ಅಭಿಪ್ರಾಯ / ಸಲಹೆಗಳು

Crime Reported in : : Bajpe PS

ಪಿರ್ಯಾದಿದಾರರ ಬಾಬ್ತು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ವಿಕಾಸ ನಗರ ಎಂಬಲ್ಲಿರುವ ಮಾವಿಲ್ಸ್ ಟ್ರೇಡಿಂಗ್ ಕಂಪನಿಯೆಂಬ ಆರ್ಡ್ ವೇರ್ ಅಂಗಡಿಗೆ ದಿನಾಂಕ 10.12.2022 ರಂದು ರಾತ್ರಿ ಅಂಗಡಿಯ ಹಿಂಬಾಗಿಲಿನ ಶೆಟ್ಟರ್ ಗೆ ಆಳವಡಿಸಿದ ಬಿಗವನ್ನು ಯಾವುದೋ ಕಬ್ಬಿಣದ ಸಾದನದಿಂದ ಮೀಟಿ ಬೀಗವನ್ನು ಹೊಡೆದು ಅಂಗಡಿಯ ಒಳ ಪ್ರವೇಶಿಸಿ ಅಂಗಡಿಯ  ಮರದ ಕ್ಯಾಶ್ ಕೌಂಟರ್ ನ ಬೀಗವನ್ನು ಯಾವುದೋ ಕಬ್ಬಿಣದ ಸಾದನದಿಂದ ಮೀಟಿ ಅದರ ಒಳಗೆ ಇದ್ದ ಅಂಗಡಿಯ ವ್ಯವಹಾರಕ್ಕೆ ಸಂಬಂದಪಟ್ಟ ರೆಡ್ಮೀ ಕಂಪನಿಯ ಮೊಬೈಲ್ ಪೋನ್  ಹಾಗೂ 70000 ಸಾವಿರ ನಗದನ್ನು ಯಾರೋ ಕಳ್ಳರು ಕಳವು ಮಾಡಿದ್ದು ದಿನಾಂಕ 11.12.2022 ರಂದು ಆದಿತ್ಯವಾರ ಆದ್ದುದ್ದರಿಂದ ಪಿರ್ಯಾದಿದಾರರ ಅಂಗಡಿ ಮುಚ್ಚಿದ್ದು  ದಿನಾಂಕ 12.12.2022 ರಂದು ಬೆಳಗ್ಗೆ 08.00 ಗಂಟೆಗೆ ಅಂಗಡಿಯ ಬಾಗಿಲನ್ನು ತೆರೆಯುವರೇ ಅಂಗಡಿಯ ಮ್ಯಾನೆಜರ್ ಆದ ಪ್ರವೀಣ್ ಸಲ್ದಾನ ಎಂಬುವರು ಬಂದಾಗ  ಹಿಂಬಾಗಿಲಿನ ಶೆಟ್ಟರ್ ನ ಬೀಗವನ್ನು ಕಟ್ ಮಾಡಿ ಹಾಗೂ ಕ್ಯಾಶ್ ಕೌಂಟರ್ ನಲ್ಲಿದ್ದ ಹಣವನ್ನು ಕಳವು ಮಾಡಿರುವ ಬಗ್ಗೆ ಪಿರ್ಯಾದಿದಾರರಿಗೆ ತಿಳಿಸಿದಂತೆ ಪಿರ್ಯಾದಿದಾರರು ಸ್ಥಳಕ್ಕೆ ಬಂದು ಬಳಿಕ ಠಾಣೆಗೆ ಬಂದು ದೂರು ನೀಡಿರುತ್ತಾರೆ ಎಂಬಿತ್ಯಾದಿ

Ullal PS       

ಫಿರ್ಯಾದಿದಾರರಾದ ಅಬ್ದುಲ್ ಖಾದರ್ ರವರ ತಂಗಿ ಶ್ರೀಮತಿ. ಹಾಜಿರಾಭಾನು ಎಂಬಾಕೆಯು ಮದುವೆಯಾಗಿ ತನ್ನ ಗಂಡನ ಮನೆಯಾದ ಉಳ್ಳಾಲ ಮಾರ್ಗತಲೆ ಎಂಬಲ್ಲಿ ತನ್ನ ಇಬ್ಬರು ಮಕ್ಕಳ ಜೊತೆಯಲ್ಲಿ ವಾಸವಾಗಿದ್ದು, ಆಕೆಯ ಗಂಡ ತಾಹಿರ್ ಇಸಾಕ್ ವಿದೇಶದಲ್ಲಿ ಉದ್ಯೋಗವನ್ನು ಮಾಡಿಕೊಂಡಿದ್ದು, ದಿನಾಂಕ. 14-12-2022 ರಂದು ಬೆಳಿಗ್ಗೆ 08-50 ಗಂಟೆಗೆ ಉಳ್ಳಾಲ ಮಾರ್ಗತಲೆ ಮನೆಯಿಂದ ಹಾಜಿರಾಭಾನು ರವರು ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು, ದಿನಾಂಕ. 12-12-2022 ರಂದು ರಾತ್ರಿ 8-30 ಗಂಟೆಗೆ ನೆರೆಮನೆಯ ಸಲೀಂ ಎಂಬವರು ಮನೆಯ ಬಳಿ ರಿಕ್ಷಾ ರಿವರ್ಸ್ ತೆಗೆಯುವ ಸಮಯ ಹಾಜಿರಾಭಾನುನ ಸ್ಕೂಟರ್ ಗೆ ತಾಗಿ ಸ್ಕೂಟರ್ ಜಖಂಗೊಂಡಿದ್ದು, ಈ ಬಗ್ಗೆ ಸಲೀಂ ರವರಲ್ಲಿ ವಿಚಾರಿಸಿದಾಗ ಅವರು ಹಾಜಿರಾಭಾನುಗೆ ಬಾಯಿಗೆ ಬಂದಂತೆ ಮನೆ ನೋಯಿಸುವಂತೆ ಬೈದಿರುವುದರಿಂದ ಹಾಜಿರಾಭಾನು ಬೇಸರದಿಂದ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಮಕ್ಕಳಲ್ಲಿ ಹಾಗೂ ಮನೆಯಲ್ಲಿರುವ ಹಾಜಿರಾಭಾನುವಿನ ಅಕ್ಕ ನೂರ್‍ ಜಹಾನ್ ರವರ ಮಗಳು ಅಲ್ವಿಯಾಳಲ್ಲಿ ಹೇಳದೇ ಹೋಗಿರುತ್ತಾರೆ. ಕಾಣೆಯಾದವರನ್ನು ಹುಡುಕಾಡಿ ಈ ತನಕ ಪತ್ತೆಯಾಗದೇ ಇದ್ದ ಕಾರಣ ಫಿರ್ಯಾದಿದಾರರು ಕಾಣೆಯಾಗಿರುವ ತನ್ನ ತಂಗಿ ಹಾಜಿರಾಭಾನು (39) ಎಂಬಾಕೆಯನ್ನು ಪತ್ತೆ ಹಚ್ಚಿಕೊಡುವಂತೆ ದಿನಾಂಕ. 15-12-2022 ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Surathkal PS

ದಿನಾಂಕ 11-12-2022 ರಂದು ಪಿರ್ಯಾದಿದಾರರು ತನ್ನ ಊರಾದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಪಳ್ಳಿ ಗ್ರಾಮಕ್ಕೆ ತನ್ನ ಪತ್ನಿ ಹಾಗೂ ಮಗಳಿನೊಂದಿಗೆ ಸಮಯ ಮದ್ಯಾಹ್ನ 3:00 ಗಂಟೆಗೆ ಜೆ.ಪಿ.ಎಸ್ ಚಿರಾಗ್ ಅಪಾರ್ಟಮೆಂಟ್ ನಲ್ಲಿರುವ ತನ್ನ ಮನೆಗೆ ಲಾಕ್ ಹಾಕಿ ಹೋಗಿದ್ದು, ಪಿರ್ಯಾದಿದಾರರು ದಿನಾಂಕ 13-12-2022 ರಂದು ಸಂಜೆ ಸುಮಾರು 7:00 ಗಂಟೆಗೆ ವಾಪಸ್ಸು ಮನೆಗೆ ಬಂದು ಬಾಗಿಲನ್ನು ತೆರೆದು ನೋಡಿದಾಗ ಯಾರೋ ಕಳ್ಳರು ಮನೆಯ ಬಾಲ್ಕನಿ ಡೋರ್ ಮೂಲಕ ಅಥವಾ ಬೇರೆ ಯಾವುದೇ ಕೀ ಯನ್ನು ಬಳಸಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಎರಡೂ ಬೆಡ್ ರೂಮ್ ನಲ್ಲಿದ್ದ ಗೊದ್ರೋಜ್ ಒಳಗಿದ್ದ ಬಟ್ಟೆಗಳನ್ನು ಚಲ್ಲಾಪಿಲ್ಲಿ ಬಿಸಾಡಿ ಮಾಸ್ಟರ್ ಬೆಡ್ ರೂಮ್ ನಲ್ಲಿರುವ ಮಂಚದ ಡ್ರಾವರ್ ತೆರೆದು ಜಾಲಾಡಿ ಪಿರ್ಯಾದಿದಾರರು ಚಿನ್ನಾಭರಣಗಳನ್ನು ಇರಿಸಿದ ಜ್ಯುವೆಲ್ ಬಾಕ್ಸ್ ಓಪನ್ ಮಾಡಿ ಅದರ ಒಳಗಿದ್ದ 1.ಚಿನ್ನದ ನಕ್ಲೇಸ್ 61.22 ಗ್ರಾಂ, 2.ಚಿನ್ನ ಬ್ರಾಸ್ ಲೆಟ್ 12.17 ಗ್ರಾಂ, 3.ಪೆಂಡೆಂಟ್ ಇರುವ ಚಿನ್ನದ ಸರ-1 34.30 ಗ್ರಾಂ, 4.ಉಂಗುರ-1 3.6 ಗ್ರಾಂ, 5. ಬಳೆ-1 9.8 ಗ್ರಾಂ, 6. ಉಂಗುರು-1 2.9 ಗ್ರಾಂ, 7. ಉಂಗುರು-1 3.2 ಗ್ರಾಂ, 8. ಚಿನ್ನದ ಸರ-2 5.6 ಗ್ರಾಂ, 9. ನೆಕ್ಲೇಸ್-1 28 ಗ್ರಾಂ ಕಳವಾದ ಚಿನ್ನಾಭರಣಗಳು ಸುಮಾರು ಒಟ್ಟು 160.79 ಗ್ರಾಂ ಆಗಿರುತ್ತದೆ ಇದರ ಅಂದಾಜು ಮೌಲ್ಯ 7,20,000/- ಆಗಬಹುದು ಈ ಕೃತ್ಯವು ದಿನಾಂಕ 11-12-2022 ರ ಮಧ್ಯಾಹ್ನ 3:00 ಗಂಟೆಯಿಂದ ದಿನಾಂಕ 13-12-2022 ರ ಸಂಜೆ 7:00 ಗಂಟೆ ಒಳಗೆ ನಡೆದಿರಬಹುದು ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 15-12-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080