ಅಭಿಪ್ರಾಯ / ಸಲಹೆಗಳು

Crime Reported in : Mulki PS

ಪಿರ್ಯಾದಿ Ashraf Ali ದಾರರು ದಿನಾಂಕ: 23-10-2022 ರಂದು ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಕಿಲ್ಪಾಡಿ ಹನಾಫಿ ಮಸೀದಿಯಲ್ಲಿ ವಾರ್ಷಿಕ ಮಹಾ ಸಭೆಗೆ ತೆರಳಿದ್ದು ಅಲ್ಲಿ ಜಮಾತಿನ ಕಾರ್ಯ ಚಟುವಟಿಕೆಯ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿ ಮಾತನಾಡಲು ಪ್ರಾರಂಭಿಸಿದ್ದು ಆ ಸಮಯದಲ್ಲಿ ಆರೋಪಿತರಾದ ಮೊಹಮ್ಮದ್ ಫಾರೂಖ್ ಮತ್ತು ಅಬ್ದುಲ್ ಹಫೀಜ್ ರವರು ಪಿರ್ಯಾದಿದಾರರಿಗೆ  ಮಾತನಾಡಲು ಅಡ್ಡಿಪಡಿಸಿರುತ್ತಾರೆ. ನಂತರ ಸಭೆ ಮುಗಿದ ಬಳಿಕ ಮಧ್ಯಾಹ್ನ 1.15 ಗಂಟೆಗೆ ಪಿರ್ಯಾದಿದಾರರು ಮನೆಗೆ ತೆರಳಲು ಮಸೀದಿಯ ಕಂಪೌಂಡ್ ಗೇಟಿನ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೊಹಮ್ಮದ್ ಫಾರೂಕ್ ನು ಪಿರ್ಯಾದಿದಾರರನ್ನು ಉದ್ದೇಶಿಸಿ ವಿನಾ ಕಾರಣ ಜಗಳ ತೆಗೆದು ಪಿರ್ಯಾದಿದಾರರಿಗೆ ಬಡವ, ಬೇವರ್ಸಿ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ಧಗಳಿಂದ ಬೈದಿದ್ದು, ಆ ವೇಳೆ ಅಲ್ಲಿಗೆ ಬಂದ ಅಬ್ದುಲ್ ಹಫೀಜ್ ನು ಪಿರ್ಯಾದಿದಾರರನ್ನು ಕೈಯಿಂದ ದೂಡಿ, ಕಾಲಿನಿಂದ ಬಲ ತೊಡೆಗೆ ತುಳಿದಿರುತ್ತಾರೆ ಮತ್ತು ಟೈಲ್ಸ್ ತುಂಡನ್ನು ತಂದು ಹಲ್ಲೆ ಮಾಡಲು  ಪ್ರಯತ್ನಿಸಿದ್ದು ಆ ವೇಳೆ ಅಲ್ಲಿದ್ದ ಜನರು ಆರೋಪಿತರು ಪಿರ್ಯಾದಿದಾರರಿಗೆ ಮಾಡುವ ಹಲ್ಲೆಯನ್ನು ಬಿಡಿಸಿರುತ್ತಾರೆ.  ಈ ಹಲ್ಲೆಯಿಂದ ಪಿರ್ಯಾದಿದಾರರ ಬಲಗಾಲಿನ ಹಿಮ್ಮಡಿಗೆ ಗಾಯ ಆಗಿ ರಕ್ತ ಹೆಪ್ಪುಗಟ್ಟಿದ್ದು, ಪಿರ್ಯಾದಿದಾರರ ಬಲತೊಡೆಗೆ ಹಾಗೂ ಎದೆಗೆ ನೋವುಂಟಾಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ಮುಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ” ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-11-2022 09:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080