬ್ದುಲ್ ಖಾದರ್ ರವರ ಹೆಸರಿನಲ್ಲಿ ಒಂದು ಚೆಕ್ ಮೂಲಕ ರೂ. 96,500/- ಹೀಗೆ ಮೂರು ಚೆಕ್ ಗಳ ಮೂಲಕ ಒಟ್ಟು ರೂ. 2,45,500/- ಗಳನ್ನು ಫಿರ್ಯಾದುದಾರರ ಖಾತೆಯಿಂದ ತೆಗೆದು ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

 

2) ಫಿರ್ಯಾದಿ ನೋಯೆಲ್ ಡಿ’ಕುನ್ಹಾ ರವರು ಕತಾರ್ ನಲ್ಲಿ HSBC Bank ನಲ್ಲಿ ಮೆನೇಜರ್ ಆಗಿ ಕೆಲಸ ಮಾಡಿಕೊಂಡು 2016 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ್ದು, 2017-2018 ನೇ ಸಾಲಿನಲ್ಲಿ ಎರಡನೇ ಆರೋಪಿ ನೆಲ್ಸನ್ ಡಿ’ಕುನ್ಹಾ ರವರ ಮೂಲಕ ಪರಿಚಯವಾದ  1ನೇ ಆರೋಪಿ ಆಗ್ನೆಲೊ ಪಿರೇರಾ ರವರು EXPAT PROJECTS & DEVELPOMENT PVT. LTD  ಸಂಸ್ಥೆಯ ಮೂಲಕ ಗೋವಾದಲ್ಲಿ ಫಿರ್ಯಾದುದಾರರಿಗೆ ಭೂಮಿ ಮಾರಾಟ ಮಾಡುವುದಾಗಿ ಹೇಳಿ ಮಾತುಕತೆ ನಡೆಸಿ, ಫಿರ್ಯಾದುದಾರರು ಕತಾರ್ ನಿಂದ ಭಾರತಕ್ಕೆ ಬಂದಾಗ ಅವರಿಗೆ ಸದರಿ ಭೂಮಿಯ ನೋಂದಣಿ ಮಾಡಿ ಕೊಡುವ ವ್ಯವಸ್ಥೆ ಮಾಡುವುದಾಗಿ ಒಂದನೇ ಆರೋಪಿ ಆಗ್ನೆಲೊ ಪಿರೇರಾ ರವರು ವಾಗ್ದಾನ ಮಾಡಿ ಭೂಮಿ ಮಾರಾಟದ ಸಂಬಂಧ ಪೂರ್ತಿ ಹಣ ರೂ. 11,00,000/- ವನ್ನು ಫಿರ್ಯಾದುದಾರರ HSBC Bank ಖಾತೆಯಿಂದ 1ನೇ ಆರೋಪಿ ತನ್ನ ಖಾತೆಗೆ ಬೇರೆ ಬೇರೆ ದಿನಗಳಲ್ಲಿ ವರ್ಗಾಯಿಸಿಕೊಂಡು 2019 ರಲ್ಲಿ ಲಾಕ್ ಡೌನ್ ಗೆ ಮೊದಲು ಫಿರ್ಯಾದುದಾರರು ಭಾರತಕ್ಕೆ ಬಂದು ಜಾಗ ತೋರಿಸುವಂತೆ ಕೇಳಿಕೊಂಡಾಗ 1ನೇ ಅರೋಪಿ ಕೋವಿಡ್ ಕಾರಣಗಳನ್ನು ನೀಡಿ  ಜಾಗ ತೋರಿಸಲು ನಿರಾಕರಿಸಿಕೊಂಡು ಬಂದಿರುತ್ತಾರೆ. ಇತ್ತೀಚೆಗೆ ಫಿರ್ಯಾದುದಾರರು ಗಂಭೀರವಾಗಿ ಅನಾರೋಗ್ಯಕ್ಕೆ ಈಡಾದ ಸಮಯ ಆರೋಪಿಗಳಿಗೆ ಕರೆ ಮಾಡಿದಾಗ ಅವರು ಸಬೂಬು ಹೇಳಿ ತಪ್ಪಿಸಿಕೊಂಡಿದ್ದು, ಇತ್ತೀಚೆಗೆ ಫಿರ್ಯಾದುದಾರರು ಮನೆಯಲ್ಲಿ ಇರುವಾಗ  ಇಬ್ಬರೂ ಆರೋಪಿಗಳು ಫಿರ್ಯಾದುದಾರರಿಗೆ ಕರೆ ಮಾಡಿ ಹಣ ಮರುಪಾವತಿ ಮಾಡುವುದಿಲ್ಲ, ಜಾಗ ಕೂಡಾ ನೋಂದಣಿ ಮಾಡಿಸಿಕೊಡುವುದಿಲ್ಲ, ಅಲ್ಲದೆ ಈ ಬಗ್ಗೆ ದೂರು ನೀಡಿದರೆ ಫಿರ್ಯಾದಿದಾರರನ್ನು ಕೊಲೆ ಮಾಡುವುದಾಗಿ ಬೆದರಿಸಿರುವುದಲ್ಲದೆ ಒಂದನೇ ಆರೋಪಿಯು ಕಾನೂನು ಬಾಹಿರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸದರಿ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿ ನಂಬಿಕೆ ದ್ರೋಹ ಮಾಡಿ ವಂಚಿಸಿರುವುದಾಗಿದೆ ಎಂಬಿತ್ಯಾದಿ.

 

Bajpe PS

ಪಿರ್ಯಾದಿ Manish ದಾರರ ಮಾವನಾದ ಸತೀಶ್ ಮೂಲ್ಯ ಎಂಬುವರು ದಿನಾಂಕ 09.10.2022 ರಂದು ರಾತ್ರಿ ಸುಮಾರು 7.50 ಗಂಟೆಗೆ ಮಂಗಳೂರು ತಾಲೂಕು ಪಡುಪೆರೆರಾ ಗ್ರಾಮದ ಅಂಬಿಕಾ ನಗರ ಜಿನ್ನಪ್ಪಣ್ಣನ ಅಂಗಡಿಯ  ಹತ್ತಿರ  ನೆಡೆದುಕೊಂಡು ಹೋಗುತ್ತಿರುವಾಗ ಬಜಪೆ ಕಡೆಯಿಂದ ಕೈಕಂಬ ಕಡೆಗೆ ಬೈಕ್ ನಂ KL14-Y-7491 ನೇ ಸವಾರನಾದ  ಸನದ್ ಮಹಮ್ಮದ್ ಶೇಖ್ ಎಂಬುವನು ಅತೀವೇಗ ಮತ್ತು ಅಜಾಗರುಕತೆಯಿಂದ ಬೈಕ್ ಚಲಾಯಿಸಿ ಅಂಬಿಕಾ ನಗರ ಜಿನ್ನಪ್ಪಣ್ಣನ ಅಂಗಡಿಯ  ಹತ್ತಿರ  ನೆಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಮಾವನಾದ ಸತೀಶ್ ಮೂಲ್ಯ ಎಂಬುವನಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಾವನಿಗೆ ತಲೆಗೆ ಮತ್ತು ಕೈಕಾಲುಗಳಿಗೆ ರಕ್ತಗಾಯವಾಗಿದ್ದು ಪಿರ್ಯಾದಿದಾರರ ಮಾವನನ್ನು ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

 

Mangalore West Traffic PS               

ದಿನಾಂಕ 10-10-2022 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಕೋಡಿಕಲ್ ಕ್ರಾಸ್ ಬಳಿ ಪಿರ್ಯಾಧಿ DONALD D SOUZA ದಾರರ ಹೆಂಡತಿ ಶ್ರೀಮತಿ ಆಶಾ ಡಿ ಸೋಜಾ ಪ್ರಾಯ 61 ವರ್ಷ  ಎಂಬುವವರು ಕೂಳೂರುನಲ್ಲಿರುವ ತಮ್ಮ ಸೈಬರ್ ಅಂಗಡಿಗೆ ತನ್ನ ಬಾಬ್ತು KA-19-Y-3458 ನಂಬ್ರದ ಸ್ಕೂಟರನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಹಿಂದುಗಡೆಯಿಂದ  KA-19-AD-2934 ನಂಬ್ರದ ಲಾರಿಯನ್ನು ಅದರ ಚಾಲಕನು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರ ಹೆಂಡತಿ ಸ್ಕೂಟರ್ ಸಮೇತ  ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ  ಗಾಯಗೊಂಡು ಮಂಗಳೂರು ನಗರದ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಘಟನೆಗೆ ಲಾರಿ ಚಾಲಕನ ನಿರ್ಲಕ್ಷತನವೇ ಕಾರಣವಾಗಿರುತ್ತದೆ ಎಂಬಿತ್ಯಾದಿ

       

ಇತ್ತೀಚಿನ ನವೀಕರಣ​ : 11-10-2022 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080