ಅಭಿಪ್ರಾಯ / ಸಲಹೆಗಳು

Crime Reported in : : CEN Crime PS                

ಫಿರ್ಯಾದಿ ರೀಟಾ ಪೇರಿಸ್  ಮತ್ತು ಆಕೆಯ ಮಗ ಅಮಿತ್ ಪೇರಿಸ್ ವಿದೇಶದಲ್ಲಿರುವ ಸಮಯ  ಫಿರ್ಯಾದಿಯ ಮಗಳಾದ ಆರೋಪಿತೆ ನಿಕಿತಾ ಪೇರಿಸ್ ಎಂಬಾಕೆಯು ಆರೋಪಿ ಉಡುಪಿ ಮುದರಂಗಡಿಯ ವಾಸಿ ಗೋಡ್ವಿನ್ ಫೆರ್ನಾಂಡಿಸ್ ಎಂಬಾತನ ಜೊತೆಯಲ್ಲಿ ಸೇರಿಕೊಂಡು ರೀಟಾ ಪೇರಿಸ್, ಅಮಿತ್ ಪೇರಿಸ್ ಮತ್ತು ನಿಕಿತಾ ಪೇರಿಸ್ ಹೆಸರಿನಲ್ಲಿರುವ ಮಂಗಳೂರಿನ ಬಿಜೈನಲ್ಲಿರುವ ಸಾಧನ ಟವರ್ಸ್ ನಲ್ಲಿರುವ ಅಪಾರ್ಟ್ ಮೆಂಟ್ ನ್ನು ಫಿರ್ಯಾಧಿ ರೀಟಾ ಪಾಯಸ್ ಮತ್ತು ಅಮಿತ್ ಪೇರಿಸ್ ರವರು ಆರೋಪಿತೆ ನಿಕಿತಾ ಪೇರಿಸ್ ರವರಿಗೆ GPA ನೀಡಿದಂತೆ  ಉಡುಪಿಯ ವಕೀಲರಿಂದ ನಕಲಿ GPA ತಯಾರಿಸಿ ಅದಕ್ಕೆ ಫಿರ್ಯಾಧಿ ರೀಟಾ ಪೇರಿಸ್ ಮತ್ತು ಅಮಿತ್ ಪೇರಿಸ್ ರವರ ನಕಲಿ ಸಹಿ ಮಾಡಿ  ಬ್ಯಾಂಕ್ ಆಫ್ ಬರೋಡಾ ಕುತ್ಯಾರ್ ಬ್ರಾಂಚ್ ನ ಬ್ರಾಂಚ್ ಮ್ಯಾನೇಜರ್ ಗೆ ಪ್ಲಾಟಿನ ದಾಖಲಾತಿಯೊಂದಿಗೆ ಆರೋಪಿತರಿಬ್ಬರು ಸಲ್ಲಿಸಿ ಬ್ರಾಂಚ್ ಮ್ಯಾನೇಜರ್ ರವರ ಸಹಕಾರದಿಂದ ಪ್ಲಾಟಿನ ಮೇಲೆ ರೂ.25,00,000/- ಲಕ್ಷ ಗೃಹ ಸಾಲವನ್ನು ಪಡೆದುಕೊಂಡು ಬಳಿಕ ಫಿರ್ಯಾದಿ ರೀಟಾ ಪೇರಿಸ್ ನವರ  ವಾಮಂಜೂರು ಕಾರ್ಪೋರೇಶನ್ ಬ್ಯಾಂಕ್ ನಲ್ಲಿರುವ ಲಾಕರಿಗೆ Mandate Holder ದಾಖಲೆಯಲ್ಲಿ ಫಿರ್ಯಾದಿ ರೀಟಾ ಪೇರಿಸ್ ರವರ ನಕಲಿ ಸಹಿ ಮಾಡಿ ದಾಖಲೆಯನ್ನು ಬ್ಯಾಂಕಿಗೆ ಸಲ್ಲಿಸಿಕೊಂಡು ಬ್ರಾಂಚ್ ಮ್ಯಾನೇಜರ್ ರವರ ಸಹಕಾರದಿಂದ ಲಾಕರ್ ನಲ್ಲಿದ್ದ ಸುಮಾರು ರೂ.1,00,00,000/- ಕೋಟಿ ಮೌಲ್ಯ ಚಿನ್ನಾಭರಣವನ್ನು ಆರೋಪಿತರು ತೆಗೆದುಕೊಂಡು ಹೋಗಿರುವುದಲ್ಲದೆ ಫಿರ್ಯಾದಿಯ ಬ್ಯಾಂಕ್ ಅಕೌಂಟ್ ನ  ಚೆಕ್ ಗಳಲ್ಲಿ ಫಿರ್ಯಾದಿಯ ನಕಲಿ ಸಹಿ ಮಾಡಿ ಫಿರ್ಯಾದಿಯ ಖಾತೆಯಲ್ಲಿದ್ದ ಹಣವನೆಲ್ಲಾ ತೆಗೆದು ಫಿರ್ಯಾಧಿಗೆ ಅಪರಾಧಿಕ ನಂಬಿಕೆ ದ್ರೋಹ ಎಸಗಿ ನಂಬಿಸಿ, ವಂಚಿಸಿ ನಷ್ಟವನ್ನುಂಟು ಮಾಡಿರುವುದಾಗಿದೆ.

Mangalore North PS                           

 ಪಿರ್ಯಾದಿದಾರರು ಬೆಹರೆನ್ ನಲ್ಲಿ ಕೆಲಸ ಮಾಡುತ್ತಿರುವ ಸಮಯ ಬಹರೈನ್ ನಲ್ಲಿ ಪರಿಚಯವಾದ ಕೇರಳದ ನಿವಾಸಿಯಾದ ಕೆ ಪಿ ಹರಿ ಕುಮಾರ್ ರವರು ತಾನು ಬಹರೆನ್ ನಡೆಸುತ್ತಿರುವ ಉದ್ಯಮವಾದ ಕೈಲಾಸ್ ಮ್ಯಾನೆಜ್ ಮೆಂಟ್ ಎಸ್.ಪಿ.ಪಿ ಬಹರೈನ್ ಎಂಬ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದು, ಈ ಬಗ್ಗೆ ಪಿರ್ಯಾದಿದಾರರು ಒಟ್ಟು 67 ಲಕ್ಷ ಹಣವನ್ನು ಭಾರತೀಯ ಕರೆನ್ಸಿಯಲ್ಲಿ ಕೆ ಪಿ ಹರಿ ಕುಮಾರ್ ರವರ ಮಗನಾದ ನಂದ ರಾಜ್ ರವರ ಕೇರಳದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದು, ಇದಕ್ಕೆ ಭದ್ರಿಕೆಯಾಗಿ ಆಕ್ಸಿಸ್ ಬ್ಯಾಂಕ್ ನ ಚೆಕ್ ಗಳನ್ನು ನೀಡಿರುತ್ತಾರೆ. ವ್ಯವಹಾರಕ್ಕೆ ಸಂಬಂದಿಸಿದಂತೆ ಕರಾರು ಪತ್ರಗಳನ್ನು ಕೂಡ ತಯಾರಿಸಿದ್ದು, ನಂತರ ಪಿರ್ಯಾದಿದಾರರು ಹರಿ ಕುಮಾರ್ ರವರಲ್ಲಿ ಹೂಡಿಕೆ ಮಾಡಿದ ಹಣವನ್ನು ವಾಪಾಸ್ಸು ಕೇಳಿದಾಗ ಹಣ ಇಲ್ಲ ಎಂದು ಹೇಳಿ ಮೋಸ, ನಂಬಿಕೆ ದ್ರೋಹ ಮಾಡಿರುವುದಲ್ಲದೇ ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Mangalore South PS                                 

ಪಿರ್ಯಾದಿದಾರರಾದ ಶ್ರೀಮತಿ, ಡೋಟಿ ಕ್ರಿಸ್ಟಬೇಲ್ ಸಂಥ್ವಾನ್ ರವರ ಮೊಮ್ಮಗಳು ಕು. ಶ್ಯಾರಿಲ್ [19] ರವರು ದಿನಾಂಕ: 29.11.2022 ರಂದು ಸಮಯ ಬೆಳಿಗ್ಗೆ 05:30 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿದ್ದು, ಕೂಡಲೇ ಪಿರ್ಯಾದಿದಾರರ ಅಳಿಯ ಮತ್ತು ಮಗಳು ನೈನಾ ಸೇರಿಕೊಂಡು ಮಂಗಳೂರು ನಗರದ ಕೆಲವೊಂದು ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ, ಅಲ್ಲದೇ ನೆರೆಕೆರೆಯವರನ್ನು ಹಾಗೂ ಸಂಭಂಧಿಕರನ್ನು,ಪರಿಚಯದ ಸ್ನೇಹಿತರನ್ನು ವಿಚಾರಿಸಿದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ, ಅವಳ ಹತ್ತಿರ ಯಾವುದೇ ಮೊಬೈಲ್ ಪೋನ್ ಕೂಡಾ ಇರುವುದಿಲ್ಲ, ಕಳೆದ ಮೂರು ವರ್ಷಗಳಲ್ಲಿ 1 ರಿಂದ 6 ಬಾರಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಹೋಗಿ ತಾನಾಗಿಯೇ ಮರಳಿ ಮನೆಗೆ ಬಂದಿರುತ್ತಾಳೆ. ಕಾಣೆಯಾದ ತನ್ನ ಮೊಮ್ಮಗಳು ಕು. ಶ್ಯಾರಿಲ್ ಟ್ರಿನಿಟಾ ಮಾರ್ಕ್ [19] ಎಂಬುಳನ್ನು ಪತ್ತೆಮಾಡಿಕೊಡಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

ಧರಿಸಿದ ಉಡುಪು: ಕಪ್ಪು ಬಣ್ಣದ ಫ್ಯಾಂಟ್ ಮತ್ತು ಕಪ್ಪು ಬಣ್ಣದ ಕುರ್ತಾ,

 

Surathkal PS

ಪಿರ್ಯಾದಿ ಶ್ರೀ ಮೊಹಮ್ಮದ್ ಮುಸ್ತಾಫ ರವರು 2016ನೇ ಸಾಲಿನಿಂದ ಕಿಂಗ್ಸ್ ಮಾರ್ಬಲ್ & ಗ್ರಾನೈಟ್ಸ್ ಕಂಪೆನಿಯ ಪ್ರೊಪ್ರೈಟರ್ ಆಗಿದ್ದು ಆರೋಪಿತ ದೇವಕಿನಂದನ್ ರವರ ಜೊತೆ ವ್ಯವಹಾರ ನಡೆಸುತ್ತಿದ್ದು ಆರೋಪಿತನು ಪಿರ್ಯಾದಿದಾರರಿಂದ 14,50,000 /- ರೂಪಾಯಿಗಳನ್ನು ಮೊಹಮ್ಮದ್ ಅಲ್ಫಾಜ್ & ಮೊಹಮ್ಮದ್ ಇರ್ಪಾನ್ ರವರ ಮುಖಾಂತರ ಖಾತೆಗೆ ಜಮಾ ಮಾಡಿಸಿಕೊಂಡಿದ್ದು ಸದ್ರಿ ಮೊತ್ತವನ್ನು ಈ ತನಕ ಪಾವತಿಸದೇ 2022ರ ಮೇ ತಿಂಗಳ 3ನೇ ವಾರದಲ್ಲಿ 3,48,478 ರೂಪಾಯಿಗಳ ಗ್ರಾನೈಟ್ಸ್ ಸಪ್ಲೈ ಮಾಡಿರುವುದಾಗಿ ಇ-ಬಿಲ್ ನಂ 131476472029 ರಂತೆ ಪ್ರಮಾಣ ಮಾಡಿದ್ದು, ಅದರಂತೆ ಪಿರ್ಯಾದಿಯು ಹಣ ಪಾವತಿಸಿದ್ದು ಆದರೆ ಆರೋಪಿತನು ಗ್ರಾನೈಟ್ ಪೂರೈಸದೇ ಇದ್ದಾಗ ಪೋನು ಮುಖೇನಾ ಆರೋಪಿತನ ಸಂಪರ್ಕಸಿಕೊಂಡಿದ್ದು ಆಗ ಆರೋಪಿತನು ಲಾರಿಯನ್ನು ಉಡುಪಿಯ ಕಾರ್ಕಳಕ್ಕೆ ಬರುತ್ತಿರುವುದಾಗಿ ತಿಳಿಸಿದ್ದರಿಂದ ಪಿರ್ಯಾದಿಯು ಅಲ್ಲಿಗೆ ಜನ ಕಳುಹಿಸಿದ್ದು ಅಲ್ಲಿ ಲಾರಿ ಬಾರದೇ ಇದ್ದು, ಆರೋಪಿತನು ಇ-ಬಿಲ್ ರದ್ದು ಪಡಿಸಿ ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಹಾಗೂ ಮೋಸವನ್ನು ಮಾಡಿರುವುದಾಗಿದೆ.

Mulki PS      

ದಿನಾಂಕ 13-12-2022 ರಂದು KA-19-AD-6407 ನೇ ಅಶೋಕ ಲೈಲ್ಯಾಂಡ್ ಲಾರಿಯಲ್ಲಿ ಚಾಲಕ ಶಮೀರ್ ಹಾಗೂ ಯಾಸೀರ್ ಎಂಬವರು ಲಾರಿಯ ಮಾಲಕ  ತನ್ವೀರ್ ತಿಳಿಸಿದಂತೆ ಬಳ್ಕುಂಜೆಯ ಇಕ್ಬಾಲ್ ಎಂಬವರ ಮನೆಯಲ್ಲಿ ಪಡಿತರ ಅಕ್ಕಿಯನ್ನು ತುಂಬಿಸಿ ಅಕ್ಕಿಯನ್ನು ಕಾಳುಸಂತೆಗೆ ಅಕ್ರಮ ಸಾಗಾಟ ಮಾಡಲು ಸಾಗಾಟ ಮಾಡುತ್ತಿದ್ದ ವೇಳೆ  ದಿನಾಂಕ 13-12-2022 ರಂದು ಮಧ್ಯಾಹ್ನ 2:45 ಗಂಟೆ ಸಮಯಕ್ಕೆ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ವಿನಾಯಕ ತೋರಗಲ್ ರವರು ತಮ್ಮ ಸಿಬ್ಬಂದಿಗಳ ಜೊತೆ  ಪತ್ತೆ ಮಾಡಿ ಸದ್ರಿ ಲಾರಿಯಲ್ಲಿ ತುಂಬಿಸಿದ  ಅಕ್ಕಿಯನ್ನು ಮುಲ್ಕಿ ಠಾಣಾ ಆವರಣ ಪಕ್ಕದಲ್ಲಿ ಇರಿಸಿದ್ದನ್ನು ಪರಿಶೀಲಿಸಿ ಸದ್ರಿ ಅಕ್ಕಿಯ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯೇ ? ಹಾಗೂ ಇನ್ನಿತರ ಮಾಹಿತಿಯ ಬಗ್ಗೆ ದೃಢಪಡಿಸಿಕೊಳ್ಳುವರೇ ಮೂಲ್ಕಿ ತಾಲೂಕು ಆಹಾರ ನಿರೀಕ್ಷಕರಿಗೆ ಫೋನ್ ಮೂಲಕ ಮಾಹಿತಿ ನೀಡಿ ಲಾರಿಯನ್ನು ಚಾಲಕ ಶಮೀರ್ ಮತ್ತು ಯಾಸೀರ್ ರವರ ಜೊತೆಯಲ್ಲಿ ಕರೆದುಕೊಂಡು ಬಂದು ಮುಲ್ಕಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದು,  ಆಹಾರ ಕರಾದ ಪಿರ್ಯಾದಿದಾರರು ಬಂದು ಪಂಚರುಗಳ ಸಮಕ್ಷಮ KA-19-AD-6407 ನೇ ಅಶೋಕ್ ಲೈಲ್ಯಾಂಡ್ ಲಾರಿಯನ್ನು ಪರಿಶೀಲಿಸಿದಾಗ ಬಿಳಿ ಅಕ್ಕಿ ಮೂಟೆಗಳೆಂದು ಕಂಡುಬಂದಿರುತ್ತದೆ. ಆದರೆ ಅದರ ಮೇಲೆ ಇದ್ದ ಚೀಲವು ಎಫ್.ಸಿ.ಐ ಸ್ಟಿಚ್ ಆಗಿರುವ ಚೀಲವಾಗಿರುವುದಿಲ್ಲ. ಅದರಲ್ಲಿರುವ ಅಕ್ಕಿಯನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ನಮ್ಮ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯ ತರಹ ಕಂಡು ಬಂದಿರುವುದರಿಂದ ಲಾರಿಯಲ್ಲಿದ್ದ  ಅಕ್ಕಿ ತುಂಬಿರುವ 320 ಚೀಲಗಳನ್ನು ಸ್ವಾಧೀನಪಡಿಸಿಕೊಂಡಿದ್ದು,  ವಾಹನದ ಅಕ್ಕಿ ಮೂಟೆಯ ಟ್ರಕ್ ಶೀಟ್ ಯಾವುದು ಇರುವುದಿಲ್ಲ. ಲಾರಿ ಚಾಲಕನನ್ನು ವಿಚಾರಿಸಿದಾಗ ಲಾರಿಯ ಮಾಲಕ ತನ್ವೀರ್ ತಿಳಿಸಿದಂತೆ ಬಳ್ಕುಂಜೆಯ ಇಕ್ಬಾಲ್ ಎಂಬವರ ಮನೆಯಲ್ಲಿ ಅಕ್ಕಿಯನ್ನು ತುಂಬಿಸಿ ಮೈಸೂರಿನ ಬನ್ನೂರಿಗೆ ಸಾಗಾಟ ಮಾಡುತ್ತಿರುವುದಾಗಿ ಚಾಲಕ ತಿಳಿಸಿದ್ದು, ಆರೋಪಿತರು ಮೋಸ ಮಾಡುವ ಉದ್ದೇಶದಿಂದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದರಿಂದ ಸದ್ರಿ ಲಾರಿ ಚಾಲಕ ಹಾಗೂ ಸಹಾಯಕ ಮತ್ತಿತ್ತರ ವಿರುದ್ದ ಸೂಕ್ತ ಕ್ರಮಕ್ಕಾಗಿ ದೂರು ನೀಡಿರುವುದಾಗಿದೆ..ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 14-12-2022 07:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080