ಅಭಿಪ್ರಾಯ / ಸಲಹೆಗಳು

Crime Reported in :  Bajpe PS

ದಿನಾಂಕ 13-09.2022 ರಂದು ಮಂಗಳೂರು ತಾಲೂಕು ಅಡ್ಡೂರಿನ ನೂರುಲ್ಲಾ ಹಮೀದ್ ರವರ ಮನೆಯ ಬಳಿ ಖಾಲಿ ಜಾಗದಲ್ಲಿ ಸುಮಾರು 3 ರಿಂದ 4 ಲೋಡ್ ಗಳಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದನ್ನು ಪರಿಶೀಲಿಸಿದಾಗ  ಆರೋಪಿ  ನೂರುಲ್ಲಾ ಹಮೀದ್ ಎಂಬುವನು ತನ್ನ ಮನೆಯ ಮುಂದೆ ಎಲ್ಲಿಂದಲೊ ಕಳವು ಮಾಡಿ ತಂದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆಂದು ಖಚಿತ ಪಡಿಸಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ  

 

Crime Reported in :  Traffic South PS

ಪಿರ್ಯಾದಿದಾರರಾದ ಉದಯ್ ಶಂಕರ್ [43 ವರ್ಷ] ರವರ ಮಾವನಾದ ಆನಂದರವರು ದಿನಾಂಕ 12-09-2022 ರಂದು ಅವರ ಆಟೋರಿಕ್ಷಾ ನಂಬ್ರ KA-19-AD-0210 ನೇದನ್ನು ದೇರಳಕಟ್ಟೆ ಕಡೆಯಿಂದ ಕೋಟೆಕಾರ್ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 8-30 ಗಂಟೆಗೆ ಪನೀರ್ ನ ಆಸ್ಸಿಸಿ ಶಾಲೆಯ ಹತ್ತಿರ ತಲುಪಿದಾಗ ಆಟೋರಿಕ್ಷಾದ ಹತೋಟಿ ತಪ್ಪಿ ರಸ್ತೆಯ ಬಲಬದಿಯಲ್ಲಿರುವ ತೋಡಿಗೆ ಹೋಗಿ ಆಟೋರಿಕ್ಷಾ ಮಗುಚಿ ಹಾಕಿದ ಪರಿಣಾಮ ಅವರಿಗೆ ತಲೆಯ ಎಡಬದಿಗೆ ಗಂಭೀರ ಸ್ವರೂಪದ ಗಾಯ, ಹಣೆಯ ಎಡಬದಿ ಹಾಗೂ ಎಡಗಣ್ಣಿನ ಹತ್ತಿರ ಗಂಭೀರ ಗಾಯ, ಎಡಗೈ ಕೋಲು ಕೈಗೆ ಚರ್ಮ ಹೋದ ಗಾಯ, ಎಡಗಾಲಿಗೆ ಮೂಳೆ ಮುರಿತದ ಗಾಯ ಹಾಗೂ ಬಲಗೈ ತಟ್ಟಿನಲ್ಲಿ ರಕ್ತಗಾಯವಾಗಿದ್ದು ನಂತರ ಅವರನ್ನು ಅಲ್ಲಿನ ಸ್ಥಳೀಯರು ಹಾಗೂ ಅದೇ ರಸ್ತೆಯಲ್ಲಿ ವಾಹನ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಜನರು ಬೇರೊಂದು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

 

Crime Reported in :  Traffic North PS

ದಿನಾಂಕ: 13-09-2022 ರಂದು ಬೆಳಿಗ್ಗೆ ಪಿರ್ಯಾದಿ Srikantha ರವರು ಕೂಳೂರು ಜಂಕ್ಷನ್ ಸಮೀಪದ ಬಿರ್ಯಾನಿ ಡಾಬಾ ಎಂಬಲ್ಲಿಗೆ ಚಹಾ ತಿಂಡಿ ಮಾಡಲು ಹೋಗಿದ್ದವರು ತಿಂದು ವಾಪಸ್ಸು ರಸ್ತೆಯ VRL ಕಛೇರಿಯ ಕಡೆಗೆ ರಸ್ತೆ ಬದಿ ನಡೆದುಕೊಂಡು ಬರುತ್ತಾ ಸುಮಾರು 08:15 ಗಂಟೆಗೆ ಸಹ್ಯಾದ್ರಿ ನರ್ಸಿಂಗ್ ಕಾಲೇಜು ಕಟ್ಟಡದ ಬಳಿ ತಲುಪುತಿದ್ದಂತೆ ಎದುರಿನಿಂದ ಅಂದರೆ ಕೊಟ್ಟಾರ ಚೌಕಿ ಜಂಕ್ಷನ್ ಕಡೆಯಿಂದ KA-19-AC-8891 ನಂಬ್ರದ ಹಳದಿ ಬಣ್ಣದ ಶಾಲಾ ಬಸ್ಸನ್ನು ಅದರ ಚಾಲಕನಾದ ರಮೇಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಹಾನಿಯಾಗುವಂತೆ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಪಿರ್ಯಾದಿದಾರರ ಹಣೆಯ ಎಡಬದಿಯಿಂದ ನೆತ್ತಿಯವರೆಗೆ ಚರ್ಮ ಹರಿದ ರೀತಿಯ ರಕ್ತ ಗಾಯವಾಗಿದ್ದು ಅಲ್ಲದೇ ಕುತ್ತಿಗೆಯ ಹಿಂಭಾಗ ಗುದ್ದಿದ ರೀತಿಯ ಒಳಗಾಯವಾಗಿ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾಧಿ.

 

 Crime Reported in :Panambur PS

ಪಿರ್ಯಾದಿದಾರರು BHIMESH NAYAK  ಸ್ನೇಹಿತರಾದ ಲಕ್ಷ್ಮಿ ಕುಮಾರ್, ಸುನಿಲ್ ಕುಮಾರ್, ಲಿಂಗರಾಜು, ಮಲ್ಲಿಕಾರ್ಜುನ, ಬಸವರಾಜು ಎಂಬುವರುಗಳೊಂದಿಗೆ ವಾಸ ಮಾಡಿಕೊಂಡು ಮಂಗಳೂರು ಮೀನು ದಕ್ಕೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ.  ಪಿರ್ಯಾಧೀದಾರರು  ದಿನಾಂಕ: 30.08.2022 ರಂದು ಮಲ್ಲಿಕಾರ್ಜುನ ಎಂಬುವರೊಂದಿಗೆ ಬೆಳಿಗ್ಗೆ 02-00 ಗಂಟೆಗೆ ದಕ್ಕೆ ಕೆಲಸಕ್ಕೆ ಹೋಗಿದ್ದು, ಕೆಲಸದಿಂದ ಬರುವಾಗ   ಗಣೇಶ ಚತುರ್ಥಿ ಹಬ್ಬಕ್ಕೆ ಊರಿಗೆ ಹಣ ಹಾಕಲು ತನ್ನ ಧಣಿಯವರ ಬಳಿ 15,000/- ರೂ ಹಣವನ್ನು ಪಡೆದುಕೊಂಡು ಮಲ್ಲಿಕಾರ್ಜುನ ಎಂಬುವರ ಜೊತೆಗೆ  ರೂಮ್ ಗೆ ಬಂದಾಗ  ಪಿರ್ಯಾಧಿದಾರರ ಸ್ನೇಹಿತರು  ಎಲ್ಲರೂ ರೂಮ್ ನಲ್ಲಿದ್ದರು, ಎಲ್ಲರೂ ಸೇರಿ  ಬಾಕಿ 02 ತಿಂಗಳ ಬಾಡಿಗೆ ಕಟ್ಟಲು ಹೇಳಿರುವುದರಿಂದ ಪಿರ್ಯಾಧಿದಾರರ 5000/- ರೂ ಹಣವನ್ನು ಬಾಡಿಗೆ ಕಟ್ಟಲು ಕೊಟ್ಟಿದ್ದು, ಪಿರ್ಯಾಧಿದಾರರಲ್ಲಿ ಉಳಿದ ಬಾಕಿ ಹಣವನ್ನು  ಜಗಲಿಯಲ್ಲಿದ್ದ ದೇವರ ಪೋಟೋದ ಬಳಿ ಇಟ್ಟು, ದಿನಾಂಕ: 31.08.2022 ರಂದು ಗಣೇಶ್ ಚತುರ್ಥಿ ಹಬ್ಬವಿರುವುದರಿಂದ  ಪಿರ್ಯಾಧಿದಾರರ ಜೊತೆಗಿದ್ದ ಸುನಿಲನಿಗೆ ಬಿಟ್ಟು ಎಲ್ಲರಿಗೂ ರಜೆ ಇತ್ತು. ಎಲ್ಲರೂ ಊರಿಗೆ ಹೋಗಿ ಸ್ವಲ ದಿನ ಇದ್ದು ಬರಲು ತಿರ್ಮಾಸಿ ಸುಮಾರು ರಾತ್ರಿ 11-30 ಗಂಟೆಗೆ ಮಲಗಿಕೊಂಡಿರುತ್ತಾರೆ. ಪಿರ್ಯಾದಿದಾರರೊಂದಿಗೆ ಇದ್ದ ಸುನಿಲ್  ಎಂಬುವರು ಬೆಳಿಗ್ಗೆ  05-00 ಗಂಟೆಗೆ ಎದ್ದು,  ಮೊಬೈಲ್ ನೋಡಿದಾಗ  ಚಾರ್ಚ  ಹಾಕಿದ ಮೊಬೈಲ್ ಇಲ್ಲವೆಂದು ಪಿರ್ಯಾಧಿ ಸೇರಿ ಎಲ್ಲರನ್ನು  ಎಬ್ಬಿಸಿರುತ್ತಾನೆ.  ನಾವೇಲ್ಲರೂ ಎದ್ದು  ನೋಡಿದಾಗ ಚಾರ್ಜ್  ಹಾಕಿದ ಪಿರ್ಯಾಧಿದಾರರ ಕಪ್ಪುಬಣ್ಣದ ಒಪೋ ಕಂಪನಿಯ ಮೊಬೈಲ್  ಇದರ  ಅಂದಾಜು ಮೌಲ್ಯ ರೂ: 5000/-  ಆಗಬಹುದು, ಪಿರ್ಯಾಧಿದಾರರ ತಲೆ ದಿಬ್ಬದ ಬಳಿ ಇದ್ದ ಗೊಲ್ಡಾನ್ ಕಲರ್ ರೆಡ್ ಮೀ. ಕಂಪನಿಯ ಮೊಬೈಲ್  ಇದರ  ಅಂದಾಜು ಮೌಲ್ಯ ರೂ: 6000/-  ಆಗಬಹುದು.  ಲಕ್ಷೀ ಕುಮಾರ್ ನ ರೆಡ್ ಮೀ ಕಂಪನಿಯ 9i ಮಾಡೆಲ್ ಮೊಬೈಲ್ , ಇದರ  ಅಂದಾಜು ಮೌಲ್ಯ ರೂ: 4000/- ಆಗಬಹುದು.  ಮತ್ತು ಲಿಂಗರಾಜ ನ ಡೈಮಂಡ್ ಗ್ಲೋ ವಿವೂ ಕಂಪನಿಯ Y21  ಮಾಡೆಲ್ ಮೊಬೈಲ್ , ಇದರ  ಅಂದಾಜು ಮೌಲ್ಯ ರೂ: 7000/- ಆಗಬಹುದು ಸುನಿಲ ಒಪೋ ಕಂಪನಿಯ F19S ಮಾಡೆಲ್ ಮೊಬೈಲ್ , ಇದರ IMEI NO: Slot-1(866206054172131) IMEI NO: Slot-2 (866206054172123)  ಆಗಿರುತ್ತದೆ. ಇದರ  ಅಂದಾಜು ಮೌಲ್ಯ ರೂ: 8000/- ಆಗಬಹುದು ಹಾಗೂ ನನ್ನ 10 ಸಾವಿರ ರೂಪಾಯಿ ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾಧಿದಾರರು  ಮತ್ತು ರೂಮ್ ನಲ್ಲಿದ್ದವರು ಸೆಕೆ ಆಗುತ್ತಿದ್ದರಿಂದ ರೂಮ್ ನ ಮುಂದಿನ ಬಾಗಿಲನ್ನು ತೆರೆದು ಮಲಗಿಕೊಂಡಿದ್ದು,  ಬಾಗಿನಿಂದಲೇ ಒಳಗೆ ಬಂದ  ಯಾರೋ ಕಳ್ಳರು ರೂಮ್ ನಿಂದ 05 ಮೋಬೈಲ್ ಪೋನ್ ಗಳನ್ನು ಹಾಗೂ ನನ್ನ 10.000/- ರೂ ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 40,000/- ಆಗಬಹುದು ಕಳವಾದ ಸೊತ್ತು ಮತ್ತು ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Crime Reported in :Mangalore East PS

ಫಿರ್ಯಾದಿದಾರರಾದ ನಿರ್ಮಲ್ ಕುಮಾರ್ ಎಸ್ ಭಂಡಾರಿಯವರು ತನಗೆ ಹಣದ ಅವಶ್ಯಕತೆ ಇದ್ದುದರಿಂದ ತನ್ನ ಬಾಬ್ತು ಸುಮಾರು 2,70,000/- ರೂ ಮೌಲ್ಯದ KTM ಮೋಟಾರ್ ಸೈಕಲ್ ನ್ನು ಮಂಗಳೂರು ನಗರದ ಬಲ್ಮಠದ ಅಭಿಮಾನ್ ಟೆಕ್ಸಸ್ ಅಪಾರ್ಟ್ ಮೆಂಟ್ ನಲ್ಲಿ ವಾಸ್ತವ್ಯವಿರುವ ಆರೋಪಿತನಾದ ಸಾಗರ್ ಶಾಮ್  ಎಂಬವರಲ್ಲಿ ಅಡಮಾನವಿರಿಸಿ 30,000/- ರೂಪಾಯಿ ಸಾಲವನ್ನು ಪಡೆದಿದ್ದು, ಫಿರ್ಯಾದಿದಾರರು ಸಾಲವನ್ನು ಮರುಪಾವತಿಸಿದರೂ 1ನೇ ಆರೋಪಿತನು 2 ನೇ ಆರೋಪಿತನಾದ ಸುಜಿತ್ ಮತ್ತು 3ನೇ ಆರೋಪಿತನಾದ ಮನೀಶ್ ಎಂಬವರುಗಳೊಂದಿಗೆ ಸೇರಿ ಮೋಸ ಮಾಡುವ ಉದ್ದೇಶದಿಂದಲೇ ಫಾರ್ಮ್ ನಂಬ್ರ 29 ಮತ್ತು 30 ರಲ್ಲಿ ಫಿರ್ಯಾದಿದಾರರ ಸಹಿಯನ್ನು ನಕಲು ಮಾಡಿ ಸಾಲದ ಬಾಬ್ತು ಅಡಮಾನವಿರಿಸಿದ ಫಿರ್ಯಾದಿದಾರ ಬಾಬ್ತು KTM ಮೋಟಾರ್ ಸೈಕಲ್ ನ  ಆರ್.ಸಿ. ಯನ್ನು 3ನೇ ಆರೋಪಿಯ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡು  ವಂಚನೆ ಮಾಡಿರುವುದಾಗಿದೆ.  ಈ ಕೃತ್ಯ ನಡೆಸಲು 1ನೇ ಆರೋಪಿಗೆ 4ನೇ ಆರೋಪಿತೆಯಾದ ಶ್ರೀಮತಿ ಶೈನಿ ಎಂಬವರು ಸಹಕರಿಸಿದ್ದು , ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-09-2022 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080