ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS                                  

 ಪಿರ್ಯಾದಿ Vivek Kotyan ದಾರರು ಮೇರ್ಲಪದವಿನ ಜಮೀನಿನಲ್ಲಿ ನಡೆಸುತ್ತಿರುವ ಕೆಂಪು ಕಲ್ಲಿನ ಕೋರೆಯ ಶೆಡ್ಡ್ ನಲ್ಲಿ ತನ್ನ ಬಾಬ್ತು ಕೆಂಪು ಕಲ್ಲಿನ ಕೋರೆಯಲ್ಲಿ ಕೆಂಪು ಕಲ್ಲನ್ನು ಕಟ್ಟ್ ಮಾಡುವ 02 ಕ್ರೌನ್ ಪೀನಿಯನ್ ಸೆಟ್ ಗಳ ಪೈಕಿ ಒಂದರ ಅಂದಾಜು ಮೌಲ್ಯ ರೂ: 20,000 ದ ಒಟ್ಟು 02 ಕ್ರೌನ್ ಪೀನಿಯನ್ ಸೆಟ್ ಗಳನ್ನು ಅಲ್ಲದೇ ಕಲ್ಲಿನ ಕೋರೆಯಲ್ಲಿ ಕೆಲಸಕ್ಕೆ ಉಪಯೋಗಿಸುವ ಸುಮಾರು 70 ಸ್ಪಾನರ್ ಸೆಟ್, ಮತ್ತು ಸುಮಾರು 06 ಹ್ಯಾಮರ್ ಹಾಗೂ ಸುಮಾರು 125 ಕೆಂಪು ಕಲ್ಲುಗಳಿಗೆ ಮಾರ್ಕಿಂಗ್ ಮಾಡಲು ಉಪಯೋಗಿಸಲು ಬಳಸಿದ ಮೊಳೆಗಳು ಮತ್ತು ಕೆಲಸಕ್ಕೆ ಉಪಯೋಗಿಸಿದ ಸುಮಾರು 50 ಬ್ಲೇಡ್ ಗಳು ಹಾಗೂ ಇತರ ಕಲ್ಲಿನ ಕೋರೆಯಲ್ಲಿ ಕೆಲಸಕ್ಕೆ ಉಪಯೋಗಿಸಿ ಸವೆದು ಹೋದ ಗುಜಿರಿ ಸಾಮಾಗ್ರಿಗಳನ್ನು ಕಲ್ಲಿನ ಕೋರೆಯಲ್ಲಿರುವ ಶೆಡ್ಡ್ ನಲ್ಲಿ ಪ್ರತ್ಯೇಕವಾಗಿ ತೆಗೆದಿಟ್ಟಿದ್ದು. ಕಲ್ಲಿನ ಕೋರೆಯನ್ನು ಕೆಲ ತಿಂಗಳ ಹಿಂದೆ ಬಂದ್ ಮಾಡಿ ಕೋರೆಗೆ ಸಂಬಂಧಿಸಿದ ಮೇಲಿನ ಸೊತ್ತುಗಳನ್ನು ಕೋರೆಯ ಶೆಡ್ಡಿನಲ್ಲಿರಿಸಿ ಬೀಗ ಹಾಕಿ ಇಟ್ಟಿದ್ದು, ದಿನಾಂಕ: 10-09-2022 ರಂದು ಸಂಜೆ 4-00 ಗಂಟೆ ಸುಮಾರಿಗೆ ಕಲ್ಲಿನ ಕೋರೆಗೆ ಹೋಗಿ ನೋಡಿದಾಗ ಶೆಡ್ಡಿನಲ್ಲಿಟ್ಟಿದ್ದ ಎಲ್ಲಾ ವಸ್ತುಗಳು ಇದ್ದವು. ಆ ನಂತರ ಈ ದಿನ ದಿನಾಂಕ: 14-10-2022 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರು ಕಲ್ಲಿನ ಕೋರೆಗೆ ಹೋಗಿ ನೋಡಿದಾಗ ಶೆಡ್ಡಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಒಡೆದು ಒಳ ಪ್ರವೇಶಿಸಿ ಒಳಗಡೆ ಇಟ್ಟಿದ್ದ ಮೇಲಿನ ಸೊತ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ: 60,000/- ಮೌಲ್ಯ ಎಂಬಿತ್ಯಾದಿ.

Mangalore Rural PS                                 

ದಿನಾಂಕ: 14-10-2022 ರಂದು ಪಿರ್ಯಾದಿ Manjula P ದಾರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ 16.45 ಗಂಟೆಗೆ ಮಂಗಳೂರು ತಾಲೂಕು ಅಡ್ಯಾರು ಗ್ರಾಮದ ಅಡ್ಯಾರ್ ಎಂಬಲ್ಲಿ ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಫರೋಜ್ @ ಜಬ್ಬರ್ (24) ವಾಸ- ಬಡಕಬೈಲು ಮನೆ, ಕರಿಯಂಗಳ ಗ್ರಾಮ ಪೊಳಲಿ ಅಂಚೆ, ಬಂಟ್ವಾಳ ತಾಲೂಕು ದ.ಕ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.

Kankanady Town PS                

ಪಿರ್ಯಾದು Rajendra B ದಾರರು ಮಂಗಳೂರು ನಗರ ಅಪರಾಧ ಪತ್ತೆ ವಿಭಾಗದಲ್ಲಿ ಪೊಲೀಸ್ ಉಪನಿರೀಕ್ಷಕರಾಗಿದ್ದು ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಅಕ್ರಮ ಮರಳು ಸಾಗಾಟ ತಡೆಯುವ ಉದ್ದೇಶದಿಂದ ದಿನಾಂಕ 14-10-2022 ರಂದು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಗಳೊಂದಿಗೆ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದ  ಸಮಯ ಸುಮಾರು ರಾತ್ರಿ 20:30 ಗಂಟೆಗೆ ಮಂಗಳೂರು ಅಡ್ಯಾರ್ ಕಣ್ಣೂರು ನರ್ಸರಿ ಬಳಿಯಲ್ಲಿ ಕೆಎ 19 ಎಸಿ 9363 ನೇ ನಂಬ್ರದ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದ್ದು ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು, ಪಿರ್ಯಾದುದಾರರು ಲಾರಿಯ ಚಾಲಕನಲ್ಲಿ ಆತನ ಹೆಸರು ಮತ್ತು ವಿಳಾಸ  ವಿಚಾರಿಸಿದಲ್ಲಿ ಆತನು ತನ್ನ ಹೆಸರು ನವಾಸ್ ಪ್ರಾಯ 43 ವರ್ಷ ವಾಸ:ಕುಂಡಲ ಮನೆ ಕಣ್ಣೂರು ಅಂಚೆ ಮಂಗಳೂರು ಎಂದು ತಿಳಿಸಿದ್ದು ಈತನಲ್ಲಿ ಮರಳು ಸಾಗಾಟ ಮಾಡಲು ಪರವಾನಿಗೆ ಬಗ್ಗೆ ವಿಚಾರಿಸಿದ್ದು ಪರವಾನಿಗೆ ಇಲ್ಲದೆ ಸರ್ಕಾರಕ್ಕೆ ಯಾವುದೇ ರಾಜಸ್ವವನ್ನು ಪಾವತಿಸದೇ ಅಡ್ಯಾರ್ ಬಳಿಯ ನೇತ್ರಾವತಿ ನದಿಯಿಂದ ಅಕ್ರಮ ಮರಳನ್ನು ತೆಗೆದು ಟಿಪ್ಪರ್ ಲಾರಿಯಿಂದ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುವುದಾಗಿದೆ. ಪಿರ್ಯಾದುದಾರರು ಮರಳುತುಂಬಿದ  ಟಿಪ್ಪರ್ ಲಾರಿ ಮತ್ತು ಅದರ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು ವಶಪಡಿಸಿಕೊಂಡಿರುವ ಲಾರಿಯಲ್ಲಿರುವ 2 ಯುನಿಟ್ ಮರಳಿನ ಅಂದಾಜು ಮೌಲ್ಯ 6000/- ಆಗಿದ್ದು ಮರಳು ತುಂಬಿದ ಕೆಎ 19 ಎಸಿ 9363 ನೇ ನಂಬ್ರದ ಟಿಪ್ಪರ್ ಲಾರಿ ಮತ್ತು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ.     

Mulki PS

ಪಿರ್ಯಾದಿ Smt Boramma ದಾರರ ಪತಿ ಶಂಕರ ಗೌಡ(ಪ್ರಾಯ 38 ವರ್ಷ) ಎಂಬುವರು ಸಿಮೆಂಟ್ ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದು, ಲೋಡ್ ಮಾಡುವ ಕೆಲಸಕ್ಕೆಂದು ಉಡುಪಿ, ಮಂಗಳೂರು ಕಡೆಗೆ ಹೋಗುತ್ತಿದ್ದವರು,  ದಿನಾಂಕ 12.10.2022 ರಂದು ಮಧ್ಯಾಹ್ನ 14.00 ಗಂಟೆಗೆ  ಕೂಲಿ ಕೆಲಸಕ್ಕೆಂದು ಮಂಗಳೂರು ತಾಲೂಕು ಕಾರ್ನಾಡು  ಗ್ರಾಮದ  ಶ್ರೀ ಶಿವಯೋಗೀಶ್ವರ ದೇವಸ್ಥಾನದ ಬಳಿ ಇರುವ ತನ್ನ ವಾಸದ ಮನೆಯಿಂದ ತೆರಳಿದವರು ಈತನಕ ಮನೆಗೆ ವಾಪಾಸು ಬಾರದೇ  ಕಾಣೆಯಾಗಿರುತ್ತಾರೆ. ಅವರ ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ವಿಚಾರಿಸಿದ್ದು ಈ ತನಕ ಪತ್ತೆಯಾಗದ ಕಾರಣ ಸದ್ರಿಯವರನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಸಾರಾಂಶ.

ಕಾಣೆಯಾದವರ ಚಹರೆ:-

ಹೆಸರು: ಶಂಕರ ಗೌಡ, ತಂದೆ-ಬಮ್ಮರಾಯ ಗುಡ್ಡೊಡಗಿ

ಪ್ರಾಯ: ಪ್ರಾಯ  38   ವರ್ಷ

ಎತ್ತರ: 5.5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ದುಂಡು ಮುಖ, ಸಾಧಾರಣ ಶರೀರ, ಬೋಳು ತಲೆ, ಬಿಳಿ ತಲೆಕೂದಲು, ಕಪ್ಪು-ಬಿಳಿ ಮಿಶ್ರಿತ ಕುರುಚಲುಗಡ್ಡ.

ಧರಿಸಿದ ಬಟ್ಟೆ: ಹಳದಿ ಬಣ್ಣದ ಶರ್ಟ್  ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸುತ್ತಾರೆ.

ಗೊತ್ತಿರುವ ಭಾಷೆ: ಕನ್ನಡ

 

Ullal PS   

ಪಿರ್ಯಾದಿ Mahesh ದಾರರು KA-19-EJ-9942 ಎಂಬ ಸ್ಕೂಟರ್ ನ ಮಾಲಿಕರಾಗಿದ್ದು, ಈ ಸ್ಕೂಟರನ್ನು ದಿನಾಂಕ 27-08-2022 ರಂದು ಸಂಜೆ 4 ಗಂಟೆಗೆ ಮನೆಯಿಂದ ಸ್ಕೂಟರಿನಲ್ಲಿ ತಾನು ಕೆಲಸ ಮಾಡುವ ಸೌಂದರ್ಯ ಹೆಲ್ತ್ ಸೆಂಟರ್ ಗೆ ಬಂದು ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರನ್ನು ಪಾರ್ಕ್ ಮಾಡಿ ತನ್ನ ಕೆಲಸದಲ್ಲಿ ಸಂಜೆ 6-40 ಗಂಟೆಗೆ ಹೈವೇಯ ಮತ್ತೊಂದು ಬದಿಯಲ್ಲಿ ಫಾಸ್ಟ್ ಫುಡ್ ಗೆ ಹೋಗಿ ವಾಪಾಸ್ಸು 7-30 ಗಂಟೆಗೆ ಬಂದಾಗ ಪಾರ್ಕಿಂಗ್ ಮಾಡಿದ್ದ ಪಿರ್ಯಾದಿದಾರರ ಸ್ಕೂಟರ್ KA-19-EJ-9942 ಕಾಣಿಸದೇ ಇದ್ದು ಕೂಡಲೇ ಪಿರ್ಯಾದಿದಾರರು ಅಕ್ಕ ಪಕ್ಕ ಹುಡುಕಾಡಿದ್ದು ಅಲ್ಲದೇ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿ ವಿಚಾರಿಸಿಕೊಂಡಿದ್ದರೂ ಪತ್ತೆಯಾಗದೆ ಇರುತ್ತದೆ, ಈ ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಸ್ಕೂಟರಿನ ಸೀಟಿನ ಅಡಿಯಲ್ಲಿ RC ಕಾರ್ಡ್, ವಿಮಾ ಪತ್ರ, ಪಿರ್ಯಾದಿದಾರರ ಡ್ರೈವಿಂಗ್ ಲೈಸನ್ಸ್ ಇತ್ತು ಕಳವಾದ ಸ್ಕೂಟರನ್ನು ಪತ್ತೆ ಮಾಡಬೇಕಾಗಿ ನೀಡಿದ ಪಿರ್ಯಾದಿ

Traffic South Police Station  

ದಿನಾಂಕ: 14-10-2022 ರಂದು ಪಿರ್ಯಾದಿ SHABEER AHAMED ದಾರರು ಸಹ ಸವಾರನಾಗಿ ಹಾಗೂ ಸವಾರನಾಗಿ ಮಯ್ಯದಿ ಸುಲೈಮಾನ್ ಶಾಫಿ ರವರು ಅವರ ಬಾಬ್ತು ಸ್ಕೂಟರ್ ನಂಬ್ರ: KA-19-HC-0658 ನೇದರಲ್ಲಿ ಉಳಾಯಿಬೆಟ್ಟು ಕಡೆಯಿಂದ ವಾಮಂಜೂರು ಮಾರ್ಗವಾಗಿ ಮಂಗಳೂರು ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಸಂಜೆ 5:00 ಗಂಟೆಗೆ ಕುಡುಪು ದೇವಸ್ಥಾನದ ಬಳಿ ರಾ.ಹೆ 169 ರ ಡಾಮಾರು ರಸ್ತೆಗೆ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಬಸ್ಸು ನಂಬ್ರ: KA-19-C-4688 ನೇದರ ಚಾಲಕ ಪೈರೋಜ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಸ್ಸಿನ ಹಿಂಭಾಗದ ಎಡಬದಿಯನ್ನು ಸ್ಕೂಟರ್ ನ ಬಲಭಾಗದ ಹ್ಯಾಂಡಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸ್ಕೂಟರ್ ಸವಾರನು ಡಾಮಾರು ರಸ್ತೆಗೆ ಬಿದ್ದಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರ ಬಲ ಮೊಣಕೈಗೆ ತರಚಿದ ಗಾಯ ಹಾಗೂ ಸ್ಕೂಟರ್ ಸವಾರನಿಗೆ ಬಲ ಕೈ ಅಂಗೈಗೆ ಹರಿದ ರಕ್ತ ಗಾಯ ಹಾಗೂ ಬಲ ಮೊಣಕೈಗೆ ಮತ್ತು ಬಲಕಾಲು ಕೋಲು ಕಾಲಿಗೆ ತರಚಿದ ಗಾಯವಾಗಿರುತ್ತದೆ, ಕೂಡಲೇ ಅಲ್ಲಿಯ ಸ್ಥಳೀಯರು ಗಾಯಳುಗಳನ್ನು ಉಪಚರಿಸಿದ್ದು, ನಂತರ ಪಿರ್ಯಾದಿದಾರರು ಮತ್ತು ಸ್ಕೂಟರ್ ಸವಾರನು ಚಿಕಿತ್ಸೆ ಬಗ್ಗೆ ಬಸ್ಸೊಂದರಲ್ಲಿ ವೆನ್ ಲಾಕ್ ಆಸ್ಪತ್ರೆಗೆ ಬಂದು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 15-10-2022 07:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080