ಅಭಿಪ್ರಾಯ / ಸಲಹೆಗಳು

Crime Reported in : Ullal PS    

ಪಿರ್ಯಾದಿ Shivakumar K ರವರು ಸಿಬ್ಬಂದಿಯವರ ಜೊತೆಯಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವ ವೇಳೆಯಲ್ಲಿ ದಿನಾಂಕ:13-01-2023 ರಂದು ಬೆಳಿಗ್ಗಿನ ಜಾವ 02-30 ಗಂಟೆಯ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ 66 ಕೋಟೆಕಾರು ಗ್ರಾಮದ ಬೀರಿ ಜಂಕ್ಷನ್ ಬಳಿಯ ಅಂಗಡಿಗಳ ಬಾಗಿಲಿನ ಬಳಿಯ ಕತ್ತಲು ಪ್ರದೇಶದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರುಗಳಲ್ಲಿ ಒರ್ವನು ತನ್ನ ಒಂದು ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಸಂಶಯಾಸ್ಪದವಾಗಿ ಇರುವವರನ್ನು ವಿಚಾರಿಸಲಾಗಿ ಸಮರ್ಪಕವಾಗಿ ಉತ್ತರಿಸದೇ ಇರುವ  1) ರಾಯಿಸ್ ಖಾನ್ ಪ್ರಾಯ 23 ವರ್ಷ ವಾಸ: ಬಿರ್ಲಾ ಕಂಪೌಂಡ್, ಮುಕ್ಕಚ್ಚೇರಿ, ಉಳ್ಳಾಲ, ಉಳ್ಳಾಲ ತಾಲೂಕು 2)  ಮಹಮ್ಮದ್ ಮುಜಾಂಬಿಲ್ @ ಮುಜಾಂಬಿಲ್ ಪ್ರಾಯ 28 ವರ್ಷ ವಾಸ: ಯತೀಂಖಾನ, ಕುಂಫಲ ಬೈಪಾಸ್, ಸೋಮೇಶ್ವರ ಗ್ರಾಮ, ಉಳ್ಳಾಲ ತಾಲೂಕು ಬವರುಗಳನ್ನು ವಶಕ್ಕೆ ಪಡೆದು ಸದ್ರಿಯವರು    ಹೆಚ್ಚಾಗಿ ಅಂಗಡಿ, ಬ್ಯಾಂಕ್ ಏಟಿಎಂ, ಮನೆಗಳಿರುವ ಸದ್ರಿ ಸ್ಥಳದಲ್ಲಿ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಬಲವಾದ ಇರಾದೆಯನ್ನು ಹೊಂದಿರಬಹುದಾಗಿ ಕಂಡು ಬಂದಿರುವುದರಿಂದ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ.

Crime Reported in : Urva PS

ದಿನಾಂಕ: 13-01-2023 ರಂದು ಬೆಳಗಿನ ಜಾವ ಸುಮಾರು 6-00 ಗಂಟೆ ಸಮಯಕ್ಕೆ  ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರು ಮಂಗಳೂರು ಮಾರ್ಗವಾಗಿ   ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ 2 ಜನ ಯುವಕರು ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾವಸ್ತುವನ್ನು ಕಾರಿನಲ್ಲಿ ಸಾಗಾಟ ಮಾಡಿಕೊಂಡು ಬಂದು ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿಧ್ಯಾರ್ಥಿಗಳಿಗೆ ಮಾರಾಟ ಮಾಡಲು ತರುತ್ತಿರುವ ಬಗ್ಗೆ  ಪ್ರಕರಣದ ಪಿರ್ಯಾದಿದಾರರಾದ Sudeep M V ಮಂಗಳೂರು ನಗರದ ಸಿ,ಸಿ,ಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಿಗೆ ದಿನಾಂಕ: 13-01-2023 ರಂದು  ಬೆಳಿಗ್ಗೆ ಸುಮಾರು 4-00 ಗಂಟೆಗೆ ದೊರೆತ ಮಾಹಿತಿಯಂತೆ ಬೆಳಿಗ್ಗೆ ಸುಮಾರು 06-00 ಗಂಟೆಗೆ  ಮಂಗಳೂರು ನಗರದ ಕುಂಟಿಕಾನ ಕ್ರಾಸ್ ಎಂಬಲ್ಲಿರುವ ಕೆ ಎಸ್ ಆರ್ ಟಿ ಸಿ ಡೀಪೋದ ಹತ್ತಿರ ಇರುವ ಸುಶ್ಮಿತಾ ಹೋಟೇಲ್ ನ ಬಳಿ    KA-06-D-4248 ನಂಬ್ರದ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ಪತ್ತೆ ಹಚ್ಚಿ   ವಿಜಯ ಕುಮಾರ್ ಶೆಟ್ಟಿ, ಪ್ರಾಯ: 24 ವರ್ಷ ವಾಸಃ  ಕಟ್ಟಿನ ಮನೆ, ಹರಾವರಿ ಗ್ರಾಮ, ಎನ್ ಆರ್ ಪುರ ತಾಲೂಕು, ಚಿಕ್ಕಮಗಳೂರು ಜಿಲ್ಲೆ  ಎಂಬಾತನ್ನು ವಶಕ್ಕೆ ಪಡೆದು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾವನ್ನು ಖರೀದಿಸಿ ಅದನ್ನು  ಮಂಗಳೂರಿನ ಕಾಲೇಜು ವಿಧ್ಯಾರ್ಥಿಗಳಿಗೆ, ಮೆಡಿಕಲ್ ಕಾಲೇಜು ವಿಧ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿಯೂ ತಿಳಿಸಿರುತ್ತಾನೆ. ಆರೋಪಿತನು ಗಾಂಜಾವನ್ನು ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟು ಕೊಂಡು ಸಾಗಾಟ ಮಾಡುತ್ತಿರುವುದು ಖಚಿತಗೊಂಡ ಮೇರೆಗೆ ರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.   

Crime Reported in : Bajpe PS

ಪಿರ್ಯಾದಿದಾರ Mahendra Kumar ದಿನಾಂಕ 11.01.2023 ರಂದು ಮಂಗಳೂರಿನಿಂದ ಮೂಡಬಿದ್ರೆ ಕಡೆಗೆ ತನ್ನ ಮೋಟಾರ್ ಸೈಕಲ್ KA19HA9582 ನೇದರಲ್ಲಿ ಹೋಗುತ್ತಿರುವ ಸಮಯ 13.50 ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಕುಕ್ಕದ ಕಟ್ಟೆ ತಲುಪಿದಾಗ ಎದುರು ಮುಖವಾಗಿ ಅಂದರೆ ಮಿಜಾರಿನಿಂದ ಮಂಗಳೂರು ಕಡೆಗೆ KA19MA3621 ನೇದರ ಕಾರು ಚಾಲಕ ತನ್ನ ಮುಂದಿನ ವಾಹನವನ್ನು ಓವರ್ ಟೇಕ್ ಮಾಡುವ ಸುಲುವಾತಿ ಅತೀವೇಗ ಮತ್ತು ಅಜಾಗಾರುಕತೆಯಿಂದ ತನ್ನ ಕಾರನ್ನು ಚಲಾಯಿಸಿದ ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಪಿರ್ಯಾದಿದಾರರಿಗೆ ಬಲಕೈನ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು ಬಲ ತೋಳಿನ ಕೈಗೂ ಕೂಡ ಮುರಿತವಾಗಿದ್ದು ಮತ್ತು ಬಲಕಾಲಿನ ಮೊಣಗಂಟಿನ ಮೇಲ್ಬಾಲದಲ್ಲಿ ಮುರಿತಗಾಯವಾಗಿದ್ದು ಇವರನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

Crime Reported in : Traffic South Police Station       

ಪಿರ್ಯಾದಿದಾರ ಚೇತನ್ ಡಿ ಎ ರವರು ಈ ದಿನ ದಿನಾಂಕ: 12-01-2023 ರಂದು ಅವರ ಬಾಬ್ತು ಮೋಟಾರ್ ಸೈಕಲ್ ನಂಬ್ರ:KA-21-W-2646 ನೇದನ್ನು ಕೊಡೆಕಲ್ ಬಳಿಯಿರುವ ಗ್ಯಾರೇಜ್ ಒಂದರಲ್ಲಿ ರಿಪೇರಿ ಮಾಡಿಸಿ ಅವರ ಊರಾದ ಸುಳ್ಯ ಕಡೆಗೆ ಹೋಗಲು ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಾ.ಹೆ-73 ರ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬಂದು ಮಧ್ಯಾಹ್ನ ಸಮಯ ಸುಮಾರು 1-00 ಗಂಟೆಗೆ ಫಸ್ಟ್ ನ್ಯೂರೋ ಆಸ್ಪತ್ರೆಯ ಬಳಿ ರಾ ಹೆ-73 ರ ರಸ್ತೆಯ ಮಧ್ಯದ ತೆರೆದ ಡಿವೈಡರ್ ಬಳಿ ಮಂಗಳೂರುನಿಂದ ಬಿಸಿ ರೋಡ್ ಹೋಗುವ ರಾ.ಹೆ-73 ರ ರಸ್ತೆಗೆ ತಿರುಗಿಸಲು ಅವರ ಮೋಟಾರ್ ಸೈಕಲ್ ನ್ನು ನಿಲ್ಲಿಸಿರುವಾಗ ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ:KA-19-HK-5458 ನೇದನ್ನು ಅದರ ಸವಾರ ಮೊಹಮ್ಮದ್ ಅಕ್ರಂ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಬಲಗಾಲಿಗೆ ಮತ್ತು ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಗಾಲಿಗೆ ಮೂಳೆ ಮುರಿತದ ಗಾಯ ಮತ್ತು ಎರಡು ಕೈಗಳಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೂ ಸಣ್ಣ ಪುಟ್ಟ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪಿರ್ಯಾದಿದಾರರು ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿರುತ್ತಾರೆ.ಎಂಬಿತ್ಯಾದಿ

Crime Reported in : Surathkal PS

ದಿ.12-01-2023 ರಂದು  ಸಂಜೆ 4:30 ಗಂಟೆಗೆ ಚೇಳೈರು ಗ್ರಾಮದ ಚೇಳೈರು ರೈಲ್ವೇ ಬ್ರಿಡ್ಜ್ ಬಳಿ ಫಿರ್ಯಾಧಿದಾರರು Balayya ಈ ಹಿಂದೆ ರೈಲ್ವೇ ಹಳಿ ಬಳಿ ಗುಡ್ಡೆ ಕುಸಿತದ ಸ್ಥಳದಲ್ಲಿ ಗುತ್ತಿಗೆದಾರರಾದ ರಾಮಚಂದ್ರ ಹಾಗೂ ಸೂಪರ್ ವೈಸರ್ ಆದ ಮೋಹನ್ ಹಾಗೂ ನಾಗರಾಜ್ ಇವರು ನಿಯೋಜನೆ ಮಾಡಿದಂತೆ ಫಿರ್ಯಾಧಿದಾರರು ಕಿಟ್ಟಿರಾಜ ಜೊತೆ ಮೇಲ್ಭಾಗದಲ್ಲಿ ಕಂಬಿಗಳನ್ನು ನೇರ ಮಾಡುವ ಕೆಲಸ ಮಾಡಿಕೊಂಡಿದ್ದು, ರೈಲ್ವೆ ಹಳಿಯ ಬಳಿ ತಳಭಾಗದಲ್ಲಿ ಓಬಳೇಶಪ್ಪ ಬಳ್ಳಾರಿ ಗೋವಿಂದಪ್ಪ, ತಿಮ್ಮಪ್ಪ, ಈರಣ್ಣ, ಸಂಜೀವ ಹಾಗೂ ಆತನ ಪತ್ನಿ ತೃಪ್ತಿ @ ರೇಖಾ ಇವರೆಲ್ಲಾ ಮಣ್ಣನ್ನು ಅಗೆದು ಹಾಕುತ್ತಿರುವಾಗ ರೈಲೊಂದು ವೇಗವಾಗಿ ಹೋದ ಸಮಯ ಭೂಕಂಪನವಾಗಿ ಒಮ್ಮೆಲೇ ಗುಡ್ಡೆ ಕುಸಿತವಾಗಿ ಮಣ್ಣೆಲ್ಲಾ ತಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೇಲ್ಕಾಣಿಸಿದವರ ಮೇಲೆ ಬಿದ್ದಿದ್ದು ಅವರ ಪೈಕಿ ಓಬಳೇಶಪ್ಪ ಹಾಗೂ ಬಳ್ಳಾರಿ ಗೋವಿಂದಪ್ಪನ ಮೇಲೆ ತುಂಬಾ ಮಣ್ಣು ಬಿದ್ದ ಕಾರಣ ಅವರುಗಳು ಮೇಲೆ ಎತ್ತಿ ನೋಡಲಾಗಿ ಓಬಳೇಶಪ್ಪನು ಮಾತನಾಡುತ್ತಿರಲಿಲ್ಲ, ಬಳ್ಳಾರಿ ಗೋವಿಂದಪ್ಪ ನ ಬಲಕಾಲಿಗೆ ಮುರಿತವಾಗಿತ್ತು. ತಿಮ್ಮಪ್ಪ, ಈರಣ್ಣ, ಸಂಜೀವ ಹಾಗೂ ಆತನ ಪತ್ನಿ ತೃಪ್ತಿ @ ರೇಖಾ ಇವರಿಗೆ ಗಾಯಗಳಾಗಿರುತ್ತದೆ. ಓಬಳೇಶಪ್ಪ ಹಾಗೂ ಬಳ್ಳಾರಿ ಗೋವಿಂದಪ್ಪನನ್ನು ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ  ಕರೆದುಕೊಂಡು ಬಂದಲ್ಲಿ ಸಂಜೆ 6:08 ಗಂಟೆಗೆ ಓಬಳೇಶಪ್ಪ ಮೃತಪಟ್ಟಿದ್ದು, ಬಳ್ಳಾರಿ ಗೋವಿಂದಪ್ಪ ಒಳರೋಗಿಯಾಗಿ ದಾಖಲಾಗಿರುವುದ್ದಾಗಿದೆ. .

ಇತ್ತೀಚಿನ ನವೀಕರಣ​ : 13-01-2023 06:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080