ಅಭಿಪ್ರಾಯ / ಸಲಹೆಗಳು

Crime Reported in :  Traffic South Police Station

ದಿನಾಂಕ:11-09-2022 ರಂದು ಪಿರ್ಯಾದಿ TANOJ KUMAR ದಾರರು ಸ್ಕೂಟರ್ ನಂಬ್ರ:KA-19-HF-1320 ನೇ ಸ್ಕೂಟರ್ ನ್ನು ಕಾಸರಗೋಡು ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ರಾತ್ರಿ 10-20 ಗಂಟೆಗೆ ತೊಕ್ಕೊಟ್ಟಿನ ಕಲ್ಲಾಪು ಬಳಿ ರಾ.ಹೆ-66 ರಲ್ಲಿ ಬರುತ್ತಿರುವಾಗ ಪಿರ್ಯಾದಿದಾರರ ಎಡಗಡೆಯಿಂದ ಕಾರು ನಂಬ್ರ:KA-19-ML-5169 ನೇದರ ಕಾರಿನ ಚಾಲಕ ಆಸೀಫ್ ಮಸೂದ್ ಎಂಬಾತನು ಕಾರನ್ನು ತೀರಾ ನಿರ್ಲಕ್ಷ್ಯತನದಿಂದ ಹಾಗೂ ದುಡುಕುತನದಿಂದ ತೊಕ್ಕೊಟ್ಟು ಕಡೆಯಿಂದ ಕಲ್ಲಾಪು ಕಡೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅದೇ ಸಮಯ ಪಿರ್ಯಾದಿದಾರರಿಗೆ ಅಪಘಾತ ಪಡಿಸಿದ ಕಾರಿನ ಹಿಂದಿನಿಂದ ಬರುತ್ತಿದ್ದ ಕಾರು ನಂಬ್ರ: KA-19-MF-5319 ನೇದರ ಕಾರಿನ ಚಾಲಕನು ನಿಯಂತ್ರಣ ತಪ್ಪಿ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಕಾರಿನ ಹಿಂಬದಿಗೆ ಡಿಕ್ಕಿಯಾಗಿ ಡಿಕ್ಕಿಯಾದ ಕಾರು ಜಖಂಗೊಂಡು ಆ ಕಾರಿನಲ್ಲಿದ್ದವರಿಗೆ ಗಾಯವಾಗಿದ್ದು ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ತಲೆ ಹಿಂಬದಿಗೆ ಗುದ್ದಿದ ರಕ್ತಬರುವ ಗಾಯ,ಎಡಗೈ ಬೆರಳಿಗೆ ಮತ್ತು ಅಂಗೈ ತಟ್ಟಿಗೆ ಮೂಳೆ ಮುರಿತದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ಸಹರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು ನಂತರ ಅಪಘಾತ ತಿಳಿದ ಪಿರ್ಯಾದಿದಾರರ ಸಂಬಂದಿಕರು ಆಸ್ಪತ್ರೆಗೆ ಬಂದ ಮೇಲೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ತೆಜಸ್ವಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಎಂಬಿತ್ಯಾದಿ.

 

 Crime Reported in :Ullal PS

ಪಿರ್ಯಾದಿದಾರರಾದ ಮಂಗಳೂರು ಬಿ ಹೋಬಳಿ ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರಾದ ಶ್ರೀ ಮಂಜುನಾಥ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಶ್ರೀ ಸೋಮನಾಥ ದೇವಸ್ಥಾನದ ಬಳಿ ಸರಕಾರ ಪೊರಂಬೋಕು ಜಮೀನಿನಲ್ಲಿ ಅನಧಿಕೃತ ಮರಳುಗಾರಿಕೆಯನ್ನು ತಡೆಗಟ್ಟುವ ಬಗ್ಗೆ ಸೈನ್ ಇನ್ ಸೆಕ್ಯೂರಿಟಿ ಯವರು ಕಣ್ಗಾವಲಿಗಾಗಿ ಎರಡು ಸಿ.ಸಿ. ಕ್ಯಾಮರವನ್ನು ಅಳವಡಿಸಲಾಗಿದ್ದು, ದಿನಾಂಕ. 10-9-2022 ರ ಬೆಳಗಿನ ಜಾವ ಸುಮಾರು 1-30 ರಿಂದ 2-00 ಗಂಟೆಯೊಳಗೆ ಯಾರೋ ಕಿಡಿಗೇಡಿಗಳು ಸದ್ರಿ ಸಿಸಿಕ್ಯಾಮರಕ್ಕೆ ಟಿಪ್ಪರ್ ಲಾರಿಯಿಂದ ಢಿಕ್ಕಿ ಹೊಡೆಸಿ ಸಿಸಿ ಕ್ಯಾಮರಗಳನ್ನು ಹಾಳು ಮಾಡಿದ್ದು, ಈ ಬಗ್ಗೆ ಸಿಸಿ ಕ್ಯಾಮೆರದಲ್ಲಿ ದೃಶ್ಯಾವಳಿಯು ದಾಖಲಾಗಿರುವುದು ಕಂಡು ಬಂದಿರುತ್ತದೆ. ಇದರಿಂದಾಗಿ ಅಂದಾಜು ಸುಮಾರು ರೂ.75,000/- ನಷ್ಟ ಸಂಭವಿಸಬಹುದಾಗಿ ಅಂದಾಜಿಸಲಾಗಿದೆ.  ಆದುದರಿಂದ ಸದ್ರಿ ಎರಡು ಸಿಸಿ ಕ್ಯಾಮರಗಳು ಸಾರ್ವಜನಿಕ ಸೊತ್ತು ಆಗಿದ್ದು, ಅವುಗಳನ್ನು ಹಾನಿಗೆಡವಿದ ಟಿಪ್ಪರ್ ಲಾರಿಯ ಚಾಲಕ ಹಾಗೂ ಅದಕ್ಕೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

 

Crime Reported in :Barke PS

ಪಿರ್ಯಾದಿ Panduranga Shenoy ದಾರರ ಮಗನಾದ ಕೃಷ್ಣ ಶೆಣೈ ಪ್ರಾಯ 23 ವರ್ಷ ಎಂಬುವರು ಮಾಯಾ ಟ್ರೇಡರ್ಸ್ ನಲ್ಲಿ 03 ತಿಂಗಳಿನಿಂದ ಕೆಲಸಮಾಡಿಕೊಂಡಿರುತ್ತಾನೆ. ದಿನಾಂಕ: 05-09-2022 ರಂದು ಬೆಳಿಗ್ಗೆ 11-30 ಗಂಟೆಗೆ ಮನೆಯಿಂದ ಬ್ಯಾಗ್ ಹಾಗೂ ಹಣವನ್ನು ಹಿಡಿದುಕೊಂಡು ಹೋದವನು ಕೆಲಸಕ್ಕೆ ಹೋಗದೆ ಮನೆಗೂ ಬಾರದೇ ಕಾಣೆಯಾಗಿರುತ್ತಾನೆ ಈ ಬಗ್ಗೆ ಪಿರ್ಯಾದಿದಾರರು ಕೆಲಸಕ್ಕೆ ಹೋಗುವ ಅಂಗಡಿಯಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಈ ವೆರೆಗೂ ಪತ್ತೆಯಾಗದೆ ಇರುವುದರಿಂದ  ಈ ದಿನ ತಡವಾಗಿ ದೂರು ನೀಡಿರುತ್ತಾರೆ ಎಂಬಿತ್ಯಾದಿ ಸಾರಾಂಶ

ಕಾಣೆಯಾದ ವ್ಯಕ್ತಿಯ ಚಹರೆ

 1. ಹೆಸರು: ಕೃಷ್ಣ ಶೆಣೈ
 2. ಪ್ರಾಯ: 23 ವರ್ಷ
 3. ಎತ್ತರ 5 ಅಡಿ 11 ಇಂಚು
 4. ಮೈಬಣ್ಣ: ಗೋಧಿ ಮೈಬಣ್ಣ,
 5. ಕುರುಚಲು ಕಪ್ಪು ಗಡ್ಡ ಹಾಗೂ ಮೀಸೆ, ಸಾಧಾರಣ ಶರೀರ,
 6. ಮಾತನಾಡುವ ಭಾಷೆ: ಕನ್ನಡ, ಕೊಂಕಣಿ, ತುಳು, ಹಿಂದಿ, ಇಂಗ್ಲೀಷ್

Crime Reported in :Mangalore Rural PS               

ದಿನಾಂಕ 11-09-2022 ರಂದು ಸಂಜೆ ಸಮಯ 18.00 ಗಂಟೆಗೆ ಮಂಗಳೂರು ತಾಲೂಕು ವಳಚಿಲ್ ವ್ಯೂ ಪಾಯಿಂಟ್ ಬಳಿ ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ವಿವೇಕ (21) ವಾಸ-ಕರತೊಲೆಯಿಲ್ ಹೌಸ್ ಪುತಲಂ ದಕ್ಷಿಣ, ಎರ್ನಾಡ್ ಪೋಸ್ಟ್ ಮಲಪುರಂ ಜಿಲ್ಲೆ ಕೇರಳ ರಾಜ್ಯ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

 

ಇತ್ತೀಚಿನ ನವೀಕರಣ​ : 12-09-2022 06:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080