Feedback / Suggestions

Crime Reported in : Mulki PS  

ಪಿರ್ಯಾದಿ Mohan Kotian ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದು ಸದ್ರಿಯವರು ದಿನಾಂಕ:13-03-2023  ರಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ  ಹಾಗೂ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಚುನಾವಣಾ ಉಸ್ತುವಾರಿ ಆದ ಮಿಥುನ್ ರೈ ಎಂಬವರ ಮನೆಯಾದ ಮೆನ್ನಬೆಟ್ಟು ಗ್ರಾಮದ ರಾಮ ವಿಹಾರ ಎಂಬಲ್ಲಿರುವಾಗ  ಪಿರ್ಯಾದಿದಾರರ ಮೊಬೈಲ್ ಗೆ ವಾಟ್ಸ್ ಆಫ್ ಮೂಲಕ ಒಂದು ಸ್ಕ್ರೀನ್ ಶಾರ್ಟ್ ಬಂದಿದ್ದು ಸದ್ರಿ ಸ್ಕ್ರೀನ್ ಶಾರ್ಟ್ ನಲ್ಲಿ ಜೈ ಶ್ರೀರಾಮ್ ಎಂಬ ಹೆಸರಿನ ವಾಟ್ಸ್ ಆಫ್ ಗ್ರೂಪ್ ನಲ್ಲಿ ದಿನಾಂಕ:13-03-2023 ರಂದು ಸಂಜೆ 5 ಗಂಟೆ 03 ನಿಮಿಷಕ್ಕೆ ಹನಿ ಹಿಂದೂಸ್ತಾನಿ ಮುಂಬೈ ಎಂಬ ಹೆಸರಿನ 96550176422 ನೇ ದೂರವಾಣಿ ಸಂಖ್ಯೆಯ ವ್ಯಕ್ತಿಯು “ಮಿಥುನ್ ರೈ ಯವರಿಗೆ ಗುಂಡಿನೂಟ ಮಾಡಿಸುತ್ತೇನೆ” ಎಂಬ ವಿಚಾರವನ್ನೊಳಗೊಂಡ ಕೊಲೆ ಬೆದರಿಕೆ ಪೋಸ್ಟ್ ಗಳನ್ನು ಹಾಕಿರುತ್ತಾರೆ ಎಂಬಿತ್ಯಾದಿಯಾಗಿದೆ.

Crime Reported in : Traffic South Police Station  

 ದಿನಾಂಕ:15-03-2023 ರಂದು ಪಿರ್ಯಾದಿ ಪ್ರಕಾಶ್ ಕುಮಾರ್ (43 ವರ್ಷ) ರವರು ಸ್ಕೂಟರ್ ನಂಬ್ರ: KA-19-ET-0491 ನೇದನ್ನು ಸವಾರಿ ಮಾಡಿಕೊಂಡು ಬಂಟ್ವಾಳದ ಕಡೆಗೆ ಹೋಗುವರೇ ಅವರ ಮನೆಯಿಂದ ಹೊರಟು ವಾಮಂಜೂರಿನಿಂದ ಉಳಾಯಿಬೆಟ್ಟು ಕಡೆಗೆ ರಾ.ಹೆ -169 ರ ರಸ್ತೆಯಲ್ಲಿ ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 8-45 ಗಂಟೆಗೆ ಪರಾರಿ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಗುರುಪುರ ಕಡೆಯಿಂದ ವಾಮಂಜೂರು ಕಡೆಗೆ ಬರುತ್ತಿದ್ದ ಜಯರಾಜ್ ಎಂಬ ಹೆಸರಿನ ಬಸ್ಸ್ ನಂಬ್ರ: KA-19-AD-8649 ನೇದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆತನ ಮುಂದಿನಿಂದ ಹೋಗುತ್ತಿದ್ದ ವಾಹನವೊಂದನ್ನು ಓವರ್ ಟೇಕ್ ಮಾಡುತ್ತಾ ಪಿರ್ಯಾದಿದಾರರ ಸ್ಕೂಟರ್ ನ ಬಲಬದಿಗೆ ಡಿಕ್ಕಿ ಪಡಿಸಿ ಪರಾರಿಯಾದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಎಡಗಾಲಿಗೆ ಮೂಳೆ ಮುರಿತದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ವಾಮಂಜೂರು ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು ಬಂದು ದಾಖಲಿಸಿದಲ್ಲಿ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಅವರ ಹೆಂಡತಿ ಸುಜಾತ ರವರೊಂದಿಗೆ ಅತ್ತಾವರ ಕೆ ಎಮ್ ಸಿ ಆಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in : CEN Crime PS Mangaluru City

ಪಿರ್ಯಾದಿ 2021  ರ ಮಾರ್ಚ್ ತಿಂಗಳಲ್ಲಿ ಪಿರ್ಯಾದಿದಾರರು ತಮ್ಮ ಸಹದ್ಯೋಗಿ ಎಂಬವರಲ್ಲಿ ಕ್ರಿಪ್ಟೋ ಅಂಡ್ ಕರೆನ್ಸಿ ಬಗ್ಗೆ ವಿಚಾರಿಸಿದಾಗ, ವಿಷ್ಣುವಿನ ಮೂಲಕ ಕೇರಳದ  ಜಿಜೊ ಜಾನ್ ಪುತ್ತೆನವೆಟಿಲ್ ಎಂಬುವರನ್ನು ಪರಿಚಯಿಸಿಕೊಡುತ್ತಾರೆ. ನಂತರ ಸದ್ರಿ ಜಿಜೊ ಜಾನ್  ಎಂಬಾತನು ತನ್ನನ್ನು ತಾನು ಸ್ಟಾಕ್ ಮಾರ್ಕೆಟ್ ಟ್ರೆಡರ್ ಎಂದು ಪಿರ್ಯಾದಿದಾರರನ್ನು ನಂಬಿಸಿ 2021 ರ ಮಾರ್ಚ್ ತಿಂಗಳ  ಕೊವಿಡ್  ಸಮಯದಲ್ಲಿ ನಾವು ಮುಖಾ ಮುಖಾ ಭೇಟಿ ಆಗಲು ಸಾದ್ಯವಾಗದ ಕಾರಣ ಆತನ ವಾಟ್ಸ್ಯಾಪ್ ನಂಬರ್ 9995122121 ಮತ್ತು 7356188761 ನೇ ಮುಖಾಂತರ ಪಿರ್ಯಾದಿದಾರರ ವಾಟ್ಸ್ಯಾಪ್ ನಂಬರ್-9110696524 ನೇದಕ್ಕೆ ಸಂದೇಶ ಕಳುಹಿಸಿ, ವಾಟ್ಸಾಫ್ ಕಾಲ್ ಮೂಲಕ  ಕ್ರಿಪ್ಟೋ ಅಂಡ್ ಕರೆನ್ಸಿಯ ಬಗ್ಗೆ  ಮಾಹಿತಿ ನೀಡಿರುತ್ತಾರೆ ಮತ್ತು ಹಣ ಹೂಡಿಕೆ ಮಾಡಲು ತಿಳಿಸಿರುತ್ತಾರೆ, ಸದ್ರಿ ವ್ಯಕ್ತಿಯು ಹೂಡಿಕೆ ಮಾಡಿದ ಹಣದ ಶೇ 10 ರಷ್ಟು ಹಣವನ್ನು ಪ್ರತಿ ತಿಂಗಳು ಪಾವತಿಸುವುದಾಗಿ ಪಿರ್ಯಾದಿದಾರರಿಗೆ ಭರವಸೆ ನೀಡಿರುತ್ತಾರೆ. ಅದರಂತೆ ಪಿರ್ಯಾದಿದಾರರು ಆರೋಪಿಯ ಮಾತನ್ನು ನಂಬಿ ಮೊದಲಿಗೆ ತಮ್ಮ ಆಕ್ಸಿಸ್ ಬ್ಯಾಂಕ್ ನೇದರಿಂದ 41,00,000/- ರೂಗಳನ್ನು ದಿನಾಂಕ 23-03-2021 ರಿಂದ ದಿನಾಂಕ 1-06-2021 ರವರೆಗೆ IMPS ಮತ್ತು NEFT ಮುಖಾಂತರ ಪಾವತಿಸಿರುತ್ತಾರೆ. ನಂತರ ಪಿರ್ಯಾದಿದಾರರು ಅಕ್ಟೋಬರ್ 2021 ನೇ ಇಸವಿಯಲ್ಲಿ ಬೇರೆ ಬೇರೆ ಬ್ಯಾಂಕ್ ಗಳಿಂದ ಸುಮಾರು 67,00,00/- ರೂಗಳನ್ನು ಸಾಲವಾಗಿ ಪಡೆದುಕೊಂಡು ಮತ್ತೆ  ದಿನಾಂಕ 22-10-2021 ರಿಂದ ದಿನಾಂಕ 26-10-2021 ರವರೆಗೆ ಸುಮಾರು 60,00,000/- ರೂ ಹಣವನ್ನು IMPS ಮತ್ತು NEFT ಮುಖಾಂತರ ಆರೋಪಿಗೆ ಪಾವತಿಸಿರುತ್ತಾರೆ. ಈ ರೀತಿಯಾಗಿ ಆರೋಪಿಯು, ಪಿರ್ಯಾದಿದಾರರಿಂದ 1.24 ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ಸೆಪ್ಟಂಬರ್ 2022 ರಲ್ಲಿ  ತನ್ನ ಎಸ್ ಬಿ ಐ ಖಾತೆಯಿಂದ 9 ಲಕ್ಷ ರೂ ಹಣವನ್ನು ಮಾತ್ರ ಪಿರ್ಯಾದಿದಾರರಿಗೆ  ಮರು ಪಾವತಿಸಿರುತ್ತಾರೆ. ಇದರಿಂದ ನಂಬಿದ ಪಿರ್ಯಾದುದಾರು ತಾವು ಹೂಡಿಕೆ ಮಾಡಿದ ಹಣ ಸಿಗಬಹುದೆಂದು ಕಾದು ಕುಳಿತು ತಾನು ಸಂದಾಯ ಮಾಡಿದ ಹಣವು ವಾಪಾಸಾಗದ ಕಾರಣ ಮತ್ತು  ಆರೋಪಿಯು  ಯಾವುದೇ ದೂರವಾಣಿ ಕರೆ ಸ್ವೀಕರಿಸಿದ ಕಾರಣ  ತಾನು ಮೋಸ ಹೋಗಿರುವುದು ಖಚಿತಗೊಂಡು ನಂತರ ಬಂದು ದೂರು ನೀಡಿರುವುದಾಗಿದೆ. ಆರೋಪಿಯು ಪಿರ್ಯಾದಿದಾರರನ್ನು ತಾನು ಅಧಿಕೃತ ಸ್ಟಾಕ್ ಮಾರ್ಕೆಟ್ ಟ್ರೆಡರ್ ಎಂದು ಪಿರ್ಯಾದಿದಾರರನ್ನು ಕ್ರಿಪ್ಟೋ ಅಂಡ್ ಕರೆನ್ಸಿ ಎಂಬ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂಬುದಾಗಿ  ನಂಬಿಸಿ ಮೋಸದಿಂದ ಸುಮಾರು 1.24 ಕೋಟಿ ಹಣವನ್ನು   ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ.   ಎಂಬಿತ್ಯಾದಿ

Barke PS  

ಬರ್ಕೆ ಪೊಲೀಸು ಠಾಣಾ  ಪ್ರಕರಣದಲ್ಲಿ ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಎಸ್.ಸಿ ನಂಬ್ರ 01/2021  ರಲ್ಲಿ ಆರೋಪಿತನಾದ  ಪ್ರಕಾಶ್ ಶೆಟ್ಟಿ ಪ್ರಾಯ 25 ವರ್ಷ ತಂದೆ: ರಾಮ ಶೆಟ್ಟಿ @ ರಾಮ ಸ್ವಾಮಿ ವಾಸ: ಶಿವನಗರ, ಕೊಡಕ್ಕಲ್, ಕಣ್ಣೂರು, ಮಂಗಳೂರು ಎಂಬಾತನು ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ, ತಲೆ ಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯದಿಂದ ಸಮ್ಮನ್ಸ್‌ ವಾರಂಟ್‌, ಬಂದರೂ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 02 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ದಿನಾಂಕ: 14-03-2023 ರಂದು ಆರೋಪಿತನ ಮನೆಯಿಂದ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ವಾರೆಂಟ್ ನಲ್ಲಿ  ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Mulki PS

ಪಿರ್ಯಾದಿ  Dodayya Shettigar ತಾಯಿ ಶ್ರೀಮತಿ ನಾಗಮ್ಮ ಶೆಟ್ಟಿಗಾರ್ತಿ, ಪ್ರಾಯ: 85 ವರ್ಷ, ಗಂಡ: ದಿ. ದೇವಣ್ಣ ಶೆಟ್ಟಿಗಾರ್ ಎಂಬವರು ದಿನಾಂಕ: 10-03-2023 ರಂದು 18.00 ಗಂಟೆಗೆ ಪಿರ್ಯಾದಿದಾರರ ಮನೆಯ ಬಳಿ ಇರುವ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನಕ್ಕೆ ಪೂಜೆಗೆಂದು ತನ್ನ ಮನೆಯಾದ ಮಂಗಳೂರು ತಾಲೂಕು 10ನೇ ತೋಕೂರು  ಗ್ರಾಮದ ಕಲ್ಲಾಪು ರೈಲ್ವೇ ಗೇಟ್ ಬಳಿಯ ಮನೆ ನಂಬ್ರ 2-181 ನೇ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಇತರ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿವುದಾಗಿದೆ.

ಕಾಣೆಯಾದವರ ಚಹರೆ:-

ಹೆಸರು: ಶ್ರೀಮತಿ ನಾಗಮ್ಮ ಶೆಟ್ಟಿಗಾರ್ತಿ,

ಪ್ರಾಯ: 85 ವರ್ಷ

ಎತ್ತರ: 4.6 ಅಡಿ

ಮೈಬಣ್ಣ: ಎಣ್ಣೆ ಕಪ್ಪು ಮೈ ಬಣ್ಣ 

ಮೈಕಟ್ಟು: ಸಾದಾರಣ ದೇಹ

ಧರಿಸಿದ ಬಟ್ಟೆ ನಿಲಿ ಬಣ್ಣದ ಸೀರೆ ಧರಿಸಿರುತ್ತಾಳೆ

ಭಾಷೆ:ತುಳು

ಗುರುತು ಚಿಹ್ನೆ ಮೂಗಿನ ಮೇಲೆ ಗುಳ್ಳೆ ಇರುತ್ತದೆ.

Bajpe PS       

ದಿನಾಂಕ 19.02.2023 ರಂದು ಬೆಳಿಗ್ಗೆ ಸುಮಾರು 05-15 ಗಂಟೆಗೆ ದುಬೈನಿಂದ ಮಂಗಳೂರಿಗೆ ಆಗಮಿಸಿದ IX-814 ನೇ ನಂಬ್ರದ ವಿಮಾನದಲ್ಲಿದ್ದ ಪ್ರಯಾಣಿಕ ಭಾರತೀಯ ಪ್ರಜೆ Vinod Samekochi S/o Subraya Naik R/o Samekochi House, Samekochi PO, Kasaragod Dist Kerala - 671541, ದಿನಾಂಕ 04.12.2015 ರಂದು ಕೋಝಿಕ್ಕೋಡ್‌ ಪಾಸ್ ಪೋರ್ಟ್ ಕಛೇರಿಯಿಂದ ನೀಡಿರುವ ಭಾರತೀಯ ECR ಪಾಸ್‌ ಪೋರ್ಟ್ ಸಂಖ್ಯೆ N15473 ನ್ನು ಹೊಂದಿರುವ ಸದ್ರಿಯವರನ್ನು ಇಮಿಗ್ರೇಷನ್ ಕೌಂಟರ್ ನಂಬ್ರ 07 ರಲ್ಲಿ ಕರ್ತವ್ಯದಲ್ಲಿದ್ದ SH  ಯೋಗೀಶ ಪೂಜಾರಿ ರವರು ಸದ್ರಿಯವರು ಹಾಜರುಪಡಿಸಿದ Seaman ದಾಖಲಾತಿಗಳನ್ನು (CDC) ನೋಡಿದಾಗ ಸದ್ರಿ Seaman ಗುರುತಿನ ಚೀಟಿಯ ನಂ    ಬ್ರ Mumbai 108114 ಆಗಿದ್ದು ಇದನ್ನು Ministry of Surface Transport ನಿಂದ ನೀಡಿದಾಗಿ ಮತ್ತು ಮುಖ್ಯ ಪುಟದಲ್ಲಿ ಭಾರತ ಸರ್ಕಾರದ ಲಾಂಭನ, Directorate General of Shipping Mumbai ಎಂಬಿತ್ಯಾದಿಯಾಗಿ ನಮೂದಿಸಿರುತ್ತದೆ. ಸದ್ರಿ CDC ಯ ನೈಜ್ಯತೆಯನ್ನು ತಿಳಿದುಕೊಳ್ಳುವ ಸಲುವಾಗಿ ಪಿರ್ಯಾದಿದಾರರ ಕಛೇರಿಯಿಂದ ದಿನಾಂಕ 08-03-2022 ರಂದು Directorate General of Shipping Mumbai ಇಲ್ಲಿಗೆ ದಾಖಲಾತಿಗಳನ್ನು ಮೇಲ್ ಮಾಡಿದಾಗ ಸದ್ರಿ CDC ಯು “Bogus/Fake” ಎಂಬುದಾಗಿ ವರದಿಯನ್ನು ಈ ಮೇಲ್ ಮೂಲಕ ಕಳುಹಿಸಿಕೊಟ್ಟಿರುತ್ತಾರೆ.  ಆದ್ದರಿಂದ ನಕಲಿ Seaman ಗುರುತಿನ ಚೀಟಿಯನ್ನು (CDC) ಹೊಂದಿರುವ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.

Moodabidre PS

ಪಿರ್ಯಾದಿ Nasir  ರಝಾಕ್ ಎಂಬವರೊಂದಿಗೆ ಈ ಹಿಂದೆ ನಡೆದ ಗಲಾಟೆಯಲ್ಲಿ ಗಾಯ ನೋವುಗಳಾಗಿದ್ದವರು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆಯ ಮೌಂಟ್ ರೋಸರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ದಿನಾಂಕ: 14/03/2023 ರಂದು ಮಧ್ಯಾಹ್ನ 1.00 ಗಂಟೆಯ ಸಮಯಕ್ಕೆ ಡಿಸ್ಚಾರ್ಜ್ ಆಗಿ ಕಾರಿನಲ್ಲಿ ಹೋಗುತ್ತಿರುವ ಸಮಯ ಆಸ್ಪತ್ರೆಯ ಗೇಟ್ ನ ಬಳಿ ಆರೋಪಿ ರಝಾಕ್, ಅಬ್ದುಲ್ ಸಲೀಂ ಮತ್ತು ಆರೀಸ್ ಇವರು ಕಾರನ್ನು ತಡೆದು ನಿಲ್ಲಿಸಿ ಆರೋಪಿ ರಝಾಕ್ ಪಿರ್ಯಾದಿದಾರರನ್ನು  ಉದ್ದೇಶಿಸಿ  “ಬೊಳಿ ಮಗನೇ ಮೊನ್ನೆ ನನ್ನೊಂದಿಗೆ ಗಲಾಟೆ ಮಾಡಿ ಮತ್ತೇ ನನ್ನ ಮೇಲೆ ಕೇಸು ಕೊಡುತ್ತಿಯಾ ನಾಯಿ ನನ್ನ ಮಗನೇ” ಎಂದು ಬ್ಯಾರಿ ಭಾಷೆಯಲ್ಲಿ ಬೈದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಾ ರಾಡ್ ನಿಂದ ತಲೆಗೆ ಹೊಡೆದಿದ್ದು ಅಲ್ಲದೇ ಸಲೀಂ ಮತ್ತು ಆರೀಸ್ ರವರು ಮರದ ದೊಣ್ಣೆಗಳಿಂದ ಬೆನ್ನಿಗೆ, ಕೈಕಾಲಿಗೆ ಹಲ್ಲೆ ನಡೆಸಿದ್ದು ಗಾಯಗೊಂಡ ಪಿರ್ಯಾದಿದಾರರು ಅದೇ ಮೌಂಟ್ ರೋಸರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುತ್ತಾರೆ. ಆರೋಪಿಗಳು ಹಲ್ಲೆ ಮಾಡಿ ಪರಾರಿಯಾದ ಕಾರಿನ ನಂ: ಕೆಎ-19-ಜಡ್-2900 ಆಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ.

 

Last Updated: 15-03-2023 07:57 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080