ಅಭಿಪ್ರಾಯ / ಸಲಹೆಗಳು

Crime Reported in : Mangalore East PS   

ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ನಿರೀಕ್ಷಕರಾದ ಚಂದ್ರಶೇಖರ  ರವರು ದಿನಾಂಕ: 12-10-2022 ರಂದು ರಾತ್ರಿ  ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 13-10-2022 ರಂದು  ಬೆಳಗ್ಗಿನ ಜಾವ ಸುಮಾರು 2.45 ಗಂಟೆ ವೇಳೆಗೆ ಮಂಗಳೂರು ನಗರದ  ತಾರೆತೋಟದ ಸ್ನೇಹಲತಾ ಡಿಸೇಲ್ಸ್ ಗ್ಯಾರೇಜ್ ನ ಬಳಿ  ಅಬ್ದುಲ್ ರೆಹಮಾನ್ ಪ್ರಾಯ 32 ವರ್ಷ ವಾಸ: ರೆಹಮತ್ ಮಂಜೀಲ್, ಕನ್ಯಾಪಡಿ ಗ್ರಾಮ, ನಿರ್ಚಾ ಅಂಚೆ, ಕಾಸರಗೋಡು ಜಿಲ್ಲೆ ಹಾಗೂ ವಿಜಯ್ ಪ್ರಾಯ 32 ವರ್ಷ ವಾಸ: ರೆಲ್ವೇ ಸ್ಟೇಷನ್ ಹತ್ತಿರ, ತಾಳಗುಪ್ಪ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ ಇವರು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವರು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ರಾತ್ರಿ ವೇಳೆ ಹೊಂಚು ಹಾಕುತ್ತಿರುವುದಾಗಿ ಇವನ ವರ್ತನೆಯಿಂದ ಬಲವಾದ ಸಂಶಯ ಬಂದಿದ್ದು, ಇವರುನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

Urva PS

ದಿನಾಂಕ 13-10-2022 ರಂದು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿ.ಸಿ.ಆರ್ ವಾಹನದಲ್ಲಿ ಪಿರ್ಯಾದಿ Harish H V ದಾರರು ಸಿಬ್ಬಂಧಿಗಳೊಂದಿಗೆ ರೌಂಡ್ಸ್ ನಲ್ಲಿರುವ ಸಮಯ ಸುಮಾರು 15-45 ಗಂಟೆಗೆ ಚಿಲಿಂಬಿ ಮೋರ್ ಸೂಪರ್ ಮಾರ್ಕೇಟ್ ಬಳಿ ತಲುಪಿದಾಗ ರಸ್ತೆ ಬದಿಯಲ್ಲಿ ಇಬ್ಬರು ಸಿಗರೇಟ್ ಸೇದುತ್ತಿದ್ದು, ಇದನ್ನು ಕಂಡ ಪಿರ್ಯಾದಿದಾರರು ಸಿಬ್ಬಂದಿಗಳೊಂದಿಗೆ ಅವರುಗಳ ಬಳಿಗೆ ತೆರಳಿ ವಿಚಾರಿಸಿದಾಗ ಅವರುಗಳು ತೊದಲುತಾ ಮಾತಾನಾಡುತಿದ್ದು, ಅವರ ಬಾಯಿಯಿಂದ ಗಾಂಜ ವಾಸನೆ ಬರುತ್ತಿದ್ದು, ಇವರುಗಳನ್ನು ಕೂಲಂಕುಷವಾಗಿ ವಿಚಾರಿಸಿದಾಗ, ತಾವು ಸಿಗರೇಟ್ ಒಳಗೆ ಗಾಂಜವನ್ನು ಸೇರಿಸಿ ಸೇದಿರುವುದಾಗಿ ತಪೊಪ್ಪಿಕೊಂಡಿದ್ದು  ಇವರುಗಳ ಹೆಸರು ವಿಳಾಸ ಕೇಳಲಾಗಿ 1) ಮುಹೀದ್ ಪಾಶಾ, ಪ್ರಾಯ: 41 ವರ್ಷ,  ವಾಸ: 24-775ಬಿ-36ಬಿ, ಎಮ್ ಜಿ ಎಮ್ 64 ಕಸಬಾ ಬೇಂಗ್ರೆ ಮಂಗಳೂರುಮತ್ತು 2) ಶಾಜಾದ್ ಪಾಷಾ, ಪ್ರಾಯ: 28 ವರ್ಷ, ವಾಸ: ಡೊರ್ ನಂಬ್ರ ಎಮ್ ಜೆ ಎಮ್ 463 ಕಸಬಾ ಬೇಂಗ್ರೆ ಕೂಳೂರು ಮಂಗಳೂರು ಎಂಬುದಾಗಿ ತಿಳಿಸಿದಂತೆ ಸ್ಥಳದಲ್ಲಿ ವಶಕ್ಕೆ ಪಡೆದು ಇವರುಗಳು ಗಾಂಜ ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಡಿಸಿಕೊಳ್ಳುವ ಸಲುವಾಗಿ ಇವರುಗಳನ್ನು ವೈದ್ಯರ ಬಳಿ ಕಳುಹಿಸಿಕೊಟ್ಟಲ್ಲಿ, ಪರೀಕ್ಷೀಸಿದ ವೈದ್ಯರು ಇವರುಗಳು ಗಾಂಜಾ ಸೇವಿಸಿರುವುದಾಗಿ ದೃಡೀಕರಣ ಪತ್ರ ನೀಡಿದಂತೆ ಇವರುಗಳ ವಿರುದ್ದ ಸೂಕ್ತ ಕಾನುನು ಕ್ರಮ ಕೈಗೊಂಡಿರುವುದಾಗಿದೆ.

 

Kankanady Town PS                                        

ಪ್ರಜ್ಞಾ ಸ್ವಾಧಾರ ಗೃಹದಲ್ಲಿ ದಿನಾಂಕ 12-10-2022 ರಂದು ಶ್ರೀಮತಿ ಸರೋಜಾ ಬಾಯಿ, ಪ್ರಾಯ: 40 ವರ್ಷ, ಗಂಡ: ಮಲ್ಲಣ್ಣ, ವಿಳಾಸ: ಸಕ್ಕರಾಯನ ಚಿಕ್ಕಮಗಳೂರು ಎಂಬುವರನ್ನು  ಪ್ರಜ್ಞಾ ಸ್ವಾಧಾರ ಗೃಹದಲ್ಲಿ ದಾಖಲು ಮಾಡಿದ್ದು ದಿನಾಂಕ 13-10-2022 ರಂದು ಮುಂಜಾನೆ 02.00 ಗಂಟೆಯ ನಂತರ ಶ್ರೀಮತಿ ಸರೋಜಾ ಬಾಯಿ  ಎಂಬುವರು ಪ್ರಜ್ಞಾ ಸ್ವಾಧಾರ ಗೃಹದಿಂದ ಕಾಣೆಯಾಗಿರುತ್ತಾರೆ. ಕಾಣೆಯಾದವರ ವಿವರ: ಶ್ರೀಮತಿ ಸರೋಜಾ ಬಾಯಿ , ವಯಸ್ಸು: 40  ವರ್ಷ, ಎತ್ತರ: 5’ 1 ಅಡಿ, ಮೈಬಣ್ಣ: ಗೋದಿ ಮೈ ಬಣ್ಣ,  ದಪ್ಪ  ಶರೀರ, ಹೊಂದಿದ್ದು, ಹೋಗುವಾಗ ಕಂದು  ಬಣ್ಣದ ಚೂಡಿದಾರ, ಹಳದಿ ಪ್ಯಾಂಟ್, ಹಳದಿ ಬಣ್ಣದ ದುಪ್ಪಟ್ಟ  ಧರಿಸಿದ್ದು, ಕನ್ನಡ ಭಾಷೆ ಮಾತನಾಡುವವರಾಗಿದ್ದು ಕಾಣೆಯಾದ ಶ್ರೀಮತಿ ಸರೋಜಾ ಬಾಯಿ ಎಂಬುವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

Traffic North Police Station                               

ದಿನಾಂಕ 12-10-2022 ರಂದು ಪಿರ್ಯಾದಿ Silviya Dsouza ದಾರರು ಅವರ ತಾಯಿ ಸಿಂಥಿಯಾ ಡಿಸೋಜಾ (49) ರವರೊಂದಿಗೆ ಮಂಗಳೂರು ಪಾಸ್ ಪೋರ್ಟ್ ಕಛೇರಿಗೆ ಹೋಗಿ ವಾಪಾಸ್ ಮನೆಯ ಕಡೆಗೆ ಬಸ್ಸಿನಲ್ಲಿ ಬಂದು ಕಿನ್ನಿಗೊಳಿ ಚರ್ಚ್ ಬಳಿ ಬಸ್ಸಿನಿಂದ ಇಳಿದು ರಸ್ತೆಯ ಬಲಬದಿಯಲ್ಲಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸೆಂಟ್ ಲಾರೆನ್ಸ್ ಶಾಲೆಯ ಬಳಿ ತಲುಪುತ್ತಿದ್ದಂತೆ ಸಂಜೆ ಸುಮಾರು 6.30 ಗಂಟೆಗೆ ಎದುರಿನಿಂದ ಅಂದರೆ ಮೂರುಕಾವೇರಿ ಕಡೆಯಿಂದ ರಿಕ್ಷಾ ನಂಬ್ರ KA-19-AB-8423 ಯನ್ನು ಅದರ ಚಾಲಕ ರಮೇಶ್ ಎಂಬಾತನು ದುಡುಕತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ಹಾಗೂ ಅವರ ತಾಯಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ತಾಯಿಯು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕೈ ಮಣಿಗಂಟಿನ ಬಳಿ ಗುದ್ದಿದ ರೀತಿಯ ಗಾಯ ಹಾಗೂ ಎಡಕೈ ಕಿರುಬೆರಳಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಹಾಗೂ ಅವರ ತಾಯಿಯ ಹಣೆಯ ಹತ್ತಿರ ತಲೆಯಲ್ಲಿ ಚರ್ಮ ಹರಿದ ರೀತಿಯ ರಕ್ತಗಾಯ, ತುಟಿಯ ಮೇಲ್ಗಡೆ ರಕ್ತಗಾಯ, ಎಡಕೈ ತಟ್ಟು ಹಾಗೂ ಎಡಕಾಲಿನ ತೊಡೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಅವರನ್ನು ಅಲ್ಲಿದ್ದ ಮತ್ತೊಂದು ರಿಕ್ಷಾ ಚಾಲಕರು ಅವರ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಕಿನ್ನಿಗೊಳಿಯ ಕನ್ಸೆಟ್ಟಾ ಆಸ್ಪತ್ರೆಗೆ ದಾಖಲಿಸಿರುವುದಾಗಿ ಎಂಬಿತ್ಯಾದಿ.

Mangalore South PS                                

 ಮಂಗಳೂರು ಮಂಕಿ ಸ್ಟಾಂಡ್ ನಿವಾಸಿಗಳಾದ ಹಸ್ತಿಮಾಲ್ ಫರ್ಮಾರ್ ಮತ್ತು ಅವರ ಪತ್ನಿ ಶ್ರೀಮತಿ. ಸಂಗೀತ ರವರು ಮಂಗಳೂರು ತಾಲೂಕು, ಸ್ಟೇಟ್ ಬ್ಯಾಂಕ್ ಜಂಕ್ಷನ್, ನೆಲ್ಲಿಕಾಯಿ ರಸ್ತೆಯಲ್ಲಿರುವ ಅಲ್ ರಬ್ಬಾ ಪ್ಲಾಝಾ ಇದರ 1 ನೇ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಮಣಪುರಂ ಪೈನಾನ್ಸ್ ಲಿ. ನಲ್ಲಿ ದಿನಾಂಕ 23-10-2020, ದಿನಾಂಕ 27-10-2020, ದಿನಾಂಕ 05-11-2020, ದಿನಾಂಕ 06-11-2020, ದಿನಾಂಕ 15-11-2020, ದಿನಾಂಕ 23-11-2020 ದಿನಾಂಕ 30-11-2020, ಮತ್ತು 21-12-2020 ರಂದು ಬೇರೆ ಬೇರೆ ದಿನಗಳಲ್ಲಿ ಒಟ್ಟು 795 ಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ಅಭರಣಗಳೆಂದು ಅಡಮಾನ  ಇರಿಸಿ ಇಟ್ಟು ರೂಪಾಯಿ 26,99,910/- ಹಣವನ್ನು ಪಡೆದುಕೊಂಡಿರುತ್ತಾರೆ. ದಿನಾಂಕ 01-10-2021 ರಂದು ಸಂಸ್ಥೆಯ ನುರಿತ ತಜ್ಞರು (ಎಕ್ಸ್ ಪರ್ಟ್) ಸದ್ರಿ 1 ಮತ್ತು 2 ನೇ ಆರೋಪಿತರು ಗಿರವಿ ಇರಿಸಿದ ಅಭರಣಗಳನ್ನು ಚಕ್ ಮಾಡಿದಾಗ ನಕಲಿ ಎಂಬುದು ದೃಢಪಟ್ಟಿರುತ್ತದೆ. ತದ ನಂತರ ಮಣಪುರಂ ಪೈನಾನ್ಸ್ ಲಿ. ನಿಂದ 1 ಮತ್ತು 2 ನೇ ಆರೋಪಿತರಿಗೆ ಹಲವು ಬಾರಿ ನೋಟೀಸು ಮತ್ತು ಪೋನ್ ಮುಖೇನ ಹಣ ಸಂದಾಯ ಮಾಡುವಂತೆ ತಿಳಿಸಿದಲ್ಲಿ, ಸಾಲವನ್ನು ಆರೋಪಿತರು ವಾಪಾಸು ಮರು ಪಾವತಿಸದೇ  ಮಣಪುರಂ ಪೈನಾನ್ಸ್ ಸಂಸ್ಥೆಗೆ ಮೋಸ ಮತ್ತು ನಂಬಿಕೆ ದ್ರೋಹವನ್ನು ಮಾಡಿ ವಂಚಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ..

 

ಇತ್ತೀಚಿನ ನವೀಕರಣ​ : 14-10-2022 07:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080