ಅಭಿಪ್ರಾಯ / ಸಲಹೆಗಳು

Crime Reported in : CEN Crime PS

ದಿನಾಂಕ 14-09-2022 ರಂದು ಪಿರ್ಯಾದುದಾರ ಎ. ಎಸ್.  ಐ.  ಶ್ಯಾಮ್ ಸುಂದರ್   ರವರು ಸಿಬ್ಬಂದಿಗಳೊಂದಿಗೆ  ವಾಹನದಲ್ಲಿ ರೌಂಡ್ಸ್ ನಲ್ಲಿದ್ದ ಸಮಯದಲ್ಲಿ 10-00 ಗಂಟೆಗೆ ಯೆಯ್ಯಾಡಿಯ ವಿ.ಕೆ ಫರ್ನಿಚರ್ ಬಳಿ   ದೀಕ್ಷಿತ್  ವಾಸ:ಸ್ವೀಟ್ ಹೋಮ್ ಚಾಮುಂಡಿ ಗುಡಿಯ ಹತ್ತಿರ ಕುಂಟಲ್ಪಾಡಿ ರಸ್ತೆ ಯೆಯ್ಯಾಡಿ, ಮಂಗಳೂರು  ಎಂಬಾತನು ಮಾದಕ ವಸ್ತು ಗಾಂಜಾವನ್ನು  ಸೇದಿರುವವನನ್ನು ವಶಕ್ಕೆ ಪಡೆದು ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ಪರೀಕ್ಷೆಗೊಳಪಡಿಸಿದಾಗ ಮಾಧಕ ವಸ್ತು ಸೇದಿರುವುದು ದೃಢಪಟ್ಟಿರುವುದರಿಂದ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

2) ದಿನಾಂಕ 14-09-2022 ರಂದು ಪಿರ್ಯಾದುದಾರ ಎಎಸ್ಐ ಮೋಹನ್  ರವರು ಸಿಬ್ಬಂದಿಗಳೊಂದಿಗೆ  ವಾಹನದಲ್ಲಿ ರೌಂಡ್ಸ್ ನಲ್ಲಿದ್ದ ಸಮಯದಲ್ಲಿ 10-30 ಗಂಟೆಗೆ ಕೋಡಿಕಲ್ ಬಂಗಾಡಿ ಸಾನ ದೇವಸ್ಥಾನದ, ಬಳಿ  ಧನೇಷ್ ಎಸ್ ಕುಮಾರ್ ಪ್ರಾಯ (32) ವರ್ಷ ವಾಸ: ಶ್ರೀಶಕ್ತಿ, ಮನೆ, ಬಿ 4ನೇ ಅಡ್ಡರಸ್ತೆ ನಡಿಗುತ್ತು, ಕೋಡಿಕಲ್ ಬಂಗಾಡಿ ಸಾನ ದೇವಸ್ಥಾನದ ಬಳಿ ಕೋಡಿಕಲ್, ಅಶೋಕ್ ನಗರ, ಮಂಗಳೂರು ಎಂಬಾತನು ಮಾದಕ ವಸ್ತು ಗಾಂಜಾವನ್ನು  ಸೇದಿರುವವನನ್ನು ವಶಕ್ಕೆ ಪಡೆದು ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ಪರೀಕ್ಷೆಗೊಳಪಡಿಸಿದಾಗ ಮಾಧಕ ವಸ್ತು ಸೇದಿರುವುದು ದೃಢಪಟ್ಟಿರುವುದರಿಂದ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 3)  ದಿನಾಂಕ 14-09-2022 ರಂದು ಪಿರ್ಯಾದುದಾರ ಠಾಣಾ ಎ.ಎಸ್.ಐ ಶ್ರೀ ವಿಜಯಕಾಂಚನ್ ರವರು ಸಿಬ್ಬಂದಿಗಳೊಂದಿಗೆ  ವಾಹನದಲ್ಲಿ ರೌಂಡ್ಸ್ ನಲ್ಲಿದ್ದ ಸಮಯದಲ್ಲಿ 10-15  ಗಂಟೆಗೆ ಫೈಸಲ್ ನಗರ ಕ್ರಾಸ್ ರಸ್ತೆಯ ಬಳಿ  ಇಕ್ಬಾಲ್ ಪ್ರಾಯ 42 ವರ್ಷ ವಾಸ: ಮನೆ ನಂಬ್ರ 4-3, ಫೈಸಲ್ ನಗರ, ಬಜಾಲ್ ನಂತೂರು, ಮಂಗಳೂರು ಎಂಬಾತನು ಮಾದಕ ವಸ್ತು ಗಾಂಜಾವನ್ನು  ಸೇದಿರುವವನನ್ನು ವಶಕ್ಕೆ ಪಡೆದು ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇದಿರುವ ಬಗ್ಗೆ ಪರೀಕ್ಷೆಗೊಳಪಡಿಸಿದಾಗ ಮಾಧಕ ವಸ್ತು ಸೇದಿರುವುದು ದೃಢಪಟ್ಟಿರುವುದರಿಂದ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 4) ದಿನಾಂಕ: 14/09/2022 ರಂದು ಯಾರೋ ಅಪರಿಚಿತ ವ್ಯಕ್ತಿಗಳು ಮಾನ್ಯ ದ.ಕ ಜಿಲ್ಲಾಧಿಕಾರಿಯವರಾದ ಡಾ. ಕೆ. ವಿ ರಾಜೇಂದ್ರ ಐ.ಎ.ಎಸ್ ರವರ ಭಾವಚಿತ್ರ ಬಳಸಿ ವಾಟ್ಸ್ಆಪ್ನಲ್ಲಿ +918590710748 ನಂಬ್ರದಲ್ಲಿ ನಕಲಿ ಖಾತೆ ತೆರೆದು ಸದ್ರಿ ಖಾತೆಯಿಂದ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ವಾಟ್ಸ್ಆಪ್ ಮೂಲಕ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆದುದರಿಂದ ಮಾನ್ಯ ಜಿಲ್ಲಾಧಿಕಾರಿಯವರ ಭಾವಚಿತ್ರ ಉಪಯೋಗಿಸಿ, ಮೋಸ ಮಾಡುವ ಉದ್ದೇಶದಿಂದ ಸಾಮಾಜಿಕಜಾಲತಾಣವಾದ ವಾಟ್ಸ್ಆಪ್ನಲ್ಲಿ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಡುತ್ತಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.

 

Crime Reported in :Kavoor PS

ಪಿರ್ಯಾಧಿದಾರರು KRISHNA S PAVAR  ರವರು ಅವರ  ಹೆಂಡತಿ ಶ್ರೀಮತಿ ದೀಪಾ (19) ರವರೊಂದಿಗೆ  ಕಾವೂರು ಪೊಲೀಸ್ ಠಾಣಾ, ಕಾವೂರು ವಿದ್ಯಾನಗರದ  ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಿರ್ಯಾದಿದಾರರು  ಚಾಲಕನಾಗಿ ದುಡಿಯುತ್ತಿದ್ದು, ಪಿರ್ಯಾದಿದಾರರ ಹೆಂಡತಿಯು ಮರಕಡದ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿರುತ್ತಾರೆ, ಪಿರ್ಯಾದಿದಾರರ ಹೆಂಡತಿಯು ಪ್ರತಿದಿನ ಬೆಳಿಗ್ಗೆ 8.30 ಗಂಟೆಗೆ ಕೆಲಸಕ್ಕೆ ಹೋಗಿ ಸಂಜೆ 5.30 ಗಂಟೆಗೆ ಮನೆಗೆ ವಾಪಸ್ಸು ಬರುತ್ತಿದ್ದು, ದಿನಾಂಕ: 13-09-2022 ರಂದು ಎಂದಿನಂತೆ ಕೆಲಸಕ್ಕೆ ಹೋದವರು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾಳೆ. ನಂತರ ಪಿರ್ಯಾದಿದಾರರು ಹೆಂಡತಿಯು ಕೆಲಸಕ್ಕೆ ಹೋಗುವ ಮನೆಯವರಿಗೆ ಫೋನ್ ಮಾಡಿ ವಿಚಾರಿಸಲಾಗಿ, ಪಿರ್ಯಾದಿದಾರರ ಹೆಂಡತಿಯು ಬೇಗ ಬೇಗ ಕೆಲಸ ಮುಗಿಸಿ ಬೇಗ ಮನೆಗೆ ಹೋಗಬೇಕೆಂದು ತಿಳಿಸಿ ಸಂಜೆ 4.45 ಗಂಟೆಗೆ ಹೋಗಿರುವುದಾಗಿ ತಿಳಿಸಿದ್ದು,  ನಂತರ ಆಕೆಯ ಪತ್ತೆಯ ಬಗ್ಗೆ ಸಂಬಂಧಿಕರಲ್ಲಿ ಹಾಗೂ ನೆರೆಹೊರೆಯವರಲ್ಲಿ ವಿಚಾರಿಸಿಲಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯ ಬಗ್ಗೆ ಯಾವುದೇ ಉಪಯುಕ್ತ ಮಾಹಿತಿ ಲಭ್ಯವಾಗಿರುವುದಿಲ್ಲ ಆದ್ದುದರಿಂದ ಕಾಣೆಯಾದ ನನ್ನ ಹೆಂಡಿತಿಯನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ.

 

Crime Reported in :Panambur PS

ಪಿರ್ಯಾದಿದಾರರು PRAKASH SHETTY ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಲೆಕ್ಟ್ರೀಕಲ್) ಆಗಿರುತ್ತಾರೆ. ದಿನಾಂಕ: 13-09-2022 ರಂದು ಸಮಯ ಸುಮಾರು ಮಧ್ಯಾಹ್ನ 3-00 ಗಂಟೆಗೆ ಸದ್ರಿಯವರ ವ್ಯಾಪ್ತಿಗೆ ಬರುವ ಮಂಗಳೂರು ನಗರದ ತಣ್ಣೀರುಬಾವಿ ರಸ್ತೆಯಲ್ಲಿ ಡೆಸಲಿನೇಶನ್ ಪ್ಲಾಟ್ ಗೇಟ್ ಬಳಿ ಕೆಎ 19 ಎಡಿ 7158 ನೇ ಲಾರಿಯ ಚಾಲಕನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ  ನವಮಂಗಳೂರು ಬಂದರು ಪ್ರಾಧಿಕಾರದವರಿಗೆ ಸಂಬಂಧಿಸಿದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಜಖಂಗೊಳಿಸಿ ಸುಮಾರು 1,00,000/ ರೂಪಾಯಿ ನಷ್ಟಮಾಡಿರುವುದಾಗಿದೆ. ಈ ಬಗ್ಗೆ ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

 

Crime Reported in :Mangalore South PS

ದಿನಾಂಕ 14-09-2022 ರಂದು 18-40 ಗಂಟೆಗೆ, ಮಂಗಳೂರು ನಗರದ ಗೂಡ್ಸ್ ಶೆಡ್ ರಸ್ತೆಯ ರೈಲ್ವೆ ಟ್ರಾಕ್ ಬಳಿಯ ಅರಣ್ಯ ಇಲಾಖೆ ಕಛೇರಿ ಬಳಿ ಸಾರ್ವಜನಿಕ ಸ್ಥಳದಲ್ಲಿ, ಇಸ್ಮಾಯಿಲ್ ಹುಸೈನ್ ಫರಾನ್, ಪ್ರಾಯ: 23 ವರ್ಷ,  ವಾಸ: ಎಮ್.ಜೆ.ಎಮ್ 888, ಕಸಬಾ ಬೆಂಗರೆ, ಮಂಗಳೂರು ಎಂಬ ಆರೋಪಿಯು, ಗಾಂಜಾ ಹಾಗೂ ಬೇರೆ ಮಾದಕ ವಸ್ತುಗಳನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಕುಂಟಿಕಾನದ ಎ.ಜೆ ಆಸ್ಪತ್ರೆಯಲ್ಲಿ, ಫಾರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ  ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಅದರಂತೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಆಕ್ಟ್  1985 ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-09-2022 07:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080