ಅಭಿಪ್ರಾಯ / ಸಲಹೆಗಳು

Crime Reported in :  Bajpe PS

ಪಿರ್ಯಾದಿದಾರರಾದ ಗುರಪ್ಪ ಕಾಂತಿ ಪಿಎಸ್ಐ ಬಜಪೆ ಪೊಲೀಸ್ ಠಾಣೆ ಇವರು  ದಿನಾಂಕ 13-09.2022 ರಂದು ಅಡ್ಡೂರು ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಅಡ್ಡೂರು ಗ್ರಾಮದ ಬಸ್ಸು ನಿಲ್ದಾಣದ ಹಿಂಬಾಗದಲ್ಲಿರುವ ಖಾಲಿ ಜಾಗದಲ್ಲಿ ಸುಮಾರು 2 ಲೋಡ್ ಗಳಷ್ಟು ಮರಳನ್ನು ರಾಶಿ ಹಾಕಿರುವುದು ಕಂಡುಬಂತು ಈ ಬಗ್ಗೆ ಸ್ಥಳಿಯರಲ್ಲಿ  ಸಂಗ್ರಹಿಸಿರುವ ಮರಳಿನ ಬಗ್ಗೆ ವಿಚಾರಿಸಿದ್ದಲ್ಲಿ ಈ ಮರಳನ್ನು ಮಹಮ್ಮದ್ ಆಲಿ ಎಂಬಾತನು  ಸಂಗ್ರಹಿಸಿಟ್ಟಿರುವುದಾಗಿ ತಿಳಿಸಿದ್ದು ಸದ್ರಿ ಮರಳನ್ನು ಮಹಮ್ಮದ್ ಆಲಿ ಎಂಬಾತನು ಎಲ್ಲಿಂದಲೋ ಕಳವೂ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಕಂಡು ಬಂದಿರುವುದರಿಂದ ಸದ್ರಿ ಮರಳನ್ನು ಸ್ವಾಧೀನಪಡಿಸಿಕೊಂಡು ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ

   

Crime Reported in :Moodabidre PS  

ದಿನಾಂಕ 12.09.2022 ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ಪಿರ್ಯಾದಿದಾರರ Mrs. Laveena Jyothi Sequeira ಚಿಕ್ಕಪ್ಪ ಅಲ್ಫೇಡ್ ಸಿಕ್ವೇರಾ ರವರು ಅವರ ಹೆಂಡತಿ ವಿಲ್ಮಾ ಸಿಕ್ವೇರಾ ಹಾಗೂ ಅವರ ಮಗ ವಿಲ್ಫೇಡ್ ಅಲ್ಫ್ರೇಡ್ ಸಿಕ್ವೇರಾ  ರವರುಗಳೊಂದಿಗೆ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ನಮ್ಮ ಜಾಗದಲ್ಲಿ ಅಡಿಕೆ ಸಸಿಗಳನ್ನು ನೆಟ್ಟಿದ್ದೀರಾ ಬೇವರ್ಸಿಗಳೇ ಎಂದು ಬೈದು ಗಲಾಟೆ ಮಾಡಿ,  ಪಿರ್ಯಾದಿದಾರರ ತಂದೆ ಹೆಸರಿನ ಸರ್ವೆ ನಂಬ್ರ 126/2 ರಲ್ಲಿನ ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು 350 ಅಡಿಕೆ ಸಸಿಗಳನ್ನು ಕಿತ್ತು ಬಿಸಾಡಿದ್ದು, ಆ ಸಮಯ ಪಿರ್ಯಾದಿದಾರರ ತಂದೆ ಅಬ್ರಹಾಂ ಸಿಕ್ವೇರಾ, ತಾಯಿ ಫಿಲೋಮಿನಾ ಸಿಕ್ವೇರಾ, ತಂಗಿ ಝೀನತ್ ಐರಿನ್ ಸಿಕ್ವೇರಾ ಹಾಗು ಪಿರ್ಯಾದಿದಾರರ ಗಂಡ ಅಡಿಕೆ ಸಸಿಗಳನ್ನು ತೆಗೆಯಬೇಡಿ ಎಂದು ವಿನಂತಿಸಿದರೂ ಕೂಡ ಹತ್ತಿರ ಬಂದರೆ ನಿಮ್ಮನ್ನು ಕೊಂದು ಬಿಸಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಅಡಿಕೆ ಸಸಿಗಳನ್ನು ಕಿತ್ತುಹಾಕಿ ಸುಮಾರು 2 ಲಕ್ಷ ರೂ ನಷ್ಟವುಂಟುಮಾಡಿರುತ್ತಾರೆ ಎಂದು ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿರುವ ದೂರು

 

Crime Reported in :Traffic South PS

ದಿನಾಂಕ:12-09-2022 ರಂದು ಪಿರ್ಯಾದಿದಾರರಾದ ಶರಣ ಡಿ ಅಮಿನ್ (19 ವರ್ಷ) ರವರು ಸ್ಕೂಟರ್ ನಂಬ್ರ: KA-19-HJ-4651 ನೇದರಲ್ಲಿ ಕಪಿತಾನಿಯೋ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ತಮ್ಮ ಮನೆಗೆ ಹೋಗಲು ರಾತ್ರಿ ಸಮಯ ಸುಮಾರು 08-45 ಗಂಟೆಗೆ ಕಪಿತಾನಿಯೋ ಶಾಲೆಯ ಪಕ್ಕದಲ್ಲಿರುವ ಒಳರಸ್ತೆಗೆ ಹೋಗಲು ರಸ್ತೆಯ ಎಡಬದಿಯಲ್ಲಿ ಸ್ಕೂಟರ್ ನ ಬಲಬದಿ ಇಂಡಿಕೇಟರ್ ಹಾಕಿ ನಿಲ್ಲಿಸಿರುವಾಗ ಅದೇ ರಸ್ತೆಯಲ್ಲಿ ಪಿರ್ಯಾಧಿದಾರರ ಹಿಂದಿನಿಂದ ಅಂದರೆ ಪಂಪವೆಲ್ ಕಡೆಯಿಂದ ಪಡೀಲ್ ಕಡೆಗೆ ಬರುತ್ತಿದ್ದ ಲಾರಿ ನಂಬ್ರ: KA-19-AC-4812 ನೇದನ್ನು ಅದರ ಚಾಲಕ ಗೌತಮ್ ಬಿ. ಎಂಬುವರು ಲಾರಿಯನ್ನು ದುಡುಕತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸೊಂಟಕ್ಕೆ ಮೂಳೆ ಮುರಿತದ ಗಾಯ ಹಾಗೂ ಎರಡೂ ಕೈ ಮತ್ತು ಕಾಲುಗಳಿಗೆ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ.

Crime Reported in :Traffic North Police PS

ಪಿರ್ಯಾದಿದಾರರ Narayana  ಅಕ್ಕನ ಮಗಳ ಗಂಡನಾದ ಚರಣ್ ರಾಜ್ ಶೆಟ್ಟಿಗಾರ್ (28) ಎಂಬಾತನು ದಿನಾಂಕ: 13-09-2022 ರಂದು ಎಂದಿನಂತೆ ಯೆಯ್ಯಾಡಿಯ SHERLEKAR AIR CARE PVT LTD ಕಂಪೆನಿಯಲ್ಲಿ ಕೆಲಸ ಮುಗಿಸಿಕೊಂಡು ಅವನ ಬಾಬ್ತು KA-19-EE-8906 ನಂಬ್ರದ PULSAR ಮೋಟಾರ್ ಸೈಕಲಿನಲ್ಲಿ ಮನೆ ಕಡೆಗೆ NH 66ನೇ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಾಯಂಕಾಲ ಸಮಯ ಸುಮಾರು 6:15 ಗಂಟೆಗೆ ಹಳೆಯಂಗಡಿ ಜಂಕ್ಷನ್ ಸಮೀಪ ಸಮೀಪಿಸುತ್ತಿದ್ದಂತೆ ಪಾವಂಜೆ ಜಂಕ್ಷನ್ ಕಡೆಯಿಂದ ಮುಲ್ಕಿ ಕಡೆಗೆ PB-03-BA-6913 ನಂಬ್ರದ ಟ್ಯಾಂಕರ್ ವಾಹನವನ್ನು ಅದರ ಚಾಲಕನಾದ VIRENDRA MANDLOI ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನ ರೀತಿಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಚರಣ್ ರಾಜ್ ಶೆಟ್ಟಿಗಾರ್ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ತಲೆಯ ಹಿಂಭಾಗಕ್ಕೆ ಚರ್ಮ ಹರಿದ ರೀತಿಯ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು, ಕೆನ್ನೆಯ ಬಲಬದಿ ಬಲಕ್ಕೆ, ಭುಜದ ಹಿಂಬಾದ ಚರ್ಮ ರಕ್ತಗಾಯವಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಚರಣ್ ರಾಜ್ ಶೆಟ್ಟಿಗಾರ್ ಮೃತಪಟ್ಟಿದ್ದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 14-09-2022 07:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080