ಅಭಿಪ್ರಾಯ / ಸಲಹೆಗಳು

Crime Reported in : : CEN Crime PS

ಪಿರ್ಯಾದಿದಾರರು ದಿನಾಂಕ 08-01-2023 ರಂದು YATRA.COM  ನಲ್ಲಿ ಟಿಕೆಟ್ ಬುಕ್ ಮಾಡಿ ರೂಪಾಯಿ 6380/- ನ್ನು ಆನ್ ಲೈನ್ ನಲ್ಲಿ ಪಾವತಿ ಮಾಡಿದ್ದರು. ಆದರೆ ಟಿಕೆಟ್ ಬಾರದೇ ಇದ್ದು, ದಿನಾಂಕ 09-01-2023 ರಂದು ಅದೇ YATRA.COM  ನವರಿಗೆ ಹಣ ಹಿಂತಿರುಗಿಸುವಂತೆ ತಿಳಿಸಿದಾಗ, ಕರೆ ಸ್ವೀಕರಿಸಿದ ವ್ಯಕ್ತಿಯು ಪಿರ್ಯಾದಿದಾರರ ಅಕೌಂಟ್ ನಂಬ್ರದ ಕೊನೆಯ 6 ಡಿಜಿಟ್ ತಿಳಿಸುವಂತೆ ಕೇಳಿದಾಗ ಪಿರ್ಯಾದಿದಾರರು ಕೊನೆಯ 6 ಡಿಜಿಟ್ ನಂಬ್ರ ಹೇಳಿದ್ದರು. ದಿನಾಂಕ 11-01-2023 ರಂದು ಪಿರ್ಯಾದಿದಾರರಿಗೆ ಎಸ್.ಬಿ.ಐ ರವರಿಗೆ ಮೆಸೇಜ್ ಬಂದಿದ್ದು, ಪರಿಶೀಲಿಸಿದಾಗ ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್ ಖಾತೆ ನಂಬ್ರ ರಿಂದ  ರೂಪಾಯಿ 99860/- ಕಟಾವಣೆಗೊಂಡು HDFC BANK ACCOUNT NO. 301122297805 ನೇದಕ್ಕೆ ವರ್ಗಾವಣೆಯಾಗಿರುವುದು ತಿಳಿದು ಬಂತು. ನಂತರ ಪಿರ್ಯಾದಿದಾರರು ಈ ಮಾಹಿತಿಯನ್ನು ಸಂಬಂಧಿಸಿದ ಪಿರ್ಯಾದಿದಾರರ ಬ್ಯಾಂಕಿಗೆ ನೀಡಿ, 1930 ನೇದಕ್ಕೆ ಕರೆ ಮಾಡಿ ತಿಳಿಸಿ ದೂರು ದಾಖಲಿಸಿದ್ದು, ಅವರ ಸೂಚನೆಯಂತೆ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಪಿರ್ಯಾದಿದಾರರಿಗೆ  YATRA.COM  ನವರೆಂದು ನಂಬಿಸಿ 7908994179, 9883468529, 9958278008, 9920677025, 9222256767  ನೇ ನಂಬ್ರದಿಂದ ಮೋಸದಿಂದ ಕರೆ ಮಾಡಿ  ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್ ಖಾತೆ ನಂಬ್ರ ರಿಂದ  ರೂಪಾಯಿ 99860/- ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವುದಾಗಿದೆ.  ಎಂಬಿತ್ಯಾದಿ

2) ದಿನಾಂಕ:12/01/2023 ರಂದು ಆಪಾದಿತರಾದ ಸುಕೇತ್ ಎಂಬಾತನು ಇತರೊಂದಿಗೆ ಹಿಮಾಚಲ ಪ್ರದೇಶ ರಾಜ್ಯದಿಂದ  ಖರೀದಿಸಿದ ಸುಮಾರು 1 ರಿಂದ 2 ಕೆ.ಜಿಯಷ್ಟು  ತೂಕದ ನಿಷೇದಿತ ಮಾದಕ ವಸ್ತುವಾದ ಚರಸ್ ಮತ್ತು ಗಾಂಜಾವನ್ನು  ತಮ್ಮ ವಶದಲ್ಲಿಟ್ಟುಕೊಂಡು ಮಂಗಳೂರಿನ ಕೆಲವು ವ್ಯಕ್ತಿಗಳಿಗೆ ಮಾರಾಟಕ್ಕಾಗಿ ಉಡುಪಿಯಿಂದ ಕಾರು ನಂಬ್ರ ಕೆ.ಎ.20.ಎಂ.ಎ.3772 ಬಿಳಿ ಬಣ್ಣದ ಮಾರುತಿ ರಿಡ್ಜ್ ನೇದರಲ್ಲಿ ಮಂಗಳೂರು ದಡ್ಡಲಕಾಡ್ ಕಾರು ಗ್ಯಾರೇಜ್ ಬಳಿಗೆ  ಬರುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಆಪಾದಿತರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿ ಸೊತ್ತು ಸ್ವಾಧೀನಪಡಿಸುವರೇ ಆಪಾದಿತರ ವಿರುದ್ದ NDPS ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವರೇ ಫಿರ್ಯಾದಿಯಾಗಿರುತ್ತದೆ.

Kankanady Town PS                                 

ಪಿರ್ಯಾದುದಾರರು ಮಂಗಳೂರು ನಗರದ ಕಪಿತಾನಿಯೊ ಎಂಬಲ್ಲಿರುವ ಕಪಿತಾನಿಯೋ ಕಾನ್ವೆಂಟಿನ ಸುಫೀರಿಯರ್ ಆಗಿದ್ದು, ಕಪಿತಾನಿಯೋ ಕಾನ್ವೆಂಟ್ ನ ವಿದ್ಯಾಸಂಸ್ಥೆಯ ಎದುರು ರಾಷ್ಟ್ರೀಯ ಹೆದ್ದಾರಿಯು ಹಾದು ಹೋಗಿದ್ದು, ಇದರ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿರುತ್ತದೆ. ಈ ಸಮಯ ಕಾನ್ವೆಂಟಿನ ಶಾಲಾ ಕಾಂಪೌಂಡ್ ಗೋಡೆಯನ್ನು ಕೆಡವಿದ ಸಮಯ ಇದಕ್ಕೆ ಅಳವಡಿಸಿದ್ದ ಕಬ್ಬಿಣದ ಗೇಟ್ ಮತ್ತು ಎರಡು ದೊಡ್ಡ ಮತ್ತು ಎರಡು ಸಣ್ಣ ಕಬ್ಬಿಣದ ಕಂಬಗಳನ್ನು ಸುಮಾರು ಐದು ತಿಂಗಳ ಹಿಂದೆ ತೆಗೆದು ಕಾಂಪೌಂಡಿನ ಒಳಗೆ ಇಟ್ಟಿದ್ದು. ಈ ವಸ್ತುಗಳನ್ನು ಪಿರ್ಯಾದುದಾರರು ದಿನಾಂಕ: 19.12.2022 ರಂದು ಕೊನೆಯದಾಗಿ ನೋಡಿದ್ದು, ದಿನಾಂಕ: 12.01.2022 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಶಾಲಾ ಆವರಣಕ್ಕೆ ಬಂದು ನೋಡಿದಾಗ ಕಾನ್ವೆಂಟಿನ ಶಾಲಾ ಆವರಣದಲ್ಲಿ ಈ ಹಿಂದೆ ತೆಗೆದಿರಿಸಿದ್ದ ಒಂದು ಕಬ್ಬಿಣದ ಗೇಟ್ ಮತ್ತು ಎರಡು ದೊಡ್ಡ ಹಾಗೂ ಎರಡು ಸಣ್ಣ ಕಬ್ಬಿಣದ ಕಂಬಗಳು ಇಲ್ಲದೇ ಇರುವುದು ಕಂಡು ಬಂದಿರುತ್ತದೆ. ಯಾರೋ ಕಳ್ಳರು ದಿನಾಂಕ: 19.12.2022 ರಿಂದ ದಿನಾಂಕ: 12.01.2022 ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯಾವದಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾದ ವಸ್ತುಗಳ ಅಂದಾಜು ಮೌಲ್ಯ ರೂ. 18,000/- ಆಗಬಹುದು. ಆದುದರಿಂದ ಕಳ್ಳತನವಾದ ವಸ್ತುಗಳನ್ನು ಪತ್ತೆಮಾಡಿ ಕಳ್ಳತನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 12-01-2023 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080