ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS                 

 ಪಿರ್ಯಾದಿದಾರರಾದ ಶರಣಪ್ಪ ರವರು ಮೇಲಾಧಿಕಾರಿಗಳ ಆದೇಶದಂತೆ ನಿಗದಿತ ಸಮವಸ್ತ್ರ ಧರಿಸಿಕೊಂಡು ನಂತೂರು ಜಂಕ್ಷನಿನಲ್ಲಿ 2ನೇ ಪಾಳಿಯ ಕರ್ತವ್ಯದಲ್ಲಿದ್ದು ಸಾಯಂಕಾಲ ಸಮಯ ಸುಮಾರು 6:25 ಗಂಟೆಗೆ ನಂತೂರು ಜಂಕ್ಷನಿನಲ್ಲಿ ನಿಲ್ಲಿಸಲ್ಪಟ್ಟಿದ್ದ ಶಿವಭಾಗ್ ನಿಂದ ಬಿಕರ್ನಕಟ್ಟೆ ಕಡೆಗೆ ಹೋಗುವ ವಾಹನಗಳಿಗೆ ಪಿರ್ಯಾದಿದಾರರು ಬಿಕರ್ನಕಟ್ಟೆ ಕಡೆಗೆ ಹೋಗಲು ಸೂಚನೆ ನೀಡಿದಂತೆ ಸರದಿಯಲ್ಲಿ ಮೊದಲನೆಯದಾಗಿ ನಿಲ್ಲಿಸಲ್ಪಟ್ಟಿದ್ದ KA-19-D-7355 ನಂಬ್ರದ ಖಾಸಗೀ ಸರ್ವೀಸ್ ಬಸ್ಸನ್ನು ಅದರ ಚಾಲಕನಾದ ಹಮೀದ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ಮುಂದಕ್ಕೆ ಎಡಬದಿಗೆ ಚಲಾಯಿಸಿ ಸದ್ರಿ ಬಸ್ಸಿನ ಎಡಭಾಗದಲ್ಲಿ ನಿಲ್ಲಿಸಿದ್ದ ವಿಶ್ವನಾಥ ಆಳ್ವ ರವರ KA-19-HE-6250 ನಂಬ್ರದ ಆಕ್ಟಿವಾ ಸ್ಕೂಟರಿಗೆ ಢಿಕ್ಕಿ ಪಡಿಸಿದ್ದು, ಇದರ ಪರಿಣಾಮ ಸದ್ರಿ ಸ್ಕೂಟರ್ ಸವಾರ ವಿಶ್ವನಾಥ ಆಳ್ವ ರವರು ತನ್ನ ಸ್ಕೂಟರ್ ಸಮೇತ ಎಡಬದಿಗೆ ಬಿದ್ದಿದ್ದು ಇದೇ ವೇಳೆ ಸ್ಕೂಟರ್ ಬಲಬದಿಗೆ ತಿರುಗಿದಂತಾಗಿ ಸ್ಕೂಟರ್ ಸವಾರ ವಿಶ್ವನಾಥ ಆಳ್ವ ರವರು ರಸ್ತೆಯಲ್ಲಿ ಬಿದ್ದ ಸ್ಕೂಟರಿನೊಂದಿಗೆ ಬಸ್ಸಿನ ಮುಂಭಾಗಕ್ಕೆ ಸಿಲುಕಿಕೊಂಡು ಬಸ್ಸಿನೊಂದಿಗೆ ಮುಂದಕ್ಕೆ ತಳ್ಳಿಕೊಂಡು ಹೋದಂತಾಗಿ ವಿಶ್ವನಾಥ ಆಳ್ವ ರವರ ಎಡಕೈಯ ತೋಳು ಹಾಗೂ ಕೋಲು ಕೈ ಭಾಗದಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಮತ್ತು ಗದ್ದದ ಬಳಿ, ಕೆನ್ನೆಯ ಎಡಬದಿ, ಬಲಕೈ ಕಿರುಬೆರಳಿಗೆ, ಎರಡೂ ಕಾಲಿನ ಪಾದಗಳಿಗೆ ಅಲ್ಲಲ್ಲಿ ತರಚಿದ ರೀತಿಯ ರಕ್ತ ಗಾಯಗಳಾಗಿದ್ದು, ಅಲ್ಲದೇ ಎಡಬದಿಯ ಪಕ್ಕೆಲುಬು ಹಾಗೂ ಎದೆಯ ಎಡಭಾಗಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಗೊಂಡಿದ್ದವರನ್ನು ತೇಜಸ್ವಿನಿ ಆಸ್ಪತ್ರೆಗೆ ಸಾಗಿಸಲ್ಪಟ್ಟು ಚಿಕಿತ್ಸೆಯಲ್ಲಿದ್ದವರು ರಾತ್ರಿ 7:45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 13-10-2022 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080