ಅಭಿಪ್ರಾಯ / ಸಲಹೆಗಳು

Crime Reported in : Moodabidre PS

 ದಿನಾಂಕ: 10-11-2022 ರಂದು 15.00 ಗಂಟೆಗೆ ಪಿರ್ಯಾದಿ Sudeep M V PSI ದಾರರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದ್ರೆ ತಾಲೂಕು ತೆಂಕಮಿಜಾರು ಗ್ರಾಮದ ಆಳ್ವಾಸ್ ನ್ಯಾಚುರೋಪತಿ ಕಾಲೇಜು ಬಳಿ ರಾಗುಲ್ ಪ್ರಾಯ 24 ವರ್ಷ, ವಾಸ: 60, ಶಿವಶಕ್ತಿ ನಗರ ಜ್ಯೋತಿ ನಗರ ಅಂಚೆ ಅರಕೋಣಂ ತಾಲೂಕು ರಾಣಿ ಪೇಟೆ ಜಿಲ್ಲೆ ತಮಿಳು ನಾಡು, ಎಂಬಾತನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಆತನನ್ನು ವೈದ್ಯಾಧಿಕಾರಿಯವರು ಎ.ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು ಇಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ವರದಿ ನೀಡಿರುತ್ತಾರೆ. ಆದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ  ಎಂಬಿತ್ಯಾದಿ.

   

2) ದಿನಾಂಕ: 10-11-2022 ರಂದು 15.30 ಗಂಟೆಗೆ ಪಿರ್ಯಾದಿ Divakara Rai M –PSI ದಾರರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದ್ರೆ ತಾಲೂಕು ತೆಂಕಮಿಜಾರು ಗ್ರಾಮದ ಆಳ್ವಾಸ್ ನ್ಯಾಚುರೋಪತಿ ಕಾಲೇಜು ಬಳಿ ಇರುವ ಶೋಭಾವನ ಕ್ಯಾಂಪಸ್ ಬಳಿ ತಮಿಳ್ ವಲವನ್ ಪ್ರಾಯ:23 ವರ್ಷ ವಾಸ: ನಂ:2/97 ಜಂಗಲಾಹಳ್ಳಿ ಗ್ರಾಮ ಪಾಪಿರೆಟ್ಟಿಪಟ್ಟಿ ತಾಲೂಕು, ಧರ್ಮಪುರಿ ಜಿಲ್ಲೆ ತಮಿಳುನಾಡು ಎಂಬಾತನು  ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಆತನನ್ನು ವೈದ್ಯಾಧಿಕಾರಿಯವರು ಎ.ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು ಇಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ವರದಿ ನೀಡಿರುತ್ತಾರೆ. ಆದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ  ಎಂಬಿತ್ಯಾದಿ.

 

3) ಪಿಯಾದಿ Anni ರವರ  ತಾಯಿಯಾದ ಶ್ರೀಮತಿ ತಂಗಿ ಪ್ರಾಯ: 70 ವರ್ಷ ಎಂಬುವರು ದಿನಾಂಕ 05-11-2022 ರಂದು ಎಂದಿನಂತೆ ಬೆಳಿಗ್ಗೆ 8.30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದವರು ವಾಪಸ್ಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಮತ್ತು ಕೆಲಸಕ್ಕೂ ಹೋಗದೇ ಕಾಣೆಯಾಗಿರುತ್ತಾರೆ. ಇವರಿಗೆ ಅಮಲು ಪದಾರ್ಥ ಸೇವನೆ ಮಾಡುವ ಚಟ ಕೂಡ ಇರುತ್ತದೆ. ಅವರ ಬಗ್ಗೆ ನೆರೆಕೆರೆಯವರಲ್ಲಿ ಮತ್ತು ಸಂಬಂಧಿಕರಲ್ಲಿ ಹಾಗೂ ಪರಿಚಯದವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ, ಮೂಡುಬಿದ್ರೆ ಮತ್ತು ಕಾರ್ಕಳ ವಿವಿಧ ಕಡೆಗಳಲ್ಲಿ ಹುಡುಕಾಡಿದರೂ ಈ ವರೆಗೂ ಪತ್ತೆಯಾಗದ ಕಾರಣ, ಕಾಣೆಯಾದ ಪಿಯಾದುದಾರರ ತಾಯಿಯಾದ ಶ್ರೀಮತಿ  ತಂಗಿ ಪ್ರಾಯ: 70 ವರ್ಷ ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ಕೋರಿ ಎಂಬಿತ್ಯಾದಿ.

ಕಾಣೆಯದಾದವರ ಚಹರೆ:

ಶ್ರೀಮತಿ ತಂಗಿ ಪ್ರಾಯ 70 ವರ್ಷ. ಗಂಡ: ಪಿಜಿನಾ. ವಾಸ: 1-172, ಆನಡ್ಕ ಮನೆ, ಪುತ್ತಿಗೆ ಗ್ರಾಮ, ಮಿತ್ತಬೈಲು ಅಂಚೆ, ಮೂಡುಬಿದ್ರೆ ತಾಲೂಕು

ಎತ್ತರ: 5 ಅಡಿ 

ಮೈಬಣ್ಣ: ಎಣ್ಣೆಕಪ್ಪು

ಮುಖ: ಕೋಲು ಮುಖ,

ಕೂದಲು: ಬಿಳಿ ಮತ್ತು ಕಪ್ಪು ಮಿಶ್ರಿತ ತಲೆ ಕೂದಲು

 

Traffic South Police Station  

ದಿನಾಂಕ:11-11-2022 ರಂದು ಪಿರ್ಯಾಧಿ CLAVIAN MIRANDA ದಾರರು ಸ್ಕೂಟರ್ ನಂಬ್ರ KA-19-EV-5342 ನೇ ದನ್ನು ವಾಮಂಜೂರು ಕಡೆಯಿಂದ ಕಾವೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 4:15 ಗಂಟೆಗೆ  ಬೋಂದೆಲ್  ಚರ್ಚ್ ನ ಎದುರು ಬೋಂದೆಲ್ ಕಡೆಗೆ ಹೋಗಲು ಪಚ್ಚನಾಡಿ ರಸ್ತೆಯಲ್ಲಿ ನಿಲ್ಲಿಸಿದಾಗ ಪದವಿನಂಗಡಿ ಕಡೆಯಿಂದ ಪಚ್ಚನಾಡಿ ಕಡೆಗೆ ಹೋಗುತ್ತಿದ್ದ  ಟಿಪ್ಪರ್ ಲಾರಿ ನಂಬ್ರ KA-19-AD-1171 ನೇದನ್ನು ಅದರ ಚಾಲಕ ಸುನಿಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಿಂತಿದ್ದ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾಧಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಎಡ ಕಾಲಿನ ಪಾದಕ್ಕೆ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ್ದ ಜನರು ಹಾಗೂ ಡಿಕ್ಕಿ ಪಡಿಸಿದ ಟಿಪ್ಪರ್ ಚಾಲಕ ಸೇರಿ ಕಾರೊಂದರಲ್ಲಿ ಜ್ಯೋತಿ ಕೆ,ಎಂ,ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ,ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 12-11-2022 10:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080