Crime Reported in : : Kankanady Town PS
ಪಿರ್ಯಾದು Smt. Megha Naveen ದಾರರ ತಂದೆ ಎಸ್ ಹರಿಕುಮಾರ್ ಸುಮಾರು 61 ವರ್ಷ ಇವರು outdoor solutions- street walk ಕಂಪನಿ ಕಲಾಪುವಿನಲ್ಲಿ ಕಳೆದ 04 ತಿಂಗಳಿನಿಂದ ಕೆಲಸಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 07/12/2022 ರಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೋದವರು ಸಂಜೆಯಾದರೂ ಮನೆಗೆ ಬಾರದೇ ಇದ್ದುದರಿಂದ ಗಾಬರಿಗೊಂಡು ಪಿರ್ಯಾದುದಾರರು ತಂದೆಯವರ ಮೊಬೈಲ್ ನಂ: ಗೆ ಕರೆ ಮಾಡಿದಾಗ ಸ್ವಿಚ್ಆಫ್ ಆಗಿರುತ್ತದೆ. ನಂತರ ರಕ್ತ ಸಂಬಂಧಿಕರಲ್ಲಿ ಕರೆ ಮಾಡಿ ವಿಚಾರಿಸಿ ಎಲ್ಲಾ ಕಡೆ, ಸುತ್ತಮುತ್ತಲು ಹುಡುಕಾಡಿದರು ಎಲ್ಲಿಯೂ ಸಿಕ್ಕಿರುವುದಿಲ್ಲ ಆದುದರಿಂದ ಕಾಣೆಯಾದ ಪಿರ್ಯಾದುದಾರರ ತಂದೆ ಎಸ್ ಹರಿಕುಮಾರ್ ರವರನ್ನು.ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.
ಕಾಣೆಯಾದವರ ಚಹರೆ:
ಹೆಸರು: ಎಸ್ ಹರಿಕುಮಾರ್, ಪ್ರಾಯ:61
ತಂದೆ:ದಿ.ಶ್ರೀಕುಮಾರ್, ವಾಸ: ಶೀಹರಿ ನಿಲಯ, ಗುರುನಗರ, ಕೋರ್ದಬ್ದು ದೈವಸ್ಥಾನದ ಬಳಿ,
ತಾರ್ದೂಲ್ಯ ಜೆಪ್ಪಿನಮೊಗರು, ಮಂಗಳೂರು.
ಎತ್ತರ: 5 ಅಡಿ 10 ಇಂಚು, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ಸಾಧಾರಣ ದೇಹ.
ಕಪ್ಪುಮಿಶ್ರಿತ ಸಣ್ಣಗೆರೆಗಳ ಹಾಗೂ ಕಡುಹಳದಿ ಬಣ್ಣದ ಉದ್ದ ತೋಳಿನ ಷರ್ಟ್, ಕಂದುಬಣ್ಣದ ಪ್ಯಾಂಟ್
Ullal PS
ದಿನಾಂಕ.10-12-2022 ರಂದು ಸಂಜೆ 5-00 ಗಂಟೆಯಿಂದ ದಿನಾಂಕ. 11-12-2022 ರಂದು ಸಂಜೆ 6-00 ಗಂಟೆಯ ಮದ್ಯಾವಧಿಯಲ್ಲಿ ಕೋಟೆಕಾರು ಗ್ರಾಮದ ಅಡ್ಕಬೈಲು ಎಂಬಲ್ಲಿನ ಫಿರ್ಯಾದಿದಾರರಾದ ಶಿವಸುಬ್ರಹ್ಮಣ್ಯಪ್ರಸಾದ ರವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಬಾಗಿಲು ಮುರಿದು ಮನೆಯ ಒಳಗಡೆ ಪ್ರವೇಶಿಸಿ ಬೆಡ್ ರೂಮಿನ ಒಳಗಡೆ ಇದ್ದ ಕಪಾಟಿನ ಬಾಗಿಲನ್ನು ಮುರಿದು ಕಪಾಟಿನ ಒಳಗಡೆ ಇದ್ದ 1 ಚಿನ್ನದ ಬಳೆ-12 ಗ್ರಾಂ, ತಲಾ ½ ಪವನ್ ತೂಕದ 3 ಚಿನ್ನದ ಉಂಗುರ (ಗಂಡಸರ ಉಂಗುರ-1, ಹೆಂಗಸರ ಉಂಗುರ-1), ½ ಪವನ್ ತೂಕದ ಕಿವಿಯೋಲೆ-1, ½ ಪವನ್ ತೂಕದ ಕಿವಿಯೋಲೆ-1, ಕಳವಾದ ಚಿನ್ನಾಭರಣಗಳ ಒಟ್ಟು ತೂಕ 32 ಗ್ರಾಂ. ಇದರ ಅಂದಾಜು ಮೌಲ್ಯ ರೂ.1,10,000/- ಹಾಗೂ ಸುಮಾರು ½ ಕೆಜಿ ತೂಕದ ಬೆಳ್ಳಿಯ 8 ಕ್ವಾಯಿನ್ಗಳು. ಇದರ ಅಂದಾಜು ಮೌಲ್ಯ ರೂ.10,000/- ಹಾಗೂ 3 ಗಂಡಸರ ವಾಚುಗಳು (Rado, Tissot, Titan) ಇದರ ಒಟ್ಟು ಅಂದಾಜು ಮೌಲ್ಯ. ರೂ.18,000/- ಹಾಗೂ ನಗದು ಹಣ ರೂ.11,000/- .ಇವುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಮೇಲಿನ ಎಲ್ಲಾ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ.1,49,000/- ಆಗಬಹುದು. ಕಳವಾದ ಸ್ವತ್ತುಗಳನ್ನು ಹಾಗೂ ಕಳ್ಳರನ್ನು ಪತ್ತೆಹಚ್ಚಿ ಕೊಡಬೇಕಾಗಿ ಫಿರ್ಯಾದಿಯ ಸಾರಾಂಶ.
Moodabidre PS
ದಿನಾಂಕ 11-12-2022 ರಂದು ಸಂಜೆ 4.00 ಗಂಟೆ ಸುಮಾರಿಗೆ ಮೂಡಬಿದ್ರೆ ಮಹಾವೀರ ಕಾಲೇಜು ಬಳಿ ಪಿರ್ಯಾದು Sathvik S Acharya ದಾರರು ತನ್ನ ಬಾಬ್ತು ಕಾರು ನಂಬ್ರ ಕೆ-19-ಎಂಜೆ-5907 ರಲ್ಲಿ ತನ್ನ ಸಂಬಂಧಿಕರನ್ನು ಕುಳ್ಳಿರಿಸಿಕೊಂಡು ಸೂಚನೆ ನೀಡಿ ಕಾರನ್ನು ಬಲಕ್ಕೆ ತಿರುಗಿಸುವ ಸಮಯ ಆರೋಪಿ ಮೋಟಾರು ಸೈಕಲ್ ನಂಬ್ರ ಕೆಎ-19-ಹೆಚ್‌ಜಿ-6819 ನೇಯ ಸವಾರ ಮೋಟಾರು ಸೈಕಲ್‌ನ್ನು ಮೂಡಬಿದ್ರೆ ಕಡೆಯಿಂದ ಮಹಾವೀರ ಕಾಲೇಜು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರ ಬಾಬ್ತು ಕಾರಿನ ಬಲಬದಿಗೆ ಡಿಕ್ಕಿಪಡಿಸಿದ ಅಪಘಾತದ ಪರಿಣಾಮ ಮೋಟಾರು ಸೈಕಲ್ ಸವಾರ ಮೊಹಮ್ಮದ್ ಮುಸ್ತಾಫ ದಾನೇಶ್ ಹಾಗೂ ಸಹ ಸವಾರ ಸಯ್ಯದ್ ಮೂಸಾ ರವರಿಗೆ ಗಾಯ ನೋವುಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿಸಿರುವುದಾಗಿದೆ ಎಂಬಿತ್ಯಾದಿ.
Panambur PS
ಪಿರ್ಯಾಧಿದಾರರು ಉಳ್ಳಾಲದ ಕೋಟೆಪುರದಲ್ಲಿರುವ ಮಹಮ್ಮದ್ ಸಮೀರ್ ರವರ ಮಾಲಿಕತ್ವದ ಯುನೈಟೆಡ್ ಮೈರೆನ್ ಪ್ರೋಡಕ್ಟ್ ಪ್ಯಾಕ್ಟರಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ಸದ್ರಿ ಫ್ಯಾಕ್ಟರಿಯಲ್ಲಿ ಪಿಶ್ ಮೀಲ್ ನ್ನು ತಯಾರಿಸಿ, 50 ಕೆ.ಜಿ ತೂಕದ ಬ್ಯಾಗ್ ಗಳಲ್ಲಿ ಪ್ಯಾಕ್ ಮಾಡಿ, ಪ್ಯಾಕ್ಟರಿಯ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಗೋಡಾನ್ ನಲ್ಲಿ ಸ್ಟೋರ್ ಮಾಡಿ ಪರ್ ಚೇಸ್ ಆರ್ಡರ್ ಬಂದ ಹಾಗೆ, ಹೊರ ದೇಶಕ್ಕೆ ರಪ್ಪು ಮಾಡುವುದಾಗಿದೆ. ಗೋಡೌನ್ ನಲ್ಲಿ ಪಿಶ್ ಮೀಲ್ ಪ್ಯಾಕ್ ಗಳನ್ನು, ಸ್ಟೋರ್ ಮಾಡಲು, ಹಾಗೂ ರಪ್ತು ಮಾಡುವ ಕೆಲಸವನ್ನು ಪ್ಯಾಕ್ಟರಿಯ ಮನೇಜರ್ ಇಸಾಕ್ ಮತ್ತು ಸೂಪರ್ ವೈಸರ್ ಇರ್ಪಾಣ್ ರವರುಗಳು ನೋಡಿಕೊಳ್ಳುತ್ತಿದ್ದು, ಪಿರ್ಯಾಧಿದಾರರು ವಾರಕ್ಕೆ 2-3 ದಿನಗಳಲ್ಲಿ ಗೋಡೌನ್ ಗೆ ಬಂದು ಹೋಗುತ್ತಿದ್ದರು. ದಿನಾಂಕ: 09-12-2022 ರಂದು ಮನೇಜರ್ ಇಸಾಕ್ ರವರನ್ನು ಗೋವಾದಲ್ಲಿರುವ ಇನ್ನೊಂದು ಪ್ಯಾಕ್ಟರಿಗೆ ಕೆಲಸದ ಮೇಲೆ ಪಿರ್ಯಾಧಿದಾರರು ಪ್ಯಾಕ್ಟರಿಯಿಂದ ಕಳುಹಿಸಿದ್ದು, ಗೋಡೌನ್ ನಲ್ಲಿ ಯಾರು ಇಲ್ಲದ ವಿಷಯವನ್ನು ತಿಳಿದಕೊಂಡ ಗೋಡೌನ್ ನ ಸೂಪರ್ ವೈಸರ್ ಇರ್ಪಾಣ್ ಎಂಬಾತನು ದಿನಾಂಕ:10-12-2022 ರಂದು ಬೆಳಿಗ್ಗೆ 12.00 ಗಂಟೆಗೆ ಅಪ್ರಮಾಣಿಕತನದಿಂದ ಗೋಡೌನಲ್ಲಿದ್ದ ಫಿಶ್ ಮೀಲ್ ತುಂಬಿರುವ ಬ್ಯಾಗ್ ಗಳನ್ನು ಪ್ಯಾಕ್ಟರಿಯವರಿಗೆ ತಿಳಿಸದೇ ಲಾರಿಯೊಂದನ್ನು ತರಿಸಿಕೊಂಡು ಆ ಲಾರಿಗೆ ಲೋಡನ್ನು ಮಾಡಿಕೊಂಡು ಹೋಗಿರುವುದಾಗಿ ದಿನಾಂಕ: 10-12-2022 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಮಾಹಿತಿಯು ತಿಳಿದು, ಪಿರ್ಯಾಧಿದಾರರು ಗೋಡೌನಿಗೆ ಬಂದು ಪರಿಶೀಲಿಸಿದಲ್ಲಿ ಗೋಡೌನಲ್ಲಿ ಶೇಖರಿಸಿಟ್ಟಿದ್ದ ತಲಾ 50 ಕೆ.ಜಿ ತೂಕದ 400 ಚೀಲ ಫಿಶ್ ಮೀಲ್ ನ ಬ್ಯಾಗ್ ಗಳನ್ನು ಕಳವಾಗಿರುವುದು ಕಂಡು ಬಂದು, ಈ ಬಗ್ಗೆ ಪಿರ್ಯಾಧಿದಾರರು ಕೆಲಸಗಾರರಲ್ಲಿ ವಿಚಾರಿಸಿದಲ್ಲಿ ಗೋಡೌನಿನ ಸೂಪರ್ ವೈಸರ್ ಇರ್ಪಾಣ್ ನು ತನ್ನ ಬಳಿಯಿದ್ದ ಗೋಡೌನ್ ಬೀಗದ ಕೀಯನ್ನು ಬಳಸಿ ಗೋಡೌನ್ ಬೀಗವನ್ನು ತೆರೆದು ಇತರರೊಂದಿಗೆ ಸೇರಿಕೊಂಡು ಕೆಎ 21 ಬಿ 3641 ನೇ ನಂಬ್ರದ ಲಾರಿಯಲ್ಲಿ ಲೋಡ್ ಮಾಡಿ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಗೊಡೌನ್ ನಲ್ಲಿ ಕಳ್ಳತನವಾದ ಫಿಶ್ ಮೀಲ್ ಬ್ಯಾಗ್ ಗಳ ಅಂದಾಜು ಮೌಲ್ಯ 21 ಲಕ್ಷ ರೂಪಾಯಿಗಳು ಆಗಬಹುದು. ಕಳ್ಳತನವಾದ ಫಿಶ್ ಮೀಲ್ ಬ್ಯಾಗ್ ಗಳ ನಿಖರ ಬೆಲೆಯನ್ನು ಮಾಲಿಕರಿಂದ ಪಡೆದುಕೊಂಡು ಮುಂದೆ ತಿಳಿಸುತ್ತೇನೆ. ಕಳ್ಳತನವಾದ ಸ್ವತ್ತನ್ನು ಪತ್ತೆ ಮಾಡಿಕೊಂಡು ಆರೋಪಿತ ಇರ್ಪಾಣ್ ಹಾಗೂ ಇತರರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿದೆ.