ಅಭಿಪ್ರಾಯ / ಸಲಹೆಗಳು

Crime Reported in Surathkal PS

ಪಿರ್ಯಾದಿದಾರರು  ಎಂ.ಆರ್.ಪಿ.ಎಲ್ ಕಂಪನಿಯಲ್ಲಿ ಸೆಕ್ಯೂರ್ಟಿ ಇನ್ ಚಾರ್ಜ್ ಆಗಿದ್ದು,  ದಿನಾಂಕ 11-10-2022  ರಂದು 09-15 ಗಂಟೆಗೆ ಕರ್ತವ್ಯದಲ್ಲಿದ್ದ ಸಮಯ ಸ್ಕೂಲ್ ಗೇಟ್ ಬಳಿ ಕರ್ತವ್ಯದಲ್ಲಿದ್ದ ಸೆಕ್ಯೂರ್ಟಿ  ಸಿಬ್ಬಂದಿಯವರು, ಪಿರ್ಯಾದಿದಾರರಿಗೆ ಕರೆ ಮಾಡಿ ಎಂ.ಆರ್.ಪಿ.ಎಲ್ ಸಿಬ್ಬಂಧಿ ಹರ್ಷರಾಜ್ಎನ್.ಹೆಚ್ ರವರು ಅನುಮಾನಸ್ಪಾದ ಕಂಪನಿಯ ಸೊತ್ತುಗಳಾದ ಹಿತ್ತಾಳೆಯ ಕಪ್ಲಿಂಗ್ ಮತ್ತು ಹೋಸ್ ಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದು, ಆತನನ್ನು ತಡೆದು ನಿಲ್ಲಿಸಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಅಲ್ಲಿಗೆ ತೆರಳಿ ವಿಚಾರಣೆ ನಡೆಸಿದಾಗ ಆಪಾಧಿತ ಉದ್ಯೋಗಿ ತಾನು ಸುಮಾರು ಸಮಯದಿಂದ ಈ ಕೃತ್ಯ ನಡೆಸುತ್ತಿರುದಾಗಿಯೂ ಮತ್ತು ಈ ಹಿಂದೆ ಕದ್ದ ಸೊತ್ತುಗಳನ್ನು ತನ್ನ ಮನೆಯ ಹಿಂಭಾಗದಲ್ಲಿ ಬಚ್ಚಿಟ್ಟಿರುತ್ತಾನೆ ಎಂಬುವುದಾಗಿ ತಿಳಿಸಿದಂತೆ. ಪಿರ್ಯಾದಿದಾರರು ಆರೋಪಿ ಮತ್ತು ಆತನ ಜೊತೆಯಲ್ಲಿದ್ದ ಕಂಪನಿಯ ಸೊತ್ತುಗಳು , ಲಿಖಿತ ಪಿರ್ಯಾದಿಯೊಂದಿಗೆ  ಹಾಜರಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Traffic South Police Station

ದಿನಾಂಕ: 10-10-2022 ರಂದು ಪಿರ್ಯಾದಿ RAMAPPA  C  UCHIL ದಾರರ ಪತ್ನಿಯ ತಮ್ಮ ಕಿಶೋರ್.ಎಮ್ ಉಚ್ಚಿಲ್(52) ಎಂಬುವರು ಸ್ಕೂಟರ್ ನಂಬ್ರ: KA-19-ER-9279 ನೇದರಲ್ಲಿ ಉಚ್ಚಿಲ ಕಡೆಯಿಂದ ಸಂಕೋಲಿಗೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ10:30 ಗಂಟೆಗೆ ಉಚ್ಚಿಲ ರೈಲ್ವೇ ಗೇಟ್ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಹೋಗುತ್ತಿದ್ದ ಮರಳು ತುಂಬಿದ ಟಿಪ್ಪರ್ ಲಾರಿ ನಂಬ್ರ :KA19-AB-0566 ನೇದನ್ನುಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ಕಿಶೋರ್ ಅವರು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಓವರ್ ಟೇಕ್ ಮಾಡುತ್ತಾ ಯಾವುದೇ ಸೂಚನೆ ನೀಡದೇ ರಸ್ತೆಯ ಎಡಬದಿಗೆ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದಾಗ ಕಿಶೋರ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಮುಂಬಾಗಕ್ಕೆ ಟಿಪ್ಪರ್ ಲಾರಿಯ ಹಿಂಬಾಗ ಡಿಕ್ಕಿಯಾದ ಪರಿಣಾಮ ಕಿಶೋರ್ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ತಲೆ,ಎದೆ,ಮುಖ,ಮತ್ತು ಕೈಕಾಲುಗಳಿಗೆ ಗಂಭೀರ ಸ್ವರೂಪದ ರಕ್ತಗಾಯಗಳಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಕಿಶೋರ ಅವರನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷವೊಂದರಲ್ಲಿ ಕರೆದುಕೊಂಡು ಹೋಗಿ ಕೆ.ಎಸ್. ಹೆಗ್ಡೆ ದೇರಳಕಟ್ಟೆ ಆಸ್ವತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 12-10-2022 07:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080