ಅಭಿಪ್ರಾಯ / ಸಲಹೆಗಳು

Crime Reported in : Kavoor PS

ದೇವಿನಗರ ಕುಂಜತ್ತಬೈಲ್ ನಿವಾಸಿಯಾಗಿರುವ ತೇಜಾಕ್ಷಿ ಎಂಬವರು ಮರಕಡದಲ್ಲಿ ಅಂಗನವಾಡಿ ಕಾರ್ಯಕರ್ತೆ ಯಾಗಿ ಕೆಲಸ ಮಾಡಿಕೊಂಡಿದ್ದು. ದಿನಾಂಕ 14/11/2022 ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಕಾವೂರು ವ್ಯವಸಾಯ ಸಹಕಾರಿ ಬ್ಯಾಂಕಿನ ಸಭಾಂಗಣಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಕೊನೆಯಲ್ಲಿ ಮಧ್ಯಾಹ್ನ ಸುಮಾರು 1.00 ಗಂಟೆ ಸುಮಾರಿಗೆ ಪಿರ್ಯಾದಿದಾರರು ತಮ್ಮ ಹ್ಯಾಂಡ್ ಬ್ಯಾಗನ್ನು ಒಂದು ಕುರ್ಚಿಯ ಮೇಲೆ ಇಟ್ಟು ಉಳಿದ ಕುರ್ಚಿಗಳನ್ನು ಸೇರಿಸಿ ಇಡುವ ಸಮಯದಲ್ಲಿ ಪಿರ್ಯಾದಿದಾರರ ಬ್ಯಾಗ ನಲ್ಲಿ ಇದ್ದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪ್ರಾಣ ಕಾರ್ಡ್, ವಾಹನ ಚಾಲನಾ ಪರವಾನಿಗೆ, (IOB BANK, HDFC BANK ಮತ್ತು UNION BANK ) ನ ಎ.ಟಿ.ಎಮ್ ಕಾರ್ಡ್ ಗಳು, ಒಂದು ಚಿನ್ನದ ಸರ, ಒಂದು ಜೊತೆ ಚಿನ್ನದ ಕಿವಿಯ ಓಲೆ, ಒಂದು ಚಿನ್ನದ ತಾಳಿ, ಒಂದು ಚಿನ್ನದ ಬಳೆ ಮತ್ತು ಒಂದು ಜೊತೆ ಚಿನ್ನದ ಕಿವಿಯ ರಿಂಗ್ , ಮಹಿಳಾ ಮತ್ತು ಮಕ್ಕಳು ಅಭಿವೃದ್ದಿ ಇಲಾಖೆಯಿಂದ  ನೀಡಿದ LG ಕಂಪನಿಯ ಮೋಬೈಲ್ ಪೋನ್ ಮತ್ತು  Airtel ಸೀಮ್ ಹಾಗೂ ಇತರೆ ವಸ್ತುಗಳ ಹ್ಯಾಂಡ ಬ್ಯಾಗ ಯಾರೋ ತೆಗೆದುಕೊಂಡು ಹೋಗಿದ್ದು. ಕಳುವಾದ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 65000/- ಆಗಬಹುದು. ಆದ್ದರಿಂದ ಕಳುವಾದ ಸ್ವತ್ತುಗಳನ್ನು ಪತ್ತೆಮಾಡುವರೇ, ಎಂಬಿತ್ಯಾದಿ.

Kankanady Town PS

ಪಿರ್ಯಾದಿ Vasanth Kumar S ದಾರರು ಮೂಲತ ಹಾಸನ ಜಿಲ್ಲೆಯವರಾಗಿದ್ದು , ಪ್ರಸ್ತುತ ಆದರ್ಶ ಶಾಲೆ ಬಜಾಲ್ ಬಳಿಯ ಸುರಭಿ ಪಿ ಜಿ ಯಲ್ಲಿ ರೂಮ್ ರಲ್ಲಿ ಸುಮಾರು 2 ವರ್ಷಗಳಿಂದ ವಾಸವಾಗಿದ್ದು,. ಖಾಸಗೀ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಸದ್ರಿಯವರಿಗೆ ಕಂಪೆನಿಯವರು ಕೆಲಸದ ನಿಮಿತ್ತ  CND1151WCB CND1151WC7 ನೇ ಸೀರಿಯಲ್ ನಂಬ್ರದ ಲ್ಯಾಪ್ ಟಾಪ್ ನ್ನು ನೀಡಿರುತ್ತಾರೆ.  ಪಿರ್ಯಾದಿದಾರರು ದಿನಾಂಕ: 09-11-2022 ರಂದು ಕೆಲಸಕ್ಕೆ ಹೋಗಿ, ಸಂಜೆ 07.30 ಗಂಟೆಗೆ ಕೆಲಸ ಮುಗಿಸಿ ಪಿ ಜಿ ಗೆ ಬಂದು, ಲ್ಯಾಪ್ ಟಾಪ್ ಬ್ಯಾಗ್ ನ್ನು ಮಂಚದ ಮೇಲಿಟ್ಟು ರೂಮಿನ ಬಾಗಿಲನ್ನು ಲಾಕ್ ಮಾಡದೇ ಪಿರ್ಯಾದಿದಾರರು ಹೇರ್ ಕಟ್ಟಿಂಗ್ ಶಾಪ್ ಗೆ ತೆರಳಿರುತ್ತಾರೆ, ನಂತರ ರಾತ್ರಿ 8.10 ಗಂಟೆಗೆ ವಾಪಸ್ಸು ಬಂದು, ಸ್ನಾನ ಮಾಡಿ ಊಟ ಮುಗಿಸಿ ರಾತ್ರಿ 9.10 ಗಂಟೆಗೆ ಮಲಗುವ ಸಮಯ ಮಂಚದ ಮೇಲಿರುವ ಲ್ಯಾಪ್ ಟಾಪ್ ಬ್ಯಾಗ್ ನ್ನು ತೆಗೆದಾಗ ಬ್ಯಾಗ್ ಹಗುರವಾಗಿದ್ದು, ಪಿರ್ಯಾದಿದಾರರು ಬ್ಯಾಗ್ ನ ಜಿಪ್ ತೆಗೆದು ನೋಡಿದಾಗ ಲ್ಯಾಪ್ ಟಾಪ್ ಇರುವುದಿಲ್ಲ. ಸದ್ರಿ ಪಿರ್ಯಾದಿಯು ರೂಮ್ ನ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ಅಕ್ಕಪಕ್ಕದ ರೂಮಿನಲ್ಲಿ ವಿಚಾರಿಸಿದಾಗಲೂ ಲ್ಯಾಪ್ ಟಾಪ್ ನ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ .ದಿನಾಂಕ: 09-11-2022 ರಂದು ಸಂಜೆ 7.30 ಗಂಟೆಯಿಂದ ರಾತ್ರಿ 8.10 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಲ್ಯಪ್ ಟಾಪ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ಲ್ಯಾಪ್ ಟಾಪ್ ನ ಅಂದಾಜು ಮೌಲ್ಯ ರೂ 35000/- ಆಗಬಹುದು. ಎಂಬಿತ್ಯಾದಿ. 

Moodabidre PS

 ದಿನಾಂಕ: 14-11-2022 ರಂದು 16-30 ಗಂಟೆಗೆ ಮೂಡಬಿದ್ರೆ ತಾಲೂಕು ಮಾರ್ಪಾಡಿ ಗ್ರಾಮದ ಸ್ವರಾಜ್ ಮೈದಾನದ ಹತ್ತಿರ ಮಾರ್ಕೆಟ್ ಬಳಿ ಇರ್ಷಾದ್ (32) ವಾಸ:ಚೊಕ್ಕಬೆಟ್ಟು ಕೃಷ್ಣಾಪುರ ಬ್ಲಾಕ್ ಸುರತ್ಕಲ್  ಎಂಬಾತನು  ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದಿದ್ದು, ಆತನನ್ನು ವೈದ್ಯಾಧಿಕಾರಿಯವರು ಎ.ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು- ಇಲ್ಲಿ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ವರದಿ ನೀಡಿರುತ್ತಾರೆ. ಆದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ  ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 15-11-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080