ಅಭಿಪ್ರಾಯ / ಸಲಹೆಗಳು

Crime Reported in : Kankanady Town PS                                                    

ಪಿರ್ಯಾದಿದಾರ Antony Joyel Dmello  ಸಿರ್ಲಪಡ್ಪು, ಕುಲಶೇಖರ, ಮಂಗಳೂರು ನಿವಾಸಿಯಾಗಿದ್ದು, ಸ್ಪ್ರೆಪೈಟಿಂಗ್ ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರು ದಿನಾಂಕ:23.12.2022 ರಂದು ರಾಣಿಪುರದ ತಮ್ಮ ಸ್ನೇಹಿತನ ಮನೆಯಲ್ಲಿ ಕಾರ್ಯಕ್ರಮ ಇದ್ದುದ್ದರಿಂದ ಸಾಯಂಕಾಲ 07.00 ಗಂಟೆಗೆ ಬಿಕರ್ನಕಟ್ಟೆಯಿಂದ ತಮ್ಮ ಸ್ಕೂಟರ್ KA19HL5168 ನೇ SUZUKU ACCESS 125 ನೇದರಲ್ಲಿ ಹೊರಟು ಸಾಯಂಕಾಲ ಸುಮಾರು 07.20 ಗಂಟೆಗೆ ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಾಸೂನ್ ಗ್ರಾನೈಟ್ ಅಂಗಡಿಯ ಬಳಿ ತಲುಪಿದಾಗ ಸ್ಕೂಟರಿನಲ್ಲಿ ಪೆಟ್ರೋಲ್ ಖಾಲಿ ಆಗಿರುತ್ತದೆ. ಆದ್ದರಿಂದ ಸ್ಕೂಟರ್ ನ್ನು ಅಲ್ಲಿಯೇ ಬಿಟ್ಟು ಅಪರಿಚಿತ ವ್ಯಕ್ತಿಯೊಬ್ಬರ ಸ್ಕೂಟರಿನಲ್ಲಿ ಲಿಫ್ಟ್ ಪಡೆದು ಸ್ನೇಹಿತನ ಮನೆಗೆ ಹೋಗಿರುತ್ತಾರೆ. ಮರುದಿನ ದಿನಾಂಕ:24.12.2022 ರಂದು ಬೆಳಗ್ಗೆ 08.15 ಗಂಟೆಗೆ ಸ್ಕೂಟರ್ ಇಟ್ಟ ಸ್ಥಳಕ್ಕೆ ಬಂದು ನೋಡಿದಾಗ ಸ್ಕೂಟರ್ ಅಲ್ಲಿ ಇಲ್ಲದೇ ಇದ್ದು, ಕೂಡಲೇ ಸುತ್ತುಮುತ್ತಲಿನ ಪರಿಸರದಲ್ಲಿ ಹುಡುಕಾಡಲಾಗಿ ಎಲ್ಲಿಯೂ ಸ್ಕೂಟರ್ ಕಂಡು ಬರದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗದೆ. ಕಳ್ಳತನವಾದ ಸ್ಕೂಟರ್ ನ ಚಾಸಿಸ್ ಸಂಖ್ಯೆ: MB8DP12DKN8D58463 ಮತ್ತು ಇಂಜಿನ್ ಸಂಖ್ಯೆ: AF217235920 ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ 80,000/- ಆಗಬಹುದು ಆದುದರಿಂದ ಕಳ್ಳತನವಾದ ಪಿರ್ಯಾದುದಾರರ KA19HL 5168 ನೇ SUZUKU ACCESS 125 ನೇ ಹಸಿರು ನೀಲಿ ಬಣ್ಣದ ಸ್ಕೂಟರ್ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

Crime Reported in : Bajpe PS    

ದಿನಾಂಕ 13.01.2023 ರಂದು ಬೆಳಿಗ್ಗೆ ಸುಮಾರು 08-00 ಗಂಟೆಗೆ ಭಾರತೀಯ ಪಾಸ್‌ ಪೋರ್ಟ್ ಸಂಖ್ಯೆ Z5896327 ಮೂಲಕ ಅಬುಧಾಬಿ ಯಿಂದ IX-816 ನೇ ವಿಮಾನದಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕ ಮೊಹಮ್ಮದ್ ಇಕ್ಬಾಲ್ ಎಂಬವರ ಪಾಸ್ ಪೋರ್ಟ್ ನ್ನು ಇಮಿಗ್ರೇಷನ್ ಕೌಂಟರ್ ನಂಬ್ರ 06 ನೇಯದರಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಶ್ರೀ ಸತ್ಯನಾರಾಯಣ ರವರು ಚೆಕ್ ಮಾಡಿದಾಗ ಪಾಸ್‌ ಪೋರ್ಟ್‌ ನ ಪುಟ ಸಂಖ್ಯೆ 53 ರಲ್ಲಿ ಯೆಮೆನ್ ದೇಶದ ವೀಸಾ ಸ್ಟ್ಯಾಂಪ್ ಮಾಡಿರುವುದು ಕಂಡುಬಂದಿದೆ. ದಿನಾಂಕ 04.09.2022, 19.09.2022, 15.10.2022 ದಿನಾಂಕದ ಯೆಮೆನ್‌ ಪ್ರವೇಶ ಮುದ್ರೆಗಳು ಮತ್ತು 05.09.2022, 20.09.2022 ಮತ್ತು 16.10.2022 ದಿನಾಂಕದ ಯೆಮೆನ್‌ ನಿರ್ಗಮನ ಮುದ್ರೆಯನ್ನು ಸ್ಟ್ಯಾಂಪ್ ಮಾಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪ್ರಯಾಣಿಕರಲ್ಲಿ ವಿಚಾರಿಸಿದಾಗ ತಾನು ಪ್ರಸ್ತುತ ದುಬೈ ದೇಶದ ವೀಸಾ ಹೊಂದಿದ್ದು ಅರೇಬಿಯನ್ ಇಂಡಸ್ಟ್ರಿಯಲ್ ಗ್ಯಾಸ್ ಕೋ ಎಲ್.ಎಲ್.ಸಿ ಯಲ್ಲಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು ಕಂಪೆನಿಯ ಕೆಲಸದ ನಿಮಿತ್ತ ಸೆಪ್ಟೆಂಬರ್ 2022 ಮತ್ತು ಅಕ್ಟೋಬರ್ 2022 ರಲ್ಲಿ ಯೆಮೆನ್‌ ದೇಶಕ್ಕೆ ಪ್ರಯಾಣಿಸಿರುವುದಾಗಿ ತಿಳಿಸಿರುತ್ತಾನೆ.

 

ಇತ್ತೀಚಿನ ನವೀಕರಣ​ : 14-01-2023 10:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080