ಅಭಿಪ್ರಾಯ / ಸಲಹೆಗಳು

Crime Reported in : Barke PS

ದಿನಾಂಕ:11.11.2022 ರಂದು ವಿಜಯ ಕರ್ನಾಟಕ ದಿನ ಪ್ರತಿಕೆಯ ಪುಟ ಸಂಖ್ಯೆ 3 ರಲ್ಲಿ ಸನ್ಮಾರ್ಗ (ಎನ್.ಜಿ.ಓ) Man power recruitment agency ಬಾಳೆಗುಂಡಿ ಸದನ ಕೆ.ಆರ್ ಪುರಂ ಮುಖ್ಯ ರಸ್ತೆ, ಮೊದಲನೆಯ ಮಹಡಿ ಶಿವಮೊಗ್ಗ ಎಂಬವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮಂಗಳೂರು ಡಿಪೋದಲ್ಲಿ 250 ಹುದ್ದೆಗಳು ಪುತ್ತೂರು ವಿಭಾಗದಲ್ಲಿ 200 ಹುದ್ದೆಗಳು ಚಾಮರಾಜ ನಗರ ವಿಭಾಗದಲ್ಲಿ 100 ಹುದ್ದೆಗಳು ರಾಮನಗರ ವಿಭಾಗದಲ್ಲಿ 100 ಹುದ್ದೆಗಳು ಒಟ್ಟು 650 ಡ್ರೈವರ್ ಗಳು ಬೇಕಾಗಿದ್ದಾರೆ, ಪ್ರತಿ ಅರ್ಹ ಅಭ್ಯಾರ್ಥಿಗಳು ಬಯೋಡಾಟಾದೊಂದಿಗೆ ಅರ್ಜಿ ಶುಲ್ಕ ರೂ.1000/-ದ ಡಿಡಿಯನ್ನು ಮತ್ತು ರೂ.10000/- ದ ಡಿಡಿಯನ್ನು ನೇಮಕಾತಿ ಅರ್ಜಿಯೊಂದಿಗೆ ಸಲ್ಲಿಸುವುದು ನೇಮಕಾತಿ ತಿರಸ್ಕಾರಗೊಂಡಾಗ ರೂ.10,000/-ವನ್ನು ಹಿಂತಿರುಗಿಸಲಾಗುವುದು ನೇಮಕಾತಿಯ ಒಟ್ಟು ಶುಲ್ಕ ಒಬ್ಬರಿಗೆ ರೂ.25,000/- ಮಾತ್ರ ಇದ್ದು ರೂ.15,000/-ವನ್ನು ನೇಮಕಾತಿ ಪತ್ರ ಪಡೆಯುವ ಸಮಯ ಸಲ್ಲಿಸುವುದು. ಎಂದು ಪ್ರಕಟಿಸಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರ ಕಚೇರಿ ಹಾಗೂ ವಿಭಾಗಗಳಿಂದ ನೇಮಕಾತಿಗಾಗಿ ಯಾವುದೇ ಪತ್ರಿಕಾ ಪ್ರಕರಟಣೆಯನ್ನು ಹೊರಡಿಸದೇ ಇದ್ದರೂ ಆರೋಪಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಖಾಯಂ ನೌಕರಿ ಇದೆ ಎಂದು ಸುಳ್ಳು ಸಂದೇಶವನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ನಕಲಿ ನೌಕರಿ ಆಮಿಷ ಒಡ್ಡಿ ಹಣ ಸಂಗ್ರಹಣೆ ಮಾಡಿ ವಂಚಿಸುವ ದುರುದ್ದೇಶದಿಂದ ಸುಳ್ಳು ಪತ್ರಿಕಾ ಪ್ರಕಟಣೆಯನ್ನು ಪ್ರಕಟಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

Mangalore East Traffic PS        

ಪಿರ್ಯಾದಿದಾರರಾದ ವಿನ್ಸೆಂಟ್ ಮೊರಾಸ್ ರವರು ದಿನಾಂಕ 14-11-2022 ರಂದು ಬೆಳಿಗ್ಗೆ ತನ್ನ ಬಾಬ್ತು KA-19-EQ-9447 ನೊಂದಣಿ ನಂಬ್ರದ ಸ್ಕೂಟರ್ ನಲ್ಲಿ ಸವಾರರಾಗಿ ಹಾಗೂ ಹಿಂಬದಿ ಸವಾರೆಯಾಗಿ ತನ್ನ ಮಗಳಾದ ವಿಯೊಲ್ಲಾ ಮೊರಾಸ್ ರವರನ್ನು ಕುಳ್ಳರಿಸಿಕೊಂಡು ಅವರನ್ನು ಸೇಂಟ್ ಅಲೋಸಿಯಸ್ ಕಾಲೇಜಿಗೆ ಬಿಡಲೆಂದು ಮನೆಯಿಂದ ಹೊರಟು ಕುಲಶೇಖರ ಕೈಕಂಬ ಮಾರ್ಗವಾಗಿ ಬಿಕರ್ನಕಟ್ಟೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 8.20 ಗಂಟೆಗೆ ಬಾಲಯೇಸು ಚರ್ಚ್ ದಾಟಿ ಸ್ವಲ್ಪ ದೂರ ಮುಂದೆ ಬಜ್ಜೊಡಿಗೆ ಹೋಗಲು ಇರುವ ಅಡ್ಡ ರಸ್ತೆಯ ಬಳಿ ತಲುಪುತ್ತಿದ್ದಂತೆ ಅವರ ಬಲ ಹಿಂಭಾಗದಿಂದ KA-19-AD-7240 ನೊಂದಣಿ ನಂಬ್ರದ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯನ್ನು ಅದರ ಚಾಲಕ ಸಾಜಿದ್ ಎಂಬಾತನು ದುಡುಕುತನ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಬಲಗಡೆಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ್ದು, ಡಿಕ್ಕಿಯ ಪರಿಣಾಮ ಪಿರ್ಯಾದಿದಾರರು ಹಾಗೂ ಹಿಂಬದಿ ಸವಾರೆ ವಿಯೊಲ್ಲಾ ಮೊರಾಸ್ ರವರು ಸ್ಕೂಟರ್ ಸಮೇತ ಎಡಕ್ಕೆ ವಾಲಿ ರಸ್ತೆಗೆ ಬಿದ್ದಿದ್ದು ಕೂಡಲೇ ಅಲ್ಲಿದ್ದ ಸಾರ್ವಜನಿಕರು ಉಪಚರಿಸಿ ಕಾರೊಂದರಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ, ಸದ್ರಿ ಅಪಘಾತದಲ್ಲಿ ಪಿರ್ಯಾದಿದಾರರ ಎರಡೂ ಕೈ ಕಾಲುಗಳಿಗೆ ತರಚಿದ ಗಾಯಗಳು ಹಾಗೂ ಎದೆಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಹಿಂಬದಿ ಸವಾರೆಯಾಗಿದ್ದ ವಿಯೊಲ್ಲಾ ಮೊರಾಸ್ ರವರಿಗೆ ಬಲ ಮೊಣಕಾಲಿನಲ್ಲಿ ತರಚಿದ ಗಾಯ, ಬಲ ಕಣ್ಣಿನ ಮೇಲ್ಭಾಗದಲ್ಲಿ ಹಾಗೂ ಗದ್ದಕ್ಕೆ ಗುದ್ದಿದ ರೀತಿಯ ಗಾಯವಾಗಿರುತ್ತದೆ, ಆದುದರಿಂದ ಈ ರಸ್ತೆ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

2) ಪಿರ್ಯಾದಿ MADHAVA K ದಾರರು ದಿನಾಂಕ 14-11-2022 ರಂದು ಅಂಬೇಡ್ಕರ್  ಜಂಕ್ಷನ್ ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಸಿ.ಪಿ.ಸಿ  ರಾಘವೇಂದ್ರ ಪೂಜಾರ ರವರ ಜೊತೆ ಕರ್ತವ್ಯದಲ್ಲಿದ್ದಾಗ ಸಿ.ಪಿ.ಸಿ  ರಾಘವೇಂದ್ರ ಪೂಜಾರ ರವರು ಸಮಯ ಬೆಳಿಗ್ಗೆ 9.28 ಗಂಟೆಗೆ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಬರುವ ವಾಹನಗಳಿಗೆ ನಿಲ್ಲುವಂತೆ ಕೈ ಸಂಕೇತವನ್ನು ನೀಡಿ ಬಾವುಟ ಗುಡ್ಡ ಕಡೆಯಿಂದ ಬರುವ ವಾಹನಗಳಿಗೆ ಮುಂದಕ್ಕೆ ಚಲಿಸಲು ಕೈ ಸಂಕೇತವನ್ನು ನೀಡುತ್ತಿದ್ದಾಗ  ಬಂಟ್ಸ್ ಹಾಸ್ಟೆಲ್ ಕಡೆಯಿಂದ KA-20-AB-4604 ನೊಂದಣೆ ನಂಬ್ರದ  ನವದುರ್ಗಾ ಎಂಬ ಹೆಸರಿನ ಬಸ್ಸನ್ನು ಅದರ ಚಾಲಕ ಗುಣಪಾಲ್ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಮತ್ತು ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ನಿಲ್ಲುವಂತೆ ನೀಡಲಾಗಿದ್ದ ಪೊಲೀಸ್ ಸಿಗ್ನಲ್ ನ್ನು ಉಲ್ಲಂಘನೆ ಮಾಡಿ ಬಸ್ ಚಲಾಯಿಸಿಕೊಂಡು ಬಂದು  ಬಾವುಟಗುಡ್ಡ ಕಡೆಯಿಂದ  ಬಲ್ಮಠ ಕಡೆಗೆ ಸಾಗುತ್ತಿದ್ದ KA-19-D-4114 ನೊಂದಣಿ ನಂಬ್ರದ ಸಾಯಿಷಾ ಎಂಬ ಹೆಸರಿನ  ಬಸ್ಸಿನ ಎಡಬದಿ ಮುಂಬದಿ ಭಾಗಕ್ಕೆ ಡಿಕ್ಕಿ ಹೊಡೆದು  ನಂತರ ಕೂಡ ಮುಂದಕ್ಕೆ ಚಲಿಸಿ ಸದರಿ ಬಸ್ಸಿನ ಬಲಬದಿ ಮಧ್ಯಭಾಗಕ್ಕೂ ಡಿಕ್ಕಿಯಾಗಿರುತ್ತದೆ. ಈ ಡಿಕ್ಕಿಯ ಪರಿಣಾಮ KA-19-D-4114 ನೊಂದಣಿ ನಂಬ್ರದ ಸಾಯಿಷಾ ಬಸ್ ಹಿಂದಕ್ಕೆ ಚಲಿಸಿ ಅಂಬೇಡ್ಕರ್ ಜಂಕ್ಚನ್ ಮದ್ಯಭಾಗದಲ್ಲಿ ಇರುವ ಪೊಲೀಸ್ ಅಂಬ್ರೆಲ್ಲಾ ಮತ್ತು ಸಿಸಿಟಿವಿ ಕಂಬಕ್ಕೆ ತಾಗಿದ್ದು,  ಇದರ ಪರಿಣಾಮವಾಗಿ ಪೊಲೀಸ್ ಅಂಬ್ರೆಲ್ಲಾ ,ಸಿಸಿಟಿವಿ ಕಂಬ ಮತ್ತು ಅದರಲ್ಲಿದ್ದ ಕೆಮೆರಾ ಹಾಗೂ ವಿದ್ಯುತ್ ಕೇಬಲ್ ಗಳು ಕೂಡ ಜಖಂಗೊಂಡಿರುತ್ತದೆ. ಅಪಘಾತದಲ್ಲಿ ಎರಡು ಬಸ್ಸುಗಳಿಗೆ ತೀವ್ರ ಜಖಂ ಉಂಟಾಗಿದ್ದು, ಯಾರಿಗೂ ಗಾಯಗಳಾಗಿರುವುದಿಲ್ಲ .ಈ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿಕೆ ಎಂಬಿತ್ಯಾದಿ.

Moodabidre PS

ಪಿರ್ಯಾದು Ashok Kamath ದಾರರು ಮೂಡಬಿದ್ರೆ ಕಾಮತ್ ಜುವೆಲ್ಲರ್ಸ್ ನಲ್ಲಿ ಬೆಳ್ಳಿ ವ್ಯಾಪಾರ ಮತ್ತು ಚಿನ್ನ ರಿಪೇರಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 05-06-2022 ರಂದು ಆದಿತ್ಯವಾರ ಅಂಗಡಿಯಲ್ಲಿರುವ ಸಮಯ ಬೆಳಿಗ್ಗೆ ಸುಮಾರು 11.00 ಗಂಟೆಗೆ ಇಬ್ಬರು ವ್ಯಕ್ತಿಗಳು ವ್ಯಾಪಾರದ ಸೋಗಿನಲ್ಲಿ ಅಂಗಡಿಗೆ ಬಂದು ಬೆಳ್ಳಿಯ ಆಭರಣದ ಬಗ್ಗೆ ತಮಿಳಿನಲ್ಲಿ ಮಾತನಾಡಿ ವಿಚಾರ ಮಾಡಿ ಭೇರೆ ಗ್ರಾಹಕರು ರಿಪೇರಿಗೆ ಕೊಟ್ಟ 18 ಗ್ರಾಂ ತೂಕದ ಒಂದು ಚಿನ್ನದ ಕರಿಮಣಿ ಸರ ಮತ್ತು 8 ಗ್ರಾಂ ತೂಕದ ಒಂದು ಚಿನ್ನದ ಚೈನ್ ನ್ನು ಟೇಬಲ್‌ನ ಡ್ರಾವರ್ ನಿಂದ ಕಳವು ಮಾಡಿಕೊಂಡಿರುತ್ತಾರೆ. ಆ ಸಮಯದಲ್ಲಿ ಪಿರ್ಯಾದುದಾರರು ಭೇರೆ ಗ್ರಾಹಕರೊಂದಿಗೆ ವ್ಯಾಪಾರ ಮಾಡುತ್ತಿರುವಾಗ ಮನವರಿಕೆ ಬಾರದೇ ಇದ್ದು, ಈ ತರಹದ ಪ್ರಕರಣ ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಆರೋಪಿಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ತಿಳಿದು ಬಂದಿದ್ದು ಹಾಗೂ ಅವರ ಫೋಟೋವನ್ನು ತೋರಿಸಿದಾಗ ಅವರ ಅಂಗಡಿಯಲ್ಲಿ ಕಳವು ಮಾಡಿದ ಆರೋಪಿಗಳು ಅವರೇ ಆಗಿದ್ದು, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Mangalore North PS                 

ದಿನಾಂಕ: 13.11.2022 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ರಾವ್ & ರಾವ್ ಸರ್ಕಲ್ ಬಳಿ  1)ಮೊಹಮ್ಮದ್ ಅರ್ಫಾತ್ (24) ವಾಸ: ನಸೀಮಾ ಮಂಜಿಲ್ ಹಳೇ ಪೇಟೆ ತೊಕ್ಕಟ್ಟು, ಮಂಗಳೂರು.2)ಶನೀಝ್ (22) ವಾಸ: ಕಾಪಿಕಾಡು ಒಂದನೇ ಕ್ರಾಸ್ ತೊಕ್ಕಟ್ಟು ಮಂಗಳೂರು ಎಂಬವರುಗಳು  ಅಮಲಿನಲ್ಲಿದ್ದು  ಗಾಂಜಾ ಸೇವನೆ ಮಾಡಿರುವುದಾಗಿ  ಒಪ್ಪಿಕೊಂಡಿರುತ್ತಾರೆ. ಸದ್ರಿಯವರನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕನಾದಲ್ಲಿರುವ ಎ.ಜೆ ಆಸ್ಪತ್ರೆಗೆ  ಹಾಜರುಪಡಿಸಿದ್ದಲ್ಲಿ ವೈದ್ಯರು ಪರೀಕ್ಷಿಸಿ ಮೊಹಮ್ಮದ್ ಅರ್ಫಾತ್, ಶನೀಝ್ ಎಂಬವರು ಗಾಂಜಾ ಎಂಬ ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವುದಾಗಿ ತಿಳಿಸಿ ವೈದ್ಯಕೀಯ ದೃಡಪತ್ರವನ್ನು ನೀಡಿರುವ ಮೇರೆಗೆ ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ ಸಾರಾಂಶ.

 

ಇತ್ತೀಚಿನ ನವೀಕರಣ​ : 14-11-2022 07:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080